ಮೂವರ ಕವಿತೆಗಳು: ಪ್ರಶಾಂತ್ ಭಟ್, ಶ್ರೀಧರ ನಾಯಕ, ಅನಂತ್ ಕಳಸಾಪುರ

          ಫ಼ೇಸ್ಬುಕ್ ಕತೆಗಳಾಗಬಹುದಾದ ಸಾಲುಗಳೂ ಚುಟುಕಗಳಾಗಿ, ಎರಡು ಕಮೆಂಟು ಮೂರು ಲೈಕಿಗೆ ಕಾತರಿಸಿ, ಒಳಗೊಳಗೇ ಒರತೆ ಚಿಮ್ಮುವ ಮೊದಲೇ, ಕಾರುವ ಆತುರ; ಅಗೋ ಬಂತಲ್ಲ ನಮ್ಮನ್ನೂ ಯಾರೋ ನೋಡುವವರಿದ್ದಾರೆ, ನಮ್ಮ ಕನ್ನಡಿಯಲ್ಲಿ ಯಾರನ್ನೂ ಕಾಣದು; ವಿವಿಧ ವೇಷಗಳು, ಅವತಾರಗಳು, ಪರದೂಷಣೆಗಳು, ಬರಿದೇ ಒತ್ತುವ ಕುಟ್ಟುವ ನಕಲಿ ಕಾಳಜಿಗಳು; ಕೊನೆಗೆ ಉಳಿಯುವ ಖಾಲಿತನಕ್ಕೂ ಪೊಳ್ಳು ಸಮಾಧಾನಗಳು; ಆವಿಯಾಗಿ ಮೋಡವಾಗಿ ಘನೀರ್ಭವಿಸಿ, ಮಳೆಯಾಗಿ ಹೊಯ್ದರೇ ಓಮ್ ಶಾಂತಿಃ ಶಾಂತಿಃ ಶಾಂತಿಃ ಯಾಕೆ ಸುಮ್ಮನೇ ಸ್ಖಲನದ … Read more

ಗಂಡಾ ..ಅಲ್ಲಲ್ಲಾ…ಗುಂಡ-ಗುಂಡಿ: ಡಾ. ಆಜಾದ್ ಐ.ಎಸ್.

  ಗುಂಡ ಗರಂ….. “ಯಾಕೋ?!!”  ಅಂತ ಕೇಳಿದ್ದಕ್ಕೆ ಏನ್ ಹೇಳ್ದ ಗೊತ್ತಾ..?? “ಅಲ್ಲಾ ಸಾ… ಯಾವೋನು ಕಳ್ ನನ್ ಮಗ – ಎಂಡ, ಸಾರಾಯಿ ಬ್ರಾಂದಿ, ಬೀರು, ರಮ್ಮು, ಜಿನ್ನು, ಫೆನ್ನಿ, ಓಡ್ಕಾ ಎಲ್ಲಾದ್ಕೂ ಒಂದೇ ಕಲೆಕ್ಟಿವ್ ನೌನ್ “ಗುಂಡು” ಅಂತ ನಾಮಕರಣ ಮಾಡಿದ್ದು…??” ಅಬ್ಬಬಬಾ… ವ್ಯಾಕರಣದಲ್ಲಿ ತನಗೆ ಗೊತ್ತಿರೋ ಒಂದೇ ಒಂದು ಪಾರ್ಟ್ಸ್ ಅಫ್ ಸ್ಪೀಚ್ ನ ಎಷ್ಟು ಚನ್ನಾಗಿ ಉಪಯೋಗಿಸ್ದ..ಗುಂಡ…ವಾ.. ಎಂದುಕೊಂಡು… “ಅದ್ಸರಿ ..ಅದಕ್ಕೂ ನೀನು ಗರಂ ಆಗೋಕೂ ಏನಪ್ಪಾ ಸಂಬಂಧ?” ಅಂದೆ “ನಾಳೆ … Read more

ರೈಲಲ್ಲಿ ಕಂಡ ದೃಶ್ಯಗಳು: ಶರತ್ ಹೆಚ್.ಕೆ.

೧ ಅದು ಜನರಲ್ ಬೋಗಿ. ಭರ್ತಿಯಾಗಿದೆ. ಕುಂತವರು ಕುಂತೇ ಇದ್ದಾರೆ. ನಿಂತವರು ನಿಲ್ಲಲಾಗದೇ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಿದ್ದಾರೆ. ಕೆಲ ಸೀಟುಗಳು ಖಾಲಿ ಇವೆ. ಆದರೆ ಯಾರೋ ಬರುವರೆಂಬ ನೆಪ ನಿಂತವರ ಸಹನೆಯ ಮಿತಿ ಪರೀಕ್ಷಿಸುತ್ತಿದೆ. ೨ ಬೋಗಿಯೊಳಗೆ ಹೈಟೆಕ್ ಯುವಕನ ಆಗಮನವಾಗಿದೆ. ರೈಲಿನೊಳಗೂ ಕೂಲಿಂಗ್ ಗ್ಲಾಸು ಹಾಕಿಕೊಂಡು ಹವಾ ಸೃಷ್ಟಿಸುವ ಮಟ್ಟಿಗೆ ಅವನು ಆಧುನಿಕ ತಿರುಕ. ಅವನ ಕೈಯಲ್ಲಿ ತಳ್ಳಿಕೊಂಡು ಹೋಗಬಹುದಾದ ಹೆಣ ಭಾರದ ಲಗೇಜ್ ಬ್ಯಾಗು. ಅಲ್ಲೊಂದು ಸೀಟು ಖಾಲಿ ಇರುವುದು ಅವನ ಕಣ್ಣಿಗೆ ಬಿದ್ದಿದೆ. … Read more

ಸಾಮಾನ್ಯ ಜ್ಞಾನ (ವಾರ 12): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ರಾಷ್ಟ್ರೀಯ ಸ್ವಯಂಸೇವಕದಳವನ್ನು ಸ್ಥಾಪಿಸಿದವರು ಯಾರು? ೨.    ಸುಭಾಶ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು? ೩.    ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು? ೪.    ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ? ೫.    ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಬೆಳೆಯುವ ಇನ್ನೊಂದು ಪ್ರಮುಖ ದೇಶ ಯಾವುದು? ೬.    ಗಡಿಯಾರದಲ್ಲಿ ಗಂಟೆ ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು? ೭.    ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ? ೮.    ಭಾರತದಲ್ಲಿ ಇಂಗ್ಲೀಷ್ … Read more

ಹೊಸವರ್ಷದ ಮಾರನೇ ದಿನ!: ಫ್ಲಾಪೀಬಾಯ್

ನೆನ್ನೆ ಸಾಯಂಕಾಲ ಫ್ರೆಂಡ್ ಕ್ರಾಕ್ ಬಾಯ್ ಫೋನ್ ಮಾಡಿದ್ದ.  ಫ್ಲಾಪೀ ಇವತ್ತು ಹೇಗಿದ್ರೂ ವರ್ಷದ ಕೊನೆ ದಿನ. ರಾತ್ರಿ ಹನ್ನೊಂದು ಇಪ್ಪತ್ತಕ್ಕೆಲ್ಲಾ ನಮ್ಮ ಅಡ್ಡದ ಹತ್ರ ಬಂದು ಬಿಡು. ಎಲ್ಲಾ ಹುಡ್ರೂ ಬರ್‍ತಾ ಇದಾರೆ. ಫುಲ್ಲು ಕುಡಿದು, ಕುಣಿದು ಕ್ರಾಂತಿ ಮಾಡೋಣ. ಹೊಸ ವರ್ಷದಲ್ಲಿ ಭಾರೀ ಬದಲಾವಣೆ ತರೋಣ. ೨೦೧೪ರ ನ್ಯೂ ಇಯರ್ ಸೆಲಬ್ರೇಷನ್ ಗ್ರಾಂಡ್ ಆಗಿ ಮಾಡೋಣ. ಖರ್ಚು ಎಷ್ಟಾದ್ರೂ ಪರವಾಗಿಲ್ಲ. ಪಾರ್ಟಿ ಎಲ್ಲಾ ನಂದೆ, ಲೇಟ್ ಮಾಡದೇ ಬೇಗ ಬಾ ಅಂತ ಹೇಳೀ ನನ್ನ … Read more

ಸಣ್ಣ ಕಾಕಾ, ಕಂಡಕ್ಟರ್ ಲೈಸೆನ್ಸು ಮತ್ತು ಖಯಾಲಿ: ಅಮರ್ ದೀಪ್ ಪಿ. ಎಸ್.

ಶಾಲಾ ದಿನಗಳ ನಗುವಿಗೆ, ಗೇಲಿಗೆ, ಕಾಲೆಳೆಯಲು ಯಾರಾದರೂ ಒಬ್ಬರು  ಇರುತ್ತಾರೆ. ಕಾಲು ಉಳುಕಿ ಬೀಳುವವರು ಸಹ.  ಓದು ಹತ್ತಿದರೆ ಹಿಂದೆ ನೋಡದಂತೆ ಓಡುತ್ತಲೇ, ಓದುತ್ತಲೇ ಒಂದು ಘಟ್ಟ ತಲುಪಿ ಬಿಡುತ್ತಾರೆ. ಅರ್ಧಂಬರ್ಧ ಓದಿದವರು ಅಲ್ಲಲ್ಲೇ ಇರುವ ಅವಕಾಶಗಳನ್ನು ಉಪ ಯೋಗಿಸಿಕೊಂಡು ದುಡಿಯುತ್ತಾರೆ. ಸ್ವಂತ ಅಂಗಡಿ, ದುಡಿಮೆ, ಮುಂಗಟ್ಟು ಇದ್ದವರು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ.  ಆಗ  ನಮ್ಮ ಊರಿನಲ್ಲಿ ಇದ್ದದ್ದೇ ಆರೆಂಟು  ಸರ್ಕಾರಿ ಶಾಲೆಗಳು, ಮತ್ತು ಖಾಸಗಿ ಶಾಲೆಯೆಂದರೆ ಒಂದು ಖಾಸಗಿ  ಶಿಕ್ಷಣ ಸಂಸ್ಥೆ,  ಶಿಸ್ತಿಗೆ ಹೆಸರಾಗಿದ್ದ ಶಾಲೆ. … Read more

ಕನ್ನಡೋದ್ಧಾರ!: ಗುರುಪ್ರಸಾದ್ ಕುರ್ತಕೋಟಿ

ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಇನ್ನೂ ಒಂದು ಸಲಾನೂ ಸಿನಿಮಾಗೇ ಕರೆದುಕೊಂಡು ಹೋಗಿಲ್ಲಾ ಅಂತ ಅವತ್ಯಾಕೋ ಅನಿರೀಕ್ಷಿತವಾಗಿ ನೆನಪಾಗಿ ಜಾನು ರಂಪ ಮಾಡಿಕೊಂಡಿದ್ದಳು. ಗಪ್ಪಣ್ಣನಿಗೆ ಅವಳ್ಯಾಕೋ ಸಿಕ್ಕಾಪಟ್ಟೆ ತವರನ್ನು ಮಿಸ್ ಮಾಡಿಕೊಳ್ಳುತ್ತಿರಬಹುದೇ ಎಂದು ಅನಿಸಿತಾದ್ದರಿಂದ, ತಡ ಮಾಡದೇ … "ಅದಕ್ಕೇನಂತ ಇವತ್ತ ಹೋಗೋಣ ನಡಿ" ಅಂದು ಜಾನುನಲ್ಲಿ ಜಾನ್ ತಂದ! ಕೂಡಲೇ ಜಾನು ಕಾರ್ಯಪ್ರವೃತ್ತಳಾಗಿ, ಪಲ್ಲಂಗದ ಕೆಳಗಿನ ಮೂಲೆಯಲ್ಲಿ ಜೋಪಾನವಾಗಿ ಎಸೆದಿದ್ದ ಅವತ್ತಿನ ಪೇಪರ್ ಅನ್ನು ಎತ್ತಿ ತಂದು ಅದರಲ್ಲಿನ ಸಾಪ್ತಾಹಿಕ ಪುರವಣಿಯಲ್ಲಿದ್ದ ಅಸಂಖ್ಯಾತ ಸಿನಿಮಾಗಳ ಯಾದಿಯಲ್ಲಿ ಒಂದಕ್ಕೆ … Read more

ಡೊಂಕು ಬಾಲದ ನಾಯಕರು: ಅನಿತಾ ನರೇಶ್ ಮಂಚಿ

’ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ’ ಎಂದು ಅಡುಗೆ ಮನೆಯಲ್ಲಿ ಪಲ್ಯ ತಳ ಹತ್ತದಂತೆ ಸೌಟಿನಲ್ಲಿ ತಾಳ ಹಾಕುತ್ತಾ ನನ್ನ ಧ್ವನಿಗೆ ನಾನೇ ಮೆಚ್ಚಿಕೊಳ್ಳುತ್ತಾ ಹಾಡುತ್ತಿದ್ದೆ.ಅಷ್ಟರಲ್ಲಿ ’ಅಮ್ಮಾ’ ಎಂದಿತು ಕಂದನ ಕರುಳಿನ ಕರೆಯೋಲೆ. ನಾನೇ ಹಾಡುತ್ತಿದ್ದ ಲಾಲಿ ಹಾಡು ಕೇಳಲಾಗದೇ ಬೇಗನೇ ನಿದ್ರಿಸಿ ದೊಡ್ಡವನಾದ ನನ್ನ ಕರುಳ ಕುಡಿಯಲ್ಲವೇ ಎಂದು ಹಾಡನ್ನು ಮುಂದುವರಿಸಿದೆ.  ಅಮ್ಮಾ.. ಡೊಂಕು ಬಾಲದ ನಾಯಕರು ಅಂದರೆ ಯಾರು ಎಂದ. ಅವನ ಪ್ರಶ್ನೆಗೆ ಸರಳವಾಗಿ ’ನಾಯಿ’ ಎಂದು ಉತ್ತರ ಕೊಟ್ಟೆ. ತಕ್ಷಣ ನಾಲಿಗೆ ಕಚ್ಚಿಕೊಂಡೆ. … Read more

ಆಮೆಗತಿಯ ನ್ಯಾಯಪುರಾಣ: ಅಖಿಲೇಶ್ ಚಿಪ್ಪಳಿ ಅಂಕಣ

ಭಾರತದ ಪ್ರಜಾಪ್ರಭುತ್ವ ಸಂವಿಧಾನ ವಿಶೇಷವಾದದು. ಇಲ್ಲಿನ ಕಾನೂನಿನಲ್ಲಿ ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ಇಚ್ಚೆಯಿದೆ. ದೌರ್ಜನ್ಯವನ್ನು ತಡೆಯಲು, ಅಶಕ್ತರಿಗೆ, ಮಹಿಳೆಯರಿಗೆ ಹೀಗೆ ಎಲ್ಲರಿಗೂ ಸಮಾನ ನ್ಯಾಯ ಸಿಗುವಂತೆ ಆಗಬೇಕು ಎನ್ನುವ ಆಶಯವಿದೆ. ನ್ಯಾಯ ಕೊಡಲು ನ್ಯಾಯದೇವರಿದ್ದಾರೆ. ಪರ-ವಿರೋಧ ವಾದಿಸಲು ನ್ಯಾಯವಾದಿಗಳಿದ್ದಾರೆ. ಆದರೂ ನ್ಯಾಯ ಸಿಗುವುದು ವಿಳಂಬವಾಗುತ್ತಿದೆ ಎಂಬ ಗಂಭೀರ ಆರೋಪವಿದೆ. ಚಿಕ್ಕ-ಪುಟ್ಟ ವ್ಯಾಜ್ಯಗಳನ್ನು ಪರಿಹರಿಸಲು ತ್ವರಿತ ನ್ಯಾಯಾಲಯಗಳಿವೆ. ಒಂದೊಂದು ಘಟನೆಗಳಿಗೆ ಸಂಬಂಧಿಸಿದಂತೆ ವಾದಿಸಲು ನುರಿತ ವಕೀಲರ ಪಡೆಯಿದೆ. ಹಿಡಿದ ಪೋಲಿಸರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಲ್ಲ ನಿಷ್ಣಾತರು … Read more

ಸಾಮಾನ್ಯ ಜ್ಞಾನ (ವಾರ 11): ಮಹಾಂತೇಶ್ ಯರಗಟ್ಟಿ

೧    ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು? ೨    ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ? ೩    ಬೌದ್ದರ ಸಂಕೇತದಲ್ಲಿ ಕಾಣಬರುವ ಚಕ್ರ  ಏನನ್ನು ಸೂಚಿಸುತ್ತದೆ? ೪    ಭಾರತದಲ್ಲಿ ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗ ಯಾರು? ೫    ಭಾರತೀಯ ಚಿತ್ರರಂಗದ ರೂವಾರಿ, ಎಂದು ಯಾರನ್ನು ಕರೆಯುತ್ತಾರೆ? ೬    ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೇಡಿನ ಪ್ರಧಾನಿಯಾಗಿದ್ದವರು ಯಾರು? ೭    ಎಲ್ಲೋರಾದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ರಾಷ್ಟ್ರಕೂಟರ ದೊರೆ ಯಾರು? ೮    ಭಾರತದಲ್ಲಿ … Read more

ನಾಡ ಹಬ್ಬ ಉಡುಪಿ ಪರ್ಯಾಯ: ವೆಂಕಟೇಶ್ ಪ್ರಸಾದ್

ದೇವಾಲಯಗಳ ನಾಡು , ಅನ್ನಬ್ರಹ್ಮನ ಬೀಡು ಉಡುಪಿಯಲ್ಲಿ ದೀಪಾವಳಿ ತಿ೦ಗಳ ನ೦ತರ ಶ್ರೀ ಕೃಷ್ಣನಿಗೆ ನಿತ್ಯ ಉತ್ಸವಗಳ ಸ೦ಭ್ರಮ.  ಶ್ರೀ ಕೃಷ್ಣ ಮುಖ್ಯಪ್ರಾಣರ ಉತ್ಸವ ಮೂರ್ತಿಗಳು ಅಲ೦ಕೃತ ತೇರುಗಳಲ್ಲಿ ವಿರಾಜಮಾನರಾದರೆ ಭಜಕರು ರಥಬೀದಿಯ ಸುತ್ತ ತೇರನ್ನೆಳೆದು ಕೃತಾರ್ಥರಾಗುತ್ತಾರೆ. ಈ ಉತ್ಸವಗಳಲ್ಲಿ ಮುಖ್ಯವಾದುದು ಜನವರಿ ತಿ೦ಗಳಲ್ಲಿ ಬರುವ ಮಕರಸ೦ಕ್ರಾ೦ತಿ ಉತ್ಸವ ಅ೦ದು ಏಕ ಕಾಲಕ್ಕೆ ಮೂರು ತೇರುಗಳನ್ನೆಳೆದು ಉಡುಪಿಗೆ ಉಡುಪಿಯೇ ಸ೦ಭ್ರಮಿಸುತ್ತದೆ. ಮರುದಿನ ಹಗಲು ಹೊತ್ತಿನಲ್ಲಿ ನಡೆಯುವ ಚೂರ್ಣೋತ್ಸವ ಅಥವಾ ಸುವರ್ಣೊತ್ಸವಕ್ಕೂ ಅಷ್ಟೇ ಸ೦ಖ್ಯೆ ಯಲ್ಲಿ ಜನ ಸೇರುತ್ತಾರೆ. … Read more

ಎಡಸೊಕ್ಕು: ಹಿಪ್ಪರಗಿ ಸಿದ್ದರಾಮ್

'ಯೇನಪಾ…ತಮ್ಮಾ, ನಿನ್ನ ಹಂತ್ಯಾಕ ಮೊಬೈಲ್ ಐತೇನು?' ಆ ವಯಸ್ಸಾದ ಹಿರಿಯರು ಕೋರ್ಟ್ ಒಂದರ ಆವರಣದಲ್ಲಿ ನನಗೆ ಕೇಳಿದಾಗ, 'ಯಾಕ್ರಿ ಅಮ್ಮಾರ…ಈಗಿನ ಕಾಲದಾಗ ಮೊಬೈಲ್ ಇಲ್ಲದವರು ಯಾರರ ಇರ್ತಾರೇನ್ರೀ ನೀವ ಹೇಳ್ರೀ?' ಅಂತ ತಮಾಷೆಯೊಂದಿಗೆ ಗೌರವಪೂರ್ವಕವಾಗಿ ನಾನಂದೆ. 'ಹಂಗಲ್ಲೋ ನನ್ನ ಬಾಳಾ, ಮುಂಜಾಲಿಂದ ನಮ್ಮ ವಕೀಲರು ಬರ್ತಾರಂತ ಕಾಯಾಕತ್ತೀನಿ, ಪೋನ್ ಮಾಡಿದರ ರಿಸೀವ ಮಾಡಂಗಿಲ್ಲಾಗ್ಯಾರ…ನಿನ್ನ ಮೊಬೈಲ್ ಪೋನಿನಿಂದ ಅವರಿಗೆ ಹಚ್ಚಿ ಕೊಡು' ಎಂದು ಅರವತ್ತರ ವಯೋಮಾನದ ಆಸುಪಾಸಿನ ಆ ಹಣ್ಣು-ಹಣ್ಣು ಮುದಿಜೀವ ವಿನಂತಿಸಿಕೊಂಡಾಗ ಮನ ಕರಗಿತು. ಆದರೆ ಆ … Read more

ಸಮಾಜಮುಖಿ ಆಶಯ ಮತ್ತು ಸಾಹಿತ್ಯದ ಸಾರ್ಥಕತೆ: ಡಾ.ಪ್ರಕಾಶ ಗ.ಖಾಡೆ

ಸಾಹಿತ್ಯ ಸಮಾಜದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿಯಾಗಿದೆ. ನಿತ್ಯ ಪರಿವರ್ತನಾ ಶೀಲವಾದ ಸಮಾಜವು ವ್ಯಕ್ತಿಗಳ ಪರಸ್ಪರ ಸಂಬಂಧಗಳ ಕೊಂಡಿಯಾಗಿದೆ. ವ್ಯಕ್ತಿಗಳ ಸಂಬಂಧಗಳು ವಿವಿಧ ರೀತಿಯಲ್ಲಿ ಬದಲಾವಣೆಗಳನ್ನು ಹೊಂದುತ್ತವೆ. ಸಾಮಾಜಿಕ ಬದಲಾವಣೆ ಎಂದರೆ ಸಾಮಾಜಿಕ ಸಂಬಂಧಗಳಲ್ಲಿ ಆಗುವ ಬದಲಾವಣೆ ಎಂಬುದಾಗಿದೆ. ಈ ಬದಲಾವಣೆಗಳು ಸರ್ವವ್ಯಾಪಕವಾದುದರಿಂದ ನಾವು ಸಮಾಜವನ್ನು ನಿತ್ಯ ಪರಿವರ್ತನಾಶೀಲವೆಂದು ಕರೆಯುತ್ತೇವೆ. ಸಾಹಿತ್ಯ ಒಂದರ್ಥದಲ್ಲಿ ಜನಜೀವನದ ಪ್ರತಿಬಿಂಬ ಎಂಬ ಮಾತಿದೆ. ಒಬ್ಬ ಅಥವಾ ಹಲವರ ಸೃಜನಶೀಲವಾದ ಮನಸ್ಸಿನ ಅಭಿವ್ಯಕ್ತಿ ಸಾಹಿತ್ಯವಾಗಿ ಅದು ಸಹೃದಯದಲ್ಲಿ ವ್ಯಾಪಕವಾಗುತ್ತದೆ. ಸಾಹಿತ್ಯದ … Read more

ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆ: ಎಸ್.ಪಿ. ಜಯಣ್ಣಾಚಾರ್ ಶಿಲ್ಪಿ

          ಕನ್ನಡ ನುಡಿನಾಡಿಗಾಗಿ ನೀರುನೆಲಗಳೆಲ್ಲಕಾಗಿ ದುಡಿದು ಮಡಿದ ಎನಿತೊಜನರ ಸರತಿ ನಿಂತ ಸಾಲಿನಲ್ಲಿ ಕಾಡಿನ ಕಗ್ಗಲ್ಲಿನಲ್ಲಿ ಶಿಲ್ಪಕಲೆಯ ಸೌಧಕಟ್ಟಿ ಆಳಿದ ಅರಸು ಕುಲದ ಹೆಸರ ಅನುಗಾಲವು ಸ್ಮರಿಸುವಂತೆ ಗುಡಿಗೋಪುರಗಳ ಎಮಗೆ ಇತ್ತು ತೆರೆಯ ಮರೆಗೆ ಸರಿದು ಹೋದ ಮಹಾಮಹಿಮ ಶಿಲ್ಪಿ ಜನರ ಕೊಡುಗೆ ಏನು ಅಲ್ಪವೇ? ಕವಿ ಸೌರ್ವಭೌಮರಿಗೂ ಎದಿರು ಸ್ಪರ್ಧೆ ನೀಡುವಂತ ಶಿಲ್ಪಕಲಾ ಪ್ರತಿಭೆ ಇದ್ದೂ ಇತಿಹಾಸದಿ ಮೆರೆಯಲಿಲ್ಲ ವೀಣೆವಾದ್ಯದೆದುರು ವೇಣು ಮಿಗಿಲಿದ್ದರೂ ಮಿಂಚದಲ್ಲ ಇಂದಿನ ಶೋದನೆಯೊಳಲ್ಲು ಜಕಣ ಡಕಣರಾರು … Read more

ವಿಸ್ಮಯಭರಿತ ವಿರಾಟ ವಿಶ್ವ (ಕೊನೆಯ ಭಾಗ): ನಾರಾಯಣ ಎಂ.ಎಸ್.

ಇಲ್ಲಿಯವರೆಗೆ ಸಿನಿಮಾ ಎಂದಾಗ ನೆನಪಾಯ್ತು. ನೀವು ‘ಅನಿಮಲ್ಸ್ ಆರ್ ಬ್ಯೂಟಿಫ಼ುಲ್ ಪೀಪಲ್’ ಅನ್ನೋ ಚಿತ್ರ ನೋಡಿದ್ದೀರಾ? ನೋಡಿಲ್ಲದಿದ್ದರೆ ಖಂಡಿತಾ ನೋಡಿ. ಎಲ್ಲರೂ ನೋಡಲೇಬೇಕಾದ ಚಿತ್ರವದು. ಆ ಚಿತ್ರದಲ್ಲಿ, ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ ಹನಿ ಗೈಡ್ ಹಕ್ಕಿ ಮತ್ತು ಹನಿ ಬ್ಯಾಡ್ಜರ್ ಅಥವಾ ರಾಟೆಲ್ ಎನ್ನುವ ಪ್ರಾಣಿಯ ಜೊತೆಗಿನ ಸಿಂಬಯೋಸಿಸ್ಸಿನ ಸಂಬಂಧವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈ ಹನಿ ಗೈಡ್ ಹಕ್ಕಿಗೆ ಜೇನುತುಪ್ಪ ಮತ್ತು ರಸವತ್ತಾದ ಜೇನುಮೇಣವೆಂದರೆ ಎಲ್ಲಿಲ್ಲದ ಆಸೆ. ಜೇನು ಹುಳುಗಳು ರಹಸ್ಯವಾಗಿ ಸಂದಿಗೊಂದಿಗಳಲ್ಲಿ ಕಟ್ಟಿರುವ ಜೇನುಗೂಡುಗಳನ್ನು … Read more

ಸೂರ್ಯಾಸ್ತವನರಸುತ್ತ: ಪ್ರಶಸ್ತಿ ಪಿ.ಸಾಗರ

ಅಣಾ..ಣ  ಒಂದ್ನಿಮ್ಷ ನಿಲ್ಸಿ ಗಾಡಿನ ಅಂದ ಶ್ಯಾಂ. ಏನಾಯ್ತಪ ಅಂತ ಡ್ರೈವರ್ ಗಾಡಿ ನಿಲ್ಲಿಸ್ತಿದ್ದ ಹಾಗೆನೇ ಬಾಗಿಲು ತೆಗೆದು ಹೊರಗೋಡಿದ ಶ್ಯಾಂ. ಏನಾಯ್ತಪ ಅಂತ ಹಿಂದಿರೋರೆಲ್ಲಾ ನೋಡ್ತಾ ಇದ್ರೆ ಶ್ಯಾಂ ತನ್ನ ಕ್ಯಾಮೆರಾ ತೆಗೆದು ಸೂರ್ಯಾಸ್ತದ ಫೋಟೋ ತೆಗಿತಾ ಇದ್ದ. ಸೂರ್ಯ ಕಿತ್ತಳೆಯಂತೆ ಕೆಂಪಗಾಗಿ ಇನ್ನೇನು ಬೆಟ್ಟಗಳ ನಡುವೆ ಮುಳುಗಿ ಹೋಗುತ್ತಿದ್ದ. ಜಸ್ಟ್ ಮಿಸ್ಸಾಗಿಬಿಡುತ್ತಿದ್ದ ದೃಶ್ಯವನ್ನು ಸೆರೆಹಿಡಿದದ್ದರ ಖುಷಿಯಲ್ಲಿ ಶ್ಯಾಂ ಇದ್ರೆ ಏನಪ್ಪಾ ಯಾವತ್ತೂ ಜೀವಮಾನದಲ್ಲಿ ಸೂರ್ಯನನ್ನೇ ನೋಡದವ್ನ ತರ ಮಾಡ್ತಾನೆ ಇವ್ನು ಅಂತ ಗಾಡಿ ನಿಲ್ಸಿದ್ದರ … Read more

ನೈಟೀ ಪುರಾಣ: ಕ್ರಾಕ್ ಬಾಯ್

          ಹಿಂಗೇ ಮೊನ್ನೆ ಮಾಡಕ್ ಕ್ಯಾಮೆ ಇಲ್ದೆ ಭಟ್ರಂಗಡಿ ಕಟ್ಟೆ ಮೇಲ್ ಕುಂತ್ಕಂಡ್ ಓತ್ಲಾ ವಡೀತಿದ್ದೆ, ನನ್ನಂಗೆ ಮಾಡಕ್ ಕ್ಯಾಮೆ ಇಲ್ದಿರೋ ಐಕ್ಳೆಲ್ಲಾ, ಅಣ್ ತಮ್ಮಂದ್ರೆಲ್ಲಾ ನನ್ ಜೊತೆ ಸೇರ್ಕಂಡಿದ್ರು, ಅದೂ, ಇದೂ, ಆಳೂ, ಮೂಳೂ, ಮಣ್ಣೂ, ಮಸಿ, ಹಿಂಗೇ ಮಾತಾಡ್ಕಂಡ್ ಕುಂತಿದ್ವಿ, ಅಸ್ಟೊತ್ತಿಗೆ ಮೂಲೆ ಮನೆ ಆಂಟಿ ಕೊತ್ಮೆರಿ ಸಪ್ ತಗಳಕ್ಕೆ ಭಟ್ರಂಗ್ಡಿಗೆ ಬಂದ್ರು, ಅವ್ರ್ ಬಂದ್ ತಗಂಡ್ ವೋಗಿದ್ರಲ್ ಏನೂ ಇಸೇಸ ಇರ್ಲಿಲ್ಲಾ ಆದ್ರೆ ಅವ್ರು ನೈಟೀ ಹಾಕಂಡ್ … Read more

ಸತ್ತವರ ಬಾಯಾಗ ಮಣ್ಣು-ಇದ್ದವರ ಬಾಯಾಗ ಹೋಳಿಗಿ-ತುಪ್ಪಾ: ಸುಮನ್ ದೇಸಾಯಿ

ಈಗ ಸ್ವಲ್ಪ ದಿವಸದ್ದ ಹಿಂದ ಒಂದರಮ್ಯಾಲೊಂದ ಗಣ್ಯರ ನಿಧನದ ಸುದ್ದಿ ಕೇಳಿದ್ವಿ. ಒಂದ ಘಳಿಗಿ ಹಿಂಗಾಗಬಾರದಿತ್ತು ಅನಿಸಿದ್ರು, ರಜಾ ಸಿಕ್ತಲ್ಲಾ ಅಂತ ಖುಷಿ ಆದವರ ಹೆಚ್ಚು. ಎಲ್ಲಾರು ಸೂಟಿ ಸಿಕ್ಕಿದ್ದಕ್ಕ ಒಂದ ನಮುನಿ ಖುಷಿಯ ಮುಗುಳ್ನಗಿ ಮುಖದಮ್ಯಾಲೆ  ತಂದಕೊಂಡು “ ಅಯ್ಯ ಪಾಪ ಹಿಂಗಾಗಬಾರದಿತ್ತ ” ಅಂತ ಅಂದವರ ಭಾಳ ಮಂದಿ. ಜಗತ್ತು ಎಷ್ಟ ವಿಚಿತ್ರ ಅಲ್ಲಾ? ನಮ್ಮ ಉತ್ತರ ಕರ್ನಾಟಕದ್ದ ಕಡೆ ಒಂದು ಆಡು ಮಾತದ ಎನಂದ್ರ “ ಸತ್ತವರ ಬಾಯಾಗ ಅಷ್ಟ ಮಣ್ಣು, ಉಳಿದವರಿಗೆ … Read more

ಮಾತಿಗೊಂದು ಗಾದೆ, ಗಾದೆಗೊಂದು ಬೋಧೆ: ವಿಶ್ವನಾಥ ಸುಂಕಸಾಳ

’ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುವಂತೆ ಹಿರಿಯರ ಅನುಭವ ವೇದಾಂತವಾದ ಗಾದೆ ಮಾತುಗಳು ಕನ್ನಡದ ಸುಭಾಷಿತಗಳಿದ್ದಂತೆ. ”ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಗಾದೆ ತಲುಪದ ಕ್ಷೇತ್ರವಿಲ್ಲ. ಗಾದೆ ಮಾತುಗಳು ನಮ್ಮ ಅರಿವನ್ನು ವಿಸ್ತರಿಸುತ್ತವೆ. ’ಆರಕ್ಕೇರಿಲ್ಲ ಮೂರಕ್ಕೆ ಇಳೀಲಿಲ್ಲ” ಎಂಬಂಥ ಜೀವನದಲ್ಲಿ ಗಾದೆಗಳು ಜೀವನೋತ್ಸಾಹವನ್ನು ತುಂಬಿ ಮಾರ್ಗದರ್ಶನವನ್ನು ಮಾಡಬಲ್ಲವು. ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬಂತೆ ಒಂದೇ ವಾಕ್ಯದಲ್ಲಿ ಚುಟುಕಾಗಿ ಜೀವನ ಸಂದೇಶವನ್ನು ಬಿತ್ತರಿಸಬಲ್ಲವು. ನಮ್ಮ ಹಿರಿಯರು ಬಾಯಿ ತೆರೆದರೆ ಒಂದು ಗಾದೆ ಮಾತು ಹೇಳುತ್ತಿದ್ದರು. ಅಷ್ಟೇ ಅಲ್ಲ. … Read more

ಓ ಬಾಲ್ಯವೇ ಮರಳಿ ಬರಲಾರೆಯಾ?:ಪದ್ಮಾ ಭಟ್

ಹಾಸ್ಟೇಲಿನ ಬಳಿ ಬಂದಿದ್ದ ಪುಟ್ಟ ಹುಡುಗಿಯ ಹತ್ತಿರ ನಿನಗೆ ಲಗೋರಿ ಆಟ ಆಡೋಕೆ ಬರುತ್ತಾ ಎಂದು ಕೇಳಿದಾಗ  ಅವಳಿಂದ ಬಂದ ಉತ್ತರ ನಂಗೆ ಕಾರ್ ರೇಸ್ ಬರುತ್ತೆ, ಹಂಗ್ರಿ ಬರ್ಡ್ ಬರುತ್ತೆ, ಛೋಟಾ ಭೀಮ್ ಬರುತ್ತೆ ಎಂದು ಒಂದೇ ಸಮನೆ ಕಂಪ್ಯೂಟರಿನ, ಮೊಬೈಲ್ ನ ಆಟಗಳನ್ನು ಹೇಳಹೊರಟಿದ್ದಳು.. ಮಣ್ಣಿನಲ್ಲಿ ನಾನು ಆಟ ಆಡೋಲ್ಲ. ನನ್ನ ಡ್ರೆಸ್ ಗಲೀಜ್ ಆಗುತ್ತೆ ಎಂದು ಅಮ್ಮ ಬೈತಾಳೆ ಎಂದಳು..ಇದನ್ನೆಲ್ಲಾ ಕೇಳುತ್ತಿದ್ದಂತೆ ಮನಸ್ಸು ಹೇಳದೇ ಕೇಳದೆ ನೆನಪಿನ ಕದವನ್ನು ತಟ್ಟಿಯೇ ಬಿಟ್ಟಿತು..ಬಾಲ್ಯದ ನೆನಪುಗಳು … Read more

ಬಾಡಿಗೆ ದೇಹ: ನಾಗರಾಜ್ ಹರಪನಹಳ್ಳಿ

          ಇಡೀ ನಗರ ತಲ್ಲಣಿಸಿದಂತೆ ಕಂಡಿತು. ದೇಹಗಳನ್ನ ಬಾಡಿಗೆ ನೀಡಲು ಅವರು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಒಂದು ಕಾಲದಲ್ಲಿ ನಗರದ ಯೌವ್ವನವನ್ನೇ ಆಳಿದವರು ಈಗ ಗಿರಾಕಿಗಳಿಲ್ಲದೇ ಅಂಡಲೆದು ಹೊಸಬರನ್ನ ದಂಧೆಗೆ ಇಳಿಸುತ್ತಿದ್ದರು. ದೇಹದ ಸೌಂದರ್ಯ, ಎಳಸುತನ ನೋಡಿ ದೇಹಗಳು ಗಂಟೆ ಲೆಕ್ಕದಲ್ಲಿ ಬಾಡಿಗೆ ನೀಡಲಾಗುತ್ತಿತ್ತು. ದೊಡ್ಡ ದೊಡ್ಡ ಕುಳಗಳು ತಿಂಗಳಿಗೊಮ್ಮೆ ಮೋಜಿಗಾಗಿ ಬಾಡಿಗೆ ಪಡೆದವರನ್ನು ಹೂವಿನಷ್ಟೆ ಮೃದುವಾಗಿ ಎತ್ತಿಕೊಂಡು ಹೋಗುತ್ತಿದ್ದರು. ಇದಕ್ಕಾಗಿ ನಗರದ ರಸ್ತೆಗಳು ಸಾಕ್ಷಿಯಾಗುತ್ತಿದ್ದವು. ಎಷ್ಟು ಸಲೀಸಾಗಿ ಈ ವ್ಯಾಪಾರ ನಡೆದುಹೋಗುತ್ತಿತ್ತು. … Read more

“ಕಳೆದು ಹೋಗು”ವ, ಮತ್ತೆ ಮತ್ತೆ “ಹುಡುಕು”ವ ಪರಿ: ಅಮರ್ ದೀಪ್ ಪಿ. ಎಸ್.

  ಹಳೆಯ ಸಿನೆಮಾಗಳಲ್ಲಿ ನಾವು ನೋಡುತ್ತಿದ್ದೆವು. ಬಾಲ್ಯದಲ್ಲಿ ತಂದೆ ತಾಯಿಯೊಂದಿಗಿರುವ ಮಕ್ಕಳು ಜಾತ್ರೆಯಲ್ಲೋ, ಭಯಂಕರ ಗಿಜಿಗುಡುತ್ತಿರುವ ರೈಲಿನ ಭೊಗಿಯಲ್ಲೋ, ಗಲಭೆಯಲ್ಲೋ … ಆಟಿಕೆ ಆಡುತ್ತಾ,  ಐಸ್  ಕ್ರೀಮ್ ತರಲು ಹೋಗಿಯೋ , ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಲು  ಅವಸರವಸರ ವಾಗಿ ಓಡಿ ಹೋಗುವ ಭರಾಟೆಯಲ್ಲೋ ಮಕ್ಕಳ ಪುಟ್ಟ ಪುಟ್ಟ ಕೈಗಳನ್ನು ಭಧ್ರತೆ ಫೀಲ್  ಕೊಟ್ಟು ಹಿಡಿದಿಟ್ಟುಕೊಂಡ ತಂದೆ ತಾಯಿಯು ಅದಾವ ಮಾಯೆಯಲ್ಲೋ ಕೈ ಬಿಟ್ಟು  ತಂದೆ ತಾಯಿ ಅವರನ್ನು "ಕಳೆದುಕೊಂಡು" ಮಕ್ಕಳನ್ನು ಹುಡುಕುತ್ತಾರೆ, ಮಕ್ಕಳು ಅಳುತ್ತಾ ಅತ್ತಿತ್ತ  ಸಾಗುತ್ತಿರುತ್ತಾರೆ.  … Read more

ಮರೆಯಾಗುತ್ತಿರುವ ಮದುವೆಮನೆಯ ಸಂಭ್ರಮಗಳು: ಸುಮನ್ ದೇಸಾಯಿ

ಮೊನ್ನೆ ಸಂಜಿಮುಂದ ಮನಿ ಹತ್ರ ಇರೊ ವೇಂಕಪ್ಪನ ಗುಡಿಗೆ ಹೋಗಿದ್ವಿ. ಅಲ್ಲೆ ಇದ್ದ ಕಲ್ಯಾಣಮಂಟಪದಾಗ ಮದುವಿ ಇತ್ತಂತ ಕಾಣಸ್ತದ. ಬ್ಯಾಂಡ ಭಂಜಂತ್ರಿಯವರು ಮಸ್ತ ಯಾವದೊ ಒಂದ ಸಿನೇಮಾ ಹಾಡಿನ ಬಾಜಾ ಬಾರಿಸ್ಲಿಕತ್ತಿದ್ರು. ಈಗೆಲ್ಲಾ ಕಡೆ ಒಂದ ಹೊಸಾ ಪಧ್ಧತಿ ಎದ್ದದ ಎನಂದ್ರ ಈ ಉತ್ತರಭಾರತದ ಕಡೆ ಮದುವಿಗೊಳೊಳನ್ಯಾಗ ಹೆಂಗ ವರನ್ನ ಕುದರಿಮ್ಯಾಲೆ ಕೂಡಿಸಿಕೊಂಢ ಬ್ಯಾಂಡ ಬಾಜಾ ಬಾರಿಸ್ಕೊತ, ಡ್ಯಾನ್ಸ ಮಾಡ್ಕೊತ ಕರ್ಕೊಂಡ ಬರತಾರ ಹಂಗ ಇಲ್ಲೆನು ವೇಂಕಪ್ಪನ ಗುಡಿಯಿಂದ ಕುದರಿಮ್ಯಾಲ ವರನ್ನ ಕುಡಿಸಿ ಬ್ಯಾಂಡ ಬಾಜಾ ಬಾರಿಸ್ಕೋತ,ಸಣ್ಣ … Read more

ಪ್ರೀತಿಯ ಭಾವನೆಗಳನ್ನ ಬದಿಗೊತ್ತಿ ಸ್ನೇಹಕ್ಕೆ ಕೈ ಚಾಚುತ್ತಿರುವೆ: ಶುಭ ಆರ್.

  ನನ್ನ ಆತ್ಮೀಯ ಹುಡುಗನಿಗೆ,  ಮರೆಯಲಾಗದು ನಿನ್ನೊಡನೆ ಕಳೆದ ಆ ಸುಂದರ ದಿನಗಳು. ಮನದ ತುಂಬಾ ಮೂಡಿದ  ನೂರಾರು ಕನಸಿನ ಚಿತ್ತಾರಗಳು. ಖಾಲಿಯಿದ್ದ ನಮ್ಮ ಪಕ್ಕದ ಮನೆಗೆ ಬಂದ  ಹುಡುಗ ನೀನು. ಅಪರಿಚನಾಗಿದ್ದವನು ಸ್ವಲ್ಪ ದಿನಗಳ ಬಳಿಕ ಪರಿಚಯವಾಗಿ ಆತ್ಮೀಯ ಒಡನಾಟ ಬೆಳೆಯಿತು. ನಿನ್ನ ಮುದ್ದಾದ ನಗು ನನ್ನನ್ನು ನಾಚುವಂತೆ ಮಾಡುತ್ತಿತ್ತು. ನಿನ್ನ ಸುಂದರ ನೋಟದಲ್ಲೇ ನನ್ನ ಸೆರೆ ಹಿಡಿದ. ಸುಮಧುರ ಮಾತುಗಳಲ್ಲೇ ನನ್ನ ಹೃದಯವನ್ನೇ ಗೆದ್ದ. ಒಟ್ಟಿನಲ್ಲಿ ಗುಣದಲ್ಲಿ ಅಪರಂಜಿಯಂತಹ  ಹುಡುಗ, ನಿನ್ನ ಚೆಲುವಿಗೆ ನಾ … Read more

ವಿಸ್ಮಯಭರಿತ ವಿರಾಟ ವಿಶ್ವ (ಭಾಗ 1): ನಾರಾಯಣ ಎಂ.ಎಸ್.

ನಿಮಗೆ ನೆನಪಿರಬಹುದೇನೋ? ಇಲ್ಲ, ಖಂಡಿತವಾಗಿಯೂ ನೆನಪಿದ್ದೇ ಇರುತ್ತದೆ. ಏಕೆಂದರೆ, ಬಾಲ್ಯದ ಉತ್ಕಟ ಅನುಭವಗಳ ನೆನಪು ಎಲ್ಲಕ್ಕಿಂತ ಸ್ಪಷ್ಟ ಮತ್ತು ನಿಚ್ಚಳವಾಗಿರುತ್ತದಂತೆ. ನಮ್ಮ ಕೈ ಸೋಕಿದೊಡನೆ ನಾಚಿ ಮುದುಡುವ ಆ ಮುಟ್ಟಿದರೆ ಮುನಿ ಗಿಡ, ಕತ್ತಲಲ್ಲಿ ಮಿಂಚುವ ಆ ಮಿಣಿಕೆ ಹುಳ, ಆ ಬಣ್ಣದ ಚಿತ್ತಾರದ ಪಾತರಗಿತ್ತಿ, ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸುವ ಆ ಊಸರವಳ್ಳಿ, ಕಾರ್ಮುಗಿಲಿನಲ್ಲಿ ಕಂಡ ಆ ಬೆಳ್ಳಿ ಮಿಂಚು ಮತ್ತು ಆಗಸದಲ್ಲಿನ ರಂಗು ರಂಗಾದ ಮಳೆಬಿಲ್ಲು ಇತ್ಯಾದಿಗಳನ್ನು ನಾವು ನಮ್ಮ ಬೆರಗು ಕಣ್ಗಳಿಂದ ಮನದಣಿಯೆ … Read more

ಮೂವರ ಕವಿತೆಗಳು: ಅಕುವ, ಕೃಷ್ಣಮೂರ್ತಿ ನಾಯಕ್, ಶ್ರೀವಲ್ಲಭ ಕುಲಕರ್ಣಿ.

          ದಾನಿಗಳೇ…..   ಇಲ್ಲಿ ಎಲ್ಲರೂ ದಾನಿಗಳು ಹಲವರು ಅಲ್ಪದಾನಿಗಳು ಕೆಲವರು ಮಹಾದಾನಿಗಳು ಮತ್ತುಳಿದವರು ಅಗ್ರಮಾನ್ಯರು ಆದರೂ ಯಾರೂ ಕರ್ಣನಾಗಲ್ಲಿಲ್ಲ ಶಿಬಿಯ ಮೀರಲಿಲ್ಲ !!   ದೇವರ ಹೆಸರೆತ್ತಿದ್ದರೆ ಹೇಸದೆ ಕೊಡುವರು ಸಾರ್ಥಕತೆಯ ಮಂಕಿಗೆ ಬೆರಗಾಗಿರುವರು ದಟ್ಟನೆ ಸಭೆಯಲಿ ಸಾಲು ಹೊದಿಯುವರು ಬೆನ್ನಲ್ಲಿಯೇ ಮೆತ್ತನೆ ವಾಪಾಸು ಕೇಳುವರು !!   ನನ್ನೂರ ಹಾದಿಯ ಇಕ್ಕೆಲ್ಲದಲಿ ಬಸ್ಸು ತಂಗುದಾಣಗಳು ದೇಗುಲದ ರಸ್ತೆಗೆ ಮೇಲೆದ್ದ ಸ್ವಾಗತ ಗೋಪುರಗಳು ಬುಡದಲ್ಲಿ ಕೆತ್ತಿದ ದಾನಿಗಳ ನಾಮ ಫಲಕಗಳು … Read more