ಡೊಂಕು ಬಾಲದ ನಾಯಕರು: ಅನಿತಾ ನರೇಶ್ ಮಂಚಿ
’ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ’ ಎಂದು ಅಡುಗೆ ಮನೆಯಲ್ಲಿ ಪಲ್ಯ ತಳ ಹತ್ತದಂತೆ ಸೌಟಿನಲ್ಲಿ ತಾಳ ಹಾಕುತ್ತಾ ನನ್ನ ಧ್ವನಿಗೆ ನಾನೇ ಮೆಚ್ಚಿಕೊಳ್ಳುತ್ತಾ ಹಾಡುತ್ತಿದ್ದೆ.ಅಷ್ಟರಲ್ಲಿ ’ಅಮ್ಮಾ’ ಎಂದಿತು ಕಂದನ ಕರುಳಿನ ಕರೆಯೋಲೆ. ನಾನೇ ಹಾಡುತ್ತಿದ್ದ ಲಾಲಿ ಹಾಡು ಕೇಳಲಾಗದೇ ಬೇಗನೇ ನಿದ್ರಿಸಿ ದೊಡ್ಡವನಾದ ನನ್ನ ಕರುಳ ಕುಡಿಯಲ್ಲವೇ ಎಂದು ಹಾಡನ್ನು ಮುಂದುವರಿಸಿದೆ. ಅಮ್ಮಾ.. ಡೊಂಕು ಬಾಲದ ನಾಯಕರು ಅಂದರೆ ಯಾರು ಎಂದ. ಅವನ ಪ್ರಶ್ನೆಗೆ ಸರಳವಾಗಿ ’ನಾಯಿ’ ಎಂದು ಉತ್ತರ ಕೊಟ್ಟೆ. ತಕ್ಷಣ ನಾಲಿಗೆ ಕಚ್ಚಿಕೊಂಡೆ. … Read more