ಪ್ರೀತಿಯ ಭಾವನೆಗಳನ್ನ ಬದಿಗೊತ್ತಿ ಸ್ನೇಹಕ್ಕೆ ಕೈ ಚಾಚುತ್ತಿರುವೆ: ಶುಭ ಆರ್.

 

ನನ್ನ ಆತ್ಮೀಯ ಹುಡುಗನಿಗೆ,

 ಮರೆಯಲಾಗದು ನಿನ್ನೊಡನೆ ಕಳೆದ ಆ ಸುಂದರ ದಿನಗಳು. ಮನದ ತುಂಬಾ ಮೂಡಿದ  ನೂರಾರು ಕನಸಿನ ಚಿತ್ತಾರಗಳು. ಖಾಲಿಯಿದ್ದ ನಮ್ಮ ಪಕ್ಕದ ಮನೆಗೆ ಬಂದ  ಹುಡುಗ ನೀನು. ಅಪರಿಚನಾಗಿದ್ದವನು ಸ್ವಲ್ಪ ದಿನಗಳ ಬಳಿಕ ಪರಿಚಯವಾಗಿ ಆತ್ಮೀಯ ಒಡನಾಟ ಬೆಳೆಯಿತು. ನಿನ್ನ ಮುದ್ದಾದ ನಗು ನನ್ನನ್ನು ನಾಚುವಂತೆ ಮಾಡುತ್ತಿತ್ತು. ನಿನ್ನ ಸುಂದರ ನೋಟದಲ್ಲೇ ನನ್ನ ಸೆರೆ ಹಿಡಿದ. ಸುಮಧುರ ಮಾತುಗಳಲ್ಲೇ ನನ್ನ ಹೃದಯವನ್ನೇ ಗೆದ್ದ. ಒಟ್ಟಿನಲ್ಲಿ ಗುಣದಲ್ಲಿ ಅಪರಂಜಿಯಂತಹ  ಹುಡುಗ, ನಿನ್ನ ಚೆಲುವಿಗೆ ನಾ ಮಾರುಹೋದೆ. ಒಂದು ದಿನವಾದರೂ ಒಬ್ಬರಿಗೊಬ್ಬರು ಕಣ್ಣಿಗೆ ಕಾಣದೆ ಹೋದರೆ ಹಾಗೆಯೇ ಚಡಪಡಿಸುತ್ತಿತ್ತು  ಇಬ್ಬರ ಹೃದಯ. ಇದು ಸ್ನೇಹನೋ, ಪ್ರೀತಿನೋ  ಅಥವಾ ಕೇವಲ ಆಕರ್ಷಣೆಯ ನನ್ನ ಮನದಲ್ಲಿ ತಳವಳವಾಗುತಿತ್ತು. ಆದರೂ   ನಿನ್ನೊಡನೆ ಮಾತನಾಡಲು ಹಿಂಜರಿಯುತ್ತಿತ್ತು  ನನ್ನ ಮನಸ್ಸು. ನಾನಂತೂ ತುಂಬಾ ನಾಚಿಕೆ ಸ್ವಭಾವದ ಹುಡುಗಿ ನೀನು ಎದುರು ಸಿಕ್ಕಾಗ ನಿನ್ನಯ ಮುಖಕ್ಕೆ ಮುಖ ಕೊಟ್ಟು ನಿಂತು ನೋಡಲಾರದೆ ಕತ್ತು  ಬಗ್ಗಿಸಿಕೊಂಡು ಹೆದರಿ ಓಡಿಹೊಗುತ್ತಿದ್ದೆ . 

ನೀನು ಎಷ್ಟೋ ಬಾರಿ ನಾನು ಎದುರು ಸಿಕ್ಕಾಗ ನಿನ್ನ ತುಟಿಯಂಚಿನ ಪ್ರೀತಿಯ ಮಾತನ್ನು ಹೊರಹಾಕಲು ಬಂದಾಗ  ನಾ ಅರಿತರು ಅರಿಯದಂತೆ, ನಿನ್ನ  ಮನದಲ್ಲಿ ತುಂಬಿದ ಭಾವನೆಗಳನ್ನು  ಬಿಚ್ಚಿಟ್ಟು ವ್ಯಕ್ತಪಡಿಸಲು ಬಂದಾಗ ತಿಳಿದರೂ ತಿಳಿಯದಂತೆ ನಟಿಸಬೇಕಾಯಿತು. ಕಾರಣವಿಷ್ಟೇ ಕಾಣೋ ಹುಡುಗ ನಾ ನಮ್ಮ ಮನೆಯ ಹಿರಿಯವರ ಮೇಲಿಟ್ಟಿದ್ದ ಗೌರವ, ಭಯದಿಂದ   ನನ್ನ ಭಾವನೆಗಳನ್ನೆಲ್ಲ ಬಚ್ಚಿಟ್ಟು ಕೊಳ್ಳಬೇಕಾಗಿ ಬಂತು. ಮನೆಯಲ್ಲಿ ನಮ್ಮಿಬ್ಬರ ಪ್ರೀತಿಗೆ  ಸಮ್ಮತಿ ಕೊಡುವುದಿಲ್ಲ  ಎಂದು ತಿಳಿದಿತ್ತು. ಆಕಸ್ಮಾತ್ ಮನೆಯವರಿಗೆ ತಿಳಿದರೆ ಎಲ್ಲಿ ನಿನಗೆ ತೊಂದರೆ ಕೊಡುವರೋ ಅನ್ನೋ ಭಯ ನನ್ನ ಮನದಲ್ಲಿ ಸ್ವಲ್ಪವೂ ಎಡೆಬಿಡದೆ ಆವರಿಸಿಬಿಟ್ಟಿತು ಕಾಣೋ. ನನ್ನೀ  ಅರಿಯದ, ತಿಳಿಯದ  ವರ್ತನೆಗೆ ಏನು ಕಾರಣವೆಂದು ಕೇಳದೆ ನನ್ನ ಮೇಲೆ ಕೋಪಗೊಂಡು  ಒಂದು ಮಾತು ಹೇಳದೆ ಮನೆ ಖಾಲಿ ಮಾಡಿದೆ, ವಿಳಾಸವನ್ನು ಕೊಡದೆ ದೂರ ಹೋದೆ. ನಂತರ ನಿನ್ನ ಸಂಪರ್ಕವೇ ಇಲ್ಲವಾಯಿತು. ನನ್ನ ಮನಸ್ಸಿಗೆ ತುಂಬಾನೇ ನೋವಾಯಿತು. ನಿನ್ನ ನೋಡದೆ ನನ್ನ ಕಣ್ಣುಗಳ ಕಣ್ಣಿರು ಸಾಗರದಂತೆ ಉಕ್ಕಿತು. ಹೃದಯ ನೋವಿನ ಪ್ರಪಾತಕ್ಕೆ ದುಮುಕಿದಂತಾಯಿತು. ಬೆಳಕಿದ್ದರೂ  ಸಹ ನನ್ನ ಬಾಳಲ್ಲಿ ಬರಿ ಕತ್ತಲೆಯೇ ಕವಿದಂತಾಯಿತು. ಅದೆಷ್ಟೋ ಬಾರಿ ನಾಲ್ಕು ಗೋಡೆಗಳ ಮದ್ಯದಲ್ಲಿ, ಕತ್ತಲೆ ಕೋಣೆಯಲ್ಲಿ  ಒಬ್ಬಳೇ ಕುಳಿತು ಅತ್ತಿದ್ದೀನಿ ಕಾಣೋ ಹುಡುಗ.

ನಿನಗೊಂದು ಸತ್ಯ ಹೇಳುವೆ ಕೇಳೋ ಹುಡುಗ  ಮೊದಮೊದಲು ನಾನು ಕೂಡ ನಿನ್ನ  ಪರಿಚಯವಾದಾಗ ನನ್ನ ಮನದಲ್ಲಿ ಸ್ನೇಹ ಬಿಟ್ಟರೆ ಬೇರೇನೂ ಸುಳಿಯಬಾರದು ಅಂದುಕೊಂಡು  ನಿನ್ನೊಡನೆ ಒಡನಾಟ ಬೆಳೆಸಿದೆ, ಆದರೆ ಬರು ಬರುತ್ತಾ  ನನ್ನ ಮನದಲ್ಲಿ ಕೂಡ ನಿನ್ನ ಮೇಲೆ ಪ್ರೀತಿಯ ಭಾವನೆ ಶುರುವಾಯಿತು. ಗೊತ್ತಿಲ್ಲದಂತೆ ನಾನು ನಿನ್ನನ್ನು ಪ್ರೀತಿಸತೊಡಗಿದೆ.  ನನ್ನ ಕನಸ್ಸಿನಲೋಕದಲ್ಲಿ – ಕನಸಾಗಿ ಬಂದು, ಭಾವನೆಗಳ ಲೋಕದಲ್ಲಿ – ಭಾವವಾಗಿ ಮಿಂದು, ಕಲ್ಪನೆಯ ಲೋಕದಲ್ಲಿ – ಕಲ್ಪನೆಗೂ  ಮೀರಿ  ನನ್ನ ತನು – ಮನದಲ್ಲೇ ಬೆರೆತ್ತಿದ್ದೆ ಕಾಣೋ ನೀನು.  ಆದರೂ  ನಿನ್ನ ಮುಂದೆ ಹೇಳಿಕೊಳ್ಳಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಕಾರಣ ನಮ್ಮ ಹಿರಿಯರಿಗೆ ಈ ಪ್ರೀತಿ ಪ್ರೇಮ ಅಂದರೆ ಕಿಂಚಿತ್ತು ಸಹ  ಆಗೋದಿಲ್ಲ. ತುಂಬಾ ಸಂಪ್ರದಾಯಸ್ಥರು ಸಹ ಆಗಿದ್ದರು. ತುಂಬಾನೇ ಕಟ್ಟು ನಿಟ್ಟು ಮನೆಯವರು. ಹೀಗೆಲ್ಲಾ ಇದ್ದರೂ ನಾ ಅವರಿಗೆ ಗೊತ್ತಾಗದಂತೆ  ನಿನ್ನ ಪ್ರೀತಿ ಮಾಡುತ್ತಿದ್ದೆ, ಅವರಿಗೆ ತಿಳಿಯದಂತೆ ನಾ ನಿನ್ನೊಡನೆ ಮಾತಾಡುತ್ತಿದ್ದೆ. ನೀ ನನಗೆ, ನಾ ನಿನಗೆ ಸಿಗೋಲ್ಲಾ ಇಬ್ಬರೂ ಒಂದಾಗಲು ಸಾದ್ಯವಿಲ್ಲ  ಅಂತ  ಅರಿತ  ಮೇಲೆ ನನಗಂತೂ ದಿಕ್ಕೇ ತೋಚದಂತಾಗಿ  ಮಂಕಾಗಿ ಹೋಗಿದ್ದೆ  ಕಾಣೋ. ನನ್ನ ಮನೆಯವರು  ಸಿರಿವಂತಿಕೆಯಲ್ಲಿ  ಆಸ್ತಿಕರು, ಪ್ರೀತಿಯಲ್ಲಿ ನಾಸ್ತಿಕರು  ಕಣೋ.  ನೀ ನನಗೆ ಸದಾ ಹೇಳುತ್ತಿದ್ದೆ  ನೆರಳಾಗಿ ನಿನ್ನೊಡನೆ ಇರುವೆ  ಎಂದು ಅವಾಗೆಲ್ಲಾ ನನ್ನ ಮನ ಸಂತಸದಿಂದ ಮಿಡಿಯುತ್ತಿತ್ತು  ಆದರೆ ನೀ ನನ್ನ ಬಿಟ್ಟು ಹೋದಾಗ ನೆರಳು ಕೂಡ ಜೊತೆಯಿರದೆ ಬಿಟ್ಟು ಹೋಗುವುದು  ಎಂಬುದನ್ನರಿತ ನನ್ನ ಮನ ನೋವಿನಸಾಗರದಲ್ಲಿ ಮಿಂದಿತು. ಮೂಕವಾಯಿತು ನನ್ನ ಮಾತು. ಕೊನೆಗೂ ನಾ ಮೌನಿಯಾದೆ. 

ಪ್ರೀತಿಯಿಲ್ಲವಾದರೆ  ಏನಂತೆ ಬಂಗಾರದಷ್ಟು ಬೆಲೆಬಾಳುವ  ಸ್ನೇಹ  ನಮ್ಮಿಬ್ಬರ  ಜೊತೆ  ಇರುವ ಹಾಗೆ ಕಾಪಡಿಕೊಳ್ಳೋಣ. ಒಮ್ಮೆಯಾದರು ನನ್ನ ಎದುರು ಬಾರೋ ಹುಡುಗ. ನಿನ್ನ ನೋಡಬೇಕೆಂಬ ಆತುರ, ಮಾತನಾಡಿಸಬೇಕೆಂಬ ಕಾತುರದಿಂದ ನಾ ಪ್ರತಿನಿತ್ಯವೂ  ನಿನ್ನ ಆಗಮನದ ನೀರಿಕ್ಷೆಯಲ್ಲಿ ಕಾದುಕುಳಿತಿರುವೆ.

ಇಂತಿ ನಿನ್ನ ಆತ್ಮೀಯ  ಹುಡುಗಿ.      

*****
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Jayakeerthi
Jayakeerthi
10 years ago

Lekhana tumba chennagide, manasige
Ista aythu

SURENDRA GS
SURENDRA GS
10 years ago

bhavakke bhasheya angi todisuva munchina vedanegalu hanchikolluva bage vishwasa tumbuva haagirali. illadiddare jegattu mosagaararinda tumbeeetu.

surendra gs

2
0
Would love your thoughts, please comment.x
()
x