ಕೋಲಾರಮ್ಮ ದೇವಸ್ಥಾನ: ಪ್ರಶಸ್ತಿ ಪಿ.
ಕರ್ನಾಟಕದಲ್ಲಿನ ಪುರಾತನ ದೇವಾಲಯಗಳಲ್ಲಿ ಹೆಚ್ಚಿರುವುದು ಹೊಯ್ಸಳರ ದೇಗುಲಗಳು. ಅವುಗಳಿಗಿಂತಲೂ ಹಿಂದಿನ ದೇಗುಲಗಳು ಅಂದರೆ ನೆನಪಾಗೋದು ಚೋಳರ ಕಾಲದ್ದು ಮತ್ತು ಅದಕ್ಕಿಂತಲೂ ಹಿಂದೆ ಅಂದರೆ ಕದಂಬರ, ಗಂಗರ ಕಾಲದ ಅಳಿದುಳಿದ ದೇಗುಲಗಳು. ಕೋಲಾರದಲ್ಲಿ ೧೦೧೨ರಲ್ಲಿ ಕಟ್ಟಿಸಲಾದ ದೇವಸ್ಥಾನವೊಂದಿದೆ, ಇನ್ನೂ ಒಳ್ಳೆಯ ಸ್ಥಿತಿಯಲ್ಲಿಯೇ ಇದೆಯೆಂಬ ಸುದ್ದಿ ಕೇಳಿದಾಗ ಅಲ್ಲಿಗೆ ಹೋಗದಿರಲಾಗಲಿಲ್ಲ. ಆ ದೇಗುಲವೇ ಕೋಲಾರಕ್ಕೆ ಇಂದಿನ ಹೆಸರು ಬರಲು ಕಾರಣವಾದ ಕೋಲಾರಮ್ಮ ದೇವಸ್ಥಾನ. ಇತಿಹಾಸ: ಮೂರನೇ ಶತಮಾನದ ಶುರುವಿನಿಂದಲೂ ಕೂವಲಾಲಪುರ(ಇಂದಿನ ಕೋಲಾರವು) ಗಂಗರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಶಾಸನಗಳು ತಿಳಿಸುತ್ತದೆ. … Read more