ತ್ರಿಪದಿ ಕಥೆ: ಶುಭಶ್ರೀ ಭಟ್ಟ, ಬೆಂಗಳೂರು
#ತ್ರಿಪದಿ_ಕಥೆ-1: ನಕ್ಷತ್ರ ಮನೆಯವರೆಲ್ಲರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದರು ವಿಶ್ವಾಸ-ವಾಣಿ. ಆರತಿಗೊಬ್ಬ ಮಗಳು-ಕೀರ್ತಿಗೊಬ್ಬ ಮಗಳೆಂಬಂತೆ ಸುಂದರ ಕುಟುಂಬವಾಗಿತ್ತು. 'ಊರಕಣ್ಣೋ ಮಾರಿಕಣ್ಣೋ' ಯಾರ ಕಣ್ಣೋ ಗೊತ್ತಿಲ್ಲ, ದೃಷ್ಟಿಬಿತ್ತು ಅವರ ಕುಟುಂಬಕ್ಕೆ. ಇದ್ದಕ್ಕಿದ್ದಂತೆ ವಾಣಿ ಹೃದಯಾಘಾತದಿಂದ ನಿಧನಳಾದಳು. ಆಗ ಮಗನಿಗಿನ್ನೂ ಒಂದುವರೆ ವರುಷ. ಮಗಳಿಗೆ ಮೂರು ವರುಷ. ಸಾವೆಂದರೆನೆಂದು ತಿಳಿಯದ ವಯಸ್ಸಲ್ಲಿ ಅಮ್ಮನ ಕಳೆದುಕೊಂಡರು. ಎಲ್ಲಾದ್ರಲ್ಲೂ ವಿಶ್ವಾಸ ಕಳೆದುಕೊಂಡ ವಿಶ್ವಾಸ ಕರ್ತವ್ಯದಿಂದ ವಿಮುಖನಾದ, ಮಕ್ಕಳು ಅಜ್ಜಿಮನೆ ಸೇರಿದರು. ನಕ್ಷತ್ರವಾದ ಅಮ್ಮನ್ನ ಇನ್ನೂ ಹುಡುಕುತಿಹರು ಮಕ್ಕಳು ನೀಲಿಬಾನ … Read more