ಸಾಮಾನ್ಯ ಜ್ಞಾನ (ವಾರ 68): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಇತ್ತೀಚಿಗೆ ಮೈಸೂರು ಯದು ವಂಶದ ೨೭ನೇ ಉತ್ತರಾಧಿಕಾರಿಯಾಗಿ ಯಾರನ್ನು ದತ್ತು ಪಡೆಯಲಾಯಿತು?
೨.    ಇತ್ತೀಚೆಗೆ ೭೫ನೇ ವರ್ಷದ ಅಮೃತ ಮಹೋತ್ಸವ ಆಚರಿಸಿದ ಕರ್ನಾಟಕದ ಜಿಲ್ಲೆ ಯಾವುದು?
೩.    ಲೇಸರ್ (LASER)ನ ವಿಸ್ತೃತ ರೂಪವೇನು?
೪.    ಶೇಷಾದ್ರಿ ಅಯ್ಯರ ಜಲವಿದ್ಯುತ್ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
೫.    ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ಯಾವುದು?
೬.    ಸುಜನ ಇದು ಯಾರ ಕಾವ್ಯ ನಾಮವಾಗಿದೆ?
೭.    ಏಕಕೋಶ ಜೀವಿಗಳ ಚಲನೆಗೆ ಸಹಾಯಕವಾಗುವ ಅಂಗಗಳು ಯಾವುವು?
೮.    ಶಬ್ದಗಾರುಡಿಗ ಎಂದು ಬಿರುದು ಹೊಂದಿದ ಕವಿ ಯಾರು?
೯.    ರನ್ನ ವೈಭವ ಇತ್ತೀಚೆಗೆ ಯಾವ ಜಿಲ್ಲೆಯಲ್ಲಿ ನಡೆಯಿತು?
೧೦.    ಮೈ ಮ್ಯೂಸಿಕ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು?
೧೧.    ಶಾಖದ ಪ್ರಮಾಣವನ್ನು ಅಳೆಯುವ ಸಾಧನ ಯಾವುದು?
೧೨.    ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮ ಯಾವ ಭಾಷೆಯ ಕವಯಿತ್ರಿ?
೧೩.    ಬೂದುಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಬಂಧಿಸಿದೆ?
೧೪.    ಟಿ.ವಿ.ಯ ಮುಖ್ಯ ಅಂಗ ಯಾವುದು?
೧೫.    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇದ್ದ ಮೊದಲ ಹೆಸರು ಯಾವುದು?
೧೬.    ಜೋತಿಷ್ಯ ಶಾಸ್ತ್ರದಲ್ಲಿರುವ ರಾಶಿಗಳ ಸಂಖ್ಯೆ ಎಷ್ಟು?
೧೭.    ೧೮೯೪ರಲ್ಲಿ ಪ್ರಪಂಚದಲ್ಲೇ ಮೊದಲು ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು?
೧೮.    ಮೊಘಲರ ಮಾತೃಭಾಷೆ ಯಾವುದಾಗಿತ್ತು?
೧೯.    ಸಿಮ್ಮಲಿಗೆಯ ಚೆನ್ನರಾಯ ಇದು ಯಾರ ಕಾವ್ಯನಾಮವಾಗಿದೆ?
೨೦.    ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಯಾವ ರಾಜ್ಯಕ್ಕೆ ಸಂಬಂಧಿಸಿದವರು?
೨೧.    ಬಾಂಗ್ಡಾ ಇದು ಯಾವ ರಾಜ್ಯದ ಜಾನಪದ ನೃತ್ಯ ಶೈಲಿಯಾಗಿದೆ?
೨೨.    ಕಿರು ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು?
೨೩.    ಸೀಮೆಸುಣ್ಣದ ರಾಸಾಯನಿಕ ಹೆಸರೇನು?
೨೪.    ಭಾರತ ದೇಶದ ಉದ್ದಾರ ಸಣ್ಣ ಮತ್ತು ಗೃಹ ಕೈಗಾರಿಕೆಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯವೆಂದು ಹೇಳಿದವರು ಯಾರು?
೨೫.    ಸ್ವಾತಂತ್ರ ಭಾರತದ ಮೊದಲ ಶಿಕ್ಷಣ ಸಚಿವರು ಯಾರು?
೨೬.    ಜಾನ್ ಡೆವಿಡ್ ಪ್ರತಿಷ್ಠಿತ ಪ್ರಶಸ್ತಿ ಪಡೆದ ಕನ್ನಡದ ಮೊದಲ ವಿಜ್ಞಾನಿ ಯಾರು?
೨೭.    ಒರಿಸ್ಸಾದ ಪುರಿಯಲ್ಲಿ ಗೋವರ್ಧನ ಮಠ ಸ್ಥಾಪಿಸಿದವರು ಯಾರು?
೨೮.    ಇತ್ತೀಚೆಗೆ ವಿಶ್ವಕಪ್‌ನಲ್ಲಿ ಮೊದಲ ದ್ವಿಶತಕದ ದಾಖಲೆ ಮಾಡಿದ ಕ್ರಿಕೆಟ್ ಆಟಗಾರ ಯಾರು?
೨೯.    ದಾದಾ ಸಾಹೇಬ್ ಫಾಲ್ಕೆಯವರ ಮೊದಲ ಹೆಸರೇನು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು 
ಮಾರ್ಚ್- ೦೪ – ರಾಷ್ಟ್ರೀಯ ಸುರಕ್ಷತಾ ದಿನ
ಮಾರ್ಚ್- ೦೮ – ಅಂತರರಾಷ್ಟ್ರೀಯ ಮಹಿಳಾ ದಿನ


ಉತ್ತರಗಳು:
೧.    ಯದುವೀರ್ ಗೋಪಾಲ್ ರಾಜ್ ಅರಸ
೨.    ಮಂಡ್ಯ 
೩.    ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯೂಲೇಟೆಡ್ ಎಮಿಶನ್ ಆಫ್ ರೇಡಿಯೇಷನ್
೪.    ಶಿವನ ಸಮುದ್ರ
೫.    ಬರ್ಡಮ್ಯಾನ್
೬.    ಎಸ್.ಜೆ.ನಾರಾಯಣ ಶೆಟ್ಟಿ
೭.    ಮಿಥ್ಯಪಾದ, ಲೋಮಾಂಗ, ಕಶಾಂಗ
೮.    ದತ್ತಾತ್ರೇಯ ರಾಮಚಂದ್ರ ಬೇಂದ್ರೆ
೯.    ಬಾಗಲಕೋಟೆ (ಮುಧೋಳ)
೧೦.    ಪಂಡಿತ ರವಿಶಂಕರ
೧೧.    ಕ್ಯಾಲೋರಿ ಮೀಟರ್
೧೨.    ಹಿಂದಿ
೧೩.    ಉಣ್ಣೆ ಉತ್ಪಾದನೆ
೧೪.    ಕ್ಯಾಥೋಡ್ ಕಿರಣಗಳ ಕೊಳವೆ
೧೫.    ಇಂಪೀರಿಯಲ್ ಬ್ಯಾಂಕ್
೧೬.    ೧೨
೧೭.    ಭಾರತ
೧೮.    ತುರ್ಕಿ
೧೯.    ಚಂದಿಮರಸ
೨೦.    ತಮಿಳುನಾಡು
೨೧.    ಪಂಜಾಬ್
೨೨.    ೪೨ನೇ ತಿದ್ದುಪಡಿ
೨೩.    ಕ್ಯಾಲ್ಸಿಯಂ ಕಾರ್ಬೋನೆಟ್
೨೪.    ಮಹಾತ್ಮಗಾಂಧಿ
೨೫.    ಮೌಲಾನಾ ಅಬ್ದುಲ್ ಕಲಾಂ ಆಜಾದ್
೨೬.    ಸಿ.ಎನ್.ಆರ್.ರಾವ್
೨೭.    ಶಂಕರಾಚಾರ್ಯರು
೨೮.    ಕ್ರೀಸ್ ಗೇಯ್ಲ
೨೯.    ದುಂಡೀರಾಜ್ ಗೋವಿಂದ
೩೦.    ಗಂಗಾಧರ್ ರಾವ್ ದೇಶಪಾಂಡೆ (ಕನ್ನಡದ ಸಿಂಹ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x