ವಿದ್ಯುತ್ ಎಂಬ ಮಹದುಪಕಾರಿ ಯಾಮಾರಿದರೆ ಬಲು ಅಪಾಯಕಾರಿ: ರೋಹಿತ್ ವಿ. ಸಾಗರ್
ಕರೆಂಟ್ ಅಥವಾ ವಿದ್ಯುತ್ ಎಂಬ ಶಬ್ದ ಯಾರಿಗೆ ತಾನೆ ಗೊತ್ತಿಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ತರಹೇವಾರಿ ವಿಧಗಳಲ್ಲಿ ನಾವು ಅವಲಂಬಿಸಿರುವ, ಅದಿಲ್ಲದ ಜೀವನವನ್ನು ಊಹಿಸಲೂ ಹೆದರಬೇಕಾಗಿರುವಂತಹ ಅಪೂರ್ವ ಶಕ್ತಿಯ ಆಕರವೇ ಈ ’ವಿದ್ಯುತ್’ ಅಥವಾ ’ಕರೆಂಟ್’. ಹಗಲು ರಾತ್ರಿಗಳೆನ್ನದೆ ಸೂರ್ಯ ಚಂದ್ರರನ್ನೂ ನಾಚಿಸುವ ಬೆಳಕಿನ ದೀಪಗಳು, ಬೆಳಗ್ಗೆ ಎದ್ದಕೂಡಲೇ ಸುಪ್ರಭಾತ ಹಾಡುವ ರೇಡಿಯೋ, ಎಫ್.ಎಮ್ ಗಳು, ಮುಂದೆ ಕೂತವರ ಕಾಲವನ್ನೇ ಕರಗಿಸಬಲ್ಲ ಮೂರ್ಖರ ಪೆಟ್ಟಿಗೆ ಎಂದೇ ಖ್ಯಾತಿ ಪಡೆದ ಟಿ.ವಿ.ಗಳು, ಜಾಣರ ಪೆಟ್ಟಿಗೆಯಂತಿರುವ ನಮ್ಮ … Read more