ನೈತಿಕತೆಯಿಲ್ಲದ ಮೇಲೆ ಬಹಳ ಕಠಿಣ ಕಾನೂನು ಕಾಯ್ದೆಗಳ ರೂಪಿಸಿಯೇನು ಫಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ
ಅಗತ್ಯ, ಯೋಗ್ಯ ಕಾನೂನು ಕಾಯ್ದೆಗಳ ರೂಪಿಸುವುದು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಗಳ ಕರ್ತವ್ಯ! ಕಾನೂನು, ಕಾಯ್ದೆಗಳು ಸಮಾಜ ಸುವ್ಯವಸ್ಥಿತವಾಗಿರಲು, ನೆಮ್ಮದಿಯಿಂದಿರಲು ಸಹಕಾರಿ. ಅತಿ ಅವಶ್ಯಕ! ಹಾಗಂತ ಎಲ್ಲಾ ಅವುಗಳಿಂದನೇ ಅಲ್ಲಾ! ವ್ಯಕ್ತಿಯ, ಸಮಾಜದ, ದೇಶದ ಉದ್ಧಾರಕ್ಕೆ, ಆತ್ಮೋದ್ಧಾರಕ್ಕೆ ನೈತಿಕತೆಯೇ ಮೂಲ. ತಳಹದಿ! ಹಿಂದಿನವರು ನೈತಿಕತೆಯನ್ನು ಜೀವನದ ಉಸಿರು ಮಾಡಿಕೊಂಡಿದ್ದರಿಂದ ಉತ್ತಮ ಸಮಾಜ ನಿರ್ಮಾಣವಾಗಿತ್ತು. ಜನ ಶಾಂತಿ, ಸಹನೆ, ಸದಾಚಾರ, ಸದ್ಗುಣದಿಂದ ಬದುಕುತ್ತಿದ್ದರು. ಭಗವಂತನ ಮೇಲಿನ ಪರಮ ಭಕ್ತಿಯಿಂದ ಆತ್ಮೋದ್ಧಾರ ಮಾಡಿಕೊಂಡರು! ಅಂದು ಅಪರಾಧಗಳು ಇರಲಿಲ್ಲ ಎನ್ನುವುದಕ್ಕಿಂತ ಅವು ಅಲ್ಪ … Read more