ಸಮಯ ಪರಿಪಾಲನೆ: ಅನಿತಾ ನರೇಶ್ ಮಂಚಿ
ನನ್ನ ಲ್ಯಾಪ್ಟಾಪಿಗೆ ಜ್ವರ ಬಂದಿತ್ತು. ಜ್ವರ ಅಂದರೆ ಅಂತಿಂಥಾ ಜ್ವರವಲ್ಲ..ಮೈಯ್ಯೆಲ್ಲಾ ಬಿಸಿಯೇರಿ ತೇಲುಗಣ್ಣು ಮಾಲುಗಣ್ಣು ಮಾಡಿಕೊಂಡು ಕೋಮಾ ಸ್ಥಿತಿಗೆ ಹೋಯಿತು. ಹೋಗುವಾಗ ಸುಮ್ಮನೇ ಹೋಗಲಿಲ್ಲ. ನಾನು ಕಷ್ಟಪಟ್ಟು ತಾಳ್ಮೆಯಿಂದ ಬರೆಯುತ್ತಿದ್ದ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದ್ದ ಘನ ಗಂಭೀರ ಲೇಖನವೊಂದನ್ನು ಕರೆದುಕೊಂಡೇ ಹೋಯಿತು. ಅದೆಷ್ಟು ತಪಸ್ಸುಗಳ ಫಲವೋ ನಾನು ಅಷ್ಟೊಂದು ಸೀರಿಯಸ್ ವಿಷಯದ ಬಗ್ಗೆ ಬರೆಯಹೊರಟಿದ್ದು. ಒಂದೆರಡು ಬಾರಿ … Read more
ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಕೊನೆಯ ಭಾಗ): ಅಖಿಲೇಶ್ ಚಿಪ್ಪಳಿ
ಇಲ್ಲಿಯವರೆಗೆ ಈ ಮಟ್ಟದ ಹಾಗೂ ಈ ಮೊತ್ತದ ಕಾಡು ನಾಶ ಈ ಹಿಂದೆಯೂ ಆಗಿತ್ತು. ಬಗರ್ ಹುಕುಂ ಕಾಯ್ದೆ 1989-90ರಲ್ಲಿ ಜಾರಿಯಾದ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ಮಿಣಿಸುತ್ತಿನ ಮರಗಳ ಮಾರಣ ಹೋಮವಾಗಿತ್ತು. ಮರಗಳ ಬುಡಕ್ಕೆ ಬೆಂಕಿ ಹಚ್ಚಿ ಸುಡಲಾಗಿತ್ತು. ಆ ಕಾರಣಕ್ಕಾಗಿಯೇ ಕಳೆದ 10 ವರ್ಷಗಳಲ್ಲಿ ತಾಲ್ಲೂಕಿನಲ್ಲಿ 40% ಮಳೆ ಪ್ರಮಾಣ ಕಡಿಮೆಯಾಗಿದೆ. ರಾಜಕೀಯ ದೂರದೃಷ್ಟಿಯ ಕೊರತೆ, ಅತಿಯಾಸೆ, ರೈತರಲ್ಲಿ ಪರಸ್ಪರ ಪೈಪೋಟಿ ಮನೋಭಾವ (ಸರ್ಕಾರಿ ಕೃಪಾಪೋಷಿತ ಇಲಾಖೆಗಳೇ ಹಸಿರು ಕ್ರಾಂತಿಯ ನೆಪದಲ್ಲಿ ಕ್ಷೇತ್ರೋತ್ಸವ ಎಂಬ ಸಂಭ್ರಮಾಚರಣೆ … Read more
ಕಾವ್ಯಧಾರೆ: ಪ್ರವೀಣ್ ಕುಮಾರ್ ಜಿ., ಚಾರುಶ್ರೀ ಕೆ ಎಸ್, ಸಿಪಿಲೆನಂದಿನಿ, ಸಂದೇಶ್.ಎಚ್.ನಾಯ್ಕ್
-: ನಿಂತ ನಾವೆ :- ಮುಗುಚಿಬಿದ್ದ ನಾವೆ ಅತ್ತ ದಡಕ್ಕಿರದೆ ಇತ್ತ ಕಡಲ ಒಡಲಲಿ ತೇಲದೆ ನಿಂತಿದೆ ಕಾಲದ ಕೊಂಡಿಯಾ ಕಳಚಿಕೊಂಡು. ಬೀಸುವ ಗಾಳಿಗೂ ಮಿಸುಕಾಡದೆ ಅಬ್ಬರಿಸಿ ಬರುವ ಅಲೆಗಳಿಗು ಅತ್ತಿತ್ತಾಗದೆ ನಿಂತಿಹುದು ನಾವೆ ಕಾಲದ ಕೊಂಡಿಯಾ ಕಳಚಿಕೊಂಡು. ವಿಶಾಲ ಸಾಗರದ ಎದೆಯ ಮೇಲೆ ಮಿಸುಕದೆ ಕುಂತ ನಾವೆಯ ಹೊತ್ತೊಯ್ಯುವವರಿರದೆ ಅನಾಥವಾಗಿ ಕುಳಿತಿಹುದು ಕಾಲದ ಕೊಂಡಿಯಾ ಕಳಚಿಕೊಂಡು. -ಪ್ರವೀಣ್ ಕುಮಾರ್ ಜಿ. ನೈಜ ಪ್ರೀತಿ ನಿನ್ನ ನನ್ನ ಮರೆತು ಪ್ರೀತಿಸಿದೆ. ನನ್ನ … Read more
ರೋಹಿಣಿ: ಸಾವಿತ್ರಿ ವಿ. ಹಟ್ಟಿ
ಆ ಒಂಟಿ ಕೋಣೆಯಲ್ಲಿ ಅವಳನ್ನು ಹೊರತುಪಡಿಸಿದರೆ, ಒಂದೆರಡು ತಟ್ಟೆ ಲೋಟಗಳು, ಒಂದೆರಡು ಪಾತ್ರೆಗಳು, ಪ್ಲಾಸ್ಟಿಕ್ ಕೊಡ, ಬಕೆಟ್, ಚೊಂಬು ಹಾಗೂ ಒಂದಷ್ಟು ಪುಸ್ತಕಗಳು ಮಾತ್ರ. ಕೋಣೆಯಲ್ಲಿ ನಿಃಶಬ್ದ ಕವಿದಿತ್ತು. ಅಪರೂಪಕ್ಕೆ ಕೈಜಾರಿಸಿದರೆ ಪಾತ್ರೆಗಳ ಸದ್ದಷ್ಟೆ. ಆ ಮೌನ ಅವಳನ್ನು ಅದೆಷ್ಟು ಹಿಂಸಿಸುತ್ತಿತ್ತೆಂದರೆ ಇನ್ನೂ ತಾಸು ಮುಂಚಿತವಾಗಿಯೇ ಕಾಲೇಜಿಗೆ ಹೊರಟು ಬಿಡುತ್ತಿದ್ದಳು. ಅಲ್ಲಿಯಾದರೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಒಡನಾಟ ಸಿಗುತ್ತದೆ. ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿಯ ಪುಸ್ತಕಗಳಿರುತ್ತವೆ ಎಂಬುದು ರೋಹಿಣಿಯ ಯೋಚನೆಯಾಗಿರುತ್ತಿತ್ತು. ಆದರೆ ಅವಳಿಗೆ ಮೊದಲಿನಂತೆ ತನ್ಮಯಳಾಗಿ ಪಾಠ ಮಾಡಲಾಗುವುದಿಲ್ಲ. ಮೈಮರೆತು … Read more
ನಜರುದ್ದೀನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ
೧. ವಿದ್ವಾಂಸ ಸಾರಥಿ ಮುಲ್ಲಾ ನಜರುದ್ದೀನ್ ಒಮ್ಮೆ ಕುದುರೆಗಾಡಿಯ ಸಾರಥಿಯ ಕೆಲಸವನ್ನು ಮಾಡಲು ಒಪ್ಪಿಕೊಂಡ. ಒಂದು ದಿನ ಆತ ಪಟ್ಟಣದ ಕುಖ್ಯಾತ ಭಾಗಕ್ಕೆ ಮಾಲಿಕನನ್ನು ಒಯ್ಯಬೇಕಾಗಿತ್ತು. ಗಮ್ಯಸ್ಥಾನ ತಲುಪಿದ ನಂತರ ಗಾಡಿಯಿಂದಿಳಿದ ಮಾಲಿಕ ಸಲಹೆ ನೀಡಿದ, “ಬಲು ಜಾಗರೂಕನಾಗಿರು. ಇಲ್ಲಿ ತುಂಬಾ ಕಳ್ಳರಿದ್ದಾರೆ.” ತುಸು ಸಮಯ ಕಳೆದ ನಂತರ ಹೊಸ ಸಾರಥಿ ಏನು ಮಾಡುತ್ತಿದ್ದಾನೆಂಬುದನ್ನು ತಿಳಿಯಲು ಇಚ್ಛಿಸಿದ ಮಾಲಿಕ ತಾನಿದ್ದ ಮನೆಯ ಕಿಟಕಿಯೊಂದರಿಂದ ತಲೆ ಹೊರಹಾಕಿ ಬೊಬ್ಬೆಹಾಕಿದ, “ಎಲ್ಲವೂ ಸರಿಯಾಗಿದೆಯಷ್ಟೆ? ಈಗ ನೀನೇನು ಮಾಡುತ್ತಿರುವೆ?” “ಒಬ್ಬ ವ್ಯಕ್ತಿ … Read more
ಆಲಿಯೋ: ಪ್ರಶಸ್ತಿ
ಬೆಂದಕಾಳೂರಿನ ಕುಂದಲಹಳ್ಳಿ ಅನ್ನೋ ಒಂದು ಹಳ್ಳಿಯಲ್ಲದ ಹಳ್ಳಿಯ ಕೆರೆಯ ಪಕ್ಕದಲ್ಲಿ ನಮ್ಮ ಪೀಜಿಯಿದೆ ಅನ್ನೋ ವಿಚಾರವನ್ನ ಹಿಂದಿನ ಲಹರಿಗಳಲ್ಲಿ ಓದೇ ಇರುವ ನಿಮಗೆ ಅದ್ರ ಹೆಸರು ಹೇಳೋ ಅಗತ್ಯ ಇಲ್ಲದಿದ್ದರೂ ಅಲ್ಲಿನ ಆಲಿಯೋ ಕತೆಯನ್ನಂತೂ ಹೇಳಲೇಬೇಕು. ಆಲಿಯೋನಾ ? ಅದ್ಯಾರು ಅಂತ ಊಹೆ ಮಾಡೋಕೆ ಶುರು ಮಾಡಿದ್ರಾ ? ನಾ ಹೇಳಹೊರಟಿದ್ದು ಲವ್ ಯೂ ಆಲಿಯಾ ಬಗ್ಗೆಯಲ್ಲ, ಮಾತಾಡಿದ್ದೆಲ್ಲಾ ಕಾಮಿಡಿಯಾಗೋ ಆಲಿಯೋ ಭಟ್ ಬಗ್ಗೆಯೋ ಅಲ್ಲ. ನಮ್ಮ ಪೀಜಿ ಕಿಶೋರ್ ಭಯ್ಯಾನ ಆಲಿಯೋ ಬಗ್ಗೆ. ಈಗ ಈ … Read more
ದೇವದಾಸಿಯರನ್ನು ರಕ್ಷಿಸುವುದೆಂದು?: ಜಯಶ್ರೀ ಎಸ್. ಎಚ್.
ಜಗತ್ತಿನಲ್ಲಿ ತೃತೀಯ ಲಿಂಗದ ಜನರನ್ನು ಜನರೆಂದು ಬಾವಿಸದೆ ನಿರಂತರ ಶೋಷಣೆಗೆ ಒಳಪಡುವಂತ ಸಮುದಾಯ ಇದು .ಅವರಷ್ಟೆ ಶೋಷಣೆಗೆ ಒಳಗಾದ ಇನ್ನೊಂದು ಸಮುದಾಯ ಇದೆ ಅದು ದೇವದಾಸಿ ಸಮುದಾಯ. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದಲಿತ ಹೆಣ್ಣು ಮಕ್ಕಳನ್ನು ಮೇಲ್ಜಾತಿಯವರು ತಮ್ಮ ಭೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅವರನ್ನು ಹೀನಾಯವಾಗಿ ಶೋಷಣೆ ಮಾಡುವ ಪ್ರವೃತ್ತಿಯು ಇನ್ನು ಕೆಲವೊಂದು ಸ್ಥಳಗಳಲ್ಲಿ ಜೀವಂತವಾಗಿದೆ. ಅನೇಕ ಮುಗ್ಧ ಹೆಣ್ಣು ಮಕ್ಕಳು ಈ ಪಾಪದ ಪದ್ದತಿಗೆ ತಿಳಿದೋ ತಿಳಿಯದೆಯೋ ಬಲಿಯಾಗುತ್ತಿದ್ದಾರೆ. ಮೂಢನಂಬಿಕೆ ಮತ್ತು ಬಡತನ ಕಾರಣ ನೀಡಿ ಒಂದು … Read more
ಗೌರ್ಮೆಂಟ್ ಇಸ್ಕೂಲು..!: ಪ.ನಾ.ಹಳ್ಳಿ.ಹರೀಶ್ ಕುಮಾರ್
ಪಾರಿ ಶಾಲೆ ಕಡೆಯಿಂದ ಯಾರನ್ನೋ ಬೈಯ್ದುಕೊಳ್ಳುತ್ತಾ ಬರ್ತಿರೋದು ನೋಡಿ ಅವಳನ್ನ ತಡೆದು ನಿಲ್ಲಿಸಿದ ಸಿದ್ಧ ಕೇಳಿದ, ‘ಯಾಕಮ್ಮೀ, ಎತ್ತಕಡೆಯಿಂದ ಬರ್ತಿದ್ದೀ ?’ ಅದಕ್ಕೆ ಏದುಸಿರು ಬಿಡುತ್ತಿದ್ದ ಪಾರಿ, ‘ಏ.. ಕಾಣಕಿಲ್ವಾ.. ಇಸ್ಕೂಲ್ತಾಕೆ ಹೋಗಿದ್ದೆ.’ ಅಂದಳು. ಅವರೀರ್ವರ ಮಾತುಕತೆ ಹೀಗೇ ಮುಂದುವರೆಯುತ್ತದೆ. ‘ ಇಸ್ಕೂಲ್ತಾಗೆ ಏನಿತ್ತವೀ ನಿಂದು ಅಂತಾ ಕೆಲ್ಸಾ..?’ ‘ ಏ..ನಂದೇನಿದ್ದತು ಬಿಡು. ಆ ನಮ್ಮ ಮೂದೇವಿ ಐತಲ್ಲಾ. ವೆಂಕಟೇಸ ಅಂತಾ..ಅದುನ್ನ ಒಳಿಕ್ಕೆ ಕೂಡಿ ಬರೋಕೆ ಹೋಗಿದ್ದೆ.’ ‘ ಯಾಕಂತೆ ಪಾರವ್ವ, ಅವುನ್ಗೆ ಇಸ್ಕೂಲು ಬ್ಯಾಡಂತೇನು ?’ … Read more
ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ‘ಬಾಲ ಕಾರ್ಮಿಕ’ ಪದ್ಧತಿ…: ಹುಸೇನಮ್ಮ ಪಿ.ಕೆ. ಹಳ್ಳಿ
ಮಕ್ಕಳನ್ನು ‘ನಂದವನದ ಹೂಗಳು’ ಎನ್ನುತ್ತಾರೆ. ಮಕ್ಕಳು ಅಷ್ಟು ಮೃದು, ಅಮೂಲ್ಯ ಮತ್ತು ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಮಕ್ಕಳು, ಪ್ರೀತಿಯ ಲಾಲನೆ-ಪಾಲನೆಯಲ್ಲಿ ಬೆಳೆಯಬೇಕಾದ ಅವಶ್ಯಕತೆ ಇರುತ್ತದೆ. ಒಂದು ವೇಳೆ ಇಂತಹ ವಾತ್ಸಲ್ಯ ದೊರಕದೆ ಹೋದರೆ, ಆರೋಗ್ಯ ಬೆಳವಣಿಗೆಯ ಜೊತೆಗೆ ಅವರ ಎಳೆಯ ಮನಸ್ಸಿನ ಮೇಲೂ ಇದು ದುಷ್ಪರಿಣಾಮ ಬೀರುತ್ತದೆ. ಆಡಿ ನಲಿಯಬೇಕಾದ ಸುಂದರ ಬಾಲ್ಯವನ್ನು ಅವರಿಂದ ಕಸಿದುಕೊಂಡಂತಾಗುತ್ತಿದೆ. ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಬಾಲ್ಯದ ಸಂತೋಷವನ್ನು ಅನುಭವಿಸಲಾಗದೆ, ನಿರಾಶದಾಯಕ ಭವಿಷ್ಯದಲ್ಲಿ ತೊಳಲಾಡುವ ಪರಿಸ್ಥಿತಿ … Read more
ನೆರಳು-ಬೆಳಕಿನ ಮಾಯಾಲೋಕದ ಮಹಿಳಾ ಭಾರತ: ಹಿಪ್ಪರಗಿ ಸಿದ್ಧರಾಮ, ಧಾರವಾಡ
ಜೋಗುಳ ಹಾಡುವ ತಾಯಿಯ ಇಂಪಾದ ಧನಿಗೆ ತೊಟ್ಟಿಲ ಮಗು ನಿದ್ರೆಗೆ ಜಾರುವುದರೊಂದಿಗೆ ತೆರೆದುಕೊಳ್ಳುವ ಪುರಾಣ, ಇತಿಹಾಸ ಮತ್ತು ಸಮಕಾಲೀನಗಳ ಸಮಾಗಮದ ಸಂದರ್ಭಗಳ ಸಮ್ಮೀಶ್ರಣದ ಹದವಾದ ಪಾಕದಂತಹ ನಾಟಕ ಪ್ರದರ್ಶನ. ಕಾಲಬೇಧ ಮತ್ತು ಭಾಷಾಬೇಧಗಳಿಲ್ಲದೇ ಮಹಿಳಾ ಆಲಾಪದ ಕಲಾಪಗಳು ರಂಗದಲ್ಲಿ ನಡೆಯುತ್ತಾ, ಹಲವಾರು ಪ್ರಸಂಗಗಳ ಚರ್ಚೆ, ವಿಮರ್ಶೆಯ ಗಂಭೀರ ಕಥನವು ಕುತೂಹಲವನ್ನು ಹುಟ್ಟಿಸುತ್ತಲೇ ಪ್ರೇಕ್ಷಕ ಪ್ರಭುವಿನ ಗ್ರಹಿಕೆಯನ್ನು ವಿಸ್ತರಿಸುತ್ತಾ ಸಾಗುವ “ಮಹಿಳಾ ಭಾರತ” ನಾಟಕ ಪ್ರದರ್ಶನವು ಅದ್ಬುತವಾಗಿ ಇತ್ತೀಚೆಗೆ (03.01.2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ … Read more
ಹೀಗೊಂದು ಕಥೆ : ಇಬ್ಬನಿಯ ಹುಡುಗ ರಾಮು
ಅವನು ಕಡುಬಡವ ಕುಟುಂಬದಿಂದ ಬಂದಿದ್ದ, ತಾಯಿಯ ಪ್ರೀತಿಯ ಬೆಲೆ ತಿಳಿದಿದ್ದ, ಕಷ್ಟ ಏನಂತ ಸ್ವತಃ ಅನುಭವಿಸಿದ್ದ ಕೂಡ, ಕಿತ್ತು ತಿನ್ನುವ ಬಡತನದ ಮಧ್ಯೆ ಬದುಕಿನಲ್ಲಿ.ಸಾಧಿಸಬೇಕೆಂಬ ಕನಸು ಕಂಡಿದ್ದ ಆ ಕನಸುಗಳನ್ನು ನನಸಾಗಿಸಲು ಹೊರಟ ಹಾದಿಯಲ್ಲಿ ಎದುರಾದ ಸವಾಲುಗಳೇ ಈ "ಹಿಗೋಂದು ಕಥೆ" ಎಂಬ ಲೇಖನ. ತಂದೆಯನ್ನು ಕಳೆದುಕೊಂಡಾಗ ಅವನ ವಯಸ್ಸು ೭ ವರ್ಷ, ಬೀದಿಪಾಲಾಗಿ ಒಂದು ಒಪ್ಪತ್ತು ಅನ್ನ ನೀರಿಗೂ ಕಷ್ಟ ಪಡುವ ಪರಿಸ್ಥಿತಿ ಎದುರಿಸಿದ್ದ, ಅವ್ವನ ತವರು ಮನೆಯಲ್ಲಿ ಆಶ್ರಯಿಸಿದ್ದ ಅಲ್ಲೆಯೆ ಅವನ ಕನಸಿಗೆ ಕಲ್ಪನೆಯೂ … Read more
ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಭಾಗ 2): ಅಖಿಲೇಶ್ ಚಿಪ್ಪಳಿ
ಇಲ್ಲಿಯವರೆಗೆ ಅರಣ್ಯಹಕ್ಕು ಮಾನ್ಯತೆ ಕಾಯ್ದೆ ಜಾರಿ ಪ್ರಯತ್ನ ಹವಾಮಾನದ ಬದಲಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಸಾಗರ ತಾಲ್ಲೂಕಿನಲ್ಲಿ 29 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಹಾಗೂ ನೈಸರ್ಗಿಕ ಕಾಡನ್ನು ಸವರಿ ಎಂ.ಪಿ.ಎಂ.ನವತಿಯಿಂದ ಬೆಳೆಸಿದ 7100 ಹೆಕ್ಟರ್ ಅಕೇಶಿಯಾವೆಂಬ ಹಸಿರು ಮರಳುಗಾಡೂ ಇದೆ. ಕರ್ನಾಟಕ ಪವರ್ ಕಾರ್ಪೊರೇಷನ್‍ವತಿಯಿಂದ 653 ಹೆಕ್ಟೆರ್ ಅರಣ್ಯ ಪ್ರದೇಶವನ್ನು ಎಂ.ಪಿ.ಎಂ.ನವರಿಗೆ ಅಕೇಶಿಯಾ ಬೆಳೆದುಕೊಳ್ಳಲು ನೀಡಲಾಗಿದೆ. 1989-90ರಲ್ಲಿ ಜಾರಿಯಾದ ಬಗರ್‍ಹುಕುಂ ಕಾಯ್ದೆಯಡಿಯಲ್ಲಿ ಇದೇ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಜಮೀನುಗಳ … Read more
ಅಂತರ್ಜಾಲ ಸಮಾನತೆ ಬುಡಮೇಲು ಮಾಡಲು ಫೇಸ್‍ಬುಕ್ ಕಂಪನಿ ಹುನ್ನಾರ: ಜೈಕುಮಾರ್ ಹೆಚ್.ಎಸ್.
‘ಫ್ರೀಬೇಸಿಕ್’ ಯೋಜನೆ ವಿರುದ್ದ ನೆಟ್ ಬಳಕೆದಾರರ ಹೋರಾಟ – ಜೈಕುಮಾರ್.ಹೆಚ್.ಎಸ್ ದಿಕ್ಕುತಪ್ಪಿಸುವ ಜಾಹೀರಾತುಗಳು: ‘ಗಣೇಶ್ ಎಂಬ ಬಡ ರೈತ ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಒಳ್ಳೆಯ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’ ‘ರಾಹುಲ್ ಎಂಬ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯು ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಉತ್ತಮ ಸಂಶೋಧಕನಾಗುತ್ತಿದ್ದಾನೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’ ಇಂತಹ ಫೇಸ್‍ಬುಕ್ ಕಂಪನಿಯ ಹತ್ತಲವು ಜಾಹೀರಾತುಗಳು ಜನತೆಯ ಕಣ್ಣು ಕಿವಿಗಳ … Read more
ಅಪ್ಪಾ ಬಾಂಬು ……..! (ನಗೆ ಬರಹ): ಗುಂಡುರಾವ್ ದೇಸಾಯಿ
‘ಅಪ್ಪಾ… ಬಾಂಬು ಅಪ್ಪಾ, ಬಾಂಬು’ ಅಂತ ಮಗ ಅಳುತ್ತಾ ಎಬ್ಬಿಸಿದಾಗ ಗರಬಡಿದವನಂತೆ ‘ಹ್ಞಾ! ಎಲ್ಲಿ…ಎಲಿ?್ಲ’ ಅಂತ ತಡಕಾಡಕತಿದೆ. ಹಾಸಿಗೆಯಲ್ಲ ಅಸ್ತವ್ಯಸ್ತವಾಗಿ ಲುಂಗಿ ಇಲ್ಲದೆ ಹಾಗೆ ಓಡಾಡುತ್ತಿದ್ದನ್ನು ನೋಡಿ ಎಲ್ಲರೂ ಏನಾಯ್ತು ಅಂತ ಓಡಿ ಬಂದ್ರು ‘ಬಾಂಬು!ಬಾಂಬೂ…..! ಎಲ್ಲಿ ಬಾಂಬು?’ ಅಂದೆ ‘ಅಯ್ಯೋ ಸವಾರಾತಿವರಗೂ ಸುಡಗಾಡೂ ಏನೇನೊ ನೋಡತಿರಿ, ಹಿಂಗ ಎದ್ದು ಕಣವರಸ್ತಿರಿ’ ಎಂದ್ಲು ಈಕಿ ಅಷ್ಟರಾಗ ಮಗ ‘ಅಪ್ಪಾ ಬಾಂಬು ಬೇಕು ಅಪ್ಪಾ ಬಾಂಬು ಬೇಕು’ ಎಂದು ಅಳಕೊಂತ ಕುತಿದ್ದ. ನನಗ ಹುಚ್ಚು ಮಬ್ಬು ಕೂಡೆ ಹಿಡಿತು. … Read more
ಕಿಟ್ಟಿ ಪಾರ್ಟಿ: ಮೂರ್ತಿ ಎ ಎನ್ ಕೆ
ರೀ. ಮನೇಲಿ ಸ್ವಲ್ಪವೂ ಹಾಲಿಲ್ಲ. ನನ್ನ ಸ್ನೇಹಿತೆ ಬರ್ತಾ ಇದ್ದಾಳೆ. ಒಂಚೂರು ಕಾಫಿ ಮಾಡಿಕೊಡೋಕಾದ್ರು ಬೇಕಲ್ಲ ಹೋಗಿ ತನ್ನಿ ಅಂದ್ಲು. ನನ್ನ ಅರ್ಧಾಂಗಿ. ಮಟ ಮಟ ಮಧ್ಯಾನ್ಹ. ಬಿಸಿಲು ಬೇರೆ ಜೋರಿದೆ. ಟಿ. ವಿ. ಯಲ್ಲಿ ಸೊಗಸಾದ ಕಾರ್ಯಕ್ರಮ ಬರ್ತಿದೆ. ಇವೆಲ್ಲದರ ಜೊತೆ ಸ್ವಲ್ಪವೇನು ಹೆಚ್ಚೇ ಸೊಂಬೇರಿತನ ಆವರಿಸಿದೆ. ಈಗ ಆಗಲ್ಲ. ಆಮೇಲೆ ನೋಡೋಣ. ಅಲ್ಲರೀ. ಅಲ್ಲವೂ ಇಲ್ಲ ಬೆಲ್ಲವೂ ಇಲ್ಲ. ಈಗ ಸುತಾರಾಂ ಆಗಲ್ಲ ಅಷ್ಟೆ ಕಡ್ಡಿ ಮುರಿದಂತೆ ಹೇಳಿ ಬಿಟ್ಟೆ. ಎಡವಿ ಬಿದ್ದರೆ ಶೆಟ್ಟರ … Read more
ಕಾವ್ಯ ಧಾರೆ: ಜಯಶ್ರೀ ದೇಶಪಾಂಡೆ, ಬಿದಲೋಟಿ ರಂಗನಾಥ್, ಕು.ಸ.ಮಧುಸೂದನ
ದಾರಿಯಾವುದು ನಕ್ಷತ್ರಲೋಕಕೆ? ಅವಳು ಹೋದಳು ಇವತ್ತೇ. ಹೇಳಲೇ ಇಲ್ಲ ನನಗೆ, ಅಲ್ಲಿ ಕಿಟಕಿ ಅಂಚಿನಿಂದ ಸೂರ್ಯ ಚಂದ್ರರ ಜಾರಿಸಿ ತಂದು ಕಮಾನು ಕಟ್ಟಿದ್ದೆ… ತೋರಣವಿಟ್ಟು ಮೆತ್ತೆ ಹಾಸಿದ್ದೆ, ಅವಳು ಬಂದೊರಗಿದ ಮೇಲೆ ಆ ಮಡಿಲಿನಲ್ಲಿ ಸುಖಕ್ಕೆ ಹೊಂಚು ಹಾಕಿದ್ದೆ. ಅನವರತ ಕಾದಿದ್ದೆ…. ಹಿತ್ತಲಿನ ಗಿಳಿ ಹೊಸ ಹಾಡು ಹೇಳಿತ್ತು, ಮಾಮರದಲಿ ಚಿಗುರು ಮೂಡಿತ್ತು. ಮಾಮರ ಅವಳದು, ಗಿಳಿಯೂ… ಹಗಲಿರುಳು ಅವಳ ಹಾದಿ ನೋಡುವ ಹುಚ್ಚಿ ನಾನೊಂದೇ ಅಲ್ಲ! ಅದಕ್ಕೆಂದೇ ಅವಳು ಬರಬೇಕಿತ್ತು! ಹೊರಡುವ ಹೊಸ್ತಿಲಲ್ಲಿ ಹೇಳಿದ್ದಳಲ್ಲ ಇಲ್ಲೆಲ್ಲ … Read more
ಕಂದನ ಕರೆ: ಲಾವಣ್ಯ ಸಿದ್ದೇಶ್ವರ್
ವಿಜಯ ನರ್ಸಿಂಗ್ ಹೋಮಿನ ಆಪರೇಷನ್ ಥಿಯೇಟರಿನ ಮುಂದೆ, ಪ್ರಭಾಕರ ಶತಪಥ ತಿರುಗುತ್ತಿದ್ದಾನೆ, ಸಾವಿತ್ರಮ್ಮ ಬೆಂಚಿನ ಮೇಲೆ ಏನಾಗುವುದೋ ಎಂಬ ಭಯದಲ್ಲಿ ತನ್ನ ಸೊಸೆ, ಮೊಮ್ಮಗುವಿನ ಸೌಖ್ಯಕ್ಕಾಗಿ ಕಣ್ಣೀರಿಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ, ಒಳಗಿನಿಂದ ಗೌರಿಯ ಅಳು ಎಂಥವರನ್ನು ಕರಗಿಸುವಂತಿದೆ. ********* ಗೌರಿ, ಪ್ರಭಾಕರ್ ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆ ಮನೆಯಲ್ಲಿ ಇನ್ನೂ ಒಂದು ತೊಟ್ಟಿಲು ಕಂಡಿರಲಿಲ್ಲ, ಇದು ಸಾವಿತ್ರಮ್ಮನಿಗೂ ಬೇಸರದ ವಿಷಯವೇ ಆದರೂ ಸೊಸೆಗೆ ಚಿತ್ತವಧೆ ಮಾಡುವಂಥ ಸ್ವಭಾವದ ಹೆಣ್ಣಾಗಿರಲಿಲ್ಲ. ಆದರೂ ಹೋದಲ್ಲಿ, ಬಂದಲ್ಲಿ ಕಡೆ ನಿಮ್ಮ ಸೊಸೆಗಿನ್ನು … Read more
‘ಬಿಲ್’ಕುಲ್ ಸಂಬಂಧ: ಎಚ್.ಕೆ.ಶರತ್
ಸ್ನೇಹಿತರೊಬ್ಬರ ಸ್ಟೇಷನರಿಯಲ್ಲಿ ಅವರೊಂದಿಗೆ ಹರಟುತ್ತ ಕುಳಿತಿದ್ದೆ. ಆಗಾಗ ಗ್ರಾಹಕರು ಬಂದು ತಮಗೆ ಬೇಕಾದ್ದನ್ನು ಖರೀದಿಸಿ ಹೋಗುತ್ತಿದ್ದರು. ಹೀಗೆ ನೋಟ್ ಬುಕ್ಕು, ಫೈಲು, ಪೆನ್ನು ಇತ್ಯಾದಿ ಕೊಳ್ಳಲು ಬಂದ ಬಾಲಕಿಯರಿಬ್ಬರು ತಮಗೆ ಬೇಕಾದ್ದನ್ನೆಲ್ಲ ಖರೀದಿಸಿದ ನಂತರ, ಎಷ್ಟಾಯ್ತು ಅಂತ ಕೇಳಿ ಹಣ ನೀಡುವ ಮುನ್ನ ಬಿಲ್ ಕೊಡಿ ಎಂದು ಕೇಳಿದರು. ಸಾಮಾನ್ಯವಾಗಿ ಅಲ್ಲಿಗೆ ಬರುವ ಗ್ರಾಹಕರು ಬಿಲ್ ಕೇಳುವುದಿಲ್ಲವಾದ್ದರಿಂದ ಫ್ರೆಂಡ್‍ಗೆ ಅಚ್ಚರಿಯಾಯಿತು. ಅವರು ಕಾರಣ ಕೇಳುವ ಗೋಜಿಗೆ ಹೋಗಲಿಲ್ಲವಾದರೂ ಆ ಬಾಲಕಿಯರೇ ತುಂಬು ಉತ್ಸಾಹದಿಂದ, ‘ಮನೆಯವ್ರಿಗೆ ಬಿಲ್ ತೋರುಸ್ಬೇಕು. … Read more
“ ಕೆಂಡದಲ್ಲಿ ಅರಳಿದ ಕಮಲ”: ಇಬ್ಬನಿಯ ಹುಡುಗ ರಾಮು
ಅಲ್ಲೊಂದು ಪುಟ್ಟ ಸಂಸಾರ, ತಂದೆ-ತಾಯಿ, ಮಗಳು-ಮಗ ಈ ಪುಟ್ಟ ಸಂಸಾರದ ಸಂತಸಕ್ಕೆ ಕೊರತೆಯಿರಲಿಲ್ಲ, ಜೀವನದ ಹಾಯಿ ದೋಣಿ ಅಲೆ, ತೆರೆಗÀಳ ಸೆಳೆತವಿಲ್ಲದೆ ಬದುಕಿನ ಪಯಣ ಸಾಗಿತ್ತು. ತಂದೆ ವೈದ್ಯ ತಾಯಿ-ಗೃಹಿಣಿ, ಮಕ್ಕಳು ಬಲು ಬುದ್ದಿವಂತರು, ಚೂಟಿಯಾಗಿದ್ದರು ಬದುಕಿನಲ್ಲಿ ಮುಂದೊಂದು ದಿನ ಪ್ರಜ್ವಲಿಸುವ ನಕ್ಷತ್ರವಾಗುವ ಸುಳಿವು ಈಗಲೇ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ರೂಪಗೊಳ್ಳುತ್ತಿದ್ದರು, ಮಗಳ ಹೆಸರು ಶ್ವೇತಾ, ಹೆತ್ತ ಜೀವಗಳಿಗೆ ಜೀವಜಲ, ಗುರುಗಳಿಗೆ ಸದಾ ಮೆಚ್ಚಿನ ಶಿಷ್ಯೆ, ಚತುರೆ, ಬದುಕಿನಲ್ಲಿ ಗುರಿಯಡೆಗಿನ ತನ್ನ ರಾಮಬಾಣ ಹೂಡುವಲ್ಲಿ ಹಗಲಿರುಳೆಲ್ಲೆನ್ನದೆ … Read more
ಹೊಸ ವರ್ಷದ ರೆಸೊಲ್ಯೂಶನ್: ಚಂದನ್ ಶರ್ಮ ಡಿ.
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ಹೇಳುತ್ತಾ… ಇಲ್ಲೊಬ್ಬ ೨೩ ವರ್ಷದ ಇಂಜೆನಿಯರಿ೦ಗ್ ಮುಗಿಸಿ ಕೊನೆಯ ವರ್ಷದ MBA ಅಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಯ ಹೊಸ ವರ್ಷದ ರೆಸೊಲ್ಯೂಶನ್ ಬಗ್ಗೆ ಹೇಳ್ಬೇಕು. ಅವನು Writer ಆಗಬೇಕಂತೆ! ಪಂಜು ಪತ್ರಿಕೆ ಇಂದ ಲೇಖನ ಬರೆಯೋಕೆ ಸ್ಟಾರ್ಟ್ ಮಾಡ್ತಾನಂತೆ! ಚೇತನ್ ಭಗತ್ ಸ್ಪೂರ್ತಿ ಅಂತೆ! “ಚೇತನ್ ಭಗತ್ ನನ್ ತರಾನೆ; ಬಿ.ಇ ಮೆಕ್ಯಾನಿಕಲ್ ಅಂಡ್ ಒಃಂ ಇನ್ ಫೈನಾನ್ಸ್-ಮಾರ್ಕೆಟಿಂಗ್, ನಾನ್ಯಾಕೆ ನೆಕ್ಸ್ಟ್ ಚೇತನ್ ಭಗತ್ ಆಗಬಾರದು?!” ಅಬ್ಬಾ! ಹಿಂಗೆ ಹೇಳೋ ಇವನಿಗೆ ಎಷ್ಟು … Read more
ಶಂಕರನಾರಾಯಣ: ಪ್ರಶಸ್ತಿ
ಕಮಲಶಿಲೆಯ ನಂತರ ಹೊರಟಿದ್ದು ಸಿದ್ದಾಪುರದಿಂದ ಹತ್ತು ಕಿ.ಮೀ ದೂರವಿರೋ ಶಂಕರನಾರಾಯಣ ಕ್ಷೇತ್ರಕ್ಕೆ. ಇಲ್ಲಿ ಹರಿ,ಹರರಿಗೆ ಒಟ್ಟಿಗೇ ಪೂಜೆ ನಡೆಯುವುದು ವಿಶೇಷ.ನೆಲದಿಂದ ಒಂದು ಅಡಿಯಷ್ಟು ಕೆಳಗಿರುವ ವಿಷ್ಣುವಿನ ಚಪ್ಪಟೆಯಾದ ಮತ್ತು ಗೋಳಾಕಾರಾದ ಶಿವಲಿಂಗದ ಮೇಲೆ ಸದಾ ನೀರು ಹರಿಯುತ್ತಲೇ ಇರುತ್ತದೆ. ನಮ್ಮ ಎಡಭಾಗದಲ್ಲಿ ಉದ್ಭವಲಿಂಗಗಳಾದ ಶಂಕರಲಿಂಗ(ದೇವರ ಎಡಭಾಗದಲ್ಲಿ) ಮತ್ತು ಬಲಭಾಗದಲ್ಲಿ ವಿಷ್ಣುವಿನಲಿಂಗಗಳಿವೆ.ಲಿಂಗಗಳ ಮೇಲೆ ಸದಾ ಹರಿಯೋ ನೀರನ್ನು ಸುಧಾಮೃತ ತೀರ್ಥ ಎಂದು ಕರೆಯುತ್ತಾರಂತೆ.ದೇಗುಲದ ಹೊರಗಡೆ ಮತ್ತೊಂದು ಪುಟ್ಟ ಗುಡಿಯಲ್ಲಿ ಬೆಳ್ಳಿಯ ಶಂಕರನಾರಾಯಣ ವಿಗ್ರಹವಿದೆ. ಅದರಲ್ಲಿ ಬಲಭಾಗದಲ್ಲಿ ಮೀಸೆ,ಶೂಲ, ಚರ್ಮಾಂಬರನಾಗಿಯೂ … Read more
ನಜರುದ್ದೀನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ
೧. ಸಿಹಿ ಜಗಳಗಳು ಒಂದು ದಿನ ಮುಲ್ಲಾ ನಜರುದ್ದೀನ್ ತನ್ನ ಹೆಂಡತಿಯೊಂದಿಗೆ ಜಗಳವಾಡಿದ. ಅವನ ಕಿರುಚಾಟ ಕೇಳಲಾಗದೆ ಅವನ ಹೆಂಡತಿ ನೆರೆಮನೆಗೆ ಓಡಿಹೋದಳು. ಮುಲ್ಲಾ ಅವಳ ಹಿಂದೆಯೇ ಅಲ್ಲಿಗೂ ಹೋದ. ನೆರೆಮನೆಯವರು ಬಲು ಕಷ್ಟದಿಂದ ಇಬ್ಬರನ್ನೂ ಸಮಾಧಾನಪಡಿಸಿ ಚಹಾ ಹಾಗು ಮಿಠಾಯಿಗಳನ್ನು ಕೊಟ್ಟರು. ತಮ್ಮ ಮನೆಗೆ ಹಿಂದಿರುಗಿದ ನಂತರ ಪುನಃ ಮುಲ್ಲಾ ಜಗಳವಾಡಲಾರಂಭಿಸಿದ. ಹೊರಗೋಡಲೋಸುಗ ಅವನ ಹೆಂಡತಿ ಬಾಗಿಲು ತೆಗೆದೊಡನೆ ಮುಲ್ಲಾ ಸಲಹೆ ನೀಡಿದ, “ಈ ಸಲ ಬೇಕರಿಯವನ ಮನೆಗೆ ಹೋಗು. ಅವನು ಸ್ವಾದಿಷ್ಟವಾದ ಕೇಕ್‌ಗಳನ್ನು ತಯಾರಿಸುತ್ತಾನೆ!” … Read more
ಸಾಮಾನ್ಯ ಜ್ಞಾನ (ವಾರ 86): ಮಹಾಂತೇಶ್ ಯರಗಟ್ಟಿ
ಪ್ರಶ್ನೆಗಳು 1. ನೆಹರೂ ಸಾಕ್ಷರತಾ ಪ್ರಶಸ್ತಿಯನ್ನು ನೀಡುವ ಸಂಸ್ಥೆ ಯಾವುದು? 2. ಎಸ್.ಐ.ಟಿ.ಈ ನ ವಿಸ್ತೃತ ರೂಪವೇನು? 3. ಬೀರ್‍ಬಲ್ ಸಾಹ್ನಿ ಇನ್ಸ್‍ಸ್ಟಿಟ್ಯೂಟ್ ಫಾರ್ ಪಾಲಿಯೊಬಾಟನಿ ಎಲ್ಲಿದೆ? 4. ಲವಂಗಗಳ ದ್ವೀಪ ಎಂದು ಯಾವುದನ್ನು ಕರೆಯುತ್ತಾರೆ? 5. ಭಾಕ್ರನಂಗಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ? 6. ‘ಎ ಫಾರೆನ್ ಪಾಲಿಸಿ ಫಾರ್ ಇಂಡಿಯಾ’ ಕೃತಿಯ ಕರ್ತೃ ಯಾರು? 7. ಕೋಲ್‍ಟಾರ್‍ನ ತಯಾರಿಕೆಯಲ್ಲಿ ಬಳಸುವ ಕಲ್ಲಿದ್ದಲು ಯಾವುದು? 8. ಕರ್ನಾಟಕದಲ್ಲಿ ಭೂಗರ್ಭ ಇಲಾಖೆಯನ್ನು ಸ್ಥಾಪಿಸಲಾದ ವರ್ಷ ಯಾವುದು? 9. … Read more
ಫಟಾಫಟ್ ಅಡಿಗೆ!!: ಎಸ್. ಜಿ. ಶಿವಶಂಕರ್
ಐದು ದಿನಗಳಿಂದ ಫ್ಯಾಕ್ಟ್ರಿಗೆ ಲೇಟಾಗುತ್ತಿತ್ತು. ಇಂದು ಏನಾದರೂ ಸರಿ, ಸರಿಯಾದ ಸಮಯಕ್ಕೆ ಫ್ಯಾಕ್ಟ್ರಿ ತಲುಪಲೇಬೇಕೆಂದು ಹಠದಿಂದ ಹೊರಟಿದ್ದೆ. ಸೈರನ್ನಿಗೆ ಐದು ನಿಮಿಷ ಮುಂಚೆಯೇ ಹಾಜರಿ ಬೆರಳಚ್ಚು ಒತ್ತಿ ಡಿಪಾರ್ಟುಮೆಂಟು ಸೇರಿದೆ. ಇನ್ನೂ ಚುಮುಚುಮು ಕತ್ತಲು! ಮಹಡಿಯಲ್ಲಿದ್ದ ನನ್ನ ಚೇಂಬರಿನಲ್ಲಿ ವಿಸಿಟರ್ಸ್ ಕುರ್ಚಿಯಲ್ಲಿ ಯಾರೋ ಕೂತಿದ್ದರು!! ಇನ್ನೂ ಆಗಷ್ಟೇ ಷಾಪಿಗೆ ಜನ ಬರುತ್ತಿದ್ದರು. ಅಷ್ಟು ಬೆಳಿಗ್ಗೆ ನನ್ನ ಚೇಂಬರಿಗೆ ಯಾವ ವಿಸಿಟರ್ಸೂ ಬರಲು ಸಾಧ್ಯವಿರಲಿಲ್ಲ! ಅಂದರೆ ಅಲ್ಲಿ ವಕ್ಕರಿಸಿರುವವರು ಯಾರು ಎಂದು ಅಚ್ಚರಿಯಾಯಿತು. ಹಾರರ್ ಸಿನಿಮಾಗಳು ನೆನಪಾದವು! ಕಳೆದ … Read more
ನಾವು ಮತ್ತು ನಮ್ಮ ಸ್ವಭಾವಗಳು: ಅನಿತಾ ನರೇಶ್ ಮಂಚಿ
ನಮ್ಮ ಹಟ್ಟಿಯಲ್ಲೆರಡು ಎಮ್ಮೆಗಳಿದ್ದವು. ಮೇವು ಹಾಕುವಾಗ ಹುಲ್ಲಿನ ಕಂತೆಯನ್ನು ಎರಡು ಪಾಲು ಮಾಡಿ ಸಮಾನವಾಗಿ ಹಂಚಿ ಹಾಕಲಾಗುತ್ತಿತ್ತು. ಆ ಎಮ್ಮೆಗಳು ತಮ್ಮ ಪಾಲಿನ ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಬದಲಿಗೆ ತಮ್ಮದಲ್ಲದ ಮೇವಿನ ರಾಶಿಯಿಂದ ಎಷ್ಟು ಎಟಕುತ್ತದೋ ಅಷ್ಟನ್ನು ಮೊದಲು ತಿನ್ನಲು ತೊಡಗುತ್ತಿದ್ದವು. ಆಗಾಗ ಸಿಟ್ಟಿನಲ್ಲಿ ಕೊಂಬಿನಿಂದ ತಿವಿದುಕೊಳ್ಳುವುದು, ಹೊಳ್ಳೆಯರಳಿಸಿ ಉಸಿರು ಬಿಡುವುದು ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದವು. ಒಂದು ಹುಲ್ಲಿನ ಚೂರೂ ಉಳಿಯದಂತೆ ತಿಂದರೂ ತಮಗೇನೋ ಕಮ್ಮಿ … Read more
” ರಾಮನಾಥಪುರ ಜಾತ್ರಾ ವೈಭವ”: ಹೊರಾ.ಪರಮೇಶ್ ಹೊಡೇನೂರು(ರುದ್ರಪಟ್ಟಣ)
(ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರವೆಂದು ಜನಪ್ರಿಯವಾಗಿರುವ ಅರಕಲಗೂಡು ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ "ರಾಮನಾಥ ಪುರ"ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ 17 ರಂದು ರಧೋತ್ಸವವು ಜರುಗಿದ್ದು ಮುಂದಿನ ತಿಂಗಳ(ಜನವರಿ) 16ರವರೆಗೂ ನಡೆಯುವ ಜಾತ್ರೆಗೆ ಮುನ್ನುಡಿಯಾಗಿದೆ. ಈ ನಿಮಿತ್ಯ ಜಾತ್ರಾ ವೈಭವ ಮತ್ತು ಬದಲಾಗುತ್ತಿರುವ ಸ್ವರೂಪ ಕುರಿತ ಲೇಖನವಿದು) ಪುರಾಣ ಕಾಲದಲ್ಲಿ ಸೀತೆಯನ್ನು ಅಪಹರಿಸಿದ ರಾವಣೇಶ್ವರನನ್ನು ಸಂಹರಿಸಿದ ಶ್ರೀರಾಮನು ತನಗೆ ಬ್ರಹ್ಮ ಹತ್ಯೆ ದೋಷ ಕಾಡದಿರಲೆಂದು ವಾಸವಾಪುರಿಯ … Read more