ಅಂಬೇಡ್ಕರ್ ಎಂಬ ಶಕ್ತಿಯೇ ನಿನ್ನೆಯ ಹೋರಾಟ ; ಇಂದಿನ ಬೆಳಕು, ನಾಳಿನ ಬಾಳ ಬುತ್ತಿ: ನಾಗರಾಜ್ ಹರಪನಹಳ್ಳಿ

  ನಮ್ಮ ಕಣ್ಣ ಮುಂದಿನ ಬೆಳಕು ಅಂಬೇಡ್ಕರ್. ಅವರು ಭಾರತದ ಅಂತಃಶಕ್ತಿ ಹೆಚ್ಚಿಸಿದ ಮಹಾ ಮನವತಾವಾದಿ. ಅಂಬೇಡ್ಕರ್ ಪ್ರಜಾಪ್ರಭುತ್ವವಾದಿ. ಮಹಿಳಾವಾದಿ, ಕಾರ್ಮಿಕರ ಬಂಧು. ಮನುಷ್ಯತ್ವದ ಪ್ರತಿಪಾದಕ. ಶೋಷಿತರಿಗೆ ಪ್ರೀತಿ ಅಂತಃಕರಣದ ನದಿಯನ್ನೇ ಹರಿಸಿದ ಮನುಷ್ಯ, ಅಂಬೇಡ್ಕರ್ 1891ರಲ್ಲಿ ಜನಸಿದ್ದು. ಅವರ 128ನೇ ಜನ್ಮದಿನಕ್ಕೆ ನಾವಿಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಬಾಬಾ ಸಾಹೇಬ್ ನಮ್ಮಿಂದ ಭೌತಿಕವಾಗಿ ದೂರವಾಗಿ 63 ವರ್ಷ ಕಳೆದಿದ್ದರೂ, ಅವರನ್ನು ದೇಶ ಪ್ರತಿ ದಿನ, ಪ್ರತಿಕ್ಷಣ ನೆನಪಿಸಿಕೊಳ್ಳುವ ಭಾರತದ ಬಹುಮುಖ ಪ್ರತಿಭೆ. ಅವರು ನೀಡಿದ ಸಂವಿಧಾನದ ಮಹಾಧರ್ಮದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಣೆಯಾದವರು !!!: ಸತೀಶ್ ಶೆಟ್ಟಿ ವಕ್ವಾಡಿ

“ಸಾರ್, ಸಾರ್, ನಾಗೇಶ್ ಮೇಸ್ಟ್ರು ಕಾಣೆಯಾಗಿದ್ದರಂತೆ !!.” ಬೆಳ್ಳಂ ಬೆಳಿಗ್ಗೆ ಪ್ರಾಂಶುಪಾಲರ ಕಚೇರಿಗೆ ಎದುರುಸಿರು ಬಿಡುತ್ತಾ ನುಗ್ಗಿದ ಕಾಲೇಜು ಕ್ಲರ್ಕ್ ರೂಪ ಗಾಬರಿ ಮತ್ತು ದುಗುಡದಿಂದ ಹೇಳಿದಾಗ, ಪ್ರಾಂಶುಪಾಲರಾದ ನಾರಾಯಣ ಉಪಾಧ್ಯಾಯರಿಗೆ ಜೀವ ಬಾಯಿಗೆ ಬಂದಂತಾಯಿತು. ಆಗ ತಾನೆ ಕಾಲೇಜಿಗೆ ಬಂದು ತಮ್ಮ ಛೇಂಬರಿನ ದೇವಮೂಲೆಯಲ್ಲಿದ ದೇವರ ಫೋಟೋಕ್ಕೆ ಹೂ ಹಾರಹಾಕಿ, ಉದುಕಡ್ಡಿ ಹಚ್ಚುತ್ತಿದ್ದವರಿಗೆ ರೂಪ ಹೇಳಿದ ವಿಷಯ ಬರಸಿಡಿಲು ಬಡಿದಂತಾಯಿತು. ಕೈಲಲ್ಲಿದ್ದ ಉದುಕಡ್ಡಿಯನ್ನು ಅಲ್ಲೆ ಬಿಟ್ಟು ಸೀದಾ ಸಿಟಿಗೆ ಬಂದು ಕೂತ ಉಪಾಧ್ಯಾಯರು ಗಾಬರಿಗೆ ಪಕ್ಕದಲ್ಲಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೆಲ್ಲಿಸುವ ದಾರಿಯಲ್ಲಿ – ಕೌಶಲ್ಯದ ಪರಿಚಯ: ರಘುನಂದನ ಕೆ. ಹೆಗಡೆ

SKILL, SPEED, SCORE ಕೌಶಲ್ಯ ವೇಗ ಗೆಲುವು ಕೌಶಲ್ಯ (Skill) ಎಂದ ತಕ್ಷಣ ನಮ್ಮ ಯೋಚನೆಯೆಲ್ಲ ವೃತ್ತಿ ಜೀವನಕ್ಕೆ ಹೊರಟು ಬಿಡುತ್ತೆ, ಇಲ್ಲಾ ಇದೆಲ್ಲಾ ಕಲಿಕೆಯ ಕೊನೆ ಹಂತದಲ್ಲಿರೋ ವಿದ್ಯಾರ್ಥಿಗಳಿಗೆ ಬೇಕಾಗಿರೋದು ಅನ್ಕೋತೇವೆ. ಹಾಗಾದರೆ ವೃತ್ತಿಯನ್ನ ಬಿಟ್ಟು, ಜೀವನಕ್ಕೆ ಕೌಶಲ್ಯ ಬೇಕಿಲ್ವಾ? ಹೆಂಗೆಂಗೋ ಬದುಕೋರಿಗೆ ಕೌಶಲ್ಯ ಬೇಕಿಲ್ಲ, ಕೌಶಲ್ಯ ಇದ್ದೋರಿಗೆ ಸ್ಕೂಲ್ ಶಿಕ್ಷಣ ಇಲ್ದೇ ಇದ್ರು ಗೆಲುವು ಸಿಗುತ್ತೆ. ನಂಬಿಕೆ ಆಗ್ತಿಲ್ವಾ, ಥಾಮಸ್ ಅಲ್ವಾ ಎಡಿಸನ್ ಗೊತ್ತಲ್ಲಾ, ಬಲ್ಬನ್ನು ಕಂಡು ಹಿಡಿದು ಬೆಳಕು ಕೊಟ್ಟ ವಿಜ್ಞಾನಿ, ಅವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಮಾಟಿಪುರದ ರಾಣಿ: ಜೆ.ವಿ.ಕಾರ್ಲೊ

ಇಂಗ್ಲಿಷಿನಲ್ಲಿ: ಎಸ್.ಹುಸೇಯ್ನ್ ಝೈದಿ/ ಜೇನ್ ಬೋರ್ಜೆಸ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ಅವಳಿಗೆ ವಧುವಿನಂತೆ ಶೃಂಗರಿಸಿ ಮಂಚದ ಮೇಲೆ ಕುಳ್ಳಿರಿಸಿ ಸುತ್ತ ಗುಲಾಬಿ ಪಕಳೆಗಳನ್ನು ಹರವಲಾಗಿತ್ತು. ತುಟಿಗಳಿಗೆ ಗಾಢವಾದ ಕೆಂಪು ಬಣ್ಣವನ್ನು ಬಳಿದು ದೊಡ್ಡದಾದ ಮೂಗುತಿಯನ್ನು ತೊಡಿಸಿದ್ದರು. ಆ ಕೋಣೆಯಲ್ಲಿ ಪುರಾತನ ಗ್ರಾಮಫೋನೊಂದು ಹಳೆ ಹಿಂದಿ ಹಾಡನ್ನು ಪದೇ ಪದೇ ಹಾಡುತ್ತಿತ್ತು. ಮೊದಲರಾತ್ರಿಯ ವಾತಾವರಣವನ್ನು ಅಲ್ಲಿ ಸೃಷ್ಟಿಸಲಾಗಿತ್ತು. ಆದರೆ ಮಧುಗೆ ಇದಾವುದರ ಪರಿವೆಯೂ ಇರಲಿಲ್ಲ. ತನ್ನನ್ನೇಕೆ ಇಲ್ಲಿ ತಂದು ಕುಳ್ಳಿರಿಸಿದ್ದಾರೆಂದು ಅವಳಿಗಿನ್ನೂ ಅರ್ಥವಾಗಿರಲಿಲ್ಲ. ಒಮ್ಮೆಲೆ ಬಾಗಿಲು ತೆರೆದು ಒಳಗೆ ಬಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನಕೃ ಮಹಾನ್ ಮೇರು ಕಾದಂಬರಿ ಸಾರ್ವಭೌಮರು: ಹೊರಾ.ಪರಮೇಶ್ ಹೊಡೇನೂರು

ಸಂಗೀತ, ನಾಡು ನುಡಿಗೆ ಅನಕೃ ಕೊಡುಗೆ “ಅನಕೃ”ಎಂಬ ಹೃಸ್ವ ಪದಪುಂಜದಲ್ಲಿಯೇ ಅಗಾಧವಾದ ಸಾಹಿತ್ಯ ಅನಾವರಣಗೊಳ್ಳುತ್ತದೆ. ಕನ್ನಡ ಸಾಹಿತ್ಯದ ಕೃಷಿಯ ಜೊತೆಗೆ ಕನ್ನಡ ಭಾಷೆಯ ಬಳಕೆ-ಉಳಿಕೆಗೆ ಅಕ್ಷರಶಃ ಶ್ರಮಿಸಿದ ಅಪೂರ್ವ ಸಾಹಿತಿ ಅ.ನ.ಕೃಷ್ಣರಾಯರು. ಹುಟ್ಟಿದ್ದು ಕೋಲಾರವೇ ಆದರೂ ತಂದೆ ನರಸಿಂಗರಾಯರು-ತಾಯಿ ಅನ್ನಪೂರ್ಣಮ್ಮನವರು ಮೂಲತಃ ಅರಕಲಗೂಡಿನವರಾದುದರಿಂದ ಅನಕೃ ಅವರು ಅರಕಲಗೂಡಿನವರೇ ಎಂಬುದಾಗಿ ಪರಿಭಾವಿಸಲ್ಪಟ್ಟಿದ್ದಾರೆ. ಬಳ್ಳಿಯು ಎಷ್ಟೇ ಬೃಹದಾಕಾರವಾಗಿ ಬೆಳೆದರೂ ಅದರ ಹುಟ್ಟಿದ ಜಾಗವೇ ಅಸ್ತಿತ್ವವನ್ನು ಹೇಳುವಂತೆ ಅನಕೃ ಅರಕಲಗೂಡು ಭಾಗದವರೇ ಎಂಬುದಾಗಿ ಪರಿಗಣಿತವಾಗಿದ್ದಾರೆ. 190೮ ರ ಮೇ 9 ರಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಂಶೋದ್ಧಾರ !: ಅಶ್ಫಾಕ್ ಪೀರಜಾದೆ

ಪಾತರಗಿತ್ತಿಯಂತಾ ಚಂಚಲ ಚಲ್ವಿ ಈ ಪಾರಿ! ಕಡ್ಡೀಲೇ ಬರದಾಂಗ ಬಳಕು ಶರೀರದ ವೈಯ್ಯಾರಿ !! ನಡದರ ನಾಟ್ಯ ನವಿಲಿನ್ಯಾಂಗ„ !! ಉಲಿದರ ಕೋಗಿಲೆ ಹಾಡಿದಾಂಗ„ !!! ಹಡದವರ ಮುದ್ದಿನ ಮಗಳಾಗಿ ಆಡಕೊಂತ ಮಾಡಕೊಂತ, ಹಂಗ„ ಚಾರುಚೂರು ಸಾಲೀನೂ ಕಲಕೊಂತ ಬೆಳೆದ ಹುಡ್ಗಿ ಒಂದಿವ್ಸ ದೊಡ್ಡಾಕಿ ಆದ ಸುದ್ದಿ ಮಲೇರಿಯಾ ಜ್ವರದಾಂಗ ಸುತ್ತ ಹಳ್ಳಿಗೆಲ್ಲ ಹರಡಿ, ಮೊದಲ„ ಅವಳ ರೂಪಲಾವಣ್ಯ ಮನಸಿನ್ಯಾಗ ತುಂಬಕೊಂಡ ಕನಸ ಕಾಣಾಕ ಹತ್ತಿದ ಪಡ್ಡೆ ಹುಡಗರ ನಿದ್ದಿಗೆಡಸಿತ್ತ. ಥ್ವಾಡೆ ಮಂದಿಗೆ ಈ ವಿಶ್ಯಾ ಮೊಜಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಚ್ಚರಿಯ ಕಂಗಳು: ಸಿಂಧು ಭಾರ್ಗವ್ ಬೆಂಗಳೂರು

ಚಿಕ್ಕ ಮಕ್ಕಳು ಮುಗ್ಧರಾಗಿರುತ್ತಾರೆ. ಪ್ರಪಂಚದ ಅರಿವೇ ಇಲ್ಲದೇ ತಮ್ಮ ಪಾಡಿಗೆ ತಾವು ಆಡಿ ಕುಣಿದು ನಲಿಯುತ್ತಿರುತ್ತಾರೆ. ಹೆತ್ತವರು ಯಾವುದೋ ಕಾರಣಕ್ಕೆ ಗದರಿಸಿದರೆ ಹೆದರಿ ಮುದುರಿಕೊಂಡು ಕುಳಿತುಬಿಡುತ್ತಾರೆ. ಅವರ ತುಂಟಾಟ, ಚೇಷ್ಠೆಗಳು ಲೆಕ್ಕವಿಲ್ಲದಷ್ಟು ಮಾಡಿದರೂ ಹೆತ್ತವರು ಬೆದರಿಸದೇ, ಹೊಡೆಯದೇ ತಾಳ್ಮೆಯಿಂದ ಇರಬೇಕು. ತಮ್ಮ ಕೆಲಸದ ಒತ್ತಡವನ್ನು, ಕೋಪವನ್ನು ಅವರ ಮೇಲೆ ತೀರಿಸಿಕೊಳ್ಳಬಾರದು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡುವುದು ಎಷ್ಟು ಸರಿ? ಬದಲಾಗಿ ಅವರ ಖುಷಿಯಲ್ಲಿ ತಾವು ಕೂಡ ಖುಷಿಪಡಬೇಕು. ಮಕ್ಕಳ ಮನಸ್ಸಿಗೆ ಘಾಸಿ ಮಾಡಬಾರದು. ಅವುಗಳ‌ ಜೊತೆ ಬೆರೆತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆನೆ ಕೊಂದಿತು – ಸಿಂಹ ತಿಂದಿತು!!: ಅಖಿಲೇಶ್ ಚಿಪ್ಪಳಿ

ಭೌದ್ಧ ಧರ್ಮದಲ್ಲೊಂದು ಕಥೆಯಿದೆ. ನೀರಿನಲ್ಲಿ ಬಿದ್ದ ಚೇಳನ್ನು ಸನ್ಯಾಸಿಯೊಬ್ಬ ಬರಿಗೈಯಿಂದ ಎತ್ತಿ ಬದುಕಿಸುವ ಪ್ರಯತ್ನದಲ್ಲಿರುತ್ತಾನೆ. ಚೇಳು ಕುಟುಕುತ್ತದೆ. ಇವನ ಕೈಜಾರಿ ಮತ್ತೆ ನೀರಿಗೆ ಬೀಳುತ್ತದೆ. ಪ್ರತಿಬಾರಿ ಸನ್ಯಾಸಿಯು ಅದನ್ನು ಬದುಕಿಸಲು ಪ್ರಯತ್ನ ಮಾಡುವುದು ಹಾಗೂ ಅದು ಕುಟುಕುವುದು ನಡದೇ ಇರುತ್ತದೆ. ದಾರಿಹೋಕನೊಬ್ಬ ಕೇಳುತ್ತಾನೆ, ಅದು ನಿನಗೆ ಕುಟುಕುತ್ತಿದ್ದರೂ, ಅದನ್ನು ಬದುಕಿಸುವ ಪ್ರಯತ್ನ ಮಾಡುತ್ತಿದ್ದೀಯಲ್ಲ. ಅದಕ್ಕೆ ಆ ಬಿಕ್ಷು ಹೇಳುತ್ತಾನೆ, ಕುಟುಕುವುದು ಅದರ ಧರ್ಮ, ಬದುಕಿಸುವುದು ನನ್ನ ಧರ್ಮ. ಮೇಲ್ನೋಟಕ್ಕೆ ಇದೊಂದು ತರಹದ ನೀತಿ ಕಥೆಯಂತೆ ತೋರಬಹುದು. ಆದರೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳೆಸುವ ಸಿರಿ ಮೊಳಕೆಯಲ್ಲೇ?: ಕೊಟ್ರೇಶ್ ಕೊಟ್ಟೂರು

ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವ ಗಾದೆಯನ್ನು ನಾವು ಕೇಳಿದ್ದೇವೆ ಆದರೆ ಇದು ಬೆಳೆಯುವ ಸಿರಿ ಮೊಳಕೆಯಲ್ಲೇ ಅಲ್ಲ, ಬದಲಾಗಿ ಬೆಳೆಸುವ ಸಿರಿ ಮೊಳಕೆಯಲ್ಲೇ ಎನ್ನುವುದು. ಯಾವುದೇ ಒಂದು ಮಗು ಬೆಳೆಯುವುದು ಬಿಡುವುದು ಅವರವರ ಇಚ್ಛೆ. ಆದರೆ ಈ ಮಗುವನ್ನು ಬೆಳೆಸುವುದರಲ್ಲಿ ಆ ಮಗುವಿನ ತಾಯಿ ಹೇಗೆ ಬೆಳೆಸಿ ಪೋಷಿಸುತ್ತಿರುವಳು ಎನ್ನುವುದು ನನಗಂತೂ ಆಶ್ಚರ್ಯ ಮತ್ತು ಅಗಾಧ. ಆ ಮಗುವಿಗೆ ಬದುಕುವ ಛಲವನ್ನು ಹೇಗೆಲ್ಲಾ ತುಂಬಬಹುದು ಎಂಬುದಕ್ಕೆ ಜೀವಂತ ನಿದರ್ಶನ ಅಮೃತಳ ಆ ನನ್ನ ತಾಯಿ. ನಾನೀಗ ಹೇಳುತ್ತಿರುವುದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಂಸ್ಕಾರ ಜ್ಞಾನವೇ ಸಂಸಾರ ಪ್ರಾಣ: ರವಿ ರಾ ಕಂಗಳ

ಯಾವುದೇ ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳೆಂದರೆ ಒಂದು ನೈಸರ್ಗಿಕ ಸಂಪನ್ಮೂಲ ಇನ್ನೊಂದು ಮಾನವ ಸಂಪನ್ಮೂಲ. ಯಾವ ದೇಶದಲ್ಲಿ ವಿಪುಲವಾಗಿ ನೈಸರ್ಗಿಕ ಸಂಪನ್ಮೂಲವಿದೆಯೋ ಆ ದೇಶವು ಅಭಿವೃದ್ಧಿಶೀಲ ದೇಶವೆಂದು ಹೇಳಲು ಸಾಧ್ಯವಿಲ್ಲ, ಆ ನೈಸರ್ಗಿಕ ಸಂಪನ್ಮೂಲವನ್ನು ಅಲ್ಲಿನ ಮಾನವ ಸಂಪನ್ಮೂಲವು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆಯೋ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಹಾಗಾಗಿ ನೈಸರ್ಗಿಕ ಸಂಪನ್ಮೂಲವನ್ನು ಮಿತವ್ಯಯವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮಾನವ ಸಂಪನ್ಮೂಲವು ಈ ದೇಶಕ್ಕೆ ಬೇಕಾಗಿದೆ. ಅದು ಅಲ್ಲದೆ ಇಂದು ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ಮಾನವೀಯತೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಉತ್ತಮ ಸಮಾಜಕ್ಕೆ ಮಿಡಿಯುವ ಭಾವ ಬುಗುರಿ”: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ: ಭಾವ ಬುಗುರಿ ಕೃತಿ ಕತೃ: ಶ್ರೀದೇವಿ ಹೂಗಾರ, ಬೀದರ ಬೆಲೆ:100 ರೂ ಕನ್ನಡ ಕಾವ್ಯ ಪರಂಪರೆಯಲ್ಲಿ ಹಲವಾರು ಕವಿ ಗಣಗಳು ಬೆಳೆದು ಬೆಳೆಸುತ್ತಾ ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ ಕನ್ನಡ ಸಾಹಿತ್ಯ ಸಾಗರ ತುಂಬಾ ವಿಶಾಲವಾದದ್ದು ಪ್ರಾಚೀನ ಕಾಲದ ದಾಸ ಶರಣ ಸಾಹಿತ್ಯ ಆಧುನಿಕ ಕನ್ನಡ ಕಾವ್ಯ ಬಂಡಾಯ ದಲಿತ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆದಿದೆ. ಸಾಹಿತ್ಯ ಸಮ್ ಪ್ರೀತಿಯು ಇಂದು ಯುವಜನತೆಯ ಮನಸೆಳೆದು ಕಾವ್ಯ ಜಗತ್ತಿನ ಕಡೆಗೆ ಕೈಬೀಸಿ ಕರೆಯುತ್ತಿದೆ ಆಧುನಿಕ ಕಾಲದ ನವ ನವ ತಂತ್ರಜ್ಞಾನದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪೂರ್ವಜರ ಪರಿಸರ ಪ್ರೇಮ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಾಗಾಭರಣನಾದ ನಟರಾಜ! ನಾಗನನ್ನು ಸೊಂಟದ ಪಟ್ಟಿ ಮಾಡಿಕೊಂಡಿರುವ ಲಂಬೋದರ! ಶೇಷಶಯನನಾದ ವಿಷ್ಣು! ಕಾಡಿನ ರಾಜ ಸಿಂಹವಾಹನೆಯಾದ ಆದಿಶಕ್ತಿ! ನಂದಿವಾಹನನಾದ ನಂದೀಶ! ಮಹಿಷ ವಾಹನನಾದ ಯಮಧರ್ಮ! ಮರದ ಕೆಳಗೆ ಕುಳಿತು ಪಶುಗಳಿಂದ ಸುತ್ತುವರಿಯಲ್ಪಟ್ಟು ಪಶು ಪಕ್ಷಿ ಪರಿಸರ ಪ್ರೇಮಿ ಪಶುಪತಿ! ಕೊಳಲ ನುಡಿಸುತ ಗೋವುಗಳ ಮಧ್ಯ ನಿಂತ ಗೋಪಾಲ! ಜ್ಞಾನದ ಸಂಕೇತವಾದ ಗಜ ತಲೆಯ ಗಜಾನನ! ನಾಗಯಜ್ಞೋಪವೀತನಾದ ವಿಘ್ನೇಶ್ವರ! ಕುರಿ ತಲೆಯ ದಕ್ಷಬ್ರಹ್ಮ! ಹದಿನಾರು ವಿಷ್ಣುವಿನ ಅವತಾರಗಳಲ್ಲಿ ಒಂದಾದ ಹಂದಿಯ ತಲೆಯುಳ್ಳದ್ದಾದ ವರಹಾವತಾರ! ಪಕ್ಷಿರಾಜ ಗರುಡವಾಹನನಾದ ವಿಷ್ಣು! ಸುಂದರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನೆ ಖಾಲಿಯಿದೆ: ವೇದಾವತಿ ಹೆಚ್. ಎಸ್.

ಮಧ್ಯಾಹ್ನದ ಬಿರಿ ಬಿಸಿಲಿನಲ್ಲಿ ಸುಮ ಮೂರು ವರ್ಷದ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ನಮ್ಮ ಮನೆಗೆ ಬಂದಿದ್ದಳು.ಅವಳ ಮುಖ ಬಿಸಿಲಿನ ತಾಪಕ್ಕೆ ಕೆಂಪು ಕೆಂಪಾಗಿ ಬಾಡಿ ಹೋಗಿತ್ತು.ಅವಳನ್ನು ಮನೆಯ ಒಳಗೆ ಬರ ಮಾಡಿಕೊಂಡು ಕುಳಿತು ಕೊಳ್ಳಲು ಹೇಳಿ ಪ್ಯಾನನ್ನು ಹಾಕಿ ನಿಂಬೆ ಹಣ್ಣಿನ ಜ್ಯೂಸ್ ಮಾಡಲು ಅಡುಗೆ ಮನೆಯ ಕಡೆಗೆ ಹೋದೆ. ಜ್ಯೂಸನ್ನು ಮೆಲ್ಲನೆ ಹೀರುತ್ತಾ ತನ್ನ ಸಂಕಟ ಹೇಳಲು ಪ್ರಾರಂಭ ಮಾಡಿದಳು. “ಈ ಬೆಂಗಳೂರು ಎಂಬ ಮಹಾನಗರದಲ್ಲಿ ಒಂದು ನೆಟ್ಟಗೆ ಮನೆಗಳು ಬಾಡಿಗೆಗೆ ಸಿಗುತ್ತಿಲ್ಲ. ಒಂದು ಸರಿಯಾಗಿದ್ದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾಣಸುದ್ದಿ 20: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಗ್ಗಡಹಳ್ಳಿ ಮಕ್ಕಳಿಂದ “ನಿಮ್ಮ ಕಸ ನಿಮಗೆ” ಅಭಿಯಾನ.

‘ನಾಳೆಗಳು ನಮ್ಮದು” ಎಂಬ ಧ್ಯೇಯದೊಂದಿಗೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಳೆದ ವಾರ ನಡೆದ ಬಣ್ಣದಮೇಳದಲ್ಲಿ ಮಕ್ಕಳು ಅಪರೂಪದ ಅಭಿಯಾನವೊಂದನ್ನು ಆರಂಭಿಸಿದರು. ಬೇರೆ ಬೇರೆ ರುಚಿಯ ಅತ್ಯಾಕರ್ಷಕ ಮಕ್ಕಳ ತಿಂಡಿಗಳನ್ನು ದೇಶದಲ್ಲಿ ಹಲವಾರು ಕಂಪೆನಿಗಳು ಉತ್ಪಾದಿಸುತ್ತವೆ. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಇಂತಹ ಉತ್ಪನ್ನಗಳು ಸಿಗುತ್ತವೆ. ಆ ಉತ್ಪನ್ನಗಳನ್ನು ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಮಕ್ಕಳನ್ನು ಆಕರ್ಷಿಸಲಾಗುತ್ತದೆ. ಹೆಗ್ಗಡಹಳ್ಳಿಯ ಮಕ್ಕಳು ಬಣ್ಣದಮೇಳದಲ್ಲಿ ಸೇರಿ ಈ ಕವರು ನಮ್ಮೂರಿಗೆ ಕಸವಾಗಿ ಹಾಗೆಯೇ ಉಳಿಯುತ್ತದೆ ಎಂಬುವುದನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಸ್ವರ್ಗ ಸೃಷ್ಟಿಯಾಗುತಿರಲು ಸುಳಿಯುತಿರುವ ಗಾಳಿ ಗಂಧ ಬಳಿಯಲಿರುವ ಯಮುನೆ ಚಂದ್ರ ಸುಳಿಯದಿರುವ ಸಖನ ನೆನೆದು ನಳಿನೆ ಕಾಯುತಿದ್ದಳು ಅಂದುಗೆ ಧನಿ ‘ಘಲ್” ಎನಲು ಎದೆಯು ಮಿಡಿದು ‘ಝಲ್” ಎನಲು ಬಂದನೇನೆ………. ಮಾಧವನು ಎಂದು ರಾಧೆ ನೊಂದಳು ಸುತ್ತಮುತ್ತ ಭೃಂಗ ಪಾನ ಹೊತ್ತಿ ಎದೆಯ ರಸದ ಗಾನ ಮೆತ್ತನೊಮ್ಮೆ ಮುಖವನೆತ್ತಿ ಮುತ್ತನೊತ್ತ ಬಾರದೇ ಹಾರುತಿತುವ ಸೆರಗ ಬಿಟ್ಟು ಜಾರುತಿರುವ ನೆರಿಗೆ ಬಿಟ್ಟು ಹಾರಿ ಬರುವ ಮುರಳಿಯಡೆಗೆ ನೀರೆ ಓಡಿ ಬಂದಳು ಬಂದ ನಲ್ಲನೊಡನೆ ಕೂಡಿ ಒಂದು ಘಳಿಗೆ ಎಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ

ಪ್ರಥಮ್ ಬುಕ್ಸ್ ಸ್ಟೋರಿವೀವರ್ ನ (https://storyweaver.org.in)  ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ ವು (Retell, Remix, Rejoice) ಮಾ.20 ರಿಂದ ಶುರುವಾಗಲಿದೆ. ಈ ಮೂಲಕ ಪ್ರಥಮ್ ಬುಕ್ಸ್ ನ ವಾರ್ಷಿಕ ಕತೆ ಹೇಳುವ ಸ್ಪರ್ಧೆಗೆ ಚಾಲನೆ ಸಿಗಲಿದೆ. ಪ್ರತಿ ವರ್ಷ ಮಾ.20ಕ್ಕೆ ನಮಗಾಗಿ ಕತೆಗಳನ್ನು ಬರೆದ ಲೇಖಕರು, ಓದುಗರಿಂದ ಆಯ್ದ ಕೆಲವು ವಿಷಯಗಳ ಮೂಲ ಎಳೆಯೊಂದಿಗೆ ಕತೆಗಳನ್ನು ಬರೆಯಲು ಆಹ್ವಾನಿಸುತ್ತೇವೆ. ಈ ಎಲ್ಲಾ ವಿಷಯಗಳು ಪ್ರಥಮ್ ಬುಕ್ಸ್ ಸಂಪಾದಕೀಯ ಬಳಗದ ಆಯ್ಕೆಯೇ ಆಗಿರುತ್ತದೆ. 2019ರ ಅಭಿಯಾನದ ಮುಖ್ಯ ಉದ್ದೇಶ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾನಸಪುತ್ರ ನಾಟಕ ಪ್ರದರ್ಶನ

ನಾಟಕದ ಹೆಸರು : ಮಾನಸಪುತ್ರ. ಆಧಾರ : ಬೀಚಿಯವರ ‘ ನನ್ನ ಭಯಾಗ್ರಫಿ’ ಮತ್ತು ಇತರೆ ಅನುಭವಗಳು ರಚನೆ – ನಿರ್ದೇಶನ : ಬಸವರಾಜ ಎಮ್ಮಿಯವರ ಅಭಿನಯಿಸುವ ತಂಡ : ಕಲಾವಿಲಾಸಿ ದಿನಾಂಕ ಮತ್ತು ಸಮಯ : 13 ಏಪ್ರಿಲ್ 2019, ಶನಿವಾರ. ಸಂಜೆ 7.00 ಕ್ಕೆ ಸ್ಥಳ :ಸೇವಾಸದನ. 14ನೆ ಅಡ್ಡ ರಸ್ತೆ, ಮಲ್ಲೇಶ್ವರ ಬೆಂಗಳೂರು ನಾಟಕದ ಅವಧಿ : 80 ನಿಮಿಶಗಳು. ಪ್ರವೇಶ ದರ : 100/- ಹೆಚ್ಚಿನ ಮಾಹಿತಿಗೆ : 9663523904 ನಾಟಕದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ