ಮಂಜಯ್ಯನ ಮಡಿಕೆ ಮಣ್ಣಾಗಲಿಲ್ಲ: ಜಗದೀಶ ಸಂ.ಗೊರೋಬಾಳ

ಬಹಳ ವರ್ಷಗಳಿಂದ ತಿರುಗದ ತಿಗರಿಯ ಶಬ್ದ ಕೇಳಿ ಮಂಜಯ್ಯನ ಮನಸ್ಸು ಕದಡಿತು. ಯಾವ ಶಬ್ದ ಕೇಳಿ ಮಂಜಯ್ಯ ತನ್ನ ಅರ್ಧಾಯುಷ್ಯ ಕಳೆದನೋ ಆ ಶಬ್ದ ಇಂದು ಮಂಜಯ್ಯನಿಗೆ ಅನಿಷ್ಟವಾಗಿದೆ. ಎದೆಬಡಿತ ಜಾಸ್ತಿಯಾಗಿ, “ಯಾರೇ ಅದು ಸುಗಂಧಿ ತಿಗರಿ ಸುತ್ತೋರು? ನಿಲ್ಸೆ ಅನಿಷ್ಟಾನಾ!” ಎಂದು ಕೂಗುತ್ತಾ ಕಿವಿ ಮುಚ್ಚಿಕೊಂಡನು ಮಂಜಯ್ಯ. ಸುಗಂಧಿ ತಿಗರಿ ಕಡೆ ಹೋಗುವಷ್ಟರಲ್ಲಿ ಶಬ್ದ ನಿಂತಿತ್ತು. ಪಕ್ಕದ ಮನೆಯ ಚಿಕ್ಕ ಹುಡುಗನೊಬ್ಬನು ತಿಗರಿಯನ್ನು ತಿರುಗಿಸಿ ಆಟವಾಡಿ ಸುಗಂಧಿ ಬರುವಷ್ಟರಲ್ಲಿ ಓಡಿ ಹೋಗಿದ್ದನು. ತಿಗರಿ ತಿರುಗಿಸುವುದೆಂದರೆ ಮಕ್ಕಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಲೆನಾಡಿನ ಅಡಿಕೆ ವ್ಯವಸಾಯ ಮತ್ತು ಪರಿಸ್ಥಿತಿ: ಗೀತಾ ಜಿ.ಹೆಗಡೆ, ಕಲ್ಮನೆ.

ಈ ಯುಗಾದಿ ಹಬ್ಬದ ಆಸು ಪಾಸು ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಅಡಿಕೆ ಕೊಯ್ಲು ಬಲು ಜೋರು. ಎಲ್ಲರ ಮನೆ ಅಂಗಳದಲ್ಲಿ ದೊಡ್ಡ ದೊಡ್ಡ ಅಟ್ಟ ನಿರ್ಮಿಸಿ ಅದರ ತುಂಬಾ ಅಡಿಕೆಯ ಹರವು ಕಂಡರೆ ಇನ್ನು ಮನೆ ಒಳಗೆ, ಹೆಂಚಿನ ಮಾಡಿನ ಮೇಲೆ ಎಲ್ಲೆಂದರಲ್ಲಿ ಅಡಿಕೆಯದೇ ದರ್ಬಾರು. ಒಣಗಿಸಲು ಹಾಕಿದ ಗೋಟು ಬಿಸಿಲಿಗೆ ಬಾಡಿ ಮುತ್ತಜ್ಜಿ ಮುಖವಾದರೆ ಇತ್ತ ಹಸಿ ಅಡಿಕೆ ಸೊಲಿದು ಬೇಯಿಸಿ ಒಣಗಿಸಿ ತೊಗರು ಬಣ್ಣದಲ್ಲಿ ಮಿರಿ ಮಿರಿ ಮಿಂಚುತ್ತಾ ಕೆಂಪಡಿಕೆಯೆಂಬ ಹೆಸರು ಪಡೆಯುತ್ತದೆ. ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಖುಷಿಗಳನ್ನ ಕಂಪೇರ್ ಮಾಡಬಾರದು: ಭಾರ್ಗವಿ ಜೋಶಿ

ಏನು ಮಾಡೋದು ಬದುಕಿನಲ್ಲಿ ಖುಷಿಗಿಂತ ಜಾಸ್ತಿ ನೋವು, ಕಷ್ಟಗಳೇ ಇವೆ. ಯಾರಾದ್ರೂ ಒಬ್ಬರಾದ್ರೂ ಪೂರ್ತಿ ಖುಷಿ ಇಂದ ಇರೋ ವ್ಯಕ್ತಿ ಇದ್ದಾರಾ? ಅನ್ನೋ ಪ್ರಶ್ನೆ ನಮ್ನನ್ನು ಕಾಡತ್ತೆ, ಆದ್ರೂ ಜಗತ್ತಲ್ಲಿ ಇರೋ ಎಲ್ರಿಗಿಂತಲೂ ಹೆಚ್ಚಿನ ಕಷ್ಟ ನಮಗೆ ಅಂತ ನಾವೆಲ್ಲ ಅಂದುಕೊಳ್ತೀವಿ. ಯಾಕೆಂದರೆ ನಮ್ಮ ಮುಂದೆ ಇರೋ ಖುಶಿಗಳನ್ನು ಅನುಭವಿಸೋ ಕಲೆ ನಮಗೆ ಗೊತ್ತಿರೋದಿಲ್ಲ. ಅದೇ ಸಮಸ್ಯೆ. ಆ ಕ್ಷಣವನ್ನು ಹಾಗೆ ಅನುಭವಿಸಿ ಬಿಡಬೇಕು. ಕಳೆದುಹೋದ ದಿನಗಳನ್ನು ಮೆಲುಕು ಹಾಕಬೇಕು, ಆದ್ರೆ ಕಂಪೇರೆ ಮಾಡಬಾರದು. ಚಿಕ್ಕವರಿದ್ದಾಗ ಎಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರೋನ ವಿರುದ್ಧ ಗೆದ್ದು ಮತ್ತೊಮ್ಮೆ ಚಪ್ಪಾಳೆ ತಟ್ಟೋಣ: ವೆಂಕಟೇಶ ಚಾಗಿ

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ವ್ಯಾಪಕವಾಗಿ ಕೇಳಿಬರುತ್ತಿರುವ ವಿಷಯ ಕರೋನ ಕುರಿತು. ಕರೋನ ನಿಜವಾಗಿಯೂ ಒಂದು ಸಾಂಕ್ರಾಮಿಕ ಸೋಂಕಾಗಿ ಜಗತ್ತಿನ ತುಂಬಾ ಪಸರಿಸುತ್ತಿದೆ. ಚೀನಾದ ವುಹಾನ್ ನಲ್ಲಿ ಮೊಟ್ಟ ಮೊದಲು ಕಾಣಿಸಿಕೊಂಡ ಈ ವೈರಸ್, ತುಂಬಾ ಅಪಾಯಕಾರಿಯಾಗಿ ಕಂಡದ್ದು ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಸಂಖ್ಯೆಯಿಂದಲೇ. ಜಾಗತಿಕವಾಗಿ ಹಿಂದೆ ಅನೇಕ ವೈರಸ್ಗಳನ್ನು ಕಂಡಿದ್ದ ಚೀನಾ ಕರೋನಾದ ವಿಷಯದಲ್ಲಿ ಜಾಗೃತಿ ಹಾಗೂ ಅದರ ತೀವ್ರತೆಯ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಲು ವಿಳಂಬ ಧೋರಣೆ ಅನುಸರಿಸಿದೆ ಎಂಬುದು ಸ್ಪಷ್ಟ. ಚೀನಾದಲ್ಲಿ ಸಾವಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಚ್ಚಿದ ಕಿಟಕಿ: ಜೆ.ವಿ.ಕಾರ್ಲೊ

ಇಂಗ್ಲಿಷಿನಲ್ಲಿ: ಆಂಬ್ರೊಸ್ ಬಿಯರ್ಸ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ಇದು 1830ರ ಮಾತು. ಅಮೆರಿಕಾದ ಒಹಾಯೊ ರಾಜ್ಯದ ಸಿನ್ಸಿನಾಟಿ ನಗರದಿಂದ ಕೊಂಚ ದೂರದಲ್ಲಿ ಅಂತ್ಯವೇ ಕಾಣದಂತ ವಿಸ್ತಾರವಾದ ದಟ್ಟ ಕಾಡು ಹಬ್ಬಿತ್ತು. ಈ ಕಾಡಿನ ಸರಹದ್ದಿನಲ್ಲಿ ನೆಲೆಸಿದ್ದ ಕುಟುಂಬಗಳಲ್ಲಿ ಬಹಳಷ್ಟು ಜನ ಹೊಸ ಬದುಕನ್ನು ಹುಡುಕಿಕೊಂಡು ಮತ್ತೂ ಮುಂದೆ ಹೋಗಿದ್ದರು. ಹಾಗೆ ಉಳಿದವರಲ್ಲಿ ಅವನೊಬ್ಬ ಕಾಡಿನ ಅಂಚಿನಲ್ಲೊಂದು ಮರದ ದಿಮ್ಮಿಗಳ ಗುಡಿಸಲೊಂದನ್ನು ಕಟ್ಟಿಕೊಂಡು ವಾಸಿಸುತ್ತಿದ್ದ. ನಾನು ನೋಡಿದಂತೆ ಎಂದೂ ನಗೆಯಾಡದ, ಯಾರೊಂದಿಗೂ ಬೆರೆತು ಮಾತನಾಡದ ಅವನು ಆ ನಿಶ್ಶಬ್ಧ ಕತ್ತಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಮಾವು -ಬೇವು, ಚಿಗುರಿ, ಧವಸ-ಧಾನ್ಯ ತುಂಬಿರಲು, ವರುಷದ ಆದಿ ಯುಗಾದಿ, ಅದುವೇ ಚೈತ್ರದ ತೊಟ್ಟಿಲು..!! ಬೇವು -ಬೆಲ್ಲವ ಸವಿದು, ಹೋಳಿಗೆ ಹೂರಣ ನೈವೇದಿಸಿ; ಮನೆ -ಮನೆಗೂ ಕಟ್ಟಿದ ಹಸಿರು ತೋರಣ…! ಅದುವೇ ಚೈತ್ರದ ತೊಟ್ಟಿಲು..! ಕಹಿ-ನೆನಪು ಅಳಿದು; ಇರಲಿ ಮಧು-ಮಧುರ ನೆನಪು.. ವರುಷವೆಲ್ಲಾ ಇರಲಿ ಸಂತಸ..! ಅದುವೇ ಚೈತ್ರದ ತೊಟ್ಟಿಲು..!! ನೇಗಿಲ ಹಿಡಿವ ಸಂಭ್ರಮ; ಆಗಾಗ ಮುಂಗಾರು ಸಿಂಚನ.., ರೈತನ ಮೊಗದಲ್ಲಿ ಆಶಾ ಕಿರಣ .! ಅದುವೇ ಚೈತ್ರದ ತೊಟ್ಟಿಲು.. !! ಯುಗಾದಿ ಚಂದ್ರ ದರ್ಶನ; ಪಾಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರಾಗ ಅನುರಾಗಕ್ಕೆ ಒಗ್ಗಿಕೊಂಡ ಕವಿತೆಗಳು “ಅಳಿದ ಮೇಲೆ”: ಅಶ್ಫಾಕ್ ಪೀರಜಾದೆ.

ವಿಷಯ ವೈವಿಧ್ಯತೆಗಳಿಂದ ಕೂಡಿದ ಒಟ್ಟು ನಾಲವತ್ತಾರು ಕವನಗಳು ಮತ್ತು ಐವತ್ತು ಹನಿಗವನಗಳಿಂದ ಸಂಕಲಿತಗೊಂಡ ಕವನ ಸಂಕಲನ “ಅಳಿದ ಮೇಲೆ”. ಇದು ಪ್ರೇಮಾನಂದ ಶಿಂಧೆ ಅವರ ಚೊಚ್ಚಿಲು ಕೃತಿ. ಕೃತಿಯ ಕುರಿತು ಪ್ರಸ್ತಾವನೆ ಮಂಡಿಸಿರುವ ಸಾಹಿತಿ ಮಾರ್ತಾಂಡಪ್ಪ ಕತ್ತಿ ” ಪ್ರತಿ ಮನುಷ್ಯ ಇತರೆಲ್ಲ ಆಯಾಮಗಳಿಗಿಂತಲೂ ಕವಿತೆಗೆ, ಹಾಡಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾನೆ. ಮಾತಿನಲ್ಲಿ ಹೇಳಲು ಅಸಾಧ್ಯವಾದುದನ್ನು ಕವಿತೆಯ ಮೂಲಕ ಹೊರ ಹಾಕಲು ಸಾಧ್ಯ. ಇದು ಕವಿತೆಗಿರುವ ಶಕ್ತಿ ಮತ್ತು ಆಕರ್ಷಿಸುವ ಗುಣ. ಅನಿವರ್ಚನೀಯವಾದ ಕವಿತೆ ಜೀವನದ ಅತ್ತ್ಯುತ್ತಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮ ಷರತ್ತು: ಸುಜಾತ ಕೋಣೂರು

ಕುಶಲ ಶಿಲ್ಪಿಯ ಕಲೆಯ ಸಾಕಾರವೆಂಬಂತೆ ಅಲಂಕಾರಿಕ ಕಂಬಗಳು. ಈಗ ತಾನೆ ಗರಿಗೆದರಿ ನರ್ತಿಸುವುದೇನೋ ಎಂಬಂತೆ ನವಿಲು, ಹಂಸಗಳು ತೇಲುವ ಸುಂದರ ಸರೋವರ ನಿಜವಾದುದೇ ಎನಿಸುವಂತೆ, ಕಾಳಿದಾಸ ಕಾವ್ಯದ ಶೃಂಗಾರ ಜೋಡಿ ದು:ಶ್ಯಂತ ಶಕುಂತಲಾರ ಏಕಾಂತದ ಹೂವಿನ ಉಯ್ಯಾಲೆ, ಸುತ್ತಲೂ ಹಸಿರು ವನದ ದೃಶ್ಯಾವಳಿಗಳನ್ನು ಚಿತ್ರಿಸಲಾಗಿರುವ ಸುಂದರ ಭಿತ್ತಿಗಳು. ಕಾಲಡಿಗೆ ಮಕಮಲ್ಲಿನ ಮೆತ್ತನೆ ಹಾಸು. ಬಣ್ಣ ಬಣ್ಣದ ಹೂವಿನ ಅಲಂಕಾರ ತುಂಬಿಕೊಂಡಿರುವ ಚಿನ್ನ ಲೇಪನದ ಕಿಟಕಿ ಮತ್ತು ಬಾಗಿಲಿನ ಚೌಕಟ್ಟುಗಳು. ಹೊಸ್ತಿಲಿಗೆ ಸುಂದರ ರಂಗೋಲಿ.ಕುಸುರಿಯ ರೇಶಿಮೆಯ ಮೇಲುಹೊದಿಕೆಯ ಪಲ್ಲಂಗಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾನಸಿಕವಾಗಿ ಸಿದ್ದರಾಗಿ: ಸಿಂಧು ಭಾರ್ಗವ್ ಬೆಂಗಳೂರು

ಸನ್ನಿವೇಶ ೧: ಮಾಲತಿ ಮದುವೆಯಾಗಿ ಮೂರು ತಿಂಗಳೊಳಗೆ ಹೆತ್ತವರಿಗೆ ಸಿಹಿಸುದ್ದಿ ತಲುಪಿಸುವ ಬದಲು ತವರು ಮನೆಯವರು ಮದುವೆ ದಿನ ನೀಡಿದ ಬಳುವಳಿಯ ಸೂಟ್ ಕೇಸ್ ಅನ್ನು ಹಿಡಿದುಕೊಂಡು ತಾಯಿ ಎದುರು ನಿಂತಿದ್ದಳು‌. ದಿಗ್ಭ್ರಮೆಗೊಂಡ ತಾಯಿ, ಅವಳನ್ನು ಕೂರಿಸಿ ನಿಧಾನವಾಗಿ ವಿಚಾರಿಸಿ ಕೇಳಿದಾಗ, ಮಾಲತಿ ತನ್ನ ನೋವಿನ ಕಥೆಯನ್ನು ಒಂದೊಂದಾಗಿ ಬಿಡಿಸಿ ಹೇಳತೊಡಗಿದಳು‌ .ಮರುಗಟ್ಟಿದ್ದ ನೋವನ್ನೆಲ್ಲ ಜೋರಾಗಿ ಅತ್ತು ಕಣ್ಣೀರು ಸುರಿಸಿ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಂಡಳು. ಸಿಟ್ ಔಟ್ ನಲ್ಲಿ ಕೂತಿದ್ದ ತಂದೆಗೆ ತಲೆಯ ಮೇಲೆ ಬಂಡೆಕಲ್ಲು‌ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 10): ಎಂ. ಜವರಾಜ್

೧೦- ಅವ್ವಾ..ಅವ್ವಾ..ನೀ ಏಳವ್ವಾ.. ಶಂಕ್ರಪ್ಪೋರು ಅಳಳ್ತ ಅಳಳ್ತ ನೀಲವ್ವೋರು ವಾಲಾಡ್ತ ಗೋಳಾಡ್ತ ಅಯ್ನೋರ ಕಣ್ಣು ಕೆಂಪಗಾಗ್ತ  ಉರಿ ಉರಿ ಉರಿತಾ ಮೊರಿತಾ ಓಡೋಡಿ ಕಾಲೆತ್ತಿ ಜಾಡಿಸಿ ಒದ್ದನಲ್ಲೊ ಆ ಶಂಕ್ರಪ್ಪೋರು ಮಾರ್ದೂರ ಬಿದ್ದು ಅಯ್ಯಪ್ಪೋ ಅಂತ ಸೊಂಟ ಹಿಡ್ದು  ಆ ನೀಲವ್ವ ಬಿದ್ದ ಮೋರಿಗೇ ಬಿದ್ದು  ಕೊಸರಾಡ್ತ ಇದ್ದನಲ್ಲೊ…. ನನ್ನೆಡ್ತಿ ಮುಟ್ಟಕೆ  ನೀಯಾವನಲೇ ಬಂಚೊತ್ ಲೌಡೆ ಬಂಚೊತ್… ಆ ನೀಲವ್ವ ತವಿತಾ ಕೈ ಚಾಚ್ತ ಶಂಕ್ರಾ.. ಶಂಕ್ರಾ ಅಂತ ಕೂಗ್ತ ಹತ್ರತ್ರ ಬಂದ್ಲಲ್ಲೊ.. ಅಯ್ನೋರು ನನ್ ಮೆಟ್ಟೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉತ್ತರ-ಅನುತ್ತರ-ನಿರುತ್ತರಗಳ ಜೊತೆಗೊಂದು ಪ್ರತ್ಯುತ್ತರ: ಹೆಚ್ ಎನ್ ಮಂಜುರಾಜ್, ಮೈಸೂರು

ಎಲ್ಲ ಪ್ರಶ್ನೆಗಳಿಗೂ ಉತ್ತರವಿಲ್ಲವೆಂಬುದು ಗೊತ್ತಿದ್ದರೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ. ನನ್ನ ಮಟ್ಟಿಗೆ ಪ್ರಶ್ನೆಗಳನ್ನು ಇನ್ನೊಬ್ಬರಿಗೆ ಕೇಳುವುದಲ್ಲ; ನಮ್ಮಲ್ಲಿಯೇ ಕೇಳಿಕೊಳ್ಳುವುದು ಹೆಚ್ಚು ಸರಿ. ಆಗ ಪ್ರಶ್ನೋತ್ತರಗಳೆರಡೂ ನಮ್ಮವೇ ಆಗಿರುತ್ತವೆ. ಇದರಿಂದ ಮೊದಲಿಗಿಂತ ಹೆಚ್ಚು ‘ಎಚ್ಚರ’ದ ಸ್ಥಿತಿಯನ್ನು ಹೊಂದಬಹುದು. ಇರಲಿ. ಆಚಾರ್ಯ ರಜನೀಶರು ಚಾಂಗ್ ತ್ಸು ಕುರಿತು ಕೊಟ್ಟ ಡಿಸ್‍ಕೋರ್ಸ್- ಪುಸ್ತಕದ ಹೆಸರು ಶೂನ್ಯ ನಾವೆ-ಇದರಲ್ಲೊಂದು ಪ್ರಸಂಗ ಉಲ್ಲೇಖಿತವಾಗಿದೆ: ನಾವೆಯೊಂದರಲ್ಲಿ ಕುಳಿತು ಒಬ್ಬರೇ ವಿಹರಿಸುತ್ತಿರುವಾಗ, ಹಿಂದಿನಿಂದ ಇನ್ನೊಂದು ನಾವೆ ಏಕ್‍ದಂ ಡಿಕ್ಕಿ ಹೊಡೆದಾಗ ಮನದಲ್ಲುದಿಸುವ ಭಾವ: ವ್ಯಗ್ರತೆ ಮತ್ತು ಅಸಹನೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಮ್ಮಲ್ಲಿರುವ ಮೌಢ್ಯತೆ: ಷೌಕತ್‌ ಅಲಿ, ಮದ್ದೂರು

ವಿಜ್ಞಾನಯುಗ, ಕಂಪ್ಯೂಟರ್‍ಯುಗ, ಹೊಸ ಹೊಸ ಆವಿಷ್ಕಾರಗಳ ಹೊಸ ಮಾಧ್ಯಮಗಳ ಪರಿಚಯ, ದಿನ ನಿತ್ಯ ಅನೇಕ ಸುದ್ದಿಗಳು ನಮ್ಮನ್ನು ನಮ್ಮ ಬುದ್ಧಿಶಕ್ತಿಯನ್ನು ಸೇರಿ, ಮಾನವ, ಯಂತ್ರ ಮಾನವನ್ನಾಗಿಸಿದ್ದೇವೆ. ನಾವು 21ನೇ ಶತಮಾನಕ್ಕೆ ಸಮೀಪಿಸುತ್ತಿದ್ದು ಈ ಯುಗ ಯುಗಾಂತರದಲ್ಲಿ ನಾವು ನಮ್ಮೊಡನೆ ಒಂದು ಗಂಟು ಉಳಿಸಿಕೊಂಡೇ ಬಂದಿದ್ದೇವೆ. ಆ ಗಂಟು ಬೇರೇನಲ್ಲ ನಮ್ಮಲ್ಲಿರುವ ಮೌಢ್ಯತೆ, ಮೂಢನಂಬಿಕೆಗಳಿಂದ ನಮ್ಮ ಬದುಕಿನ ಆಚಾರ ವಿಚಾರ ಅಳತೆ ಮಾಡುವುದು, ಭಯದ ವಾತಾವರಣ ಸೃಷ್ಟಿಕೊಳ್ಳುವುದು. ಬದುಕಿನ ವಿನಾಶಗೊಳಿಸುವುದು ಈ ಎಲ್ಲಾ ಅಂಶಗಳು ನಮ್ಮ ಕಲ್ಪನೆಯಿಂದ ಬಂದದ್ದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ವಗತ: ನಾಗರೇಖಾ ಗಾಂವಕರ

ಎರಡನೇಯ ಗರ್ಭವೂ ಹೆಣ್ಣೆಂದು ಗೊತ್ತಾಗಿದೆ. ಗಂಡ ಆತನ ಕುಟುಂಬ ಸುತಾರಂ ಮಗುವನ್ನು ಇಟ್ಟುಕೊಳ್ಳಲು ತಯಾರಿಲ್ಲ. ತಾಯಿಯೊಬ್ಬಳು ಒತ್ತಾಯದ ಗರ್ಭಪಾತಕ್ಕೆ ಸಿದ್ಧಳಾಗಿ ಕೂತಿದ್ದಾಗಿದೆ, ತಾಯಿಯ ಗರ್ಭದೊಳಗಿನ ಭ್ರೂಣ ಬಿಕ್ಕಳಿಸುತಿದೆ. ಅಯ್ಯೋ! ಅವರು ಬಂದೇ ಬರುತ್ತಾರೆ. ನನ್ನನ್ನು ಕತ್ತರಿಸಿ ಹೊರಗೆಸೆಯಲು. ಅವರಿಗೇನೂ ಅದು ಹೊಸತಲ್ಲ. ಆದರೆ ನನ್ನಮ್ಮನಿಗೆ ನಾನು ಏನೂ ಅಲ್ಲವೇ? ಅವಳ ರಕ್ತದ ರಕ್ತ ನಾನು. ಅವಳ ಮಾಂಸದ ಮುದ್ದೆ ನಾನು. ಅಮ್ಮ ದಯವಿಟ್ಟು ಹೇಳಮ್ಮ. ಅವಳಿಗೆ ನನ್ನ ದನಿ ಕೇಳುತ್ತಿಲ್ಲವೇ? ಅಮ್ಮನ್ಯಾಕೆ ಮೂಕಿಯಾಗಿದ್ದಾಳೆ.. ಸಪ್ಪಗಿದ್ದಾಳೆ.. ನನಗೆ ಗೊತ್ತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಗವನ್ನೆ ಒಂದು ತುರ್ತು ನಿಗಾ ಘಟಕವನ್ನಾಗಿಸಿದ ಧನದಾಹಿಗಳು: ಎಂ.ಎಲ್‌.ನರಸಿಂಹಮೂರ್ತಿ

ಪರಿಸರದ ಎಚ್ಚರಿಕೆ ಮಳೆಗಾಲದಲ್ಲಿ ಪ್ರವಾಹಗಳು, ಬೆಟ್ಟಗುಡ್ಡ ಕುಸಿತಗಳ ಮೂಲಕ ನೀಡಿತ್ತು. ಆ ಸಂದರ್ಭದಲ್ಲಿ ನಾವೆಲ್ಲ ಮಾನವೀಯತೆಯ ಮಹಾ ಸಾಗರವನ್ನೆ ಹರಿಸಿದೆವು. ನೆರೆ ಸಂತ್ರಸ್ತರಿಗೆ ಆಹಾರ,ಬಟ್ಟೆ, ವಸತಿ ಕೊಡಿಸುವಲ್ಲಿ ಕೈಯಲ್ಲಾದ ಮಟ್ಟಿಗೆ ಜೊತೆಯಾದೆವು. ಆದರೆ ಬುದ್ದಿ ಕಲಿಯದ ನಾವು ಮತ್ತೆ ಮತ್ತೆ ಅದೆ ಕೃತ್ಯಗಳನ್ನು ಮುಂದುವರೆಸುತ್ತಾ ಪರಿಸರದ ಮೇಲಿನ ಹಲ್ಲೆ ಮಾತ್ರ ನಿಲ್ಲಿಸಲಿಲ್ಲ. ಈಗ ಚಳಿಯಿಂದ ಬೇಸಿಗೆ‌ ಕಾಲಕ್ಕೆ ಬಂದೆವು. ಕೊರೋನಾದಂತಹ‌ ಮಾರಕ ಸೋಂಕುಗಳು ಬಂದಾಗಲೂ ಪರಿಸರದ ಬಗ್ಗೆ ಯಾವೊಬ್ಬನೂ‌ ಚಕಾರ ಎತ್ತುತ್ತಿಲ್ಲ. ಬದಲಾಗಿ ಕೈ ತೊಳಿ, ಬಾಯಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆರು ವರ್ಷದ ಬಾಲ ಪ್ರತಿಭೆ ಕುಮಾರಿ ಮೈತ್ರಿ : ನಿಯಾಜ್ ಪಡೀಲ್

ವಯಸ್ಸು ಆರು ಸಾಧನೆ ನೂರಾರು ಮಾಡಿದ ಬೇಲೂರಿನ ನಾಟ್ಯ ಶಾಂತಲೆ, ನಾಟ್ಯ ಮಯೂರಿ ಕುಮಾರಿ ಮೈತ್ರಿ ಎಸ್ ಮಾದಗುಂಡಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತು ಎಷ್ಟು ಸತ್ಯ. ಈ ಪದವನ್ನು ಕೇಳಲು ಹಿತ ಅನ್ನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ. ಇಂದಿನ ಬಾಲ ಪ್ರತಿಭೆಗಳಿಗೂ ಈ ಮಾತು ಹೊಂದಿಕೆಯಾಗುತ್ತದೆ. ಅದೆಷ್ಟೋ ಬಾಲ ಪ್ರತಿಭೆಗಳು ನಮ್ಮ ನಿಮ್ಮ ನಡುವೆ ಇದ್ದಾರೆ. ಅಂತಹ ಪ್ರತಿಭೆ ಬೇಲೂರಿನ ಆರು ವರ್ಷದ ಬಾಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೋಲಿಕೆಗಳು ಮಕ್ಕಳನ್ನೇ ಆಗಲಿ ಮನಸ್ಸುಗಳನ್ನೇ ಆಗಲಿ ಸೋಲಿಸಿ ಬಿಡುತ್ತವೆ.: ನಿಮ್ಮೊಳಗೊಬ್ಬ ನಾರಾಯಣ

ನೋಡು ಅವರು ಹೇಗಿದ್ದಾರೆ ಈ ಮಾತು ಉದಾಹರಣೆಗೆ ಆದರೆ ಸ್ವಲ್ಪ ಮಟ್ಟಿಗೆ ಸರಿ ಆದರೆ ಪದೇಪದೇ ಇದೆ ಒಂದು ಆಯುಧವಾದರೆ. ನಾವು ನಮ್ಮಲ್ಲಿರುವ ಬಲವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಕಲ್ಲಿನಲ್ಲಿ ಒಂದು ವೈಶಿಷ್ಟ್ಯ ಇರುತ್ತದೆ. ಅದನ್ನು ಗುರುತಿಸುವ ಜಾಣ್ಮೆ ನಮಗಿರಬೇಕು. ಶಾಲೆಯಲ್ಲಿ ಓದಿ ಉತ್ತಮ ಅಂಕಗಳನ್ನು ಗಳಿಸುವುದು ಮಕ್ಕಳ ಕರ್ತವ್ಯ. ಹಾಗೆಯೇ ಕೆಲಸದಲ್ಲಿ ಉನ್ನತ ಮಟ್ಟ ತಲುಪಿ ಉತ್ತಮ ಸಂಪಾದನೆ ಮಾಡುವುದು ನಮ್ಮ ಕರ್ತವ್ಯ. ಆದರೆ ಆ ಕ್ಷೇತ್ರಗಳಲ್ಲಿ ಉತ್ತಮ ಮಟ್ಟ ತಲುಪಬೇಕೆಂಬ ನಿರೀಕ್ಷೆ ನಮ್ಮ ಒತ್ತಡಗಳಿಂದಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರೋನ ಕರೋನ- ಮನೆಯಲ್ಲಿ ಇರೋಣ!: ಸಹನಾ ಪ್ರಸಾದ್‌

ಮಾಸ್ಕ್ ಗಳನ್ನು ಕರೊನ, ಕರೊನ ಅಂತ ಮಾರುತ್ತಿದ್ದ ವೀಡಿಯೊ ಎಲ್ಲರೂ ನೋಡಿದ್ದಾರೆ. ಕರೊನ ವಿರುದ್ಧ ಹೋರಾಡಲು ಬೇಕಾದ ಅವುಗಳನ್ನೇ ಕರೊನ ಎಂದು ಕರೆದು ಒಂದು ತಮಾಷೆಯ ನೋಟವಾಗಿಸಿದ ಅವನ ಮನಸ್ಸಲ್ಲಿ ಏನಿತ್ತೋ? ” ಅಬ್ಬಾ, ಈ ಮಕ್ಕಳಿಗೆ ರಜೆ ಕೊಟ್ಟುಬಿಟ್ಟರಲ್ಲಾ, ಇನ್ನು ೩ ತಿಂಗಳು ಇವರನ್ನು ಹಿಡಿದಿಟ್ಟುಕೊಳ್ಳುವುದು ಹೇಗಪ್ಪಾ? ಮ್ಯೂಸಿಕ್ ಕ್ಲಾಸ್ ಇಲ್ಲ, ಸ್ವಿಮ್ಮಿಂಗ್ ತರಗತಿಗಳಿಲ್ಲ, ಸಮ್ಮರ್ ಕ್ಯಾಂಪುಗಳು ರದ್ದು. ನೆನೆಸಿಕೊಂಡರೆ ಭಯ ಆಗುತ್ತೆ” ಇದು ಬಹಳಷ್ಟು ತಾಯಂದಿರ ಅಳುಕು. ಹೌದು. ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಬಲು ಕಷ್ಟ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಿರಿಯರು ಹೇಳಿಕೊಟ್ಟ ನಾವು ಬಿಟ್ಟ ಆಚರಣೆಗಳು: ಶೀಲಾ. ಎಸ್. ಕೆ.

ಅಜ್ಜಿ ಹೇಳಿಕೊಟ್ಟ ಮಾತದು, ನಾವು ಕಲಿಯಲಿಲ್ಲ. ನಮ್ಮ ಹಿರಿಯರ ಮಾತಿನಲ್ಲಿ ಉದ್ದೇಶ, ಪ್ರಯೋಜನ ಹುಡಿಕಿದ ನಾವು, ಹಿಂದೆ ಮುಂದೆ ನೋಡದೆ ಉದ್ದೇಶ, ಪ್ರಯೋಜನ ಕೇಳದೆ, ತಿಳಿಯದೆ ಹೊರಗಡೆ ಅಂತರ್ರಾಷ್ಟ್ರೀಯ ಆಚರಣೆಗಳನ್ನು ಅಪ್ಪಿಕೊಂಡೆವು . ನಿಜ, ನಮ್ಮ ಹಿರಿಯರು ಅವರ ಆಚರಣೆಗೆ ಪ್ರಯೋಜನ, ಉದ್ದೇಶಗಳನ್ನು ಬರೆದಿಡಲು ಅಥವಾ ಮುಂದಿನ ಪೀಳಿಗೆಗೆ ಹೇಳಲು ಸೋತರು ಆದ್ರೆ ತಪ್ಪಾಗಿರಲಿಲ್ಲ. ಈಗ ಕೊರೋನ ಎಂಬ ವೈರಸ್‌ ಪ್ರಪಂಚ ನುಂಗಲಾರಂಭಿಸಿದೆ. ಪ್ರಪಂಚ ನಮ್ಮ ಹಿರಿಯರ ಆಚರಣೆ, ಅನುಸರಣೆಗಳನ್ನು ಅಪ್ಪುತ್ತಿವೆ. ಈಗ ಬೇರೆಯವರು ಹಿಂದಿನ ಆಚರಣೆಗಳತ್ತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯುಗಾದಿಯೋ ಯುಗಾಂತ್ಯವೋ?: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ಯುಗಾದಿ ಬರುತ್ತಿದ್ದಂತೆ ” ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ” ಎಂಬ ದ ರಾ ಬೇಂದ್ರೆಯವರ ಪ್ರಸಿದ್ದ, ಜನಪ್ರಿಯ ನಿತ್ಯನೂತನ ಗೀತೆ ಪ್ರತಿ ವರುಷ ನೆನಪಾಗುವುದು. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತಂದು ಹೊಸತೆಂಬಂತೆ ಯುಗಾದಿ ಗೋಚರಿಸಿದರೆ ಈ ಗೀತೆಯೂ ಹೊಸತೆಂಬಂತೆ ಹಾಡಿಸಿಕೊಳ್ಳುವುದು. ಹೊಸತೆಂಬ ಯುಗಾದಿ ಸುಂದರವೂ ಹಿತಕಾರಿಯೂ ಮನಮೋಹಕವು ಆಗಿರುವುದರಿಂದ ಇಷ್ಟವಾಗುವುದು! ಚೈತ್ರಮಾಸದಲ್ಲಿ ಇಡೀ ಪ್ರಕೃತಿಯೇ ಹರಿದ ಹಾಳಾದ ತೂತುಬಿದ್ದ ಅಂದಗೆಟ್ಟ ಎಲೆಗಳೆಂಬ ಹಳೆ ಕೊಳೆ ಮಲಿನ ಉಡುಪು ಇಲ್ಲವಾಗಿಸಿಕೊಂಡು ಹೊಸ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯುಗಾದಿ ವಿಶೇಷಾಂಕಕ್ಕೆ ಬರಹ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಸಹಕಾರದಿಂದ ಪಂಜು ತನ್ನ ಎಂಟನೇ ವರ್ಷದ ಯುಗಾದಿಯ ಸಂಭ್ರಮದಲ್ಲಿದೆ. ಕಳೆದ ವರ್ಷಗಳಂತೆ ಈ ಬಾರಿಯೂ ಯುಗಾದಿ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ಮಾರ್ಚ್ 23 ರ ಸಂಜೆಯೊಳಗೆ ನಮಗೆ ತಲುಪಲಿ… ನಿಮ್ಮ ಬರಹಗಳನ್ನು editor.panju@gmail.com ಮತ್ತು smnattu@gmail.com ಮೇಲ್ ಐಡಿಗಳಿಗೆ ಕಳುಹಿಸಿಕೊಡಿ. ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ… … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ