ಫ್ರಾನ್ಜ್ ಕಾಫ್ಕನ ತಪೋಸ್ಥಲ: ಕೀರ್ತಿ. ಪಿ

keerthy-p

ಜಗತ್ತಿನ ಪ್ರತಿಯೊಂದು ಕತೆ, ಕಾದಂಬರಿಯೂ ಏನೋ ಒಂದು ಸಾರಾಂಶವ ಹೇಳಲು ಹೊರಟಿರುತ್ತದೆ. ತನ್ನ ಕಾವ್ಯಾನುಶಕ್ತಿಯ ಮೀರಿ ಕವಿ ಬರೆಯಲು ಹೋದಾಗ ಕವಿಗೆ ಕಾವ್ಯ ಹೊಸತು, ನಿರ್ಧಾರ ಸ್ಪಷ್ಟವಾಗುತಾ ಹೋಗುತ್ತದೆ. ಕವಿ ಹೀಗೆಯಿರಬೇಕೆಂಬ ಇರಾದೆ, ತಗಾದೆಯೂ ಇಲ್ಲ, ತನ್ನ ಅರ್ಥಪೂರ್ಣ ಕತೆಯ ಚಿತ್ರಿಸಲು ಕವಿಗೆ ಹೊಳೆದದ್ದನ್ನು ಹೇಳಿ ಮುಗಿಸಿ ಬಿಡುತ್ತಾನೆ.

ಕಾವ್ಯ ತಪಸ್ಸು, ತಪಸ್ಸಿಲ್ಲದ ವ್ಯಕ್ತಿಗೆ ಕಾವ್ಯ ದಕ್ಕುವುದು ಕಷ್ಟ. ಓದು, ಜ್ಞಾನ, ತಾಳ್ಮೆ, ಪ್ರೀತಿ, ಸಹನೆ, ತಪಸ್ಸು, ಏಕಾಂತ, ಧ್ಯಾನ, ವಿಭೂತಿಯ ವಿಭಾವ, ಭಾವನಾತ್ಮಕ ಮನೋಭಾವ ಬಹುಮುಖ್ಯ! ಭಗರಥನ ತಪಸ್ಸಿನಂತೆ ಕವಿ ಧ್ಯಾನದಲ್ಲಿರಬೇಕು! ಕಾವ್ಯಗಂಗೆಯಂತೆ ಬರಬೇಕಾದರೆ, ಕಾವ್ಯತ್ವ ಕಬ್ಬಿಗನ ಕೈ ಹಿಡಿದು ಕುಣಿಯಬೇಕು. ಹೀಗೆ ಕಾವ್ಯದ ಬಗ್ಗೆ ಮಾತನಾಡುತಾ ಹೋದಪೆ ಸಾಲುಗಳು ಸಾಲದು, ಪದಗಳಿಗೂ ಆಸ್ವಾಶನೆಯೂ ಬಾರದು !

ತುಂಬಾ ಬೇಸರದಿಂದ ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಳಿತು, ಹಕ್ಕಿಯ ಇಂಚರವ ಕೇಳುತಾ ಕುಂತೆ ! ಈಗೀನ ರಸ್ತೆಯಲ್ಲಿ ಬರೀ ಬಸ್ಸು, ಸ್ಕೂಟರ್, ಲಾರಿಗಳ ಆರ್ತನಾದಕ್ಕೆ ಹಕ್ಕಿಗಳ ಬ್ರಹ್ಮನಾದ ಅಡಗಿ ಹೋಗಿದೆ ! ಮಲೆನಾಡು ತನ್ನ ಸೊಬಗು ಕಳೆದುಕೊಂಡು ಬಯಲುನಾಡು ಆಗುತ್ತಿರುವುದು ಶೋಕನೀಯ! ಹರಟೆಹಕ್ಕಿಯಂತೆ ಮನುಷ್ಯನ ಜೀವನ, ತುಣುಕಾದರೂ ಸಾರ್ಥಕ ಬೇಡವೇ ? ಬರೀ ಅವನ ಸ್ವಾರ್ಥದ ಆಸೆಗೆ ಬಲಿಕೊಡುವ ಹೀನಜೀವಿಗಳಲ್ಲಿ ಮನುಷ್ಯಜೀವಿಯ ಪಾತ್ಕ ಬಹುಮುಖ್ಯವಾಗಿ ನನಗೆ ತೋರುತ್ತದೆ!

ನನ್ನ ಸ್ಟಡಿ ಟೇಬಲ್ ಮೇಲೆ ಇಟ್ಟಿದ್ದ " ದಿ ಮೆಟಮಾರ್ಫ್ ಸಿಸ್ " ಕಣ್ಣಿಗೆ ಬಿತ್ತು ! ಓದೋಣ ಎಂದನು, ಹಾಳೆ ತೆಗೆಯುತ್ಕಾ ಹೋದೆ ! ಹೊಸ ಹೊಸ ಆಯಾಮ ಪರಿಚಯವಾಯ್ತು ! ಪ್ರಾಣಿ, ಪಕ್ಷಿ, ಕ್ರೀಮಿ ಕೀಟಗಳೊಂದಿಗೆ ಬರೆದ ಸಾಹಿತ್ಯಗಳು ನಮ್ಮ ಕನ್ನಡ ಸಾಹಿತ್ಯದಲ್ಲಿ ಕಡಿಮೆ ! ಕಾದಂಬರಿ ಓದುತ್ತಾ ಓದುತ್ತಾ ಹೊಸಲೋಕವ ತೆರೆದು ಸ್ವಾರ್ಥದ ಬದುಕ ತೆರೆದು ಕೊಟ್ಟಿತ್ತು !

ಅರೆರೇ,

ಇದೊಂದು ಕತೆಯೇ ? ಬಲುರೋಚಕವಾಗಿದೆಯಲ್ಲ ಇರು ಓದೋಣ ಇವತ್ತು ಊಟ ಬಿಟ್ಟು ! ಅಂತಾ ಸುಮಾರು ೩ ಗಂಟೆಗಳ ಕಾಲ ಓದಿದೆ ! ಓದ ನಂತರ ಈ ಕವಿಯ ವಿಚಾರವೇನು ? ಎಲ್ಲಿಯವನು ? ಅಪೂರ್ಣ ಕಾದಂಬರಿಯಾಗಿದೆಯಲ್ಲಾ ? ಒಂದು ಕತೆಯ ಪುಸ್ತಕಕ್ಕೆ ಎರಡು ಹೆಸರೇ ? ಎಂದು ಆಲೋಚಿಸುತ್ತಾ,  ಗೂಗಲ್ ಮಾಡಿ ನೋಡಿದೆ !

ಕವಿಯ ವಿವರ ಹೀಗೆ ತೋರಿಸಿತ್ತು !

ಕವಿಯ ಹೆಸರು ಫ್ರಾನ್ಜ್ ಕಾಫ್ಕ, ಇವನು ೧೮೮೩ರ ಜೂಲೈ ೩ ರಂದು ಜನಸಿದ. ತಂದೆ -ತಾಯಿ ಯೆಹೂದಿಯರು. ತಂದೆಯ ಕೋಪಿಷ್ಟವಾದ ಮಾತು, ನಡೆತೆಯಿಂದ ಕವಿ ತುಂಬಾ ಮುಜಗರ, ಮೃದು ಸ್ವಭಾವದಿಂದ ಬೆಳೆದ! ಆದರೂ ತಾಯಿಗಿಂತ ತಂದೆಯ ಮೇಲೆ ಅಪಾರ ಪ್ರೀತಿ, ಭಯಗಳನ್ನು  ತನ್ಮಕಥೆಗಳ ಮೂಲಕ ನಮೂದಿಸಿದ್ದಾನೆ. ೧೯೦೬ ರಲ್ಲಿ ಜರ್ಮನ್ ವಿಶ್ವವಿದ್ಯಾಲದಿಂದ ನ್ಯಾಯಶಾಸ್ತ್ರದಲ್ಸಿ ಡಾಕ್ಟರ್ ಪಡೆದು, " ಕಾಪ್ಮಿಕರ ಅಪಘಾತ ವಿಮಾ ಸಂಸ್ಥೆ"ಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿಕೊಂಡ. ತನಗೆ ಇಷ್ಟವಿಲ್ಲದಿದ್ದರೂ ಕಾರ್ಯದಲ್ಲಿ ನಿಫುಣನಾಗಿದ್ದ.

ಬರವಣಿಗೆ ಬರೆಯುತ್ತಾ ಅವನಿಗೆ ಬರಹವೊಂದು ಸಾಧನವಾಯಿತು ! ಮುಂದೆ ಲೇಖನಗಳ ಬರೆದು ಜರ್ಮನ್ ಪತ್ರಿಕೆಗಳಿಗೆ ಕಳುಹಿಸಿದ, ಕೆಲವು ಪ್ರಕಟವಾದವು ಕೆಲವು ಪ್ರಕಟವಾಗಲಿಲ್ಲ. ಬರವಣಿಗೆಯಿಂದ ಅವನಿಗೆ ಅತೃಪ್ತಿಯಾದರೂ ಬರೆಯುವುದನ್ನು ನಿಲ್ಲಿಸಲಿಲ್ಲ! ಬ್ರಹ್ಮಚಾರಿ ಬದುಕಿದ ಅವನ ಜೀವನ ಹೇಳಕೂಡದು, ಸಂಸಾರಿಕ ವೈಭೋಗವು ಸೆರೆಮನೆಯಲ್ಲಿ ಖೈದಿಯ ಸೆರೆಹಿಡಿದ ಸ್ಥಿತಿಯೆಂದು ಗೆಳೆಯರೊಂದಿಗೆ ಮಾತನಾಡುತ್ತಿದ್ದ! ತಾತ್ವಿಕ ಚಿಂತನೆಯಿಂದ ಬರೆದ ಕತೆಗಳು ಹೀಗಾ ನಮಗೆ ಅದ್ಭುತ, ಮನರಂಜನೀಯ ಕೃತಿಗಳಾಗಿವೆ.

ಇವನ ಜಗತ್ತಿನ ಸರ್ವಶ್ರೇಷ್ಠ ಕತೆ " ರೂಪ ಪರಿವರ್ತನೆ ". ಇದನ್ನು ಓದುತ್ತಾ ಹೋದಂತೆ ಮನುಷ್ಯನ ರೂಪಕಗಳು, ಉಪಮೆಗಳ ನೋಡಬಹುದು. " ಗ್ರೆಗರ್ ಸಂಸ ಬೆಳ್ಳಗೆ ಎದ್ದಾಗ ಒಂದು ದೊಡ್ಡ ಹುಳವಾಗಿರುತ್ತಾನೆ, ಕಿಟಕಿಯಿಂದ ಬೀಸುವ ಗಾಳಿಗೆ ತನ್ನ ಕಾಲುಗಳು ಅಲುಗಾಡುತ್ತವೆ, ತಾನು ಹುಳುವಾದನಲ್ಲ ಎಂಬ ನೋವು ಅವನಿಗೆ ಸದಾ ಕಾಡುತ್ತಿರುತ್ತದೆ.

ಊರಿನ ಜನರಿಗೆ ಇವನ ಕಂಡರೆ ತುಂಬಾ ಅಸಹ್ಯ, ಹೊರಗಿನವರು ಬಿಡಿ ಮನೆಯೊಳಗಿನ ಸಂಬಂಧಿಗಳಂತೂ ಅವನನ್ನು ಮುಟ್ಟು ನೋಡುವುದಿಲ್ಲ ! ಈ ಸ್ಥಿತಿಯಲ್ಲಿ ಊಟ, ತಿಂಡಿ, ಸ್ನಾನ, ಶಯನ, ಚಿಕಿತ್ಸೆಯಲ್ಲಿ ತೊಡಿಗಿದ ತಂಗಿಯೂ ಕೂಡ ಅಸಹ್ಯ ಪಟ್ಟು ಬೇರೆಯವರೊಂದಿಗೆ ಆಡಿಕೊಳ್ಳುತ್ತಾಳೆ, ಇದನ್ನು ಕೇಳಿದ ಅವನಿಗೆ ತುಂಬಾ ಅಘಾತವಾಗುತ್ತದೆ, ಮಲಗಿದ್ದಲ್ವಿಯೇ ಅತ್ತು, ಅತ್ತು ಸಾಯುತ್ತಾನೆ. ಸತ್ತಾಗ ಸಂಬಂಧಿಗಳು ಮುಟ್ಟದೆಯೇ ಮನೆಕೆಲಸದವರ ಕೈಯಲ್ಲಿ  ಕಿಟಕಿಯಿಂದ ಬಿಸಾಕುತ್ತಾರೆ "

ಇದು ಕತೆ.

ಮನುಷ್ಯ ಆರೋಗ್ಯ, ಹಣವಂತನಾಗಿದ್ರೆ ಎಲ್ಲರೂ ಸಂಬಂಧಿಗಳು, ಬಂಧು-ಬಾಂದವರು ಆದರೆ, ಅವನು ಶೀಥಿಲ ರೂಪದಲ್ಲಿ ಇದಾರೆ ಯಾರಿಗೂ ಬೇಡವೆನ್ನುವ ಮನದಾಳದ ಕತೆಯಿದು.

ಕಾಫ್ಕ ಸತ್ತ ಮೇಲೆ ತನ್ನ ಕತೆಗಳ ಪ್ರಕಟಿಸಬೇಡ ಸುಟ್ಟು ಹಾಕುಬಿಡು ಅನ್ನುತ್ತಾನೆ. ಸಾಕು ಸಮಾಜದ ಧೋರಣೆ ಯಾವ ಕತೆಯಿಂದಲೂ ಹೊಟ್ಟೆ ತುಂಬಲಾರದು ಎಂದು ಕ್ಷಯ ರೋಗದಿಂದ ೧೯೩೪ ರಲ್ಲಿ ಜಗತ್ತಿನ ಕಿಟಕಿಯಿಂದ ಹೊರಹೋಗುತ್ತಾನೆ. ಇವನು ಬರೆದ ಚೀನಾದ ಮಹಾಗೋಡೆಯ ಕತೆ ಸಂಕುಚಿತ ಮನೋಭಾವದ ಮನುಷ್ಯರನ್ನು ಕೈ ಮಾಡಿ ತೋರಿಸುತ್ತದೆ. ವಿಶ್ವಕವಿಯಂತೆ ಬದುಕಿದ ಇವನ ಜೀವನ ತಪೋಸ್ಥಲವಾಗಿ ಸೂರ್ಯಚಂದ್ರರಿರುವವರೆಗೂ ಸಾಹಿತ್ಯದಲ್ಲಿ  ಸ್ಮರಣೀಯ. ಅರ್ಧವಾಗಿ ಮುಗಿಸಿ ಹೋದ ಕತೆಗಳ ಗೆಳೆಯನ ಮಾತನ್ನು ಉಲ್ಲಂಘಿಸಿ "ಮ್ಯಾಕ್ಸ್ ಬ್ರಾಡ್ " ಪ್ರಕಟಿಸುತ್ತಾನೆ. ಇವನ ಸಾಹಿತ್ಯದಿಂದ ಪ್ರೇರಣೆಯಾಗಿ ಬರೆದವರಲ್ಲಿ " ಬೆಕೆಟ್, ಕಾಮು, ಇಂಥಾ ಅನೇಕ ಕವಿಗಳು. ಇವನ ಕೃತಿಗಳು ಜರ್ಮನ್ ನಿಂದ ಇಂಗ್ಲೀಷ್ ಗೆ " ದಿ ಕ್ಯಾಸಲ್ " " ದಿ ಟ್ರಯಲ್ " ' ಅಮೆರಿಕ " ಕೃತಿಗಳು ಭಾಷಾಂತರವಾಗಿವೆ.

ಕೀರ್ತಿ. ಪಿ


 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x