ಕನ್ನಡ ಶಾಯಿರಿಗಳು – ಒಂದು ಅವಲೋಕನ: ಪರಮೇಶ್ವರಪ್ಪ ಕುದರಿ

ಕನ್ನಡ ಸಾರಸ್ವತ ಲೋಕವು ಕಥೆ, ಕಾದಂಬರಿ, ನಾಟಕ, ಮಹಾಕಾವ್ಯ, ಕವನ, ಸಣ್ಣ ಕಥೆ, ಹನಿಗವನ ಇನ್ನೂ ಹಲವಾರು ಪ್ರಕಾರಗಳಿಂದ ಶ್ರೀಮಂತವಾಗಿದೆ. ಈ ಶ್ರೀಮಂತ ಪರಂಪರೆಗೆ ಇತ್ತಿಚಿನ ಸೇರ್ಪಡೆ ಎಂದರೆ ಕನ್ನಡ ಶಾಯಿರಿಗಳು. ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಪರಿಯನ್ನು ಶಾಯಿರಿ ಎನ್ನಬಹುದು.ಇದನ್ನು ಓದಿಯೇ ಸವಿಯಬೇಕು! ಶಾಯಿರಿ ಎಂಬ ಪದವು ಅರೇಬಿಕ್ ಭಾಷೆಯ “ ಶೇರ್” ಎಂಬ ಪದದ ರೂಪಾಂತರವಾಗಿದೆ. ಶೇರ್ ಪದದ ಅರ್ಥ ಎರಡು ಸಾಲಿನ ಪದ್ಯ ಎಂದಾಗುತ್ತದೆ. ನಮಗೆ ಬಹಳ ಸಂತೋಷವಾದಾಗ, ಮತ್ತು ಬಹಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಾನೇ ಕವಿತೆಯಾದ ಕವಿಯ ಕವಿತೆಗಳ ಜಾಡ್ಹಿಡಿದು ನಡೆದಾಗ…..!: ಜಬೀವುಲ್ಲಾ ಎಮ್. ಅಸದ್, ಮೊಳಕಾಲ್ಮುರು.

ಕೃತಿ: ನನ್ನೊಳಗಿನ ಕವಿತೆ (ಕವನ ಸಂಕಲನ – ೨೦೨೦)ಲೇಖಕರು: ಅಷ್ಫಾಕ್ ಪೀರಜಾದೆಪ್ರಕಾಶನ: ಹೆಚ್. ಎಸ್. ಆರ್. ಎ. ಪ್ರಕಾಶನ, ಬೆಂಗಳೂರು.ಬೆಲೆ: ೧೫೦/- “ಕವಿ ಕೊರಳಿಗೆಉರಳಾದ ಕವಿತೆಅದ್ಹೇಗೋಅಮರವಾಗಿತ್ತುಕವಿ ಮಾತ್ರಜಗದ ಬೆಳಕಿಗೆಅಪರಿಚಿತನಾಗಿಯೇಉಳಿದುಬಿಟ್ಟ” ಹೀಗೆಲ್ಲಾ ಸಶಕ್ತವಾದ, ಅರ್ಥಪೂರ್ಣವಾಗಿ ಧ್ವನಿಸುವ ಕವಿತೆ ರಚಿಸುವ ‘ಅಷ್ಫಾಕ್ ಪೀರಜಾದೆ’ ರವರು, ಲೋಕದ ಬೆಳಕಿಗೆ ಅಪರಿಚಿತನಾಗಿ ಕತ್ತಲಲ್ಲೇ ಉಳಿದು ಬಿಡುವ ಕಹಿ ಸತ್ಯವನ್ನು ಕಾವ್ಯದ ಮೂಲಕ ತಮ್ಮ ಮನದಾಳದ ಇಂಗಿತವನ್ನು, ನೋವನ್ನು, ಹತಾಶೆಯನ್ನು, ತಲ್ಲಣವನ್ನು “ನನ್ನೊಳಗಿನ ಕವಿತೆ” ಎಂಬ ಭಾವಪೂರ್ಣ ಕವನ ಸಂಕಲನ ದಲ್ಲಿ ಹಂಚಿಕೊಂಡಿದ್ದಾರೆ. ಬರಹಗಾರನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಸರಿನಲ್ಲೇನಿದೆ: ಡಾ. ವೃಂದಾ. ಸಂಗಮ್

ಎಂದಿನಂತೆ ಆಫೀಸಿಗೆ ಹೋಗಿ, ಕಂಪ್ಯೂಟರ್ ತೆಗೆಯುತ್ತಿದ್ದೆ, ನಮ್ಮ ದತ್ತಾಂಶ ನಮೂದಕಿ (ಟೈಪಿಸ್ಟ್) ಒಬ್ಬರು ಬಂದವರೇ, ” ಮೇಡಂ, ನಿನ್ನೆ ಪತ್ರಗಳಲ್ಲಿ ಇದೊಂದು ಬಾಕಿ ಇದೆ, ಟೈಪ್ ಆಗಿಲ್ಲ.” ಎಂದರು. “ಯಾಕೆ” ಎಂದೆ. “ಮೇಡಂ, ಅವರ ಹೆಸರು ಚಿಂತಾಮಣಿ ಎಂದಿದೆ, ಶ್ರೀ ಅಂತ ಬರೀಬೇಕೋ, ಶ್ರೀಮತಿ ಅಂತ ಬರೀಬೇಕೋ ತಿಳೀಲಿಲ್ಲ. ಅದು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯ ಪತ್ರ. ಇಂದೇ ಕೊನೆಯ ದಿನ. ಕಳಿಸಲೇ ಬೇಕು ಇವೊತ್ತು. ಏನು ಬರೀಲಿ, ಶ್ರೀ ಅಥವಾ ಶ್ರೀಮತಿ” ಎಂದು ಕೇಳಿದರು. ಅವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶ್ರೀ. ಗಣಪತ್ ಕಾಕೋಡೇಜಿ, ನಮ್ಮ ಕಾಲೋನಿಯ ಭರವಸೆಯ ಪೋಸ್ಟ್ಮನ್ !: ಎಚ್. ಆರ್. ಲಕ್ಷ್ಮೀವೆಂಕಟೇಶ್

ಕಾಕೋಡೆ ಅವರನ್ನು ನಾನು ಸುಮಾರು ೧೦ ವರ್ಷಕ್ಕೂ ಹೆಚ್ಚು ಸಮಯದಿಂದ ಬಲ್ಲೆ ಎಂದರೆ ತಪ್ಪಾಗಲಾರದು. ನಮ್ಮ ಹಿಮಾಲಯ ಕಾಲೋನಿಯ ಭರವಸೆಯ ಪೋಸ್ಟ್ಮನ್ ಎಂದು ಅವರನ್ನು ಕರೆಯಲು ಹಲವು ಕಾರಣಗಳೂ ಇವೆ. ತನ್ನ ವೃತ್ತಿಯಲ್ಲೂ ಕೆಲವು ಮಹತ್ವವೆಂದು ನಾನು ಕರೆಯುವ (ಬೇರೆಯವರಿಗೆ ಇದು ಅಷ್ಟು ಮುಖ್ಯವಾಗಿ ಕಾಣಿಸದೆ ಇರಬಹುದು) ಕಾರ್ಯಗಳನ್ನು ಅವರು ಮಾಡಿದ್ದಾರೆ ಎಂದರೆ ಸುಳ್ಳಲ್ಲ. ಯಾವುದೇ ಕೆಲಸ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದನ್ನು ಎಷ್ಟು ಜನ ಗುರುತಿಸುತ್ತಾರೆ ಎನ್ನುವುದು ಮುಖ್ಯ. ವರ್ಷ ೨೦೦೮ ರಲ್ಲಿ ನಾವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪರಿಸರ ದಿನ ಎನ್ನುವ ವರ್ಷದ ಶ್ರಾದ್ಧ”: ವೃಶ್ಚಿಕ ಮುನಿ

ಇವತ್ತಿನ ಜಮಾನಾದ ಜನರು ಪರಿಸರ ದಿನಾಚರಣೆ ಎಂದರೆ ವಾಟ್ಸಪ್, ಫೇಸ್ಬುಕ್, ಟ್ವಿಟ್ಟರ್,ಯೂಟುಬ್ ಇನ್ನಾವುದೋ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಗೀಚಿ, ಒಂದಿಷ್ಟು ಎಡಿಟ್ ಪೋಟೋ ಹಾಕಿ ಕೆಳಗೆ ಮೂಲೆಯಲ್ಲಿ ಇರಲಿ ನಮ್ಮದೊಂದು ಅಂತಾ ಫೋಟೋ ಹಾಕಿಕೊಂಡು ಮೆರೆದು ನಾವು ದೊಡ್ಡ ಪರಿಸರ ಪ್ರೇಮಿ ಎಂದು ಬಿಡುತ್ತೇವೆ. ಅವತ್ತು ನೆಟ್ಟು ಸಸಿ ಸಂಜೆಗೆ ಬಾಡಿ ಹೋಗಿರುತ್ತದೆ.ಪ್ರತಿ ವರ್ಷ ನೆಟ್ಟು ಜಾಗದಲ್ಲಿ ಮತ್ತೆ ಮತ್ತೆ ಸಸಿ ನೆಟ್ಟು ಹಲ್ಲು ಕಿಸಿದು ಫೋಟೋ, ಸೆಲ್ಫ್ ತೆಗೆಸಿಕೊಂಡು ಮತ್ತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿಕೊಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಪಾನ್ ಕಾವ್ಯ ಪ್ರಕಾರ ಹೈಕು ಕನ್ನಡಮ್ಮನ ಮಡಿಲಲ್ಲಿ….: ರತ್ನರಾಯಮಲ್ಲ

ಕನ್ನಡ ವಾಗ್ದೇವಿಯ ಭಂಡಾರವನ್ನೊಮ್ಮೆ ಅವಲೋಕಿಸಿದಾಗ ಹಲವಾರು ವಿಸ್ಮಯಗಳು ಸಹೃದಯ ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತವೆ. ಅರ್ವಾಚೀನ ಸಾಹಿತ್ಯದ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಿದ್ದಂತೆ ಆಧುನಿಕ ಸಾಹಿತ್ಯದ ಮೇಲೆ ಆಂಗ್ಲ ಭಾಷೆಯ ಪ್ರಭಾವವಿರುವುದನ್ನು ಕಾಣುತ್ತೇವೆ. ಅದರಲ್ಲಿ ಜಪಾನಿನ ಕಾವ್ಯ ಕಲೆ ‘ಹೈಕು’ ಕೂಡ ಒಂದು. ಜಪಾನಿನ ಜನಪದ ಲೋಕದಿಂದ ಒಡಮೂಡಿದ್ದ ಹಾಗೂ ಆಸ್ಥಾನದಲ್ಲಿ ನಲೆದಾಡುತಿದ್ದ ಹೈಕುಗೆ ಭವ್ಯವಾದ ದೀರ್ಘ ಪರಂಪರೆಯಿದೆ. ಜಪಾನಿನ ಭಾಷೆ ಚೀನಿಮಯ, ಚಿತ್ರಲಿಪಿ. ನಾವು ನಮ್ಮ ಭಾಷೆಯನ್ನು ಧ್ವನಿ ಮೂಲಕ ಗುರುತಿಸಿದರೆ ಜಪಾನೀಯರು ಚಿತ್ರದ ಮೂಲಕ ಗುರುತಿಸುವರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬುದ್ಧ ಧ್ಯಾನದ “ಪ್ಯಾರಿ ಪದ್ಯ” ಗಳು: ಅಶ್ಫಾಕ್ ಪೀರಜಾದೆ

ಚುಟುಕು, ಹನಿಗವನ, ಹನಿಗವಿತೆ, ಹಾಯ್ಕು, ಶಾಯರಿ, ರೂಬಾಯಿ, ಫರ್ದ, ಶೇರ್, ದ್ವಿಪದಿ, ತ್ರಿಪದಿ, ಚೌಪದಿ ಇತ್ಯಾದಿ ಇತ್ಯಾದಿಯಾಗಿ ಕರೆಯಲ್ಪಡುವ ಸಾಹಿತ್ಯದ ವಿವಿಧ ಪ್ರಕಾರಗಳು ಸಾಸಿವೆಯಲ್ಲಿ ಸಾಗರ ಅಡಕಗೊಳಿಸಿದಂತೆ ಅತಿ ಸ್ವಲ್ಪದರಲ್ಲಿ ಬಹಳಷ್ಟು ಹೇಳುವ ಅಭಿವ್ಯಕ್ತಿ ಮಾಧ್ಯಮ. ಇಲ್ಲಿ ಕತೆ, ಕವಿತೆಯಂತೆ ಸ್ವಲ್ಪೂ ಕೂಡ ವಾಚ್ಯತೆಗೆ ಜಾಗವಿರುವುದಿಲ್ಲ. ಹೀಗಾಗಿ ಪ್ರಸ್ತುತ ಅಕ್ಕಡಿ ಸಾಲಿನ ಮೂಲಕ ಶ್ರೇಷ್ಠ ಕವಿಯಾಗಿ ಗುರುತಿಸಿಕೊಂಡಿರತಕ್ಕಂತಹ ಎ. ಎಸ್. ಮಕಾನದಾರ ಅವರ ಇತ್ತೀಚಿನ ಸಂಕಲನ ಮೇಲಿನ ಯಾವುದೇ ಒಂದು ಪ್ರಕಾರಕ್ಕೆ ಬದ್ಧವಾಗಿರದೆ, ಅಷ್ಟೂ ಪ್ರಕಾರಗಳನ್ನು ತನ್ನೊಳಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕಿನ ಬಂಧಕ್ಕೆ ಹೆಸರಿನ ಹಂಗು ಯಾತಕ್ಕೆ? : ಪೂಜಾ ಗುಜರನ್. ಮಂಗಳೂರು.

ರಕ್ತ ಸಂಬಂಧಗಳೆಂದರೆ ಒಂದೇ ರಕ್ತ ಹಂಚಿಕೊಂಡು ಜೊತೆಯಾಗಿ ಹುಟ್ಟಿದವರು. ಆದರೆ ಜೊತೆಯಾಗಿ ಹುಟ್ಟದೆಯೂ ಜೊತೆಯಿರುವವರಿಗೆ ಏನು ಅನ್ನುತ್ತಾರೆ. ಅವರನ್ನು ಒಡನಾಡಿಗಳು, ಅನ್ನಬಹುದು. ಒಂದು ಬಾಂಧವ್ಯ ಬೆಳೆಯಲು ಜೊತೆಯಾಗಿಯೇ ಹುಟ್ಟಬೇಕಿಲ್ಲ. ಜೊತೆಯಾಗಿಯೇ ಬದುಕಬೇಕಿಲ್ಲ. ಕೊನೆವರೆಗೂ ಜೊತೆ ಜೊತೆಯಾಗಿ ನಡೆಯುವ ಒಂದೊಳ್ಳೆ ಮನಸ್ಸು ಇದ್ದರೆ ಸಾಕು. ಅವರು ಯಾವತ್ತಿಗೂ ನಮ್ಮೊಳಗೆ ಇರುತ್ತಾರೆ. ಅಲ್ಲಿ ಯಾವುದೆ ಕಟ್ಟುಪಾಡುಗಳ ಹಂಗು ಇರುವುದಿಲ್ಲ. ನಂಬಿಕೆ ವಿಶ್ವಾಸ ಅನ್ನುವ ಚೌಕಟ್ಟಿನ ಒಳಗೆ ಬಾಂಧವ್ಯ ಗಟ್ಟಿಯಾಗುತ್ತದೆ. ಇಲ್ಲಿ ನಾವು ಜೊತೆಯಾಗಿ ಬದುಕಲು ಸಂಬಂಧಗಳಿಗೆ ಹೆಸರಿಡುತ್ತೇವೆ. ಇದು ಯಾರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕುಮಾರ” ಹೆಸರಿನ ದೊಡ್ಡ ಮನಸಿನವರು…..”: ಅಮರದೀಪ್

ಬಹುಶ: ನಾನಿದ್ದ ಗೊಂದಲದ ದಿನಗಳಲ್ಲಿ ಇವರಿಬ್ಬರ ಪರಿಚಯ ಸ್ನೇಹವಾಗದಿದ್ದರೆ ಇನ್ನಷ್ಟು ಗೊಂದಲಕ್ಕೆ ಬೀಳುತ್ತಿದ್ದೆನೇನೋ. 1998ರಲ್ಲಿ ವರ್ಗಾವಣೆಗೊಂಡು ನಾನಿದ್ದ ಕಛೇರಿಗೆ ಬಂದವರೊಬ್ಬರು ವಿಹಾರ್ ಕುಮಾರ್. ಎ. ಅಂತ. ಇನಿಷಿಯಲ್ “ಎ” ಅಂದರೆ ಏನೆಂದು ನನಗೂ ಗೊತ್ತಿರಲಿಲ್ಲ. ನಂತರ ತಿಳಿದದ್ದು, ಎ ಅಂದರೆ ಆವುಲ ಅಂತ. ತೆಲುಗಿನಲ್ಲಿ ಆವುಲ ಅಂದರೆ ಆಕಳಂತೆ. ಥೇಟ್ ಆಕಳಂತೆಯೇ ಸ್ವಭಾವದ ವ್ಯಕ್ತಿ ಅವರು. ಬಂದ ಕೆಲವೇ ದಿನಗಳಲ್ಲಿ ನನಗೆ ತುಂಬಾ ಹಳೆಯ ಸ್ನೇಹಿತರಂತಾದರು. ನೋಡಿದರೆ ನನಗೂ ಅವರಿಗೂ ಇಪ್ಪತ್ತೆರಡು ವರ್ಷಗಳ ಅಂತರದ ವಯಸ್ಸು. ಆದರೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೌದಿ ಕಥೆಗಳು: ಗಂಗಮ್ಮ ಮಂಡಿಗೇರಿ

ರಾಕೇಶ್ ಎಂಬ ಬಾಲಕಿ ತನ್ನ ತಂದೆ ತಾಯಿ ಜೊತೆ ಬಡ ಜೀವನವನ್ನು ನಡೆಸುತ್ತಿದ್ದ. ತಂದೆ ಹೆಸರು ಸುರೇಶ ಮತ್ತು ತಾಯಿ ಸುಮಾ. ಚಿಕ್ಕವನಿದ್ದಾಗ ತಂದೆ-ತಾಯಿ ಎಲ್ಲಾ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಆರೋಗ್ಯವಂತನಾಗಿ ಬೆಳೆದ ಆದರೆ ಅವನಲ್ಲಿ ಯಾವುದೇ ಕೌಶಲ ವಾಗಲಿ ಕಲೆಯಾಗಲಿ ಬರಲಿಲ್ಲ ರಾಕೇಶ ಸೋಮಾರಿಯಾಗಿ ಬೆಳೆಯುವುದನ್ನು ಕಂಡು ತಂದೆ ತಾಯಿಯು ಮನೆಯಲ್ಲೇ ಉಳಿಸಿಕೊಂಡರು. ದಿನಕಳೆದಂತೆ ರಾಕೇಶನಿಗೆ ಬಡತನದ ಬೆಂಕಿ ತಗುಲಿತ್ತು. ಅವನಿಗೆ ಹೊಟ್ಟೆಬಟ್ಟೆಯ ಚಿಂತೆ ಶುರುವಾಯಿತು ಆದರೂ ಅವನು ಊರಿನಲ್ಲಿ ಸೋಮಾರಿಯಾಗಿ ಓಡಾಡುತ್ತಾ ತಿರುಗಾಡುತ್ತಾ ಸಮಯವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಬಡಿತದ ಭಾವ ಅಲೆಗಳು ಎನ್ನೆದೆಯಾಳದಲ್ಲಿ ಜನ್ಮಿಸಿದನೂರಾರು ಬಡಿತದ ಭಾವಗಳುಧರೆಯ ಮಡಿಲಲ್ಲಿ ಚಿಗುರಿದಂತೆಹೊಸ ಹೊಸ ತುಡಿತದ ಕನಸುಗಳುಒಮ್ಮೊಮ್ಮೆ ಕುಸುಮವಾಗಿ ಅರಳಿಮತ್ತೊಮ್ಮೆ ಕಮರಿದ ಕ್ಷಣಗಳು ಒಮ್ಮೊಮ್ಮೆ ಯಾರನ್ನು ಹಂಬಲಿಸಿಅವರಿಗಾಗಿ ನವಜೀವನ ಬಯಸಿಒಲವಿನ ಚೆಲುವಿನ ಕನಸುಗಳು ಮೂಡಿಸಿಮೌನ ನಲಿಯುತ್ತಾ ಹೂವಂತೆ ಅರಳಿದರೆಮತ್ತೊಮ್ಮೆ ಮುಳ್ಳುಗಳಿಂದ ಹೃದಯಪರಚಿಸುಮ್ಮನೆ ಕುಳಿತಂತಾಗುವುದು ಅದು ಕುಂತಲ್ಲಿ ಚಿಂತಿಸುವುದುನನ್ನ ಭವ್ಯಭವಿಷ್ಯದ ಬಗ್ಗೆಒಮ್ಮೊಮ್ಮೆ ಪರದಾಡುವುದುಪಾರಿವಾಹಕ ಸೆಳೆತದ ಬಗ್ಗೆಮತ್ತೊಮ್ಮೆ ಉಗ್ರವಾಗದೆ ಅರಿವುದುಗೋಮುಖ ವ್ಯಾಘ್ರ ದ ಮಾನವರ ಬಗ್ಗೆ ಒಮ್ಮೊಮ್ಮೆ ನನ್ನದೆಯ ಅರಗಿಳಿಯುಸುಮಧುರ ಅಕ್ಷರಗಳನ್ನು ಪೋಣಿಸಿಮಾತಿನ ಮುತ್ತಿನ ಹೊಳೆ ಸುರಿಸಿದರೆಮತ್ತೊಮ್ಮೆ ಮಾಗಿಯ ಕೋಗಿಲೆಯಂತೆಮೂಕಭಾವವನ್ನು ಆವರಿಸಿಕೊಂಡುಅಕ್ಷರಗಳೋತ್ಪತ್ತಿಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಿಶು ಗೀತೆ: ನಾಗರಾಜನಾಯಕ ಡಿ.ಡೊಳ್ಳಿನ, ಪರಮೇಶ್ವರಪ್ಪ ಕುದರಿ

ಕತ್ರಿ ಪತ್ರಿ ಛತ್ರಿ ಪುಟ್ಟ ದಿನಾಲು ಓದುವುದು ಖಾತ್ರಿಪೂಜಿಸುವನು ದೇವರಿಗೆ ಎರಿಸಿ ಪತ್ರಿಮಳೆ ಬಂದಾಗ ತರುವನು ಛತ್ರಿ ಪರೀಕ್ಷೆ ಅಂಕಗಳಿಗೆ ಬಿದ್ದರೆ ಕತ್ರಿಅಪ್ಪ ಬಯ್ಯುವುದು ಖಾತ್ರಿಅವ್ವನು ಸಿಟ್ಟಾಗ್ತಾಳೇ ಗೊತ್ರಿ ಅಂದಿನದ ಅಂದಿಗೆ ಓದುವನು ರಾತ್ರಿಅಂಕಗಳು ಹೆಚ್ಚುವುದು ಖಾತ್ರಿಬಾಯಿಗೆ ಹಾಕ್ತಾರೆ ಮೈಸೂರ ಪಾಕ್ ರೀ .. -ನಾಗರಾಜನಾಯಕ ಡಿ.ಡೊಳ್ಳಿನ ಇಷ್ಟ – ಕಷ್ಟ ಸ್ನಾನವ ಮಾಡಲುಬಲು ಇಷ್ಟಬಿಸಿ – ಬಿಸಿ ನೀರಾದರೆಬಲು ಕಷ್ಟ! ಪಾಠವ ಓದಲುಬಲು ಇಷ್ಟಲೆಕ್ಕವ ಮಾಡಲುಬಲು ಕಷ್ಟ! ಮೊಬೈಲ್ ಗೇಮುಬಲು ಇಷ್ಟಕಬಡ್ಡಿ ಖೊ – ಖೋಬಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಮ್ಮಾ ಎಂದರೆ ಏನೋ ಹರುಷವು: ಶಿವಲೀಲಾ ಹುಣಸಗಿ ಯಲ್ಲಾಪುರ

ಸೀರೆಯಂಚ ಹಿಡಿದು ತಪ್ಪೆಗಾಲ ಹಾಕಿ ಸೀರೆಯ ತೊಡರಿಸಿ ಕೊಂಡು ಬಿದ್ದಾಗ ಅಮ್ಮಾ‌ ಎಂದಾಗ ಗಾಬರಿಗೊಂಡು‌ ಜೋರಾಗಿ ಅಳುವ ನನ್ನ ಎತ್ತಿಕೊಂಡು ಎದೆಗಪ್ಪಿಕೊಂಡು ಪೆಟ್ಟಾಯಿತಾ ಮುದ್ದು ಎಂದು ಮುತ್ತಿಡುತ್ತ, ಬಿದ್ದ ಜಾಗವನ್ನೊಮ್ಮೆ ಇನ್ನೊಮ್ಮೆ ಬಡಿದು ಕಣ್ಣೀರು ಒರೆಸುತ್ತ ಎದೆಗವುಚಿ ಎದೆಹಾಲುಣಿಸುವಾಗ ಎಲ್ಲಿಲ್ಲದ ಸಂತಸ. ಅಮ್ಮನಿಗೆ ಅತ್ತು ಕರೆದು ಯಾಮಾರಿಸಿ ಹಾಲು ಕುಡಿವ ಕಾಯಕ ನನಗೆ ಹೊಸದಲ್ಲ. ಐದು ವರುಷ ಕಳೆದರೂ ಅಮ್ಮ ಒಮ್ಮೆಯು ಗದರಿಸಿಲ್ಲ. ಹಾಲುಣಿಸುವುದ ಬಿಟ್ಟಿಲ್ಲ. ಶಾಲೆಗೆ ಹೋಗುವಾಗ ಪುಟ್ಟ ಕಿರುಬೆರಳ ತೋರಿಸುತ್ತ ಪ್ರೀತಿ ಬರುವಷ್ಟು ಮುದ್ದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ನವೋದಯ ಸಾಹಿತ್ಯದ ಮೇಲೆ ಡಾ. ಬಿ.ಎಂ. ಶ್ರೀಯವರ ‘ಇಂಗ್ಲೀಷ್ ಗೀತಗಳು’ ಹಾಗೂ ಡಾ. ಹಟ್ಟಿಯಂಗಡಿಯವರ ‘ಆಂಗ್ಲ ಕವಿತಾವಳಿ’ಯ ಪುಸ್ತಕಗಳ ಪ್ರಭಾವ !: ಎಚ್. ಆರ್. ಲಕ್ಷ್ಮೀ ವೆಂಕಟೇಶ್

ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ -ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ‘ನವೋದಯ ಸಾಹಿತ್ಯ’ ವೆಂದು ಹೊಸ ಸಾಹಿತ್ಯ ಪ್ರಕಾರದಲ್ಲಿ ಕಾಣಿಸಿಕೊಂಡಿತು. ಇದು ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಬಹುಬೇಗ ಅಭಿವೃದ್ಧಿ ಪಡೆದು ವಿಫುಲ ಸಾಹಿತ್ಯ ಬೆಳವಣಿಗೆಗೆ ಕಾರಣವಾಯಿತು. ಇದರಲ್ಲಿ ಮುಖ್ಯವಾದ ಕಾವ್ಯ ಪ್ರಕಾರಗಳಲ್ಲಿ, ಭಾವಗೀತೆ, ಕವನ, ಕಗ್ಗ, ವಚನದ ಲಕ್ಷಣದ ಮತ್ತು ರಗಳೆ, ಛಂದಸ್ಸಿನ ಸಾನೆಟ್, ಮಾದರಿಯ ಪದ್ಯಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಲಾಯ ತಸ್ಮೈ ನಮಃ: ಪೂಜಾ ಗುಜರನ್ ಮಂಗಳೂರು

“ಸಂಬಂಧಗಳು ಸಮಯವನ್ನು ಬೇಡುತ್ತದೆ.ಸಮಯವಿಲ್ಲದೆ ಸಂಬಂಧಗಳು ಸಾಯುತ್ತದೆ”.. ನಿಜ ಈ ಸುಂದರ ಕ್ಷಣಗಳು ಬದುಕಿಗೆ ಅದೆಷ್ಟು ಮುಖ್ಯವಾಗಿರುತ್ತದೆ. ಈ ಸಮಯ ಅನ್ನುವುದು ಎಂತಹ ಅದ್ಭುತವನ್ನು ಸೃಷ್ಟಿಸಬಲ್ಲದು. ಹಾಗೇ ಎಂದೂ ಅಳಿಯದ ವಿಚಿತ್ರವನ್ನು ಉಳಿಸಬಲ್ಲದು. ಈ ಕ್ಷಣಗಳು ಕಳೆದು ಹೋದರೆ ಮತ್ತೆ ಬರುವುದೇ? ಅದಕ್ಕೆ ಉತ್ತರ ಯಾರಲ್ಲೂ ಇಲ್ಲ. ನಿಜ ಇಲ್ಲಿ ಸಮಯಕ್ಕೆ ತುಂಬಾ ಬೆಲೆ. ಒಂದು ಕ್ಷಣ ಕಳೆದು ಹೋದರು ಅದು ಮತ್ತೆ ಬರಲಾರದು. ಆ ಸಮಯಕ್ಕೆ ಏನು ಆಗಬೇಕು ಅದು ಆಗಿಯೇ ಆಗುತ್ತದೆ. ಕಾಲವನ್ನು ತಡೆಯೋರು ಯಾರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮತ್ತೆ ಉದಯಿಸಿದ ಸೂರ್ಯ: ವೆಂಕಟೇಶ ಪಿ.ಗುಡೆಪ್ಪನವರ

“ವಿಶ್ವವನ್ನೇ ತಲ್ಲಣಗೊಳಿಸಿ, ಈಗ ನಮ್ಮ ದೇಶಕ್ಕ ಗಂಡಾಂತರ ತಂದ ಕೋರೋನಾ ವೈರಸ್ ಹಾವಳಿಯಿಂದ ನಮ್ಮನ್ನು ರಕ್ಷಣೆ ಮಾಡಲು, ಸರ್ಕಾರ ರಾಜ್ಯದಲ್ಲಿ ಇಂದಿನಿಂದ ಹದಿನಾಲ್ಕು ದಿನಗಳ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದೆ.ಅತ್ಯಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಳ್ಳಿ,ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಈ ವೈರಸ್ ಹೆಚ್ಚಾದರೆ, ಲಾಕ್‍ಡೌನ್ ಅವಧಿ ವಿಸ್ತರಣೆ ಸಹ ಆಗಬಹುದು,ಯಾರೊಬ್ಬರೂ ಯಾವೂದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು, ಹೊರಗೆ ಕಾಣಿಸಿಕೊಂಡರೆ ಶಿಕ್ಷೆ ತಪ್ಪಿದಲ್ಲಿ….” ಪೋಲಿಸ್ ಜೀಪ್ ಮೇಲೆ ಹಾಕಿರುವ ಚಿಕ್ಕ ಸ್ಪೀಕರ್‍ದಲ್ಲಿನ ಮಾತುಗಳನ್ನು ಕೇಳಿಸಿಕೊಂಡ ತಿಮ್ಮಪ್ಪ ಮಾಸ್ತರ ಬೆಚ್ಚಿಬಿದ್ದನು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಓದುವ ಹಕೀಕತ್ತಿಗೆ ನೂಕಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವ ಅಜ್ಜ ನೆಟ್ಟ ಹಲಸಿನ ಮರ”: ಎಂ. ಜವರಾಜ್

ಕನ್ನಡದ ಪ್ರಗತಿಶೀಲ, ನವ್ಯ, ಬಂಡಾಯ ಸಾಹಿತ್ಯಗಳ ನಾನಾ ಸ್ತರಗಳ ಪ್ರಭಾವಗಳ ಪ್ರಗತಿಪರ ಚಿಂತನಶೀಲ ಲೇಖಕ ವ್ಯಾಸರಾಯ ಬಲ್ಲಾಳರು “ನಾನು ಒಂದು ಕಥೆಯೊ ಕಾದಂಬರಿಯೊ ಬರೆಯಲು ಆತುರ ತೋರುವುದಿಲ್ಲ. ಅದು ಒಳಗೆ ಗುದ್ದಿದಾಗ ಬರೆಯಲು ತೊಡಗುವೆ. ಹಾಗೆ ಸಮಯದ ಹೊಂದಾಣಿಕೆಯೂ ಇರಬೇಕು. ಈ ಮುಂಬಯಿ ಜೀವನ ವಿಧಾನಕ್ಕು ಬೆಂಗಳೂರಿನ ಜೀವನಕ್ಕು ವ್ಯತ್ಯಾಸ ಇದೆ. ಬೆಂಗಳೂರಿನ ಜೀವನ ವಿಧಾನಕ್ಕು ಉಡುಪಿಯ ಜೀವನಕ್ಕು ವ್ಯತ್ಯಾಸ ಇದೆ. ಜೊತೆಗೆ ಉಡುಪಿಯ ಜೀವನ ವಿಧಾನಕ್ಕು ಅಂಬಲಪಾಡಿಯ ಜೀವನಕ್ಕು ವ್ಯತ್ಯಾಸವಿದೆ. ಹೀಗೆ ನಾನು ಇಲ್ಲೆಲ್ಲ ಸುತ್ತಾಡಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಕೃತಿಯೊಂದಿಗೆ ಅನುಬಂಧ ; ಕೋವಿಡ್ ಗೆ ನಿರ್ಬಂಧ: ಗಾಯತ್ರಿ ನಾರಾಯಣ ಅಡಿಗ

ಅದ್ಭುತ ಮತ್ತು ಅಪೂರ್ವವಾದ ಈ ಭೂಮಂಡಲ ಆನೇಕ ವೈಚಿತ್ರ್ಯಗಳಿಂದ ಕೂಡಿದ ಸಕಲ ಜೀವರಾಶಿಗಳಿಗೂ ಆಶ್ರಯತಾಣವಾಗಿದೆ. ಆದರೆ ಹದಗೆಟ್ಟಿರುವುದು ಕೇವಲ ಮಾನವನಿಂದ ಮಾತ್ರ. ಪ್ರಕೃತಿ ನೀಡುವ ಮೂಲ ಅವಶ್ಯಕತೆಗಳಾದ ನೀರು, ಆಹಾರ, ಗಾಳಿಯನ್ನು ನಂಬಿಕೊಂಡು ಸಕಲ ಚೈತನ್ಯಗಳು ಜೀವನ ನಡೆಸುತ್ತಿವೆ. ಪ್ರಕೃತಿ ಮಾತೆಯೂ ಕೂಡ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ವಸಂಕುಲಗಳನ್ನು ರಕ್ಷಿಸುತ್ತಿದ್ದಾಳೆ. ಆದರೆ ಇಂದೇಕೋ ಆಕೆ ರೌದ್ರಾವತಾರ ತಾಳಿದಂತಿದೆ. ಮನುಷ್ಯನ ಮಿತಿಮೀರಿದ ಸ್ವಾರ್ಥ ಚಟುವಟಿಕೆಗಳು ಆಕೆಯ ಸಹನೆಯನ್ನು ಕದಡಿವೆ. ಆಧುನಿಕತೆಯ ಮೊರೆಹೊಕ್ಕ ಮಾನವ ತಂಗಾಳಿಯ ವೃಕ್ಷಗಳನ್ನು ಕಡಿದು ಗಗನಚುಂಬಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ