ಹೆಸರು ಹೇಡಿ ಎಂದು ಬರೆದು ಬಿಡಿ (ಗಜಲ್ ಹಿಂದಿನ ಕಥನ): ಅಶ್ಫಾಕ್ ಪೀರಜಾದೆ.
ಮೊದಲು ನನ್ನ ರಚನೆಯ ಗಜಲ್ ಒಮ್ಮೆ ಓದಿ ಬಿಡಿ. ನಂತರ ನಾನು ಈ ಗಜಲ್ ಹುಟ್ಟಿನ ಹಿಂದಿನ ಕಥನವನ್ನು ವಿವರಿಸುವೆ. ಗಜಲ್; ನಗುನಗುತ್ತಲೇ ಉರುಳಿಗೆ ಕೊರಳ ನೀಡಿದೆವು ನಾವು/ನಗುನಗುತ್ತಲೇ ಮಣ್ಣಲ್ಲಿ ಮಣ್ಣಾಗಿ ಬೆರತೆವು ನಾವು// ದುರಂತ ಪ್ಯಾರ ಕಹಾನಿಗಳಿಗೆ ಆಸ್ತಿ ಅಂತಸ್ತಗಳೇ ಕಾರಣ/ನಸುನಗುತ್ತಲೇ ನಮ್ಮ ಪ್ರೇಮ ತ್ಯಾಗ ಮಾಡಿದೆವು ನಾವು// ಪ್ರೀತಿಗೆ ಗೋಡೆ ಬೇರೆಯಾಗಿದ್ದರೆ ಒದ್ದು ಕೆಡವ ಬಹುದಿತ್ತು/ಹಾಲೇ ಹಾಲಾಹಲವಾದಾಗ ಅಸಹಾಯಕರಾದೆವು ನಾವು// ಅವರು ಕೊಟ್ಟ ಹೂಗುಚ್ಚಕ್ಕೆ ಅದೆಂಥ ಮೊನಚಿತ್ತೋ ಕಾಣೆ/ಮುಳ್ಳಾಗಿ ನೆಟ್ಟಿದ್ದರೂ ಪ್ರೀತಿಯಿಂದ ಸ್ವೀಕರಿಸಿದೆವು ನಾವು// … Read more