ಬದುಕಿನ ಗೆಲುವಿಗೆ ಹೊಸ ದಿಕ್ಕು ತೋರಿಸುವ ಮಧುಕರ್‌ ಬಳ್ಕೂರ್‌ ಅವರ ’ಆಸೆಗಳು ಕನಸಾಗಿ ಬದಲಾಗಲಿ’: ರಾಘವೇಂದ್ರ ಅಡಿಗ ಎಚ್ಚೆನ್

’ಆಸೆಗಳು ಕನಸಾಗಿ ಬದಲಾಗಲಿ’ ಎಂತಹಾ ಅದ್ಭುತ ಮಾತು! ಮಾನವನ ಆಸೆಗಳಿಗೆ ಕೊನೆ ಮೊದಲಿರುವುದಿಲ್ಲ. ಆದರೆ ಅದೇ ಆಸೆ ಕನಸುಗಳಾಗಿ ಬದಲಾಗುವುದು ಎನ್ನುವ ಹಾಗಿದ್ದರೆ ಅದೆಷ್ಟು ಚೆನ್ನ? ಇಷ್ಟಕ್ಕೂ ಇಲ್ಲಿ ಇದನ್ನು ಹೇಳುತ್ತಿರುವುದಕ್ಕೆ ಕಾರಣವಿದೆ. ಉದಯೋನ್ಮುಖ ಲೇಖಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿಯ ಹೆಸರು ’ಆಸೆಗಳು ಕನಸಾಗಿ ಬದಲಾಗಲಿ’ ಈ ಪುಸ್ತಕ ಸಹ ಶೀರ್ಷಿಕೆಯಷ್ಟೇ ಸುಂದರವಾಗಿದೆ. ಮೂಲತಃ ಉಡುಪಿಯ ಕುಂದಾಪುರದ ಬಳ್ಕೂರು ಗ್ರಾಮದವರಾದ ಮಧುಕರ್ ವಿದ್ಯಾಭ್ಯಾಸ, ವೃತ್ತಿ ಸಂಬಂಧ ನಾನಾ ಊರುಗಳಲ್ಲಿದ್ದು ಅನುಭವ ಹೊಂದಿದವರು. ಕಳೆದ ಆರೇಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಸೆಗಳು ನೂರಾರು: ಕೃಷ್ಣವೇಣಿ ಕಿದೂರ್.

”ನನ್ನಲ್ಲಿ ಕೇಳದೆ ನೀವು ಅದು ಹ್ಯಾಗೆ ಬರಲು ಹೇಳಿದ್ರಿ? ನನಗೆ ಒಪ್ಪಿಗೆ ಇಲ್ಲ. ಜುಜುಬಿ ಇಂಜನಿಯರು ಆತ. ಬೇಡವೇ ಬೇಡ. ಹೈಲಿ ಕ್ವಾಲಿಫೈಡ್ ಆದವರು ನಿಮ್ಮ ಕಣ್ಣಿಗೆ ಬೀಳುವುದೇ ಇಲ್ವಾ? ಬಿ. ಇ. ಮುಗಿಸಿದವನನ್ನು ನಾನು ಒಪ್ತೇನೆ ಎಂದು ಹೇಗೆ ಅಂದ್ಕೊಂಡ್ರಿ?ಹೋಗಲಿ, ಎಂ. ಟೆಕ್ ಆದ್ರೂ ಒಪ್ಪಬಹುದು. ಡಾಕ್ಟರು, ಅದರಲ್ಲೂ ಎಂ. ಡಿ. ಆದ ಡಾಕ್ಟರ್ಸ್, ಅಮೆರಿಕಾದಲ್ಲೇ ಕೆಲಸ ಮಾಡ್ತಿರುವ ಇಂಜನಿಯರ್ಸ್ ಅಂಥವರ ಸಂಬಂಧ ಬೇಡಾ ಅಂತ ನಾನು ಹೇಳಲ್ಲ. ನಿಮ್ಮ ಹಳೆ ಸ್ನೇಹಿತನ ಮಗ ಬೇಡವೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ.ಮಹೇಂದ್ರ ಎಸ್ ತೆಲಗರಹಳ್ಳಿಯವರ ಒಂದು ಬೆಸ್ಟ್‌ ಕವಿತೆ

ಪುಸ್ತಕ ರೂಪದಲ್ಲಿ ಪ್ರಕಟಗೊಂಡಿರುವ ಕನ್ನಡದ ಉತ್ತಮ ಕವಿತೆಗಳನ್ನು ಓದುಗರಿಗೆ ತಲುಪಿಸುವ ಒಂದು ಪ್ರಯತ್ನ ಇದು. ಈ ಪೋಸ್ಟ್‌ ನಲ್ಲಿ ಕವಿತೆ, ಯೂಟ್ಯೂಬ್‌ ನಲ್ಲಿ ಪ್ರಕಟಗೊಂಡಿರುವ ಕವಿತೆಯ ವಾಚನದ ಲಿಂಕ್ ಮತ್ತು ಪುಸ್ತಕ ದೊರೆಯುವ ವಿವರಗಳನ್ನು ನೀಡಲಾಗಿದೆ. ಡಾ. ಮಹೇಂದ್ರ ಎಸ್.‌ ತೆಲಗರಹಳ್ಳಿಯವರ ಈ ಕವಿತೆ ನಿಮಗೆ ಇಷ್ಟವಾದರೆ ಅವರ ಕೃತಿ “ಬೇವರ್ಸಿಯ ಬಯೋಡೇಟಾ”ದ ಪ್ರತಿಗಳಿಗಾಗಿ ಅವರ ಮೊಬೈಲ್‌ ಸಂಖ್ಯೆ: 8431110644 ಅನ್ನು ಸಂಪರ್ಕಿಸಿ. ಪುಸ್ತಕದ ಬೆಲೆ ಕೇವಲ 80/- ರೂಪಾಯಿ ಮಾತ್ರ. ದುಡ್ಡು ಇಲ್ಲ ಅಂದ್ರೂ ಓದೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀನಿಲ್ಲದೇ ಖಾಲಿಯಾಗಿದೆ ಬದುಕು: ಪೂಜಾ ಗುಜರನ್, ಮಂಗಳೂರು.

ಮೊದಲು ನಿನ್ನನ್ನು ಸರಿಯಾಗಿ ಬೈದು ಬಿಡಬೇಕು ಅನ್ನುವಷ್ಟು ಕೋಪ ಉಕ್ಕಿ ಬಂದರೂ ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತೇನೆ. ಅದೆಷ್ಟು ಬೈದರೂ ಅದು ನನ್ನ ಮೂಕವೇದನೆಗಷ್ಟೆ ಸಮಾ.ಈ ಮೌನಕ್ಕೂ ನಿನ್ನದೇ ಗುರುತು. ಅದಕ್ಕೆ ಸುಮ್ಮನಿದ್ದು ಬಿಡುತ್ತೇನೆ. ನಿನ್ನ ನೆನಪುಗಳನ್ನು ಮೂಟೆಕಟ್ಟಿ ಮೂಲೆಗೆಸದರೂ ನೀನು ಕಾಡುವುದನ್ನು ನಿಲ್ಲಿಸುವುದಿಲ್ಲ. ಅದೆಂತಹ ಹಠಮಾರಿ ನಿನ್ನ ನೆನಪುಗಳು. ‌ಕಾಡಿಸಿ ಪೀಡಿಸಿ ಗೊಂದಲವಾಗಿಸುತ್ತದೆ. ನೀನು ಮತ್ತೆ ಬರಲಾರೆ ಅನ್ನುವ ಸತ್ಯವನ್ನು ಯಾವುದೇ ಕಾರಣಕ್ಕೂ ಈ ಮನಸ್ಸು ಒಪ್ಪುತ್ತಿಲ್ಲ. ನಿನ್ನ ತಲುಪುವ ಎಲ್ಲ ಮಾರ್ಗಗಳು ಮುಚ್ಚಿ ಹೋಗಿವೆ. ಆದರೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜುವಿನ ವಿಶೇಷ ಸಂಚಿಕೆಗೆ ಬರಹಗಳ ಆಹ್ವಾನ

ಆತ್ಮೀಯರೇ, ನೋಡ ನೋಡುತ್ತಿದ್ದಂತೆ ಇದೇ ಜನವರಿ ಇಪ್ಪತ್ತೊಂದರಂದು ಪಂಜು ಹತ್ತನೇ ವರ್ಷಕ್ಕೆ ಕಾಲಿಡುತ್ತಿದೆ. ಪಂಜು ದಶಕ ತಲುಪುತ್ತಿರುವ ಸಂಭ್ರಮಕ್ಕೆ ಒಂದು ವಿಶೇಷ ಸಂಚಿಕೆ ಮಾಡದಿದ್ದರೆ ಹೇಗೆ. ಹೀಗೆ ಬಂದು ಹಾಗೆ ಮರೆಯಾಗುವ ನೂರಾರು ವೆಬ್ ತಾಣಗಳ ನಡುವೆಯೂ ಪಂಜುವಿಗೆ ತನ್ನದೇ ಐಡೆಂಟಿಟಿ ಕೊಟ್ಟವರು ನೀವು. ಇವತ್ತಿಗೂ ಯಾರಿಗೂ ಪರ್ಸನಲ್ ಆಗಿ ಕರೆ ಮಾಡಿಯೋ ಮೆಸೇಜ್ ಹಾಕಿಯೋ ಪಂಜುವಿಗಾಗಿ ಬರೆಯಿರಿ ಅಂತ ಕೇಳಿದ್ದು ತುಂಬಾನೆ ಕಡಿಮೆ. ಪಂಜುವಿಗೆ ಬರೆಯಲೇಬೇಕೆಂಬುವವರು ತುಂಬು ಹೃದಯದಿಂದ ಇಲ್ಲಿಯವರೆಗೂ ಬರೆದಿದ್ದಾರೆ. ಇನ್ನು ಮುಂದೆಯೂ ಬರೆಯುತ್ತಾರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಕವಿತೆಯೊಳಗೊಬ್ಬ ಅಪ್ಪ ಮೊನ್ನೆ ಮೊನ್ನೆಯ ತನಕಚೆನ್ನಾಗಿ ನಗು ನಗುತಲೇಮಾತನಾಡುತ್ತಿದ್ದ ಅಪ್ಪಯಾಕೋ ಸಾಯಂಕಾಲಮಾತೇ ನಿಲ್ಲಿಸಿದ…..ನಿಂತುಹೋಗಿರುವದು ಅಪ್ಪನಮಾತುಗಳು ಅಥವಾ ಉಸಿರು ಅನ್ನುವುದುಮಲಗಿದ ಅಪ್ಪನ ಹಾಸಿಗೆಯ ಮುಂದೆಕೂತ ಅಕ್ಕನಿಗೂ ತಂಗಿಗೂ ತಿಳಿಯಲಿಲ್ಲ….ಎರಡೇ ದಿನ ಹೋಗಿ ಬರುವುದಾಗಿಅಪ್ಪನಿಗೆ ಹೇಳಿ ಹೋಗಿ ಮರಳಿ ಬರುವಾಗಅರ್ಧ ದಾರಿಯಲ್ಲೇ ಮುಟ್ಟಿದ ಹೆತ್ತಮಗನಿಗೂ ಗೊತ್ತಾಗಲಿಲ್ಲ…….ಕಾಯಿಲೆ ಗುಣವಾಗಿ ಅಪ್ಪ ಬೇಗನೆಮನೆ ಸೇರುತ್ತಾನೆಂಬ ಆಸೆಯಲ್ಲಿ ಅಮ್ಮ,ಅಮ್ಮನಿಗೆ ಹೇಗೆ ಹೇಳಬೇಕೋಅನ್ನುವುದು ಅಪ್ಪನ ಪ್ರೀತಿಯ ಸೊಸೆಗೂಅರ್ಥವಾಗಲಿಲ್ಲ…….ಅಜ್ಜನ ಬಾಲ ಹಿಡಿದು ಓಡಾಡುವಮೊಮ್ಮಗ ಮತ್ತೆ ಮತ್ತೆ ಕೇಳುತ್ತಾನೆಅಜ್ಜ ಮರಳಿ ಯಾವಾಗ ಬರುತ್ತಾನೆ…?ಮೊನ್ನೆ ಮೊನ್ನೆಯ ತನಕ ನೂರಾರು ಸಲಆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಲೇಖನ ಕಳುಹಿಸಿ

ಸಹೃದಯಿಗಳೇ, “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ನೀಡಲು ಸಹ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ಪಂಜು ಪುಟಗಳಲ್ಲಿನ ಕತೆ, ಕವನ, ಲೇಖನಗಳಿಗೆ ನಿಮ್ಮ ಕುಂಚದ ಕೈಚಳಕದಿಂದ ಚಿತ್ರಗಳನ್ನು ರಚಿಸಿ ಪಂಜಿಗೆ ಮತ್ತಷ್ಟು ಮೆರಗು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಸರ್ಗದೊಡೆಯನ ನಿತ್ಯದರ್ಶನದ ವಿಶ್ವರೂಪ: ಜಹಾನ್ ಆರಾ ಕೋಳೂರು, ಕುಷ್ಟಗಿ

“ಪ್ರಯತ್ನಂ ಸರ್ವಸಿದ್ದಿ ಸಾಧನಂ ದೈರ್ಯಂ ಸರ್ವೇಕ್ಷಣ ಆಯುಧ “ಎಂಬ ಭಗವದ್ಗೀತೆಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸೂರ್ಯನನ್ನೇ ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ಬೆಳಗು ಕವಿತೆಗಳನ್ನು ಬರೆದ ಕವಿಗೆ ಅಭಿನಂದನೆಗಳು. ದಿನನಿತ್ಯ ಫೇಸ್ಬುಕ್ನಲ್ಲಿ ವಾಟ್ಸಪ್ ನಲ್ಲಿ ಬರುತ್ತಿದ್ದಂತಹ ಬೆಳಗು ಕವಿತೆಗಳು ಇಂದು ಸಂಕಲನವಾಗಿ ‘ವಿಶ್ವಾಸದ ಹೆಜ್ಜೆಗಳು’ ಎಂಬ ಶಿರೋನಾಮೆಯಲ್ಲಿ ಬಿಡುಗಡೆಗೊಂಡಿದೆ. ಅಂತಹ ಸುಂದರ ಕವಿತೆಗಳನ್ನು ಓದುವುದೇ ಒಂದು ಹರ್ಷ. ಹಾಗೂ ಅವುಗಳ ಬಗ್ಗೆ ಹೇಳುವುದು ಅಥವಾ ನಾಲ್ಕು ಜನರ ಮುಂದೆ ತೆರೆದಿಡುವುದು ನಿಜಕ್ಕೂ ಒಂದು ಖುಷಿಯೇ ಹೌದು. ಸೂರ್ಯನ ಹೃದಯಸ್ಪರ್ಶಿ ಬೆಳಗು, ಮಿಹಿರನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾವಿತ್ರಿಬಾಯಿ ಫುಲೆಯವರ ಬದುಕು – ಬರಹ: ತೇಜಾವತಿ ಎಚ್. ಡಿ.

ನಡೆ! ಶಿಕ್ಷಣ ಪಡೆ!ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು!ಪಡೆ ವಿವೇಕ! ಪಡೆ ಸಂಪತ್ತು!ಇದಕಾಗಲಿ ನಿನ್ನಯ ದುಡಿಮೆ ಈ ಸಾಲುಗಳು ಸಾವಿತ್ರಿಬಾಯಿ ಫುಲೆಯವರಲ್ಲಿನ ಶಿಕ್ಷಣದೆಡೆಗಿನ ಒಲವನ್ನು ಸಾರುತ್ತವೆ. ಇವರು ಸ್ವತಂತ್ರಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಮಾತ್ರವಲ್ಲ. ಶಿಕ್ಷಣ, ಸೇವೆ, ವೈಚಾರಿಕತೆ, ಸ್ತ್ರೀವಾದಿ ಹೋರಾಟಗಾರ್ತಿ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಸಾವಿತ್ರಿ ಬಾಯಿ ಫುಲೆಯವರು ಹುಟ್ಟಿದ್ದು ಮಹಾರಾಷ್ಟ್ರ ಜಿಲ್ಲೆಯ ಖಂಡಾಲ ತಾಲ್ಲೋಕಿನ ನಯಗಾಂವ್ ಎಂಬ ಪುಟ್ಟ ಹಳ್ಳಿಯಲ್ಲಿ. 1831 ಜನವರಿ 3 ರಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಸಿವಿನಿಂದ ಹೊಟ್ಟೆ ತುಂಬುವವರೆಗೆ ಒಂದು ಕಿರು ನೋಟ: ಸುಮ ಉಮೇಶ್

ಮೊದಲ ತುತ್ತು: ಅನ್ನಪೂರ್ಣೇ ಸದಾಪೂರ್ಣೆ ಹಸಿವು ಎನ್ನುವುದು ಎಷ್ಟು ಘೋರ. ಹೊಟ್ಟೆ ತುಂಬಿದ ನಮಗೆಲ್ಲ ಹಸಿವಿಂದ ಬಳಲುವವರ ಸಂಕಟ ಊಹೆಗೂ ನಿಲುಕದ್ದು. ದಿನಕ್ಕೆ ಮೂರು ನಾಲ್ಕು ಬಾರಿ ತಿಂದರೂ ತೃಪ್ತಿಯಿಲ್ಲದ ಈ ಜೀವಕ್ಕೆ ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಪರದಾಡಿ, ಕೊನೆಗೆ ಸಿಕ್ಕ ಅಲ್ಪಾಹಾರವನ್ನೇ ಸಂತೋಷದಿಂದ ತಿಂದು ಈ ದಿನ ಇಷ್ಟಾದರೂ ಸಿಕ್ಕಿತಲ್ಲ ಅನ್ನೋ ತೃಪ್ತಿಯ ಕಲ್ಪನೆ ನಮಗೆ ಇಲ್ಲ. ಅದೊಂದು ಕಾಲವಿತ್ತಂತೆ. ಬೆಳಿಗ್ಗೆ ಶಾಲೆಗೆ ಹೊರಟ ಮಕ್ಕಳು ಜೋಳದ ಮುದ್ದೆಗೆ ಉಪ್ಪಿನಕಾಯಿ ನೆಂಚಿಕೊಂಡು ತಿಂದು ಮತ್ತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಖಾಕಿಯೊಳಗಿನ ಖಾದಿ ಕವಿತೆಗಳು: ಅಶ್ಫಾಕ್ ಪೀರಜಾದೆ

ಕೃತಿ; “ಗಾಂಧಿ ನೇಯಿದಿಟ್ಟ ಬಟ್ಟೆ”ಕವಿ; ರಾಯಸಾಬ ಎನ್. ದರ್ಗಾದವರ.ಪುಟ ಸಂಖ್ಯೆ; 80 ಬೆಲೆ; 90ಅನಾಯ ಪ್ರಕಾಶನ, ಕಟ್ನೂರ್, ಹುಬ್ಬಳ್ಳಿಸಂಪರ್ಕ ಸಂಖ್ಯೆ; 7259791419 ಕವಿತೆ ಸಶಕ್ತ ಸಕಾಲಿಕ ರೂಪಕಗಳ ಮೂಲಕವೇ ಓದುಗನ ಭಾವ ಪರಿಧಿಯಲ್ಲಿ ಬಿಚ್ಚಿಕೊಳ್ಳುತ್ತ ಹೊಸಹೊಸ ಅರ್ಥ ಆಯಾಮಗಳಲ್ಲಿ ಪಡೆದುಕೊಳ್ಳುತ್ತ ಸಾಗಿ ಹೃದಯಕ್ಕೆ ತಲುಪಬೇಕ ತಟ್ಟಬೇಕು. ಆಗಲೇ ಕವಿಗೂ ಬರೆಸಿಕೊಂಡ ಕವಿತೆಗೂ ಒಂದು ಘನತೆ. ಕವಿಯ ಮನದ ಚದುರಿದ ಭಾವಮೋಡಗಳು ಕವಿತೆಯನ್ನುವ ಒಂದು ನಿಖರವಾದ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಕಾವ್ಯಶಿಲ್ಪ ಕೆತ್ತಿದ್ದರೂ ಕೂಡ ಕಾವ್ಯಾಸಕ್ತ ಮನಮಸ್ತಿಕದಲ್ಲಿ ಭಿನ್ನವಾದ ಅರ್ಥಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೇವು: ವಿಜಯಾ ಮೋಹನ್, ಮಧುಗಿರಿ

ಗೊಂತಿಗೆಯಲ್ಲಿ ಬಸ ಬಸನೆ ಉಸಿರು ಉಗುಳುತ್ತಿರುವ ಜೀವದನಗಳು. ಒಳಗೆ ಅಡುಗೆ ಮನೇಲಿ ಊದುರ (ಹೊಗೆ) ಸುತ್ತಿಕೊಂಡು, ಪಾಡು ಪಡುತ್ತ ಹೊಲೆ ಉರಿಸುತ್ತಿರುವ ಹೆಂಡತಿ ಅಮ್ಮಾಜಿ. ಅವಳ ಕಡೆಗೊಂದು ಕಣ್ಣು, ಅಲ್ಲೇ ಎದುಸಿರು ಬಿಡುತ್ತಿರುವ ಜೀವದನಗಳ ಕಡೆಗೊಂದು ಕಣ್ಣು, ಅಂಗೆ ನಡುಮನೆಯ ಗೋಡೆಗೆ ಕುಂತುಕೊಂಡು ನಿಗಾ ಮಾಡುತ್ತಿರುವ ಮಲ್ಲಣ್ಣನ ಮನಸ್ಸು ಎತ್ತಕಡೆಯಿಂದಾನೊ? ಯಾಕೊ ಯಾವುದು ಸರಿಯಾಗುತಿಲ್ಲವೆಂದು ತಿವಿಯಂಗಾಗುತಿತ್ತು. ಒಳಗೆ ಹೊತ್ತಿಗೆ ಸರಿಯಾಗಿ ಅಂಟಿಕೊಳ್ಳದ, ಬಂಗದ ಹೊಲೆಯನ್ನ ಉರುಬಿ ಉರುಬಿ, ಬಾದೆ ಬೀಳುವ ಹೆಂಡತಿ ಅಮ್ಮಾಜಮ್ಮಳನ್ನು ಸುಖವಾಗಿ ನೋಡಿಕೊಳ್ಳಲಾಗುತಿಲ್ಲ. ಇಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ನಾ ಹೇಳಿರುವೆ ನಾ ಬೆಂಕಿಯಾದೆದೀಪವ ಬೆಳಗುವ ಹೊತ್ತಿನಲ್ಲಿನಾ ನಿನ್ನ ಸುಟ್ಟು ಹಾಕಲೆಂದಲ್ಲ ನಾ ದೀಪವಾದೆನೀ ಹೋಗುವ ದಾರಿ ಕಾಣಲೆಂದುನಿನ್ನ ದಾರಿ ಮಸುಕು ಅಗಲೆಂದಲ್ಲ ನಾ ಬುವಿಯಾದೆನೀ ಇಡುವ ಹೆಜ್ಜೆ ಸಾಗಲೆಂದುನಿನ್ನ ಹೆಜ್ಜೆಗೆ ಮುಳುವಾಗಲೆಂದಲ್ಲ ಇಂದು ನಾ ಹೇಳಿರುವೆ ನಿನ್ನ ದಾರಿಯ ಅರಿವು ನಿನಗಾಗಲೆಂದುನಿನ್ನ ಬಾಳು ಸದಾ ಬೆಳಗಲೆಂದುನಿನ್ನ ಜೀವನ ಹಾಳಾಗಲಿ ಎಂದಲ್ಲ. – ದೀಪಾ ಜಿ ಎಸ್ ಏನಿದ್ದರೂ ಶೂನ್ಯ ಏನಿದ್ದರೂ ಶೂನ್ಯಬಾಳಲ್ಲಿ ಪ್ರೀತಿ ಇರದಿದ್ದರೆಪ್ರೇಮಾಂಕುರವಾಗದಿದ್ದರೆ ಏನಿದ್ದರೂ ಶೂನ್ಯನಡತೆಯಲಿ ಸಂಸ್ಕಾರವಿಲ್ಲದಿದ್ದರೆಸಂಸಾರದಲ್ಲಿ ಸ್ವಾರಸ್ಯವಿಲ್ಲದಿದ್ದರೆ ಏನಿದ್ದರೂ ಶೂನ್ಯಹಣದೊಟ್ಟಿಗೆ ಹೃದಯವಂತಿಕೆಯಿಲ್ಲದಿದ್ದರೆಮುಖ್ಯವಾಗಿ ನೆಮ್ಮದಿಯಿಲ್ಲದಿದ್ದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬುದ್ಧ ಕಾಣದ ನಗೆ ಪುಸ್ತಕ ವಿಮರ್ಶೆ: ವರುಣ್ ರಾಜ್

ಪುಸ್ತಕದ ಹೆಸರು : ಬುದ್ಧ ಕಾಣದ ನಗೆಕೃತಿ ಪ್ರಕಾರ : ಕವನ ಸಂಕಲನಕವಿ : ಎಸ್. ರಾಜು ಸೂಲೇನಹಳ್ಳಿ.ಪ್ರಕಾಶಕರು : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.ಪುಟ : 86ಬೆಲೆ : 90 ಕವಿ ಹಾಗೂ ಕಾದಂಬರಿಕಾರರೂ ಆದ ರಾಜು ಎಸ್ ಸೂಲೇನಹಳ್ಳಿ ರವರು ತಮ್ಮ ಕೃತಿಗೆ ಕೊಟ್ಟಿರುವ ‘ಬುದ್ಧ ಕಾಣದ ನಗೆ’ ಎಂಬ ಶೀರ್ಷಿಕೆಯೇ ಬಹಳ ಆಕರ್ಷಕವಾಗಿದೆ. ಪುಟ ತಿರುಗಿಸುತ್ತಾ ಹೋದರೆ ಮತ್ತಷ್ಟು ಆಕರ್ಷಣೆ ಇವರ ಕವಿತೆಗಳಲ್ಲಿ ಕಂಡುಬರುತ್ತೆ. ಕೃತಿಯ ಮೊದಲ ಕವಿತೆಯಲ್ಲಿಯೇ ಕವಿಗಳು ಬುದ್ದಿವಂತಿಕೆ ಮತ್ತು ಹೃದಯಸಂಪನ್ನತೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಮೇಲೆ ನವೆಂಬರ್ ತಿಂಗಳು ಪೂರ್ತಿ ವಿಶೇಷ ರಿಯಾಯಿತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಾಂತ ಇರುವ ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ನವಕರ್ನಾಟಕ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೆ ನಾಡಿನ ಪ್ರಮುಖ ಪ್ರಕಾಶಕರ ಕನ್ನಡ ಪುಸ್ತಕಗಳ ಮೇಲೆ ನವೆಂಬರ್ ತಿಂಗಳು ಪೂರ್ತಿ ವಿಶೇಷ ರಿಯಾಯಿತಿ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಪುಸ್ತಕ ಪ್ರಿಯರು ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಈ ಮೂಲಕ ಕೋರಲಾಗಿದೆ. ಬೆಂಗಳೂರು ಮಳಿಗೆಗಳ ವಿಳಾಸ: ನವಕರ್ನಾಟಕ ಪುಸ್ತಕ ಮಳಿಗೆದೇವಾಂಗ ಟವರ್, 35, ಕೆಂಪೇಗೌಡ ರಸ್ತೆಬೆಂಗಳೂರು – 560 009ದೂ : 9480686862 ನವಕರ್ನಾಟಕ ಪುಸ್ತಕ ಮಳಿಗೆಎಂಬೆಸಿ ಸೆಂಟರ್, ಕ್ರೆಸೆಂಟ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೀಗೀ ಹುಣ್ಣಿವಿ: ಡಾ. ವೃಂದಾ ಸಂಗಮ್

“ಆದಿತ್ಯವಾರ ಸಂತೀ ಮಾಡಿ, ಸೋಮವಾರ ಕಡುಬು ಕಟ್ಟಿ, ಮಂಗಳವಾರ ಹೊಲಾ ಹೋಗೋದೋ” ಅಂತ ಊರಾಗ ವಾಲೀಕಾರ ಡಂಗರಾ ಸಾರಲಿಕ್ಕೇಂತ ಬಂದರ, ನಮ್ಮಂತಹಾ ಸಣ್ಣ ಹುಡುಗರ ಗುಂಪು ಅವನ ಹಿಂದ ಗುಂಪು ಕಟ್ಟಿಕೊಂಡು ಓಡುತಿತ್ತು. ಊರೇನೂ ಅಂತಾ ಪರೀ ದೊಡ್ಡದಲ್ಲ. ಅಲ್ಲದ, ಇಂತಾ ವಿಷಯಗಳು ಎಲ್ಲಾರಿಗೂ ಗೊತ್ತಾಗೇ ಇರತಿದ್ದವು. ಆದರೂ ವಾಲೀಕಾರ ಡಂಗುರ ಸಾರತಿದ್ದಾ, ನಾವೂ ಅವನ ಹಿಂದಿಂದ ಓಡತಿದ್ದವಿ ಅಷ್ಟ. ಆಮ್ಯಾಲೆ, ಮನೀಗೆ ಬಂದು ಅವನ ಹಂಗನ ಒಂದ ಹತ್ತ ಸಲಾ ಒದರತಿದ್ದವಿ. ಈ ಡಂಗುರಾ ಸಾರೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲುವಂಗಿಯ ಕನಸು (ಅಧ್ಯಾಯ ೧೮-೧೯): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೮: ಕೆಂಗಣ್ಣಪ್ಪನ ಔಷಧೋಪಚಾರ ನೀರು ಕುಡಿದು ವಿಶ್ರಮಿಸಿದ ದನಗಳನ್ನು ಬೆಟ್ಟದ ಕಡೆ ತಿರುಗಿಸಿದ ಚಿನ್ನಪ್ಪ ಬೆಟ್ಟದ ನೆತ್ತಿಯ ಹಕ್ಕೆಯ ಗೌಲು ಮರದ ನೆರಳಲ್ಲಿ ಕುಳಿತು ವಿಶ್ರಮಿಸತೊಡಗಿದ.ಸುಬ್ಬಪ್ಪ ದೊಡ್ಡ ಕೆಲಸಗಳನ್ನೆಲ್ಲಾ ಮುಗಿಸಿ ಕೊಟ್ಟು ಹಿಂದಿನ ದಿನ ಸಂಜೆಯಷ್ಟೇ ಊರಿಗೆ ಹೋಗಿದ್ದ, ಇತ್ತೀಚಿನ ಕೆಲವೇ ದಿನಗಳಲ್ಲಿ ಒದಗಿ ಬಂದ ಅನುಭವಗಳು ಹಾಗೂ ಭಾವ ಮೈದುನನೊಂದಿಗಿನ ಮಾತುಕತೆಗಳು ಗಂಡ ಹೆಂಡಿರಿಬ್ಬರಿಗೆ ಬದುಕಿನ ಕೆಲವು ಹೊಸ ಪಾಠಗಳನ್ನು ಕಲಿಸಿದ್ದವು.ಆ ಸಾರಗಳೊಳಗಿನ ಗೂಡಾರ್ಥಗಳು ತಿಳಿಯದಿದ್ದರೂ ಒಟ್ಟು ಸಾರಾಂಶ ಅವರ ಅರಿವಿಗೆ ಬಂದಿತ್ತು.ಇಂದಿನ ಸಾಮಾಜಿಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ