ಬಾಲ್ಯದ ಮೆಚ್ಚಿನ ಚಿತ್ರಗಳು: ವಾಸುಕಿ ರಾಘವನ್ ಅಂಕಣ
ನಿಮಗೆ ಬಾಲ್ಯದಲ್ಲಿ ತುಂಬಾ ಇಷ್ಟವಾಗಿದ್ದ ಸಿನಿಮಾಗಳನ್ನ ಜ್ಞಾಪಿಸಿಕೊಳ್ಳಿ. ಈಗ ನಿಮಗೆ ಅವು ಅಂಥ ವಿಶೇಷವೇನಲ್ಲ ಅನ್ನಿಸಬಹುದು, ಆದರೂ ಅವು ಮನಸ್ಸಿಗೆ ಬಹಳ ಹತ್ತಿರವಾಗಿರುತ್ತವೆ. ಅವು ಶ್ರೇಷ್ಠ ಕಲಾಕೃತಿಗಳೇ ಆಗಬೇಕೆಂದಿಲ್ಲ. ನೋಡಿದಾಗಿನ ನಮ್ಮ ಮನಸ್ಥಿತಿಯೋ, ಜೊತೆಗಿದ್ದ ಗೆಳೆಯರೋ, ಇನ್ಯಾವುದೋ ಕಾರಣಗಳಿಂದಲೋ ಅವು ಸ್ಮರಣೀಯವಾಗಿರುತ್ತವೆ. ನನ್ನ ಬಾಲ್ಯದ ಮೆಚ್ಚಿನ ಹತ್ತು ಚಿತ್ರಗಳನ್ನು ಪಟ್ಟಿಮಾಡಲು ಪ್ರಯತ್ನಿಸಿದ್ದೇನೆ. ಇವೇ ಹತ್ತು ಅತ್ಯಂತ ಪ್ರಮುಖ ಚಿತ್ರಗಳಾ ಗೊತ್ತಿಲ್ಲ, ಈ ಕ್ಷಣದಲ್ಲಿ ಜ್ಞಾಪಕ ಬಂದ ಹತ್ತು ಚಿತ್ರಗಳು ಇವು. ಧ್ರುವತಾರೆ ನನಗೆ ನೆನಪಿರುವಂತೆ ನಾನು ನೋಡಿದ … Read more