ಸುಷ್ಮಾ: ಕುಸುಮ ಆಯರಹಳ್ಳಿ
ಸುಮಾರು ಹನ್ನೆರಡು ವರ್ಷಗಳೇ ಕಳೆದಿರಬೇಕು. ಅದರೂ ಈ ಘಟನೆ ಮಾತ್ರ ನನ್ನ ಮನಸಿನಲ್ಲಿ ಇಂದಿಗೂ ಹಸಿ ಹಸಿಯಾಗಿದೆ. ಹತ್ತನೇ ಕ್ಲಾಸಿನವರೆಗೂ ಚಾಮರಾಜನಗರದ ಅಜ್ಜಿಮನೆಯಲ್ಲಿ ಬೆಳೆದ ನಾನು ಆಗಷ್ಟೇ ಅಪ್ಪ,ಅಮ್ಮನನ್ನೂ, ಸ್ವಂತ ಹಳ್ಳಿಯನ್ನೂ, ಪಿಯುಸಿಯನ್ನೂ ಸೇರಿದ್ದೆ. ಸುತ್ತಮುತ್ತಲ ಹಳ್ಳಿಗಳಿಗೆ ಇದ್ದದ್ದು ಅದೊಂದೇ ದೇವಲಾಪುರದ ಪಿಯು ಕಾಲೇಜು. ಬುದ್ದಿವಂತರೂ, ಒಂದಷ್ಟು ಸಾಹಿತ್ಯಾಸಕ್ತಿಯೂ ಇದ್ದ ಸುತ್ತಲ ಹಳ್ಳಿ ಹುಡುಗ-ಹುಡುಗಿಯರಲ್ಲಿ ತುಂಬ ಜನ ಇದೇ ಬ್ಯಾಚಲ್ಲಿದ್ದರು. ಹೆಚ್ಚೆಂದರೆ 100 ಜನ ವಿಧ್ಯಾರ್ಥಿಗಳಿದ್ದ, ಎರಡೇ ಕ್ಲಾಸಿನ ಆ ಕಾಲೇಜಿನಲ್ಲಿ ನಾವು ಚರ್ಚಾಸ್ಪರ್ಧೆ ಮುಂತಾದವಕ್ಕೆ ದೀಪ … Read more