ಅಪರಿಚಿತರು ಪರಿಚಿತರಾದಾಗ: ನಟರಾಜು ಎಸ್.ಎಂ.

ಜಲ್ಪಾಯ್ಗುರಿಯಲ್ಲಿ ರಾಜ್ ಗಂಜ್ ಎಂಬ ಬ್ಲಾಕ್ ಇದೆ. ಬ್ಲಾಕ್ ಎಂದರೆ ನಮ್ಮ ಕಡೆಯ ತಾಲ್ಲೂಕು. ಆ ಬ್ಲಾಕು ಒಂದು ಕಡೆ ಬಾಂಗ್ಲಾ ದೇಶಕ್ಕೆ ಅಂಟಿಕೊಂಡಿದೆ. ಅಂದರೆ ಬಾಂಗ್ಲಾ ದೇಶದ ಬಾರ್ಡರ್ ಈ ಬ್ಲಾಕ್ ನಲ್ಲಿದೆ. ಆ ಬ್ಲಾಕಿನ ಬಾರ್ಡರ್ ನಲ್ಲಿರುವ ಒಂದು ಊರಿನಲ್ಲಿ ಒಮ್ಮೆ ಜಾಂಡೀಸ್ ಕೇಸ್ ಗಳು ಪತ್ತೆಯಾಗಿದ್ದವು. ಅದರ ಇನ್ ವೆಸ್ಟಿಗೇಷನ್ ಗೆ ಅಂತ ಹೋಗಿದ್ದೆ. ನನ್ನ ಜೊತೆ ನಮ್ಮ ಸರ್, ಒಂದಿಬ್ಬರು ಆಫೀಸ್ ಸ್ಟಾಫ್, ವಾಟರ್ ಟೆಸ್ಟಿಂಗ್ ಲ್ಯಾಬೋರೇಟರಿಯಿಂದ ಬಂದಿದ್ದ ಟೆಕ್ನಿಷಿಯನ್ ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಚೇತನ” ಎಂದಾದರೂ “ವಿಕಲ”ವಾಗಲು ಸಾಧ್ಯವೇ?: ಅಮರ್ ದೀಪ್ ಪಿ.ಎಸ್.

ದೇಹದಲ್ಲಿ ಮನುಷ್ಯನಿಗೆ ಯಾವುದಾದ್ರೂ  ಅಂಗ ಊನತೆ ಇದ್ರೆ ಅದಕ್ಕೆ ಅಂಗವೈಕಲ್ಯ ಅಂತ ಲೋಕ ರೂಢಿಯಾಗಿ ಕರೆದು ಬಿಟ್ಟರು.  ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಬರಹಗಾರರು ಅಂಗವೈಕಲ್ಯ ಪದವನ್ನು ಬದಲಾಯಿಸಿ "ವಿಕಲಚೇತನ"ಎಂದು ಕರೆದರು.  ಆಂಗ್ಲದಲ್ಲಿ "physically handicapped" ಅನ್ನುವ ಪದವನ್ನು ಯಥಾವತ್ತಾಗಿ  ಕನ್ನಡೀಕರಿಸಿರಬಹುದು.  ಅದನ್ನೇ ಅಂಥಹವರನ್ನು ನಿಂದಿಸದ ರೀತಿ ಯಲ್ಲಾಗಲಿ ಪ್ರೋತ್ಸಾಹಿಸುವ ರೀತಿಯಲ್ಲಾಗಲಿ  "physically challenged" ಅಂತ ಕರೀಬೇಕು ಅಂತೇನೋ ಆಯಿತು. ಇರಲಿ  ನನ್ನ ಪ್ರಶ್ನೆ ಇರುವುದು  ಈಗ ಈ ಅಂಗ ಊನತೆ ಇರುವ ಜನರನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹ್ಹೋ.. ಏನು ..?: ಅನಿತಾ ನರೇಶ್ ಮಂಚಿ

ನಾಯಿ ಬೊಗಳುವ ಸದ್ದಿಗೆ ಒಬ್ಬೊಬ್ಬರಾಗಿ ಹೊರ ನಡೆದ ನಮ್ಮ ಮನೆಯ ಸದಸ್ಯರು ಯಾರೊಂದಿಗೋ ಏನು ? ಏನು? ಎಂದು ವಿಚಾರಿಸುತ್ತಿರುವುದು ಕೇಳಿಸಿತು. ಮಧ್ಯಾಹ್ನದ ಊಟದ ಸಿದ್ದತೆಯಲ್ಲಿದ್ದ ನಾನು ಯಾರಿರಬಹುದು ಎಂಬ ಕುತೂಹಲದಲ್ಲಿ ಹೊರಗೆ ದೃಷ್ಟಿ ಹಾಯಿಸಿದೆ. ಅರ್ರೇ .. ನಮ್ಮ ಪ್ರೀತಿಯ ಗೌರತ್ತೆ.. ಅದೂ ಕೊಡಗಿನ  ಕಾವೇರಿಯ ಉಗಮಸ್ಥಾನದಿಂದ  ಮೊದಲ ಬಾರಿಗೆ ನಮ್ಮನೆಗೆ ಬರುತ್ತಾ ಇರುವುದು. ನಾವೆಲ್ಲಾ ಅವರ ಮನೆಗೆ ಹೋಗಿ ದಿನಗಟ್ಟಲೆ ಟೆಂಟ್ ಊರುತ್ತಿದ್ದೆವು. ಸ್ವಲ್ಪವೂ ಬೇಸರಿಸಿಕೊಳ್ಳದೇ ಉಪಚಾರ ಮಾಡಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.  ಅಲ್ಲಿಂದ ಮರಳುವಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಕ್ಷಿ ವೀಕ್ಷಣೆಗೊಂದು ದಿನ: ಡಾ. ಅಶೋಕ್ ಕೆ. ಆರ್.

ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಪ್ರವಾಸವೆಂದರೆ ದೂರವೂ ಅಲ್ಲದ ತುಂಬಾ ಹತ್ತಿರವೂ ಅಲ್ಲದ ಉತ್ತಮ ಹೋಟೆಲ್ಲಿಗೋ, ಸಕಲ ಐಷಾರಾಮಿ ಸೌಲಭ್ಯಗಳಿರುವ ರೆಸಾರ್ಟಿಗೋ ಹೋಗಿ ವಾರಪೂರ್ತಿ ಮನೆ ಆಫೀಸಿನಲ್ಲಿ ಮಾಡಿದ್ದನ್ನು ವಾರಾಂತ್ಯದಲ್ಲಿ ಹೊಸ ಜಾಗದಲ್ಲಿ ಮಾಡುವುದಷ್ಟೇ ಆಗಿಹೋಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಹೋಗುವವರ ಸಂಖೈಯೂ ಹೆಚ್ಚುತ್ತಿದೆಯಾದರೂ ಬಹಳಷ್ಟು ಮಂದಿ ನಿರ್ಮಲ ಸ್ಥಳಗಳನ್ನು ಮಲಿನಗೊಳಿಸಿ ಹಿಂದಿರುಗುತ್ತಾರೆ. ಇಂತಹವರ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಲ್ಲದ ತಾಣಗಳ ಕುರಿತು ಮಾಹಿತಿ ಒದಗಿಸುವುದಕ್ಕೆ ಕೊಂಚ ಹಿಂಜರಿಕೆ ಇರುವುದು ಸುಳ್ಳಲ್ಲ. ಪಕ್ಷಿ ವೀಕ್ಷಕರಿಗೆ, ಛಾಯಾಗೃಹಕರಿಗೆ ಕೊಕ್ಕರೆ ಬೆಳ್ಳೂರು ಚಿರಪರಿಚಿತ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೇ ೨೨ ಹಾಗೂ ಜೂನ್ ೫ ರ ನಡುವೆ: ಅಖಿಲೇಶ್ ಚಿಪ್ಪಳಿ

ಮೇ ೨೨ ಜೀವಿ ವೈವಿಧ್ಯ ದಿನ. ಮೇ ತಿಂಗಳು ಕಳೆದ ನಂತರ ಜೂನ್ ಮೊದಲ ವಾರದಲ್ಲೇ ಅಂದರೆ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ. ಈ ಪರಿಸರದಲ್ಲಿ ಎನೆಲ್ಲಾ ವೈವಿಧ್ಯಗಳಿವೆ ಎಂಬುದನ್ನು ಸಂಪೂರ್ಣವಾಗಿ ಅರಿಯಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿವರ್ಷ ಹೊಸ ಸಸ್ಯವೈವಿಧ್ಯ ಹಾಗೂ ಜೀವಿಗಳು ಪತ್ತೆಯಾಗುತ್ತಿರುತ್ತವೆ. ನಿಸರ್ಗ ಅದ್ಯಾವುದೋ ಲೆಕ್ಕಾಚಾರ ಹಾಕಿಯೇ ಜೀವಿಗಳನ್ನು ಸೃಷ್ಟಿ ಮಾಡುತ್ತಿರುತ್ತದೆ. ನಮ್ಮ ಗ್ರಹಿಕೆ ಬರುವ ಮೊದಲೇ ಹಲವು ಜೀವಿಗಳು ನಾಮಾವಶೇಷವಾಗುತ್ತವೆ. ಪ್ರಕೃತಿಯ ಅಗಾಧ ಅಚ್ಚರಿಗಳ ಎದುರು ನಾವು ಹುಲುಮಾವನರಷ್ಟೆ ಸೈ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೈ ಕ್ರೇಝಿ ಲೈಫ್ ಸ್ಟಿಲ್ ಗೋಸ್ ಆನ್..!!: ಸಚಿನ್ ಎಂ. ಆರ್.

ಫ್ಲಾಶ್ ಬ್ಯಾಕ್ ೧ (ಬ್ಲಾಕ್ ಅಂಡ್ ವೈಟ್ ಶೇಡ್):  ಅದು ೨೦೦೫ರ ಇಸವಿ. ಗುಳಿ ಬಿದ್ದ ಕಣ್ಣುಗಳ ಸಾಧಾರಣ ಎತ್ತರದ ತೆಳ್ಳನೆಯ ಬಿಳಿ ಹುಡುಗ ಶಾಲಾ ಗೇಟಿಂದ ಹೊರಬಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಚೀಟಿ ಕೈಲಿತ್ತು. ೮೪% ಮಾರ್ಕ್‌ಸ್ ಬಂದಿತ್ತು. ಒಂದು ಪರ್ಸಂಟ್ ಇಂದ ಡಿಸ್ಟಿಂಕ್ಷನ್ ಮಿಸ್ಸು. ಛೇ.. ಹಳಹಳಿಸಿದ ಆತ..!  ಕಾಲೇಜು ಮೆಟ್ಟಿಲು ಹತ್ತುವ ಹೊತ್ತು. ಅಪ್ಪ ಕೇಳಿದ್ರು ನಿನ್ನ ಮುಂದಿನ ಗುರಿ ಏನೊ? ಅವನುತ್ತರ ಗೊತ್ತಿಲ್ಲಪ್ಪ..,  ಆದ್ರೆ ನಾನು ಸೈಕಿಯಾಟಿಸ್ಟ್ ಆಗ್ತೀನಿ, ಎಲ್ರ ಬುಲ್ಡೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಥಾಕಾಲ: ಪ್ರಶಸ್ತಿ ಪಿ.

ಎಲೆಕ್ಷನ್ನಾದ ಮೇಲೆ ಆಗೊಮ್ಮೆ ಈಗೊಮ್ಮೆಯಾದರೂ ಬರುತ್ತಿದ್ದ ಮಳೆಯ ಸುಳಿವೂ ಇಲ್ಲದೇ ಅದೆಷ್ಟೋ ದಿನಗಳಾಗಿ , ತನ್ನನ್ನು ತಾನೇ ಸುಟ್ಟುಕೊಳ್ಳುವಂತಿದ್ದ ಬಿರುಬೇಸಿಗೆ. ಈ ಸುಡುಬೇಸಿಗೆಯಲ್ಲಿ ಕೂತ ಕುರ್ಚಿಯೂ ಕೊಂಚ ಹೊತ್ತಲ್ಲೇ ಕೆಂಡದಂತೆನಿಸಿದರೆ ಆಶ್ಚರ್ಯರ್ಯವೇನಿಲ್ಲ. ಸ್ವಂತಕ್ಕೇ ಸಮಯವಿಲ್ಲದೀ ಸಮಯದಲ್ಲೊಬ್ಬರ ಹುಡುಕಾಟ ನಡೆದಿದೆ. ಅವ್ರೇ ಕತೆಗಾರ ಕಟ್ಟಪ್ಪ. ಈ ಕಟ್ಟಪ್ಪರಿಗೆ ಕತೆ ಬರೆಯೋದು ಅಂದ್ರೆ ಅದೊಂದು ತಪಸ್ಸು. ಯಾರೋ ಕೇಳಿದ್ರು ಅಂತ, ಏನೋ ನೋಡಿದ್ರು ಅಂತ ತಕ್ಷಣಕ್ಕೆಲ್ಲಾ ಏನೇನೋ ಎಳೆಹೊಡೆದು ಅದು ಕತೆಯಾಗೋದಲ್ಲ.ಈ ತತ್ ಕ್ಷಣದ ಕತೆ ಮತ್ತು ಮೂಡಿದ್ದಾಗ, ಬಿಡುವಿದ್ದಾಗೆಲ್ಲಾ ಒಂದೊಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾನು ಏಕೆ, ಏಕೆ ಹೀಗೆ…?!!!: ಭರತೇಶ ಅಲಸಂಡೆಮಜಲು

                      ಮಾನವ ಜಗದ ಒಂದು ಹಗಳಿರುಳ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆಯುತ್ತಾನೆ. ಕೆಲವು ಒಳ್ಳೆಯ ಅನುಭವಗಳಾದರೆ, ಕೆಲವು ಕೆಟ್ಟ ಅನುಭವಗಳು. ಹಲವು ಸಲ ಅನುಮಾನ, ಅವಮಾನಗಳೇ ಅನುಭವವಾಗಿ ರೂಪಾಂತರವಾಗುತ್ತದೆ. ಕತ್ತಲ ಜೀವದ ಹೃದಯ ಕವಾಟಕ್ಕೆ ಇವುಗಳೇ ದಾರಿದೀಪವಾಗುತ್ತದೆ. ಜಗದಲ್ಲಿ ಉಚಿತವಾಗಿ ದೊರೆಯುವುದೆಂದರೆ ಅದು ಉಚಿತ ಸಲಹೆಗಳು, ಪರಪದೇಶಗಳು, ಹಿತೋಪದೇಶಗಳು ಎಲ್ಲರ ಮನದಲ್ಲೂ ಮನೆಯಲ್ಲೂ ಹರಿದಾಡುತ್ತವೆ, ಕೆಲವು ಮತ್ತೆ ಮತ್ತೆ ಪೀಡಿಸುತ್ತವೆ, ಮಾನಸವನ್ನು ಕಾಡುತ್ತವೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಡಿಯೋ ಸಹಿತ ಪಂಜು ಕಾವ್ಯಧಾರೆ

ಅಮ್ಮ ನಾನು ಕೈಚಾಚಿ ಹನಿಗಳ  ಸ್ಪರ್ಶಿಸಲು  ಇಬ್ಬನಿಯ ಹೊತ್ತ ಚಳಿಗಾಳಿ ಮೈಯ ಅಪ್ಪಲು ನೆಲ ತುಂಬಿ ನಿಂತ ನೀರು ಪಾದಗಳ ಮುತ್ತಿಡಲು ನೀನು ನೆನಪಾಗುತ್ತೀಯ ಅಮ್ಮ ಒದ್ದೆಯಾದ ಮೈ ಒರೆಸಿದಂತೆ ಕೆಸರಾದ ಕಾಲ ನೇವರಿಸಿ  ತೊಳೆದಂತೆ ಅನ್ನಿಸಿಬಿಡುವುದು  ಪ್ರತೀಬಾರಿ ಮಳೆಬರಲು -ಅಕ್ಷಯ ಕಾಂತಬೈಲು                     ನಾ ನಿನ್ನ ಮರೆತು, ತೊರೆಯ ಹೊರಟರೆ ತಾಯಿ  ತನ್ನ ಮಗುವನ್ನು ತೊರೆದಂತೆ  ಮರ ತನ್ನ ಬೇರನ್ನು ತಾನೇ  ಕಡಿದುಕೊಂಡಂತೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾತು ಮುಕ್ಕಿದ ಮೌನ: ನಳಿನಾ ಡಿ.

  ಗೆಳತಿಯರು ಕಳೆದುಹೋಗುತ್ತಾರಾ?  ಆದರೆ ಗೆಳತಿಯರನ್ನು ಜತನದಿಂದ ಸಂಪಾದಿಸುವುದು ಹೇಗೆ?  ಇದು ನಾನು, ನಿನ್ನ ಏಕೈಕ ಗೆಳೆಯ ಎಂದು ಎದೆಯುಬ್ಬಿಸಿ ಹೇಳಿದಾಗಲೆಲ್ಲಾ ನನ್ನ ಸ್ನೇಹದ ಸವಿಯರಿತ ಅವಳ ಮನಸ್ಸು ಉಬ್ಬುವುದು, ಮತ್ತೆ ಜಗತ್ತಿನ ಅತ್ಯಂತ ಸುಖವಾದ ಗೆಳತಿ ನಾನೇ ಕಣೋ, ಅದು ನಿನ್ನಿಂದಾನೇ ಅಂತ ಅವಳ ಸಂಭ್ರಮಿಸಿ ಭತ್ತದ ಹೊಲಗಳ ಹಸಿರು ಬಯಲಿನಲ್ಲಿ ಕೂಗಿದಾಗ, ನನ್ನ ಮನಸ್ಸಿನೊಂದಿಗೆ ದೇಹವೂ ಊರಾಚೆಯಲ್ಲಿ ಗೋಚರಿಸುವ ಗುಡ್ಡದ ಮೇಲೇನೇ ಕೂತುಬಿಟ್ಟಿರತ್ತೆ.  ನನ್ನಷ್ಟು ಎತ್ತರ ಯಾರೂ ಇಲ್ಲ ಎಂಬ ಕೋಡು.    ಐದಾರನೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಂಡ ಒಬ್ಬ ಸೆನ್ಸಿಟಿವ್ ಗೆಳೆಯನಂತೆ ಯಾಕಿರೋಲ್ಲ/ಯಾಕಾಗೋಲ್ಲ?: ಸುಮನ್ ದೇಸಾಯಿ

ಕಪ್ಪುಗಟ್ಟಿರುವ ಆಕಾಶ, ಹೆಪ್ಪುಗಟ್ಟಿರುವ ವಿಷಾದವನ್ನು ಹೆಚ್ಚಿಸುವ ಬಣ್ಣ. ಟೆರೇಸ್ ಮೇಲೆ ಒಬ್ಬಳೇ ಕುಳಿತಿದ್ದೇನೆ. ಮಾತನಾಡುವಾಸೆ. ಅವನು ಜತೆಗಿಲ್ಲ. ಮತ್ತದೇ ಬೇಸರ. ಅದೇ ಸಂಜೆ, ಅದೇ ಏಕಾಂತ. ಅದೇನೋ ಗೊತ್ತಿಲ್ಲ, ಸಂಜೆಗೂ ಬೇಸರಕ್ಕೂ ಎಲ್ಲಿಲ್ಲದ ನಂಟು. ಸಂಜೆಯಾಗುತ್ತಿದ್ದಂತೆ ಮನಸ್ಸು ಮಾತನಾಡಲು ಹಾತೊರೆಯುತ್ತದೆ. ಮನಸ್ಸಿನ ಮಾತು ಕೇಳಿಸಿಕೊಳ್ಳುವವರಿಗಾಗಿ ಹುಡುಕಾಡುತ್ತದೆ. ಮೊಬೈಲ್ನಲ್ಲಿರೋ ಕಾಂಟ್ಯಾಕ್ಟ್ ನಂಬರುಗಳನ್ನೆಲ್ಲಾ ತಡಕಾಡುತ್ತೇನೆ. ಒಬ್ಬರೂ ಸಿಗಲೊಲ್ಲರು. ಹಾಗೆ ಸಿಕ್ಕಿದವರೆಲ್ಲರ ಜತೆ, ಇದ್ದಬದ್ದವರ ಜತೆ ಮನಸ್ಸನ್ನ ಬಿಚ್ಚಿಡಲಾಗುತ್ತದಾ, ಹಂಚಿಕೊಂಡು ಹಗುರಾಗಬಹುದಾ? ಇಲ್ಲವೇ ಇಲ್ಲ. ಅದಕ್ಕೂ ಒಂದು ವಿಶ್ವಾಸಾರ್ಹತೆ ಬೇಕು. ಸ್ನೇಹದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 29): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು ? ೨.    ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಸ್ಥಾಪನೆಯಾದ ವರ್ಷ ಯಾವುದು ? ೩.    ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ ? ೪.    ಅಖಿಲ ಭಾರತ ವಾಖ್‌ಶ್ರವಣ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ ? ೫.    ಇತಿಹಾಸದ ಪಿತಾಮಹ ಯಾರು ? ೬.    ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ ? ೭.    ಭಾರತ ದೇಶಿಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು ? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇಲ್ಲಿ ಎಲ್ಲವೂ ಬದಲಾಗುತ್ತದೆ: ನಟರಾಜು ಎಸ್. ಎಂ.

2006 ರ ಮೇ ತಿಂಗಳ 11ನೇ ದಿನ ಕೋಲ್ಕತ್ತಾದಲ್ಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಅಂದು ನಾನು ಓದುತ್ತಿದ್ದ ನ್ಯೂಸ್ ಪೇಪರ್ ನ ಮುಖಪುಟದಲ್ಲಿ ನಗುತ್ತಿರುವ ಬುದ್ಧದೇವ್ ಭಟ್ಟಾಚಾರ್ಯರ ಮುಖವನ್ನು ಕಾರ್ಟೂನ್ ಮಾಡಿ ನೂರಾ ಎಪ್ಪತ್ತೈದು ಬಾರಿ ಪ್ರಿಂಟ್ ಮಾಡಿದ್ದರು. 175 ಅಂದು ಸಿಪಿಎಂ ಪಕ್ಷ ಪಡೆದಿದ್ದ ಒಟ್ಟು ಸೀಟುಗಳ ಸಂಖ್ಯೆಯಾಗಿತ್ತು. ಸಿಪಿಎಂನ ವಿರೋಧಪಕ್ಷವಾದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ್ ಕಾಂಗ್ರೆಸ್ ಕೇವಲ 30 ಸೀಟುಗಳನ್ನು ಪಡೆದಿತ್ತು. ಒಟ್ಟು 294 ಸೀಟುಗಳಿರುವ ಬೆಂಗಾಳದ ವಿಧಾನ ಸಭೆಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಡಿಯೋ ಸಹಿತ ಪಂಜು ಕಾವ್ಯಧಾರೆ

ಕನ್ನಡ ನಾಡಿನಲಿ  ಶ್ರೀಗಂಧದ ನಾಡಿನಲಿ ಸಹ್ಯಾದ್ರಿಯ ಗೂಡಿನಲಿ ಕಾವೇರಿಯ ಮಡಿಲಿನಲಿ ನನ್ನದೊಂದು ಪುಟ್ಟ ಗುಡಿಸಲು ಕನ್ನಡ ನುಡಿಯು ಮಿನುಗುವುದಲ್ಲಿ ಹಸಿರು ತೋರಣದೊಲು ಹಸಿರನುಟ್ಟ ಭುವನಗಿರಿ ಮುಡಿಯಲಿಟ್ಟು ನವಿಲುಗರಿ ಹಕ್ಕಿಗೊರಲ ತಬ್ಬಿ ಹಿಡಿದು ಚಂದಿರನ ಗಿಲಕಿ ಬಡಿದು ನನ್ನ ಹ್ರುದಯ ಕನ್ನಡವನೆ ಮಿಡಿಯುವುದು ನನ್ನ ಮಡದಿ ಮತ್ಸ್ಯಕನ್ಯೆ ಬಳೆಯ ಸದ್ದು ಗೆಜ್ಜೆನಾದ ಅಡಿಗಡಿಗೂ ಕನ್ನಡ ಸುತನ ಪ್ರವರ ತೊದಲು ನುಡಿಯಲಿ ಸವಿಜೇನು ಕನ್ನಡ ನಮ್ಮ ಮನೆಯ ಅಂಗಳದಿ ಪ್ರಜ್ವಲಿಪುದು ಕನ್ನಡ ರಾಷ್ಟ್ರನುಡಿ ರಾಜನುಡಿ ಯಾವುದಾದರೇನು ದಾಯಾದಿಗಳ ನುಡಿಯ ನಡೆಯು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಂಜಿನ ಮುಸುಕಲ್ಲೂ ಮಾಸದ ಸ್ನೇಹ ಪಯಣ: ಭಾಗ್ಯ ಭಟ್

ಎಲ್ಲಿ ನೋಡಿದರಲ್ಲಿ ಹಸಿರ ಸೊಬಗು… ದಾರಿಯುದ್ದಕೂ ಮನವ ಮುದ್ದಿಸೋ ತಂಪು ಗಾಳಿಯ ಇಂಪು… ತಿಳಿ ನೀಲ ಆಗಸದಿ ಮೆರವಣಿಗೆ ಹೊರಡೋ ಮೋಡಗಳು… ಚಂದದ ಊರಿದು, ಪಕ್ಕಾ ಮಲೆನಾಡ ತಂಪ ಉಣಬಡಿಸೋ ಕಾಫೀ ನಾಡು. ಅದೆಷ್ಟೋ ಚಂದದ ಬೆಟ್ಟ ಗುಡ್ಡಗಳಿಂದ ಕಣ್ಮನ ತಣಿಸುತಿರೋ ಚಿಕ್ಕಮಗಳೂರ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕಲ್ಲತಗಿರಿಗಳ ಸುತ್ತೋ, ನಿಸರ್ಗದ ಅಚ್ಚರಿಗಳ ಸಮೀಕರಿಸೋ ಸಣ್ಣದೊಂದು ಭಾಗ್ಯ ಸಿಕ್ಕಿದ್ದು ಇಲ್ಲಿಗೆ ಬಂದು ವರ್ಷವೊಂದಾದ ಮೇಲೆ.. ಇಲ್ಲಿ ದಕ್ಕಿದ್ದ, ಪಡೆದುಕೊಂಡ ಚಂದದ ಅನುಭವಗಳ ಪದಗಳಲಿ ಹಿಡಿಯೋದು ಕಷ್ಟವೇನೋ…. ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಯತ್ತಿನ ಘರ್ಷಣೆ: ಪಾರ್ಥಸಾರಥಿ ಎನ್.

ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ.  ಮನೆಯಲ್ಲಿ ಅಪ್ಪ ಅಮ್ಮ ಮಲಗಿರುತ್ತಾರೆ,ತಂಗಿ ಓದುತ್ತ ಕುಳಿತಿರಬಹುದು. ಆದಿನದ ಮಟ್ಟಿಗೆ ಕೆಲಸವೇನು ಬಾಕಿ ಇರಲಿಲ್ಲ. ಸರಿ ಹೊರಡೋಣವೆಂದು ಎದ್ದು ನಿಂತ. ಅವನ ಸ್ನೇಹಿತ ಶ್ರೀನಾಥ ಇವನತ್ತ ನೋಡಿದ, ಏನು ಹೊರಟೆ ಅನ್ನುವಂತೆ. ಇಬ್ಬರೂ ಸೇರಿ ದೂರದ ಆ ನಾಡಿನಲ್ಲಿ ಮನೆ ಮಾಡಿದ್ದರು.  "ನಾನು ಹೊರಟಿರುತ್ತೇನೆ"  ಗುರು ನುಡಿದ,  ಶ್ರೀನಾಥನತ್ತ ನೋಡುತ್ತ.  ಶ್ರೀನಾಥ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಂಗುಗಳಾಚೆಯ ’ಪಾಪಿ’ ಪದ್ಯಗಳು: ಜ್ಞಾನೇಂದ್ರ ಕುಮಾರ್

ಯಾವ ವಿಮರ್ಶಕನ ಪುತ್ಥಳಿಯನ್ನೂ  ಯಾವ ಊರ ಸರ್ಕಲಿನಲ್ಲೂ ಇಡುವುದಿಲ್ಲ – ಅನ್ನುತ್ತಲೇ ವಿಮರ್ಶೆಯ ಹಂಗಿನಾಚೆ ಬರೆಯುತ್ತಿರುವವರು ತಾವು ಎಂದು ಘೋಷಿಸಿಕೊಳ್ಳುವ ಕವಿ ಚಕ್ರವರ್ತಿ ಚಂದ್ರಚೂಡ್, ಪದ್ಯ ಹೆಣಿಗೆಯ ಖಚಿತ ಚೌಕಟ್ಟುಗಳಾಚೆಯೇ ನಿಂತು ಬರೆಯುತ್ತಿರುವವರು. ಇತ್ತೀಚೆಗೆ ಬಿಡುಗಡೆಯಾದ ಚಕ್ರವರ್ತಿಯವರ "ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮ ಪದ್ಯಗಳು)" ಕವನ ಸಂಕಲನ ಇದಕ್ಕೊಂದು ನಿದರ್ಶನ.  * ಇಲ್ಲಿನ ಪದ್ಯಗಳನ್ನು ಓದುವಾಗ ಸಾವಿನ ಮನೆಯ ಚಟುವಟಿಕೆಯಂತೆ ವಿಲಕ್ಷಣ ಅನುಭವ ಉಂಟಾಗುತ್ತದೆ. ಅದೊಂದು ಬಗೆಯ ಸತ್ಯದ ಮುಖಾಮುಖಿ, ನಿರಾಕರಿಸುತ್ತಲೇ ಒಪ್ಪಿಕೊಳ್ಳುವ ಬಗೆ ಹಾಗೂ ನಮಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಾಡಿನಲ್ಲಿ ಭಾವಗಳ ಸಂಗಮವಿದೆ: ಪದ್ಮಾ ಭಟ್.

ಹುದುಗಲಾರದ ದುಃಖ ಹುದುಗಿರಿಸಿ ನಗೆಯಲ್ಲಿ ನಸು ನಗುತ ಬಂದೆ ಇದಿರೋ.. ಇನಿತು ತಿಳಿಯದ ಮೂಢನೆಂದು ಬಗೆದೆಯೋ ನನ್ನ. ಹೀಗೆ ಕಿವಿ ಮೇಲೆ ಬೀಳುತ್ತಿರುವ ಹಾಡನ್ನು ಕೇಳುತ್ತಾ ..ನಮಗೆ ನಾಳೆ ಪರೀಕ್ಷೆ ಎನ್ನೋದನ್ನೇ ಮರೆತು ಬಿಟ್ಟಿದ್ದೆ..ಪುಸ್ತಕವನ್ನು ಮಡಚಿ ಬದಿಗಿಟ್ಟು ಕೇಳುತ್ತ ಕೂರುವುದೊಂದೇ ಕೆಲಸ..ಈ ಹಾಡುಗಳು ಎಂತಹ ವಿಚಿತ್ರ ಅಲ್ವಾ? ಮನಸಿನ ಒಂದಷ್ಟು ದುಃಖವನ್ನು ನೋವನ್ನು ಮರೆಯಿಸುವ ಶಕ್ತಿಯಿದೆ. ಭಾವಗೀತೆಗಳನ್ನು ಕೇಳುವಾಗ ನನ್ನ ಬಗ್ಗೆಯೇ ಬರೆದಿದ್ದಾರೆಯೋ ಎನ್ನಸುವಷ್ಟು ಹತ್ತಿರದಿಂದ ಅನುಭವಿಸಿದ್ದುಂಟು.. ಅದೇ ಆ ಒಂಟಿ ರೂಂನಲ್ಲಿ ಹಾಡಿನ ನೆನಪುಗಳ ಕಲರವಗಳಿವೆ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ