ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ
೧. ನಿಜವಾದ ಮಾರ್ಗ ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು. ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?” ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ … Read more