ಎಕ್ಸಟ್ರಾರ್ಡಿ-ನರಿ: ಅಮರ್ ದೀಪ್ ಪಿ.ಎಸ್.
ಅಲ್ಲೊಂದು ಮದುವೆ ನಡೀತಿರುತ್ತೆ. ಮಗಳ ಮದುವೆ ಮಾಡುವಾತ ಕೈಗುಣ ಚೆನ್ನಾಗಿದ್ದ ಅಡುಗೆ ಮಾಡುವವನನ್ನು ಖುದ್ದಾಗಿ ಕರೆದು ಅಡುಗೆ ಮಾಡಲು ಹೇಳಿರುತ್ತಾನೆ. ಪಾಪ, ಕುಕ್ಕು, ತನ್ನ ಪಾಡಿಗೆ ತಾನು ಮದುವೆಯ ಹಿಂದಿನ ದಿನವೇ ಬಂದು ಯಜಮಾನನನ್ನು ಕಂಡು ಅಂಗಿ ಕಳಚಿಟ್ಟು ಕೈಚಳಕದ ರುಚಿ ಜೋಡಿಸಲು ಕೆಲಸಕ್ಕೆ ಒಗ್ಗಿರುತ್ತಾನೆ. ಮದುವೆ ಹಿಂದಿನ ದಿನ ಮತ್ತು ಮದುವೆ ದಿನ ಬಂದ ನೆಂಟರು, ಬಂಧುಗಳು, ಆಪ್ತರು, ಗೊತ್ತಿದ್ದವರು, ಗೊತ್ತಿಲ್ಲದವರೆಲ್ಲರೂ ಬಂದು ಸವಿದ ನಂತರ “ಅಡುಗೆ ಚೆನ್ನಾಗಿದೆ” ಅನ್ನುತ್ತಾರೆ. ಮದುವೆ ಮಾಡಿದ ಯಜಮಾನನಿಗೆ … Read more