ಸತ್ತವನ ಶಿಕಾಯತ್ತುಗಳು : ಪ್ರಸಾದ್ ಕೆ.

  1977 ರ ದಿನಗಳು ಇಪ್ಪತ್ತೆರಡರ ಯುವಕನೊಬ್ಬನಿಗೆ ಬ್ಯಾಂಕಿನಿಂದ ಲೋನ್ ಬೇಕಾಗಿತ್ತು. ಲೋನ್ ಅಂದಾಗ ಕಾಗದ ಪತ್ರಗಳ ಅವಶ್ಯಕತೆ, ಓಡಾಟ ಎಲ್ಲವೂ ಸಹಜವೇ ಅನ್ನಿ. ಆಗಿನ ಕಾಲದಲ್ಲಿ ಈಗಿನಂತೆ ಕರೆದು ಸಾಲ ಕೊಡುತ್ತಿರಲಿಲ್ಲವೋ ಏನೋ! ಇರಲಿ, ವಿಷಯಕ್ಕೆ ಬರೋಣ. ಸೋ ಈ ನಮ್ಮ ಬಡಪಾಯಿ ಯುವಕ ಆ ಸರ್ಟಿಫಿಕೇಟು, ಈ ಸರ್ಟಿಫಿಕೇಟು ಅಂತ ಕಾಗದ ಪತ್ರಗಳನ್ನು ಲಗುಬಗೆಯಿಂದ ಹೊಂದಿಸುತ್ತಲೇ ಇದ್ದ. ಬಹುತೇಕ ಎಲ್ಲಾ ಮುಗಿದ ನಂತರ ತನ್ನ ಗುರುತು ಪ್ರಮಾಣಪತ್ರದ ಸಲುವಾಗಿ ಆತ ರೆವೆನ್ಯೂ ಆಫೀಸಿನ ಬಾಗಿಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಾಡಿಗೆ ಮನೆ: ಗುಂಡುರಾವ್ ದೇಸಾಯಿ

                                                     ಒಂದು ಕಾಲ ಇತ್ತು. ನೌಕರದಾರರಿಗೆ ಅಂದ್ರ ಭಾರಿ ಮರ್ಯಾದೆ. ಅದರಲ್ಲಿ ಶಿಕ್ಷಕರಿಗಂತೂ ಮನೆ-ಗಿನೆನ ಪ್ರತಿಫಲಾಕ್ಷೆ ಇಲ್ಲದೆ  ಕೊಡೋರು. ಊರಾಗ ಹೊಸದಾಗಿ ನೌಕರದಾರರು ವರ್ಗವಾಗಿ ಬಂದರ ಅಂದ್ರ ಸಾಕು ಎಷ್ಟು ಇಂತಿಜಾಮ್ ಮಾಡೋರು. `ನಮ್ಮ ಮನಿಗೆ ಬರ್ರೀ, ಇಲ್ಲ ನಮ್ಮನಿಗೆ ಬರ್ರೀ’ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇಂದಿನ ಫಲಿತಾಂಶವೇ ಕೊನೆಯಲ್ಲಾ: ಮಲ್ಲೇಶ ಮುಕ್ಕಣ್ಣವರ

ಅವತ್ತು ನನ್ನ ಹತ್ತನೇ ತರಗತಿಯ ಫಲಿತಾಂಶ  ಬಂದ ದಿನ. ಒಂದು ಕಡೆ ಬರುವ ಫಲಿತಾಂಶದ ಕುರಿತು ಇನ್ನಿಲ್ಲದ ಆತಂಕ. ಮತ್ತೊಂದೆಡೆ ಸ್ಕೂಲ್ ಲೈಪ್‍ಗೆ ಬೈ ಹೇಳಿ ಕಾಲೇಜ ಮೆಟ್ಟಿಲು ಏರುವ ಸಂತಸ. ಈ ಯಾವ ಭಾವಕ್ಕೂ ಸ್ಪಂದಿಸಿದೆ ಕೈ ಕಾಲುಗಳು ಅತ್ತಿಂದಿತ್ತ ತೂರಾಡುತ್ತಿದ್ದರೆ. ಮನದ ತುಂಬಾ ಅದ್ಯಾವದು ಭಯ ಆವರಿಸಿತ್ತು.  ಅದೇ ಹೆದರಿಕೆಯಲ್ಲಿ ಫಲಿತಾಂಶವನ್ನು ನೋಡಿದೆ. ಅಷ್ಟೊಂದು ಹೇಳಿಕೊಳ್ಳುವ ಮಾಕ್ರ್ಸ ಪಡಿಯದೆಯಿದ್ದರು. ನನ್ನ ಪ್ರಯತ್ನಕ್ಕೆ ತಕ್ಕದಾದದ ಅಂಕಗಳು ಸಿಕ್ಕಿದ್ದವು. ಇದರ ಜೊತೆ ಫಸ್ಟ್ ಕ್ಲಾಸ್ ಎನ್ನುವ  ಸಮಾಧಾನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಒಲೆ ನಜ಼ರುದ್ದೀನ್‌ ತನ್ನ ಮನೆಯ ಅಂಗಳದಲ್ಲಿ ಒಲೆಯೊಂದನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಚೆನ್ನಾಗಿದೆ. ಉತ್ತರಾಭಿಮುಖವಾಗಿರುವುದರಿಂದ ಚಳಿಗಾಲದಲ್ಲಿ ಬೀಸುವ ಶೀತಗಾಳಿಗೆ ಬೆಂಕಿ ಬೇಗನೆ ನಂದಿ ಹೋಗುತ್ತದೆ.” ನಜ಼ರುದ್ದೀನ್‌ ಆ ಒಲೆಯನ್ನು ಕಿತ್ತುಹಾಕಿ ದಕ್ಷಿಣಾಭಿಮುಖವಾಗಿ ಇರುವ ಇನ್ನೊಂದು ಒಲೆಯನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಗಟ್ಟಿಮುಟ್ಟಾಗಿ ಬಲು ಚೆನ್ನಾಗಿದೆ. ಆದರೂ ದಕ್ಷಿಣಾಭಿಮುಖವಾಗಿರುವುದರಿಂದ ಒಂದು ನಿರ್ದಿಷ್ಟ ದಿಕ್ಕಿನಿಂದ ಗಾಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರಳೆಂಬ ಚಿನ್ನದ ಪುಡಿ: ಅಖಿಲೇಶ್ ಚಿಪ್ಪಳಿ

ಈ ಅಂಕಣವನ್ನು ನಿಯಮಿತವಾಗಿ ಓದುತ್ತಿರುವವರಿಗೆ ಈ ಹಿಂದೆ ಬರೆದ “ಕರಿಯನ ಕತೆ” ನೆನಪಿರಬಹುದು. ಅದೊಂದು ನಾಯಿಮರಿಯನ್ನು ತಂದು ಸಾಕಿದ್ದೆ. ಮನೆಯೆದುರಿನ ನುಣ್ಣನೆಯ ರಸ್ತೆಯಲ್ಲಿ ನಸುಕಿನ ಹೊತ್ತು ಅಕ್ರಮ ಮರಳು ಲಾರಿಗಳು ಅತ್ಯಂತ ವೇಗವಾಗಿ ಸಾಗುತ್ತವೆ. ಒಂದು ದಿನ ಮರಳಿನ ಲಾರಿಗೆ ಸಿಕ್ಕುವುದರಿಂದ ಸ್ವಲ್ಪದಲ್ಲಿ ಕರಿಯ ಪಾರಾದ. ಅವತ್ತೇ ಲೆಕ್ಕ ಹಾಕಿ, ಅನಂತಪುರದ ಒಬ್ಬರಿಗೆ ಕರಿಯನನ್ನು ದಾಟಿಸಿ ಬಂದೆ. ಲಾರಿ ಮಾಫಿಯಾ ಯಾವ ಪರಿ ಬೆಳೆದಿದೆಯೆಂದರೆ, ಅದರ ಲೆಕ್ಕಾಚಾರ, ಅನೈತಿಕ ಸಾಮಾನ್ಯರಿಗೆ ನಿಲುಕುವುದೇ ಇಲ್ಲ. ಬೆಂಗಳೂರಿನಲ್ಲಿ ಉಳುಮೆ ಮಾಡುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾವ್ಯಧಾರೆ ಬಿದಲೋಟಿ ರಂಗನಾಥ್, ಯಲ್ಲಪ್ಪ ಎಮ್ ಮರ್ಚೇಡ್, ಸಿಪಿಲೆನಂದಿನಿ

ಕಲ್ಲೆದೆಯ ಮೇಲೆ ಪ್ರೀತಿ ಕೊನರಿಸಿ ಕಲ್ಲೆದೆಯ ಮೇಲೆ  ಪ್ರೀತಿ ಕೊನರಿಸಿ ಹೋದ ಅವಳು ತಿರುಗಿ ನೋಡಿದ್ದು ಕಂಕುಳಲ್ಲಿ ಮಗು ಎತ್ತುಕೊಂಡು. ನೆನಪ ಮರೆಯಲು ಕುಡಿತದ ಬೆನ್ನೇರಲು ನಯಾ ಪೈಸಾ ಕಾಸಿರಲಿಲ್ಲ ದಿನಂಪ್ರತಿ ಸುಡುತ್ತಾ ಹೋದ ಅವಳ ನೆನಪಿಗೆ ಮುಲಾಮು ಹಚ್ಚಲು ಆಗಲಿಲ್ಲ ನೈಜತೆಯ ಹುಡುಕುತ್ತಾ ಹೋದೆ ಅವಳ ಪ್ರೀತಿಯ ಮೇಲೆ ಜಾತಿ ಎಂಬ ಬೆಂಕಿ ಉರಿದ ಹೊಗೆಯ ನಿಶಾನೆ ಇತ್ತು !! ಅವಾಗ್ಗಾಗಲೇ ನೆತ್ತಿಗೇರಿದ್ದ ಪ್ರೀತಿಗೆ ಬೆಂಕಿ ಆರಿಸುವ ನೀರಾಗಲು ಧೈರ್ಯಕ್ಕೆ ಕಣ್ಣು ಕಾಣುತ್ತಿರಲಿಲ್ಲ ಸೋಲಲೇ ಬೇಕಾಗಿತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರು ಲೇಖನಗಳು: ಹೆಚ್ ಎಸ್ ಅರುಣ್ ಕುಮಾರ್, ಅಭಿಷೇಕ್ ಪೈ

ಅವನು ಮತ್ತು ಅವಳು (ಸಣ್ಣ ಕಥೆ) ಸುಂದರ ಸಂಜೆಯಲ್ಲಿ ಸಮುದ್ರದ ತೀರದಲ್ಲಿ ಅವನು ಕುಳಿತಿದ್ದ. ಸುತ್ತಲೂ ಆಡುತ್ತಿದ್ದ ಮಕ್ಕಳು. ಕೈ ಕೈ ಹಿಡಿದು ನಡೆದಾಡುವ ಜೋಡಿಗಳು.ಅವನು ನೋಡುತ್ತಿದಂತೆ ಅವಳು ಸ್ವಲ್ಪ ದೂರದಲ್ಲಿ ಮರಳ ಮೇಲೆ ಬಟ್ಟೆ ಹಾಸಿ ಕುಳಿತಳು.ಮೊಬೈಲಿನಲ್ಲಿ ಏನೋನೋಡುತ್ತಿರುವಂತೆ ಅನಿಸುತ್ತಿತ್ತು.ತಟ್ಟನೆ ತಲೆ ಎತ್ತಿ ನೋಡಿದಳು.ಅವನು ಅವಳನ್ನೇ ನೋಡುತ್ತಿದ್ದ.ಇಬ್ಬರ ಮಖದಲ್ಲೂ ಮಂದಹಾಸ ಮೂಡಿತು.ಅವಳು ಮೆಲ್ಲನೆ ಹತ್ತಿರ ಬಂದು ಕುಳಿತಳು. "ಒಬ್ಬರೇ ಬಂದಿದ್ದೀರಾ ?" ಅವಳ ಪ್ರಶ್ನೆಗೆ ತಲೆಯಾಡಿಸಿದ. ಇಬ್ಬರ ಮಾತಿಗೂ ಕೊಂಡಿ ಸಿಕ್ಕಿತು. "ನೀವು ಕಥೆ ಕವನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೊಟ್ಟೂರ ಜಾತ್ರೆ ಮತ್ತು ಜಯಂತ: ಪಾರ್ಥಸಾರಥಿ ಎನ್

ಜಯಂತ ಅಮ್ಮನ ಕೈ ಹಿಡಿದು ನಡೆಯುತ್ತಿರುವಂತೆ ಸುತ್ತಲು ಕಾಣುತ್ತಿದ್ದ ರಂಗು ರಂಗು ಅವನ ಕಣ್ಣು ತುಂಬುತಿತ್ತು.  ಅಮ್ಮ, ಸರೋಜ ತನ್ನದೆ ರಸ್ತೆಯ ಅಕ್ಕಪಕ್ಕದ ಮನೆಯ ಗೆಳತಿಯರೊಡನೆ ಜಾತ್ರೆಯ  ಸಂಭ್ರಮ   ನೋಡಲು ಹೊರಟಾಗ ಜಯಂತನದೇ ಚಿಂತೆ ಸರೋಜಳಿಗೆ, ಮನೆಯಲ್ಲಿ ಬಿಟ್ಟು ಹೋಗುವಂತಿಲ್ಲ, ಕರೆದುಕೊಂಡು ಹೋಗುವಂತಿಲ್ಲ. ಅಂತಹ ವಯಸ್ಸು ಅವನದು. ಬೆಳೆಯುವ ವಯಸಿನ ಮಕ್ಕಳದೆ ಒಂದು ಸಮಸ್ಯೆ ಬಿಡಿ, ತೀರ ಚಿಕ್ಕ ಮಕ್ಕಳಾದರೆ ಅಮ್ಮಂದಿರು ಎತ್ತಿ ಸೊಂಟದ ಮೇಲೆ ಕೂಡಿಸಿಕೊಂಡು, ಆ ಕಡೆ ಈಕಡೆ ಎನ್ನುತ್ತ ಬಾರ ಬದಲಾಯಿಸುವಂತೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲ್ಲಿಸದಿರು ವನಮಾಲಿ ಕೊಳಲಗಾನವ..: ಅನುರಾಧ ಪಿ. ಸಾಮಗ

ಎಂದಿನಂಥದೇ ಒಂದು ಬೆಳಗು, ಸುಂದರ ಬೆಳಗು. ನಿನ್ನೆಯೊಡಲಿನೆಲ್ಲ ನೋವಿಗೂ ಮುಲಾಮಾಗಬಲ್ಲ ಮುದ್ದಿಸಿ ಎದ್ದೇಳಿಸುವ ಅಮ್ಮನ ನಗುಮುಖದಂಥ, ಅಪ್ಪನ ಮುಖದ ಆಶ್ವಾಸನೆಯಂಥ ಬೆಳ್ಳಂಬೆಳಗು.  ಯಮುನೆ ಹರಿಯುತ್ತಿದ್ದಾಳೆ ಮಂಜುಳಗಮನೆಯಾಗಿ; ಒಡಲಲ್ಲಿ ಮಾತ್ರ ಅತ್ಯುತ್ಸುಕತೆಯ ಉಬ್ಬರ, ಅದೇ ಪರಿಚಿತ ಸುಖದ ಭಾವ. ಎಂದಾಗಿತ್ತೋ ಈ ಅನುಭವ! ತಕ್ಷಣಕ್ಕೆ ನೆನಪಾಗದು, ಹೆಣ್ಣೊಡಲಿನ ಭರತವಿಳಿತಗಳೆಲ್ಲವನ್ನೂ ಸುಮ್ಮಸುಮ್ಮನೆ ಹೊರಗೆಡಹಿ ಉಕ್ಕಿ ಹರಿಯಬಿಡಲಾದೀತೇ, ಜನ ಏನಂದಾರು? ಹಾಗಾಗಿ ತೋರಗೊಡದೆ ಹೊರಗವಳದು ಅದೇ ಗಂಭೀರ ಹರಿವು, ಆದರೂ ಒಳಗಿನ ಅಲೆಗಳ ಏರಿಳಿತವದೆಷ್ಟು ಹೊತ್ತು ಬಚ್ಚಿಡಬಲ್ಲಳೋ ಆಕೆಗೇ ಗೊತ್ತಿಲ್ಲ. ದಡದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪಾಗುವರು: ಶೈಲಜ ಮಂಚೇನಹಳ್ಳಿ

ಈ ಹಿಂದೆ ಸಂಕ್ರಾಂತಿಯ ಮುನ್ನಾದಿನ ನನ್ನ ಪುಟ್ಟ ಕಂಪ್ಯೂಟರ್ ಸೆಂಟರ್‍ಗೆ ಒಂದು ಪ್ರಿಂಟರನ್ನು ಕೊಂಡು ತರಲು ಎಸ್.ಪಿ. ರಸ್ತೆಗೆ ಹೋಗಿದ್ದೆ, ಜೊತೆಯಲ್ಲಿ ನನ್ನಕ್ಕನ ಕಿರಿ ಮಗನನ್ನು ಕರೆದುಕೊಂಡು ಹೋಗಿದ್ದೆ. ಹಲವಾರು ಅಂಗಡಿಗಳಲ್ಲಿ ಹಲವಾರು ಬಗೆಯ ಪ್ರಿಂಟರ್‍ಗಳನ್ನು ಅವುಗಳ ಗುಣ-ಲಕ್ಷಣಗಳನ್ನು, ಬೆಲೆಗಳನ್ನು ಕೇಳಿ ತಿಳಿದುಕೊಂಡು ಅಲ್ಲಿರುವ ಒಂದು ಕಾಂಪ್ಲೆಕ್ಸ್‍ನಲ್ಲಿದ್ದ ಕೆಲವು ಅಂಗಡಿಯಲ್ಲಿ ಕೆಲವು ಪ್ರಿಂಟರ್‍ಗಳನ್ನು ವಿಚಾರಿಸಿ ಕಡೆಗೆ ಒಂದು ಅಂಗಡಿಯಲ್ಲಿ, ನಾನು ತೆಗೆದುಕೊಳ್ಳಬೇಕೆಂದಿದ್ದ ಪ್ರಿಂಟರ್ ಮತ್ತು ಇನ್ನೂ ಹಲವಾರು ಬಗೆಯ ಪ್ರಿಂಟರ್‍ಗಳನ್ನು ಮಾಲೀಕ ಕುಳಿತುಕೊಳ್ಳುವ ಜಾಗವನ್ನು ಸುತ್ತುವರೆದು ಪಟ್ಟಿಯಂತಿದ್ದ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುಬ್ಬೀ ಮದುವೆ: ಕೃಷ್ಣವೇಣಿ ಕಿದೂರ್

   ಮಗಳನ್ನು  ಕರೆದುಕೊಂಡು  ರೈಲು  ಹತ್ತಿದ್ದ  ಭಟ್ಟರು  ಪ್ರಯಾಣದ ಉದ್ದಕ್ಕೂ  ಸುಬ್ಬಿ ಹತ್ತಿರ  ಒಂದೇಒಂದು  ಮಾತನ್ನೂ ಆಡಲಿಲ್ಲ.  ಅಪ್ಪನ  ದೂರ್ವಾಸಾವತಾರಕ್ಕೆ ಹೆದರಿ ಕೈಕಾಲು ಬಿಟ್ಟಿದ್ದ  ಅವಳು  ತೆಪ್ಪಗೆ  ಕುಸುಕುಸು  ಮಾಡುತ್ತ   ಮುಖ  ಊದಿಸಿಕೊಂಡೇ  ಕೂತಳು. ಎರ್ನಾಕುಲಂ   ನಿಲ್ದಾಣ  ಹತ್ತಿರವಾಗಿ ಇನ್ನೇನು  ಇಳಿಯುವ  ಹೊತ್ತು ಬಂತು ಅನ್ನುವಾಗ  ಭಟ್ಟರು  ಕೆಂಗಣ್ಣು  ಬಿಟ್ಟು  ಮಗಳತ್ತ  ದುರುಗುಟ್ಟಿದರು.                         " ಬಾಯಿ ಮುಚ್ಚಿಕೊಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾದಿದೆ ಈ ಮನ ಪ್ರಮೋಷನ್ ಗಾಗಿ: ಚೈತ್ರ ಎಸ್.ಪಿ.

ಎಂದಿಗೂ ವೈವಾಹಿಕ ಜೀವನದ ಕನಸು ಕಂಡವಳಲ್ಲ. ಇಂದು ಕಂಡೆ. ಒಬ್ಬ ಪರಿಪೂರ್ಣ ಮಹಿಳೆಯಾಗಿ ನಾನು ನನ್ನ ಪೂರ್ಣ ಪೂರ್ಣವಾಗಿ ತನ್ನ ಜೀವನವನ್ನು ಸಂತೊಷದಿಂದ ಕಳೆಯುವ ಕನಸ ಕಂಡೆ. ಸಣ್ಣ ಸಣ್ಣ ಕನಸುಗಳು. ಅದು ನಸುಕಿನ ಮಂಜಿನಲ್ಲಿ ಅವನ ಬಿಟ್ಟೇಳಲು ಮನಸ್ಸಿಲ್ಲದಿದ್ದರೂ ತಬ್ಬಿದ ಅವನ ಕೈಯನ್ನು ಬಿಡಿಸಿ ಅವನ ಕಾಲುಗಳಿಗೊಂದು ಸಿಹಿ ಮುತ್ತಿಟ್ಟು ದಿನದ ಕೆಲಸ ಪ್ರಾರಂಭ ಮಾಡುವುದೇ ಅಗಿರಬಹುದು. ಮಾತೃ ಸಮಾನವಾಗಿ ನೋಡುವ ನನ್ನ ಪ್ರೀತಿಯ ಗೋವುಗಳ ಸೇವೆಗೆ ಅವನು ಕೊಟ್ಟ ಪ್ರೋತ್ಸಾಹಕ್ಕೆ ಪ್ರತಿಯಾಗಿ ನಾ ಅವುಗಳೊಂದಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮಖೈದಿ-೩: ಅಭಿಸಾರಿಕೆ

ಇಲ್ಲಿಯವರೆಗೆ ಹೀಗೆ ಯೋಚಿಸುತ್ತಿದ್ದ ವಿಶ್ವನಿಗೆ ಸಮಯವಾಗಿದ್ದೆ ತಿಳಿಯಲಿಲ್ಲ, ಈ ಮಧ್ಯೆ ನರ್ಸ್ ಬಂದು ಎರಡು ಬಾರಿ ಡ್ರಿಪ್ಸ್ ಬದಲಾಯಿಸಿ ಹೋಗಿದ್ದಳು. ವಿಶ್ವ ಬೆಳಗ್ಗೆ ಸ್ಪಂದನ ಕೊಟ್ಟ ಮೊಬೈಲ್ ತೆಗೆಯಲು ಪ್ರಯತ್ನಿಸಿದ, ತುಂಬಾ ಕಷ್ಟವಾಯಿತು ಕೈಗಳಿಗೆ ಆದರೂ ತೆಗೆದು ಸಮಯ ನೋಡಿದ, ಸಂಜೆ ಐದಾಗಿತ್ತು ಸ್ಪಂದನ ಬರಬಹುದೆಂದು ಕಾದು ಕುಳಿತ, ಅವಳ ಸುಳಿವಿರಲಿಲ್ಲ, ಆರಕ್ಕೆ ವಿಶ್ವನಿಗೆ ಕರೆ ಮಾಡಿದ ಸ್ಪಂದನ ತನಗೆ ತುಂಬಾ ಕೆಲಸವಿರುವುದಾಗಿಯೂ ತಾನಿಂದು ಬರುವುದಿಲ್ಲವೆಂದು ಹೇಳಿದಳು, "ನಿನ್ನ ಸ್ನೇಹಿತ ಪ್ರಕಾಶ್ ಫೋನ್ ಮಾಡಿದ್ದರು ಬೆಳಿಗ್ಗೆ ನಿನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ