ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ
೧. ಎರಡು ಮೊಲಗಳ ಬೆನ್ನಟ್ಟಿ ಹೋಗುವುದು. ಕದನ ಕಲೆಗಳ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಾಪಕನನ್ನು ಸಮೀಪಿಸಿ ಕೇಳಿದ: “ಕದನ ಕಲೆಗಳ ಕುರಿತಾದ ನನ್ನ ಜ್ಞಾನವನ್ನು ಇನ್ನೂ ಉತ್ತಮಗೊಳಿಸಿಕೊಳ್ಳು ಬಯಕೆ ನನ್ನದು. ನಿಮ್ಮಿಂದ ಕಲಿಯುವುದರ ಜೊತೆಯಲ್ಲಿ ಇನ್ನೊಂದು ಶೈಲಿಯನ್ನು ಇನ್ನೊಬ್ಬ ಅಧ್ಯಾಪಕರಿಂದ ಕಲಿಯಬೇಕೆಂದಿದ್ದೇನೆ. ಈ ನನ್ನ ಆಲೋಚನೆಯ ಕುರಿತು ನಿಮ್ಮ ಅನಿಸಿಕೆ ಏನು?” ಗುರುಗಳು ಉತ್ತರಿಸಿದರು: “ ಎರಡು ಮೊಲಗಳ ಬೆನ್ನಟ್ಟಿ ಹೋಗುವ ಬೇಟೆಗಾರ ಯಾವುದೊಂದನ್ನೂ ಹಿಡಿಯುವುದಿಲ್ಲ.” ***** ೨. ಏಕಾಗ್ರತೆ ಬಿಲ್ಲುಗಾರಿಕೆಯ ಅನೇಕ ಸ್ಪರ್ಧೆಗಳಲ್ಲಿ ಗೆದ್ದು ಸರ್ವವಿಜೇತನಾಗಿದ್ದ ಯುವ … Read more