ಅಂತರ್ಜಾಲ ಸಮಾನತೆ ಬುಡಮೇಲು ಮಾಡಲು ಫೇಸ್‍ಬುಕ್ ಕಂಪನಿ ಹುನ್ನಾರ: ಜೈಕುಮಾರ್ ಹೆಚ್.ಎಸ್.

 ‘ಫ್ರೀಬೇಸಿಕ್’ ಯೋಜನೆ ವಿರುದ್ದ ನೆಟ್ ಬಳಕೆದಾರರ ಹೋರಾಟ –    ಜೈಕುಮಾರ್.ಹೆಚ್.ಎಸ್ ದಿಕ್ಕುತಪ್ಪಿಸುವ ಜಾಹೀರಾತುಗಳು: ‘ಗಣೇಶ್ ಎಂಬ ಬಡ ರೈತ ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಒಳ್ಳೆಯ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’ ‘ರಾಹುಲ್ ಎಂಬ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯು ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಉತ್ತಮ ಸಂಶೋಧಕನಾಗುತ್ತಿದ್ದಾನೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’ ಇಂತಹ ಫೇಸ್‍ಬುಕ್ ಕಂಪನಿಯ ಹತ್ತಲವು ಜಾಹೀರಾತುಗಳು ಜನತೆಯ ಕಣ್ಣು ಕಿವಿಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಪ್ಪಾ ಬಾಂಬು ……..! (ನಗೆ ಬರಹ): ಗುಂಡುರಾವ್ ದೇಸಾಯಿ

‘ಅಪ್ಪಾ… ಬಾಂಬು ಅಪ್ಪಾ, ಬಾಂಬು’ ಅಂತ ಮಗ ಅಳುತ್ತಾ ಎಬ್ಬಿಸಿದಾಗ ಗರಬಡಿದವನಂತೆ ‘ಹ್ಞಾ! ಎಲ್ಲಿ…ಎಲಿ?್ಲ’ ಅಂತ ತಡಕಾಡಕತಿದೆ. ಹಾಸಿಗೆಯಲ್ಲ ಅಸ್ತವ್ಯಸ್ತವಾಗಿ ಲುಂಗಿ ಇಲ್ಲದೆ ಹಾಗೆ ಓಡಾಡುತ್ತಿದ್ದನ್ನು ನೋಡಿ ಎಲ್ಲರೂ ಏನಾಯ್ತು ಅಂತ ಓಡಿ ಬಂದ್ರು ‘ಬಾಂಬು!ಬಾಂಬೂ…..! ಎಲ್ಲಿ ಬಾಂಬು?’ ಅಂದೆ ‘ಅಯ್ಯೋ ಸವಾರಾತಿವರಗೂ  ಸುಡಗಾಡೂ ಏನೇನೊ ನೋಡತಿರಿ, ಹಿಂಗ ಎದ್ದು ಕಣವರಸ್ತಿರಿ’ ಎಂದ್ಲು ಈಕಿ ಅಷ್ಟರಾಗ ಮಗ ‘ಅಪ್ಪಾ ಬಾಂಬು ಬೇಕು ಅಪ್ಪಾ ಬಾಂಬು ಬೇಕು’ ಎಂದು ಅಳಕೊಂತ ಕುತಿದ್ದ. ನನಗ ಹುಚ್ಚು ಮಬ್ಬು ಕೂಡೆ ಹಿಡಿತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿಟ್ಟಿ ಪಾರ್ಟಿ: ಮೂರ್ತಿ ಎ ಎನ್ ಕೆ

ರೀ. ಮನೇಲಿ ಸ್ವಲ್ಪವೂ ಹಾಲಿಲ್ಲ. ನನ್ನ ಸ್ನೇಹಿತೆ ಬರ್ತಾ ಇದ್ದಾಳೆ. ಒಂಚೂರು ಕಾಫಿ ಮಾಡಿಕೊಡೋಕಾದ್ರು ಬೇಕಲ್ಲ  ಹೋಗಿ ತನ್ನಿ ಅಂದ್ಲು. ನನ್ನ ಅರ್ಧಾಂಗಿ. ಮಟ ಮಟ ಮಧ್ಯಾನ್ಹ. ಬಿಸಿಲು ಬೇರೆ ಜೋರಿದೆ. ಟಿ. ವಿ. ಯಲ್ಲಿ ಸೊಗಸಾದ ಕಾರ್ಯಕ್ರಮ  ಬರ್ತಿದೆ. ಇವೆಲ್ಲದರ ಜೊತೆ ಸ್ವಲ್ಪವೇನು ಹೆಚ್ಚೇ ಸೊಂಬೇರಿತನ ಆವರಿಸಿದೆ. ಈಗ ಆಗಲ್ಲ. ಆಮೇಲೆ ನೋಡೋಣ. ಅಲ್ಲರೀ. ಅಲ್ಲವೂ ಇಲ್ಲ ಬೆಲ್ಲವೂ ಇಲ್ಲ. ಈಗ ಸುತಾರಾಂ ಆಗಲ್ಲ ಅಷ್ಟೆ ಕಡ್ಡಿ ಮುರಿದಂತೆ ಹೇಳಿ ಬಿಟ್ಟೆ. ಎಡವಿ ಬಿದ್ದರೆ ಶೆಟ್ಟರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾವ್ಯ ಧಾರೆ: ಜಯಶ್ರೀ ದೇಶಪಾಂಡೆ, ಬಿದಲೋಟಿ ರಂಗನಾಥ್, ಕು.ಸ.ಮಧುಸೂದನ

ದಾರಿಯಾವುದು ನಕ್ಷತ್ರಲೋಕಕೆ? ಅವಳು ಹೋದಳು ಇವತ್ತೇ. ಹೇಳಲೇ ಇಲ್ಲ ನನಗೆ, ಅಲ್ಲಿ ಕಿಟಕಿ ಅಂಚಿನಿಂದ ಸೂರ್ಯ ಚಂದ್ರರ ಜಾರಿಸಿ ತಂದು ಕಮಾನು ಕಟ್ಟಿದ್ದೆ… ತೋರಣವಿಟ್ಟು ಮೆತ್ತೆ  ಹಾಸಿದ್ದೆ, ಅವಳು ಬಂದೊರಗಿದ ಮೇಲೆ ಆ ಮಡಿಲಿನಲ್ಲಿ ಸುಖಕ್ಕೆ ಹೊಂಚು ಹಾಕಿದ್ದೆ. ಅನವರತ ಕಾದಿದ್ದೆ…. ಹಿತ್ತಲಿನ ಗಿಳಿ ಹೊಸ ಹಾಡು ಹೇಳಿತ್ತು, ಮಾಮರದಲಿ ಚಿಗುರು ಮೂಡಿತ್ತು. ಮಾಮರ ಅವಳದು, ಗಿಳಿಯೂ… ಹಗಲಿರುಳು ಅವಳ ಹಾದಿ ನೋಡುವ  ಹುಚ್ಚಿ ನಾನೊಂದೇ ಅಲ್ಲ! ಅದಕ್ಕೆಂದೇ ಅವಳು ಬರಬೇಕಿತ್ತು! ಹೊರಡುವ ಹೊಸ್ತಿಲಲ್ಲಿ ಹೇಳಿದ್ದಳಲ್ಲ ಇಲ್ಲೆಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಂದನ ಕರೆ: ಲಾವಣ್ಯ ಸಿದ್ದೇಶ್ವರ್

ವಿಜಯ ನರ್ಸಿಂಗ್ ಹೋಮಿನ ಆಪರೇಷನ್ ಥಿಯೇಟರಿನ ಮುಂದೆ, ಪ್ರಭಾಕರ ಶತಪಥ ತಿರುಗುತ್ತಿದ್ದಾನೆ, ಸಾವಿತ್ರಮ್ಮ ಬೆಂಚಿನ ಮೇಲೆ ಏನಾಗುವುದೋ ಎಂಬ ಭಯದಲ್ಲಿ ತನ್ನ ಸೊಸೆ, ಮೊಮ್ಮಗುವಿನ ಸೌಖ್ಯಕ್ಕಾಗಿ ಕಣ್ಣೀರಿಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ, ಒಳಗಿನಿಂದ ಗೌರಿಯ ಅಳು ಎಂಥವರನ್ನು ಕರಗಿಸುವಂತಿದೆ. ********* ಗೌರಿ, ಪ್ರಭಾಕರ್ ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆ ಮನೆಯಲ್ಲಿ ಇನ್ನೂ ಒಂದು ತೊಟ್ಟಿಲು ಕಂಡಿರಲಿಲ್ಲ, ಇದು ಸಾವಿತ್ರಮ್ಮನಿಗೂ ಬೇಸರದ ವಿಷಯವೇ ಆದರೂ ಸೊಸೆಗೆ ಚಿತ್ತವಧೆ ಮಾಡುವಂಥ ಸ್ವಭಾವದ ಹೆಣ್ಣಾಗಿರಲಿಲ್ಲ. ಆದರೂ ಹೋದಲ್ಲಿ, ಬಂದಲ್ಲಿ ಕಡೆ ನಿಮ್ಮ ಸೊಸೆಗಿನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಬಿಲ್’ಕುಲ್ ಸಂಬಂಧ: ಎಚ್.ಕೆ.ಶರತ್

ಸ್ನೇಹಿತರೊಬ್ಬರ ಸ್ಟೇಷನರಿಯಲ್ಲಿ ಅವರೊಂದಿಗೆ ಹರಟುತ್ತ ಕುಳಿತಿದ್ದೆ. ಆಗಾಗ ಗ್ರಾಹಕರು ಬಂದು ತಮಗೆ ಬೇಕಾದ್ದನ್ನು ಖರೀದಿಸಿ ಹೋಗುತ್ತಿದ್ದರು. ಹೀಗೆ ನೋಟ್ ಬುಕ್ಕು, ಫೈಲು, ಪೆನ್ನು ಇತ್ಯಾದಿ ಕೊಳ್ಳಲು ಬಂದ ಬಾಲಕಿಯರಿಬ್ಬರು ತಮಗೆ ಬೇಕಾದ್ದನ್ನೆಲ್ಲ ಖರೀದಿಸಿದ ನಂತರ, ಎಷ್ಟಾಯ್ತು ಅಂತ ಕೇಳಿ ಹಣ ನೀಡುವ ಮುನ್ನ ಬಿಲ್ ಕೊಡಿ ಎಂದು ಕೇಳಿದರು. ಸಾಮಾನ್ಯವಾಗಿ ಅಲ್ಲಿಗೆ ಬರುವ ಗ್ರಾಹಕರು ಬಿಲ್ ಕೇಳುವುದಿಲ್ಲವಾದ್ದರಿಂದ ಫ್ರೆಂಡ್‍ಗೆ ಅಚ್ಚರಿಯಾಯಿತು. ಅವರು ಕಾರಣ ಕೇಳುವ ಗೋಜಿಗೆ ಹೋಗಲಿಲ್ಲವಾದರೂ ಆ ಬಾಲಕಿಯರೇ ತುಂಬು ಉತ್ಸಾಹದಿಂದ, ‘ಮನೆಯವ್ರಿಗೆ ಬಿಲ್ ತೋರುಸ್ಬೇಕು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ ಕೆಂಡದಲ್ಲಿ ಅರಳಿದ ಕಮಲ”: ಇಬ್ಬನಿಯ ಹುಡುಗ ರಾಮು

ಅಲ್ಲೊಂದು ಪುಟ್ಟ ಸಂಸಾರ, ತಂದೆ-ತಾಯಿ, ಮಗಳು-ಮಗ ಈ ಪುಟ್ಟ ಸಂಸಾರದ ಸಂತಸಕ್ಕೆ ಕೊರತೆಯಿರಲಿಲ್ಲ, ಜೀವನದ ಹಾಯಿ ದೋಣಿ ಅಲೆ, ತೆರೆಗÀಳ ಸೆಳೆತವಿಲ್ಲದೆ ಬದುಕಿನ ಪಯಣ ಸಾಗಿತ್ತು. ತಂದೆ ವೈದ್ಯ ತಾಯಿ-ಗೃಹಿಣಿ, ಮಕ್ಕಳು ಬಲು ಬುದ್ದಿವಂತರು, ಚೂಟಿಯಾಗಿದ್ದರು ಬದುಕಿನಲ್ಲಿ ಮುಂದೊಂದು ದಿನ ಪ್ರಜ್ವಲಿಸುವ ನಕ್ಷತ್ರವಾಗುವ ಸುಳಿವು ಈಗಲೇ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ರೂಪಗೊಳ್ಳುತ್ತಿದ್ದರು, ಮಗಳ ಹೆಸರು ಶ್ವೇತಾ, ಹೆತ್ತ ಜೀವಗಳಿಗೆ ಜೀವಜಲ, ಗುರುಗಳಿಗೆ ಸದಾ ಮೆಚ್ಚಿನ ಶಿಷ್ಯೆ, ಚತುರೆ, ಬದುಕಿನಲ್ಲಿ ಗುರಿಯಡೆಗಿನ ತನ್ನ ರಾಮಬಾಣ ಹೂಡುವಲ್ಲಿ ಹಗಲಿರುಳೆಲ್ಲೆನ್ನದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೊಸ ವರ್ಷದ ರೆಸೊಲ್ಯೂಶನ್: ಚಂದನ್ ಶರ್ಮ ಡಿ.

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ಹೇಳುತ್ತಾ… ಇಲ್ಲೊಬ್ಬ ೨೩ ವರ್ಷದ ಇಂಜೆನಿಯರಿ೦ಗ್ ಮುಗಿಸಿ ಕೊನೆಯ ವರ್ಷದ MBA ಅಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಯ ಹೊಸ ವರ್ಷದ ರೆಸೊಲ್ಯೂಶನ್ ಬಗ್ಗೆ ಹೇಳ್ಬೇಕು. ಅವನು Writer ಆಗಬೇಕಂತೆ! ಪಂಜು ಪತ್ರಿಕೆ ಇಂದ  ಲೇಖನ ಬರೆಯೋಕೆ ಸ್ಟಾರ್ಟ್  ಮಾಡ್ತಾನಂತೆ! ಚೇತನ್ ಭಗತ್ ಸ್ಪೂರ್ತಿ ಅಂತೆ! “ಚೇತನ್ ಭಗತ್ ನನ್ ತರಾನೆ; ಬಿ.ಇ ಮೆಕ್ಯಾನಿಕಲ್ ಅಂಡ್ ಒಃಂ ಇನ್ ಫೈನಾನ್ಸ್-ಮಾರ್ಕೆಟಿಂಗ್, ನಾನ್ಯಾಕೆ ನೆಕ್ಸ್ಟ್ ಚೇತನ್ ಭಗತ್ ಆಗಬಾರದು?!” ಅಬ್ಬಾ! ಹಿಂಗೆ ಹೇಳೋ ಇವನಿಗೆ ಎಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಂಕರನಾರಾಯಣ: ಪ್ರಶಸ್ತಿ

ಕಮಲಶಿಲೆಯ ನಂತರ ಹೊರಟಿದ್ದು ಸಿದ್ದಾಪುರದಿಂದ ಹತ್ತು ಕಿ.ಮೀ ದೂರವಿರೋ ಶಂಕರನಾರಾಯಣ ಕ್ಷೇತ್ರಕ್ಕೆ. ಇಲ್ಲಿ ಹರಿ,ಹರರಿಗೆ ಒಟ್ಟಿಗೇ ಪೂಜೆ ನಡೆಯುವುದು ವಿಶೇಷ.ನೆಲದಿಂದ ಒಂದು ಅಡಿಯಷ್ಟು ಕೆಳಗಿರುವ ವಿಷ್ಣುವಿನ ಚಪ್ಪಟೆಯಾದ ಮತ್ತು ಗೋಳಾಕಾರಾದ ಶಿವಲಿಂಗದ ಮೇಲೆ ಸದಾ ನೀರು ಹರಿಯುತ್ತಲೇ ಇರುತ್ತದೆ. ನಮ್ಮ ಎಡಭಾಗದಲ್ಲಿ ಉದ್ಭವಲಿಂಗಗಳಾದ ಶಂಕರಲಿಂಗ(ದೇವರ ಎಡಭಾಗದಲ್ಲಿ) ಮತ್ತು ಬಲಭಾಗದಲ್ಲಿ ವಿಷ್ಣುವಿನಲಿಂಗಗಳಿವೆ.ಲಿಂಗಗಳ ಮೇಲೆ ಸದಾ ಹರಿಯೋ ನೀರನ್ನು ಸುಧಾಮೃತ ತೀರ್ಥ ಎಂದು ಕರೆಯುತ್ತಾರಂತೆ.ದೇಗುಲದ ಹೊರಗಡೆ ಮತ್ತೊಂದು ಪುಟ್ಟ ಗುಡಿಯಲ್ಲಿ ಬೆಳ್ಳಿಯ ಶಂಕರನಾರಾಯಣ ವಿಗ್ರಹವಿದೆ. ಅದರಲ್ಲಿ ಬಲಭಾಗದಲ್ಲಿ ಮೀಸೆ,ಶೂಲ, ಚರ್ಮಾಂಬರನಾಗಿಯೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಸಿಹಿ ಜಗಳಗಳು ಒಂದು ದಿನ ಮುಲ್ಲಾ ನಜರುದ್ದೀನ್‌ ತನ್ನ ಹೆಂಡತಿಯೊಂದಿಗೆ ಜಗಳವಾಡಿದ. ಅವನ ಕಿರುಚಾಟ ಕೇಳಲಾಗದೆ ಅವನ ಹೆಂಡತಿ ನೆರೆಮನೆಗೆ ಓಡಿಹೋದಳು. ಮುಲ್ಲಾ ಅವಳ ಹಿಂದೆಯೇ ಅಲ್ಲಿಗೂ ಹೋದ. ನೆರೆಮನೆಯವರು ಬಲು ಕಷ್ಟದಿಂದ ಇಬ್ಬರನ್ನೂ ಸಮಾಧಾನಪಡಿಸಿ ಚಹಾ ಹಾಗು ಮಿಠಾಯಿಗಳನ್ನು ಕೊಟ್ಟರು. ತಮ್ಮ ಮನೆಗೆ ಹಿಂದಿರುಗಿದ ನಂತರ ಪುನಃ ಮುಲ್ಲಾ ಜಗಳವಾಡಲಾರಂಭಿಸಿದ. ಹೊರಗೋಡಲೋಸುಗ ಅವನ ಹೆಂಡತಿ ಬಾಗಿಲು ತೆಗೆದೊಡನೆ ಮುಲ್ಲಾ ಸಲಹೆ ನೀಡಿದ, “ಈ ಸಲ ಬೇಕರಿಯವನ ಮನೆಗೆ ಹೋಗು. ಅವನು ಸ್ವಾದಿಷ್ಟವಾದ ಕೇಕ್‌ಗಳನ್ನು ತಯಾರಿಸುತ್ತಾನೆ!” … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 86): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು 1.    ನೆಹರೂ ಸಾಕ್ಷರತಾ ಪ್ರಶಸ್ತಿಯನ್ನು ನೀಡುವ ಸಂಸ್ಥೆ ಯಾವುದು? 2.    ಎಸ್.ಐ.ಟಿ.ಈ ನ ವಿಸ್ತೃತ ರೂಪವೇನು? 3.    ಬೀರ್‍ಬಲ್ ಸಾಹ್ನಿ ಇನ್ಸ್‍ಸ್ಟಿಟ್ಯೂಟ್ ಫಾರ್ ಪಾಲಿಯೊಬಾಟನಿ ಎಲ್ಲಿದೆ? 4.    ಲವಂಗಗಳ ದ್ವೀಪ ಎಂದು ಯಾವುದನ್ನು ಕರೆಯುತ್ತಾರೆ? 5.    ಭಾಕ್ರನಂಗಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ? 6.    ‘ಎ ಫಾರೆನ್ ಪಾಲಿಸಿ ಫಾರ್ ಇಂಡಿಯಾ’ ಕೃತಿಯ ಕರ್ತೃ ಯಾರು? 7.    ಕೋಲ್‍ಟಾರ್‍ನ ತಯಾರಿಕೆಯಲ್ಲಿ ಬಳಸುವ ಕಲ್ಲಿದ್ದಲು ಯಾವುದು? 8.    ಕರ್ನಾಟಕದಲ್ಲಿ ಭೂಗರ್ಭ ಇಲಾಖೆಯನ್ನು ಸ್ಥಾಪಿಸಲಾದ ವರ್ಷ ಯಾವುದು? 9.   … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಫಟಾಫಟ್ ಅಡಿಗೆ!!: ಎಸ್. ಜಿ. ಶಿವಶಂಕರ್

ಐದು ದಿನಗಳಿಂದ ಫ್ಯಾಕ್ಟ್ರಿಗೆ ಲೇಟಾಗುತ್ತಿತ್ತು. ಇಂದು ಏನಾದರೂ ಸರಿ, ಸರಿಯಾದ ಸಮಯಕ್ಕೆ ಫ್ಯಾಕ್ಟ್ರಿ ತಲುಪಲೇಬೇಕೆಂದು ಹಠದಿಂದ ಹೊರಟಿದ್ದೆ. ಸೈರನ್ನಿಗೆ ಐದು ನಿಮಿಷ ಮುಂಚೆಯೇ ಹಾಜರಿ ಬೆರಳಚ್ಚು ಒತ್ತಿ ಡಿಪಾರ್ಟುಮೆಂಟು ಸೇರಿದೆ. ಇನ್ನೂ ಚುಮುಚುಮು ಕತ್ತಲು! ಮಹಡಿಯಲ್ಲಿದ್ದ ನನ್ನ ಚೇಂಬರಿನಲ್ಲಿ ವಿಸಿಟರ್ಸ್ ಕುರ್ಚಿಯಲ್ಲಿ ಯಾರೋ ಕೂತಿದ್ದರು!! ಇನ್ನೂ ಆಗಷ್ಟೇ ಷಾಪಿಗೆ ಜನ ಬರುತ್ತಿದ್ದರು. ಅಷ್ಟು ಬೆಳಿಗ್ಗೆ ನನ್ನ ಚೇಂಬರಿಗೆ ಯಾವ ವಿಸಿಟರ್ಸೂ ಬರಲು ಸಾಧ್ಯವಿರಲಿಲ್ಲ! ಅಂದರೆ ಅಲ್ಲಿ ವಕ್ಕರಿಸಿರುವವರು ಯಾರು ಎಂದು ಅಚ್ಚರಿಯಾಯಿತು. ಹಾರರ್ ಸಿನಿಮಾಗಳು ನೆನಪಾದವು! ಕಳೆದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾವು ಮತ್ತು ನಮ್ಮ ಸ್ವಭಾವಗಳು: ಅನಿತಾ ನರೇಶ್ ಮಂಚಿ

             ನಮ್ಮ ಹಟ್ಟಿಯಲ್ಲೆರಡು ಎಮ್ಮೆಗಳಿದ್ದವು.  ಮೇವು ಹಾಕುವಾಗ ಹುಲ್ಲಿನ ಕಂತೆಯನ್ನು ಎರಡು ಪಾಲು ಮಾಡಿ ಸಮಾನವಾಗಿ ಹಂಚಿ ಹಾಕಲಾಗುತ್ತಿತ್ತು. ಆ ಎಮ್ಮೆಗಳು ತಮ್ಮ ಪಾಲಿನ  ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಬದಲಿಗೆ ತಮ್ಮದಲ್ಲದ ಮೇವಿನ ರಾಶಿಯಿಂದ ಎಷ್ಟು ಎಟಕುತ್ತದೋ ಅಷ್ಟನ್ನು ಮೊದಲು ತಿನ್ನಲು ತೊಡಗುತ್ತಿದ್ದವು.  ಆಗಾಗ ಸಿಟ್ಟಿನಲ್ಲಿ ಕೊಂಬಿನಿಂದ ತಿವಿದುಕೊಳ್ಳುವುದು, ಹೊಳ್ಳೆಯರಳಿಸಿ ಉಸಿರು ಬಿಡುವುದು ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದವು. ಒಂದು ಹುಲ್ಲಿನ ಚೂರೂ ಉಳಿಯದಂತೆ ತಿಂದರೂ ತಮಗೇನೋ ಕಮ್ಮಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

” ರಾಮನಾಥಪುರ ಜಾತ್ರಾ ವೈಭವ”: ಹೊರಾ.ಪರಮೇಶ್ ಹೊಡೇನೂರು(ರುದ್ರಪಟ್ಟಣ)

  (ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರವೆಂದು ಜನಪ್ರಿಯವಾಗಿರುವ ಅರಕಲಗೂಡು ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ "ರಾಮನಾಥ ಪುರ"ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ 17 ರಂದು ರಧೋತ್ಸವವು ಜರುಗಿದ್ದು ಮುಂದಿನ ತಿಂಗಳ(ಜನವರಿ) 16ರವರೆಗೂ ನಡೆಯುವ ಜಾತ್ರೆಗೆ ಮುನ್ನುಡಿಯಾಗಿದೆ. ಈ ನಿಮಿತ್ಯ ಜಾತ್ರಾ ವೈಭವ ಮತ್ತು ಬದಲಾಗುತ್ತಿರುವ ಸ್ವರೂಪ ಕುರಿತ ಲೇಖನವಿದು) ಪುರಾಣ ಕಾಲದಲ್ಲಿ ಸೀತೆಯನ್ನು ಅಪಹರಿಸಿದ ರಾವಣೇಶ್ವರನನ್ನು ಸಂಹರಿಸಿದ ಶ್ರೀರಾಮನು ತನಗೆ ಬ್ರಹ್ಮ ಹತ್ಯೆ ದೋಷ ಕಾಡದಿರಲೆಂದು ವಾಸವಾಪುರಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಡವರ ನಿರ್ಮೂಲನೆಯೋ, ಬಡತನದ ನಿರ್ಮೂಲನೆಯೋ !?: ಆಶಿಕ್ ಮುಲ್ಕಿ

(ಬಡವರು ಬಡವರಾಗಿಯೇ ಇರೋವುದು ಯಾರತಪ್ಪು ? ಬಡವರನ್ನು ಬಡವರೆಂದು ಕರೆದು ತುಳಿತಕ್ಕೊಳಪಡಿಸಿರೋವುದು ಸರ್ಕಾರವೇ ಎಂದರೆ ತಪ್ಪಾಗಲಾರದು. ಬಡತನಕ್ಕೆ ಕೇವಲ ಸರ್ಕಾರವಷ್ಟೆ ಹೊಣೆಯಲ್ಲ. ದಿನದಿಂದ ದಿನಕ್ಕೆ ಸಂಖ್ಯೆಯಲ್ಲೂ ಗಾತ್ರದಲ್ಲೂ ಹೆಚ್ಚುತ್ತಿರುವ ಎಂ.ಎನ್.ಸಿ ಕಂಪೆನಿಗಳೂ ಕೂಡ ಇದಕ್ಕೆ ಕುಮ್ಮಕ್ಕು ನೀಡಿತ್ತಿವೆ.)  ಹೌದು! ಇತ್ತೀಚಿನ ಪರಿಸ್ಥಿತಿ ನೋಡುವಾಗ ಇಂತಹಾ ಒಂದು ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ದಿನ ನಿತ್ಯ ಒಂದೊತ್ತು ಊಟ ಇಲ್ಲದೆ ಕಣ್ಣೀರಿಟ್ಟು ಜೀವನ ‘ಕಳೆಯುವ’ ಅದೆಷ್ಟೋ ಜನರು ನಮ್ಮ ಮುಂದೆ ಇದ್ದಾರೆ. ಆದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲಾ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಭಾಗ 1): ಅಖಿಲೇಶ್ ಚಿಪ್ಪಳಿ

(ವಾಸ್ತವಿಕ ನೆಲೆಗಟ್ಟಿನ ನೋಟ) ಈ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಹಾಗೂ ನಿರ್ಲಕ್ಷಿತ ಸಮಸ್ಯೆಯೆಂದರೆ ವಾತಾವರಣ ಬದಲಾವಣೆ ಅಥವಾ ಹವಾಮಾನ ವೈಪರೀತ್ಯ. 18ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಎಣೆಯಿಲ್ಲದ ಅರಣ್ಯ ನಾಶ ಇದಕ್ಕೆ ಮೂಲ ಕಾರಣ. ಇದಕ್ಕೆ ಮನುಷ್ಯನೇ ನೇರ ಕಾರಣವಾಗಿದ್ದಾನೆ ಎನ್ನುವುದು ಅಂಗೈ ಮೇಲಿನ ಹುಣ್ಣಿನಷ್ಟೇ ಸತ್ಯ. ಪ್ರಪಂಚದ ಬಹುಪಾಲು ಜನ “ಹವಾಮಾನ ವೈಪರೀತ್ಯ”ದ ಹಾಗೂ ಅದರ ಫಲಿತಾಂಶದ ಕುರಿತು ಅವಜ್ಞೆ ಹೊಂದಿದ್ದಾರೆ. ಸಾಮೂಹಿಕವಾಗಿ ನಿರ್ಮಿಸಿದ ಈ ಸಮಸ್ಯೆಯನ್ನು ಒಬ್ಬರಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನ ಪ್ಯಾರಂಡ್ ಲೌಲಿ…: ಮಂಜುಳ ಎಸ್.

                 ಘಮ್ಮೆನ್ನುವ ಹಸಿ ಮೈಯ್ಯ ವಾಸನೆಯಿಂದ ಆಗ ತಾನೆ ಮಿಂದು ಎದ್ದಿದ್ದೆ, ಮಣ್ಣಿನ ಗೋಡೆಗೆ ಮೆತ್ತಿಸಿದ್ದ ಕನ್ನಡಿ ಮುಂದೆ ನಿಂತು, ಮುಖವನ್ನು ವೃತ್ತಾಕಾರವಾಗಿ ತಿರುಗಿಸುತ್ತಾ, ಕೀವುಗಟ್ಟಿದ ಮೊಡವೆಗಳೊಂದಿಗೆ ಮಾತಾಡುತ್ತಿದ್ದೆ. ಕಪ್ಪು ಚರ್ಮವನ್ನು ಬಿಳಿಯಾಗಿಸುವ ಕನಸು ಕಾಣುತ್ತಿದ್ದೆ. ಆಗಾಗ ಮಡಕೆತಳ ಎಂದು ಛೇಡಿಸುವ ಗೆಳತಿಯರ ಮಾತು, ಒಮೊಮ್ಮೆ ನಾನೇ ನಿಂಗೆ ಗತಿ ಕಣೇ ಎಂದು ರೇಗಿಸುವ ಮುವತ್ತೆರಡರ ಸೋದರ ಮಾವನ ಮಾತು, ನನ್ನ ಕನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿತ್ತು. ಶಾಲೆಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯ: ಸಿದ್ರಾಮ ತಳವಾರ, ಉಕುಮನಾಳ ಶಿವಾನಂದ ರುದ್ರಪ್ಪ

ಮೌಢ್ಯತೆ,,, ಯಾವುದೋ ದಶಕಗಳಾಚೆ ಜುಟ್ಟು  ಜನಿವಾರಗಳ ಧರಿಸಿ ಅರೆಬೆತ್ತಲೆಯಲಿ ಕಾಯಕವಿರದೇ ಮಂತ್ರ ಜಪಿಸುತಿದ್ದವರೆಲ್ಲ ಇಂದು ಮೆತ್ತಗಾಗಿರಬಹುದು,,             ಆದರೆ, ಅವರು ಕಲಿಸಿದ ಹೀನ ಪಾಠ ಮಾತ್ರ             ಹೊತ್ತಿ ಉರಿಯುತಿದೆ ಇಂದಿಗೂ;             ಉಳ್ಳವರು ಬಿಟ್ಟರೂ ಮಾನಸಿಕ ಕಾಯಿಲೆಯಂತೆ             ಜಾತೀಯತೆಯ ವಿಷ ಇವರಿಂದ ಹೊರಹೋಗುತ್ತಲೇ ಇಲ್ಲ,, ದೊಡ್ಡವರೆಂದೆನಿಸಿಕೊಂಡವರೆಲ್ಲ ಹೀಗೆ ಒಂದಿನ ಗೊತ್ತಿಲ್ಲದೇಯೇ ನನ್ನ ಒಳ ಕರೆದರು ಆತ್ಮೀಯತೆಯಲೇ ಮುಗುಳ್ನಕ್ಕು ಪ್ರಶ್ನಿಸಿಯೇ ಬಿಟ್ಟರು ನೀವು ಯಾವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀರೆಂಬ ಟಾನಿಕ್: ಪ್ರಶಸ್ತಿ

ಇವತ್ತಿನ ದಿನಪತ್ರಿಕೆಯಲ್ಲಿ ಜನಪ್ರಿಯ ನಟಿ ಪ್ರಿಯಾಮಣಿ ಅವರ ಸಂದರ್ಶನ ಓದುತ್ತಿದ್ದೆ. ನೀರೇ ನನ್ನ ಫಿಟ್ನೆಸ್ ಮೂಲ.ಚೆನ್ನಾಗಿ ನೀರು ಕುಡಿಯೋದ್ರಿಂದ ಫ್ಯಾಟ್ ಬರ್ನ್ ಆಗುತ್ತೆ. ಆರೋಗ್ಯವೂ ಚೆನ್ನಾಗಿರುತ್ತೆ ಎಂದು ಅವರು ಹೇಳ್ತಾ ಇದ್ದಿದ್ದನ್ನು ಓದುತ್ತಿದ್ದ ನನ್ನ ಮನಸ್ಸು "ನೀರಿನಿಂದ ಫ್ಯಾಟ್ ಬರ್ನ್" ಅನ್ನೋ ವಾಕ್ಯದಲ್ಲಿ ನಿಂತೇ ಹೋಯ್ತು. ಹೆಚ್ಚು ನೀರು ಕುಡಿಯೋದ್ರಿಂದ ದೇಹದ ಕಷ್ಮಲಗಳ ಹೊರಹಾಕೋ ಪ್ರಕ್ರಿಯೆಗೆ ಸಹಾಯವಾಗಿ ದೇಹ ಆರೋಗ್ಯಕರವಾಗುತ್ತೆ ಅಂತ ಬೇರೆಡೆಯೂ ಓದಿದ್ದರೂ ಈ ಫ್ಯಾಟ್ ಬರ್ನಿನ ಸತ್ಯಾಸತ್ಯತೆ ಪರೀಕ್ಷಿಸಲೇ ಬೇಕು ಮತ್ತು ಹೆಚ್ಚು ನೀರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ