ಪ್ರೇಮವೆಂಬ ಸರಿಗಮಪ…: ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ

‘ನಿನ್ನ ಕಣ್ಣ ಕಾಡಿಗೆಯಂತೆ ಕಾಪಿಟ್ಟುಕೊಂಡು ಬರುವೆ’ ಎಂದೆಯಲ್ಲ. ಆ  ನಿನ್ನ ಮಾತಿನಲ್ಲಿ ಎಷ್ಟು ಪ್ರೀತಿ ಇತ್ತು ಅನ್ನೋದು ಗೊತ್ತಾದಾಗ ಎಷ್ಟು ಖುಶಿ ಆಯ್ತು ಗೊತ್ತಾ? ಕ್ಷಮಿಸು.. ಒಂದು ಕ್ಷಣ ನಿನ್ನ ಮೇಲೆ ಸಂಶಯ ಪಟ್ಟಿದ್ದಂತೂ ನಿಜ. ಈಗ ನಾನು ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಕ್ರಮೇಣ ನಿನ್ನ ಪ್ರೀತಿಯ ಆಳವನ್ನು ಕಂಡು ಪುಳಕಿತಳಾದೆ.. ನಿನಗೊತ್ತಾ… ನಿನ್ನ ಪ್ರೀತಿಯನ್ನು ಸ್ವೀಕರಿಸುವ ಧೈರ್ಯವೂ ನನ್ನಲ್ಲಿರಲಿಲ್ಲ…ನಿನ್ನಿಂದ ದೂರವಾಗುವ ಕಲ್ಪನೆಯನ್ನೂ ಮಾಡುವ ಸ್ಥಿತಿಯಲ್ಲೂ ನಾನಿರಲಿಲ್ಲ.. ಅರ್ಥೈಸಿಕೊಳ್ಳಬಲ್ಲೆ ಅಲ್ವಾ ನನ್ನ ಪರಿಸ್ಥಿತಿಯನ್ನು…ಆ ಕಾರಣಕ್ಕಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಮೊದಲ ಸಾಲಿನ ಹುಡುಗಿ ಸರಿಗಮಪದ ಹಿಡಿದು ತಂತಿಯ ಮೇಲೆ   ಹರಿಸಿ ಉಕ್ಕಿಸುವ ಆಲಾಪದಮಲು  ಎದೆಗೆ ಅಪ್ಪದ ಸಿತಾರಿನ ಮೇಲೆ ಸರಿವ ಅವನ ಸಪೂರ ಬೆರಳುಗಳು ಅವಸರದಲ್ಲಿ ತುಡಿವ ಸರಸದಂತೆ ಏನೊ ಮುಚ್ಚಿಟ್ಟ ಗುಟ್ಟುಬಿಚ್ಚಿ ಕಿವಿಗೆ  ಪಿಸುಗುಟ್ಟುತ್ತಿರುವಂತೆ ಅವನ ತೆಳು ತೆರೆದು ಮುಚ್ಚುವ ಎಸಳ ತುಟಿಗಳು ಉದ್ದ ಕೂದಲ ಸರಿಸಿ ಹಿಂದಕ್ಕೊಗೆವ ಠೀವಿಯ ಹೊಳಪಿನ ಭಾವ ಮುಖ ಮುಚ್ಚಿಬಿಡುವ ದಟ್ಟ ಕಪ್ಪು ಕಣ್ಣುಗಳು  ಕಣ್ಣುಮುಚ್ಚಾಲೆಯಲ್ಲಿ ರಾಗದೆಳೆಗಳು ಆಲಾಪಕ್ಕೆ ತಲೆದೂಗುವ ಒಳ ಆಸೆಗಳು ತಾಳ ಲೆಕ್ಕಕ್ಕೆ ಪಕ್ಕಾಗದ ಹಸ್ತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಡು(ವ) ಕಟ್ಟುವ ಕತೆ!! ಭಾಗ-6: ಅಖಿಲೇಶ್ ಚಿಪ್ಪಳಿ

ಬಿದಿರಿಗೆ ಬಂದ ಆಪತ್ತು ಮನುಷ್ಯನ ಜೀವನಕ್ಕೆ ಹೋಲಿಸಿದರೆ ಭೂಮಿಯ ವಯಸ್ಸು ಅಗಾಧವಾದದು. ವಿಜ್ಞಾನಿಗಳು ಹೇಳುವಂತೆ 460 ಕೋಟಿ ವರ್ಷಗಳು. ಅಗ್ನಿಯ ಗೋಲವಾಗಿದ್ದ ಭೂಮಿಯ ಚೂರು, ಕೋಟಿ ವರ್ಷಗಳಿಂದ ವಾತಾವರಣಕ್ಕೆ ಸಿಲುಕಿ, ತರ-ತರಹದ ರಾಸಾಯನಿಕ ಕ್ರಿಯೆಗೊಳಪಟ್ಟು 420 ಕೋಟಿ ವರ್ಷಗಳು ಬೆಂಗಾಡಾಗಿಯೇ ಇತ್ತು. ಭೂಮಿಯ ಈ ವಯಸ್ಸಿನಲ್ಲಿ ಹೂ ಅರಳಿ, ಜೀವೋತ್ಪನ್ನಕ್ಕೆ ನಾಂದಿಯಾಯಿತು. ಅಂತೂ ಮಾನವನೆಂಬ ಪ್ರಾಣಿ ಜನಿಸಿ, ಕಾಡಿನಲ್ಲಿ ಜೀವ ನಡೆಸಿ, ಬೆಂಕಿಯನ್ನು ಕಂಡು ಹಿಡಿದು, ಕೃಷಿಯನ್ನು ಕಲಿತು ನಾಗರೀಕನೆಂಬ, ವಿಜ್ಞಾನಿಯೆಂಬ, ವಿವೇಕನಂತನೆಂಬ, ವಿಚಾರವಂತನೆಂಬ ನಾನಾ ತರಹದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮಖೈದಿ-೨: ಅಭಿ ಸಾರಿಕೆ

ಸ್ಪಂದನ ಅವನೊಂದಿಗೆ ಮಾತಾನಾಡಲು ನಿಲ್ಲಿಸಿದ ಬಳಿಕ ವಿಶ್ವನಿಗೆ ಹುಚ್ಚು ಹಿಡಿದಂತೆನಿಸಿತು, ಹೇಗಾದರೂ ಅವಳ ಸ್ನೇಹ ಮತ್ತೆ ಬೇಕೆನಿಸಿತು. ಅವತ್ತಿಗೆ ಸ್ಪಂದನಳ ಪರೀಕ್ಷೆ ಮುಗಿದಿತ್ತು. ಇಷ್ಟು ದಿವಸಗಳ ಪರೀಕ್ಷೆಯ ಗುಂಗಲ್ಲಿ ವಿಶ್ವನನ್ನು ಸ್ವಲ್ಪಮಟ್ಟಿಗೆ ಮರೆಯಲು ಸಾಧ್ಯವಾಗಿದ್ದರೂ ಪೂರ್ತಿ ಮರೆತಿರಲಿಲ್ಲ, ಹೇಗಿರುವನೋ ಏನೋ ಎಂದುಕೊಳ್ಳುತ್ತ ಊರಿಗೆ ಹೊರಡುವ ತಯಾರಿಯಲ್ಲಿದ್ದಳು, ಇನ್ನೇನು ಬಸ್ ನಿಲ್ದಾಣ ತಲುಪುವ ವೇಳೆಗೆ ಧುತ್ತನೆ ಪ್ರತ್ಯಕ್ಷನಾದ ವಿಶ್ವ, ಕೈಯಲ್ಲಿ ಪುಟ್ಟ ಕವರ್ ಇತ್ತು, ಸ್ಪಂದನಳನ್ನು ನೋಡಿ ಮುಗುಳ್ನಕ್ಕು ಆದರೆ ಇವಳು ನಗಲಿಲ್ಲ, ಅವನೇ ಮಾತಿಗಿಳಿದ, "ದಯವಿಟ್ಟು ನನ್ನನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಳುವ ಧ್ವನಿಯು ಎಲ್ಲಿಂದ?: ಲತಾ ಆಚಾರ್ಯ

     ಅದೊಂದು ಹೆಚ್ಚು ಜನಸಂಚಾರವಿರದ ಪ್ರದೇಶ. ಸುತ್ತಲೂ ಗುಡ್ಡ, ಪೊದರುಗಳು. ಒಂದಕ್ಕಿಂತ ಒಂದು ವಿಭಿನ್ನ. ಆದರೂ ಸೂಕ್ಷ್ಮವಾಗಿ ನೋಡಿದರೆ ಅಲ್ಲೊಂದು ಮನೆ ಕಾಣುತ್ತಿತ್ತು. ಅಲ್ಲಿದ್ದವರು ಶಾಂತಿ ಅವಳ ಗಂಡ ರಘು ಮತ್ತು ಅತ್ತೆ ಕಮಲಮ್ಮ. ದಿನ ನಿತ್ಯದ ಮನೆಗೆ ಬೇಕಾದ ವಸ್ತುಗಳ ಖರೀದಿಗೆ ನಾಲ್ಕು-ಐದು ಕಿಲೋಮೀಟರ್ ನಡೆದುಕೊಂಡು ಬಂದು ಹೋಗಬೇಕಾಗಿತ್ತು. ಹೆಚ್ಚಿನವರು ಇದೇ ಕಾರಣಕ್ಕಾಗಿ ಅಲ್ಲಿಂದ ಬೇರೆ ಕಡೆಗೆ ತೆರಳಿದವರು ಮತ್ತೆ ಆ ದಾರಿಯತ್ತ ಕಣ್ಣು ಹಾಯಿಸಿರಲಿಲ್ಲ. ಹಾಗಿದ್ದರೂ ಕಮಲಮ್ಮನದು ಒಂದೇ ಹಟ. ಬೇರೆಲ್ಲೂ ಹೋಗಲಾರೆನೆಂಬುದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಪಿ: ಪ್ರಶಸ್ತಿ ಪಿ.

ಮಾಡಿದ್ದೇ ಕೆಲಸವನ್ನು ಸದಾ ಮಾಡ್ತಾ ಇರು ಅಂದ್ರೆ ಏನೂ ಮಾಡದೇ ಆದ್ರೂ ಇರ್ತೀನಿ,ಆದ್ರೆ ಅದನ್ನ ಮಾಡೋಲ್ಲ ಅಂತಿದ್ದವನು ಅವ. ಹೊಸತನಕ್ಕೆ ತುಡಿದು ಇರೋದನ್ನ ಕಳೆದುಕೊಳ್ಳುವುದಕ್ಕಿಂತ ಇದ್ದುದರಲ್ಲೇ ಖುಷಿಯಾಗಿರೋದು ಮೇಲು ಅನ್ನುವವಳು ಅವಳು. ಭಾರತ-ಪಾಕಿಸ್ತಾನಗಳಂತಹ ಭಿನ್ನ ವಿಚಾರಧಾರೆಯಿದ್ರೂ ಇವರ ಮಧ್ಯೆ ಅದೆಂತದೋ ಒಂದು ಲವ್ವಿರೋದು ಹೆಂಗೆ ಅನ್ನೋದು ಬೇರೆ ಅವ್ರಿಗೆ ಹೋಗ್ಲಿ ಸ್ವತಃ ಅವ್ರಿಗೇ ಅಚ್ಚರಿಯ ವಿಷಯವಾಗಿತ್ತು. ಎಡಪಂಥ ಬಲಪಂಥ ಅಂತ ಪ್ರತಿದಿನಾ ಕಚ್ಚಾಡೋರು ಹೆಗಲ ಮೇಲೆ ಕೈಹಾಕಿಕೊಂಡ್ರು ಓಡಾಡ್ತಿದ್ರೆ ಹೆಂಗೆ ಅಚ್ಚರಿಯಾಗುತ್ತೋ ಆ ತರಹದ ಆಶ್ಚರ್ಯ ಇವ್ರನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮದ Confession: ಚಂದನ್ ಶರ್ಮ

                    ತಂದೆ-ತಾಯಿ, ಬಂದು-ಬಳಗದ  ಪ್ರೀತಿ, ವಾತ್ಸಲ್ಯ, ಅಕ್ಕರೆ, ಮಮಕಾರ ಬಿಟ್ಟರೆ ಉಳಿಯೋದು ‘ಗಂಡು-ಹೆಣ್ಣಿನ’ ಪ್ರೇಮ; ಅದೇ ವಿಶ್ವದ ಹಲವಾರು ಕಾದಂಬರಿಗಳ, ನಾಟಕಗಳ, ಚಲನಚಿತ್ರಗಳಲ್ಲಿ ಕಂಡುಬರುವ ಪ್ರೀತಿ; ಇಲ್ಲ ಅದನ್ನ ಹಾಗೆ ಹೇಳಬಾರದು ಪ್ರೀತಿ ತುಂಬಾ ವಿಸ್ತಾರಾವಾದ ವಿಷಯ ಅದು ಮಾನವನ ಮೂಲ. ಈ ಪ್ರೀತಿ ಬಯಕೆಗಳ ಮೂಲ; ಒಂದು ಜೀವದ ಸುತ್ತ ಲಕ್ಷ ಆಕಾರಗಳನ್ನು ಪಡೆದು ಸುತ್ತುತ್ತಲೇ ಇರುತ್ತದೆ ಜೀವ ಹೋಗುವ ತನಕ. ಲಕ್ಷ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜ್ಞಾನೋದಯವಾಗುವಿಕೆ ಒಂದು ದಿನ ನಜ಼ರುದ್ದೀನ್‌ ತನ್ನ ಅನುಯಾಯಿಗಳೊಂದಿಗೆ ಪೇಟೆಬೀದಿಯಲ್ಲಿ ಹೋಗುತ್ತಿದ್ದ. ನಜ಼ರುದ್ದೀನ್‌ ಮಾಡುತ್ತಿದ್ದದ್ದನ್ನೆಲ್ಲ ಅನುಯಾಯಿಗಳು ಅಂತೆಯೇ ನಕಲು ಮಾಡುತ್ತಿದ್ದರು. ತುಸು ದೂರ ನಡೆದ ನಂತರ ನಜ಼ರುದ್ದೀನ್ ಕೈಗಳನ್ನು ಮೇಲೆತ್ತಿ ಗಾಳಿಯಲ್ಲಿ ಆಡಿಸುತ್ತಿದ್ದ, ತದನಂತರ ತನ್ನ ಪಾದಗಳನ್ನು ಮುಟ್ಟಿ “ಹು ಹು ಹು” ಎಂಬುದಾಗಿ ಕಿರುಚುತ್ತಾ ಮೇಲಕ್ಕೆ ಹಾರುತ್ತಿದ್ದ. ತಕ್ಷಣ ಅನುಯಾಯಿಗಳೂ ಅಂತೆಯೇ ಮಾಡುತ್ತಿದ್ದರು.  ಇದನ್ನು ಕುತೂಹಲದಿಂದ ನೋಡಿದ ಒಬ್ಬ ವ್ಯಾಪಾರಿ ನಜ಼ರುದ್ದೀನ್‌ನನ್ನು ಕೇಳಿದ, “ನೀನೇನು ಮಾಡುತ್ತಿರುವೆ ಮಿತ್ರಾ? ಇವರೆಲ್ಲರೂ ನಿನ್ನನ್ನು ಏಕೆ ಅನುಕರಿಸುತ್ತಿದ್ದಾರೆ?” ನಜ಼ರುದ್ದೀನ್‌ ಉತ್ತರಿಸಿದ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಹೆಸರಲ್ಲೆ ರೂಪ ಅಡಗಿದೆ: ಬಂದೇಸಾಬ ಮೇಗೇರಿ

ಪ್ರೀತಿಯ ಕ್ಯಾಂಪಸ್ಸಿನ ಕನ್ಯೆ, ಕ್ಯಾಂಪಸ್ಸಿನಲ್ಲಿನ ಹೂವುಗಳ ಘಮಲು ಮನಸ್ಸಿಗೆ ತಾಕುತ್ತಿದೆ. ಆ ನೆನಪುಗಳು ಇನ್ನೂ ಇಲ್ಲೇ ಎಲ್ಲೋ ಸುಳಿದಾಡುತ್ತಿವೆ. ಇಬ್ಬರೂ ಕೈ ಕೈ ಹಿಡಿದು ಸುತ್ತಾಡಿದ ಜಾಗಗಳಲ್ಲೆಲ್ಲ ಉಳಿದ ನಮ್ಮ ಬಿಸಿ ಉಸಿರನ್ನು ಹುಡುಕುತ್ತಿದ್ದೇನೆ ನೀನಿಲ್ಲದ ಜಾಗದಲ್ಲಿ. ನನಗಿನ್ನೂ ನೆನಪಿದೆ ನನ್ನನ್ನು ಹುಡುಕುತ್ತಿದ್ದ ನಿನ್ನ ಕಣ್ಣುಗಳ ಹೊಳಪು ಹಾಸುಹೊಕ್ಕಾಗಿದೆ ಈ ಮನದಲ್ಲಿ. ಮೊದಲ ಆಕಸ್ಮಿಕ ಭೇಟಿ ಜಗಳದಿಂದಲೇ ಶುರುವಾದದ್ದು, ಮತ್ತೆ ಕೆಲವು ದಿನ ಓರೆಗಣ್ಣಲ್ಲಿ ನೋಡುವ ಅದೇ ಲುಕ್. ವೈರತ್ವ ಕ್ರಮೇಣ ಸ್ನೇಹವಾಗಿ ರೂಪುಗೊಂಡಿತು. ನೀನು ಎಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ‘ಅಗ್ನಿದಿವ್ಯ’ ನಾಟಕ ಪ್ರಯೋಗ: ಹಿಪ್ಪರಗಿ ಸಿದ್ಧರಾಮ

ಆಸ್ಟ್ರೀಯನ್ ಮೂಲದ ಜರ್ಮನಿಯ ರಾಜಕಾರಣಿಯಾಗಿದ್ದು, ನಂತರ ಸರ್ವಾಧಿಕಾರಿಯಾಗಿ ಬದಲಾದ ಅಡಾಲ್ಪ್ ಹಿಟ್ಲರ್ ಯಾರಿಗೆ ತಾನೆ ಗೊತ್ತಿಲ್ಲ ?  ಇತ್ತೀಚೆಗೆ (07-03-2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬೆಂಗಳೂರಿನ ಆವಿಷ್ಕಾರ ತಂಡದ ಕಲಾವಿದರು ಡಾ.ಬಿ.ಆರ್.ಮಂಜುನಾಥ ರಚಿಸಿದ ‘ಅಗ್ನಿದಿವ್ಯ’ ನಾಟಕವನ್ನು ಭಾನು ನಿರ್ದೇಶನದಲ್ಲಿ ಅಭಿನಯಿಸಿದರು. ಯುರೋಪಿನ ಇತಿಹಾಸದ ಕಾಲಘಟ್ಟವೊಂದರಲ್ಲಿ ಬದಲಾವಣೆಗೆ ತಹತಹಿಸುವ ಕ್ರಾಂತಿಕಾರಿ ಮನೋಭೂಮಿಕೆಯ ವ್ಯಕ್ತಿಯೊಬ್ಬನು ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ಎದುರಿಸುತ್ತಾ ವ್ಯವಸ್ಥೆಯೊಂದಕ್ಕೆ ಸವಾಲಾಗುತ್ತಾ, ಅದೇ ವ್ಯವಸ್ಥೆಯನ್ನು ಪ್ರಶ್ನಿಸುವ ಗಂಭೀರ ಕಥಾನಕದ ಪ್ರಯೋಗವನ್ನು ಪ್ರೇಕ್ಷಕರು ಕುತೂಹಲದೊಂದಿಗೆ ವೀಕ್ಷಿಸಿದರು. ಆವಿಷ್ಕಾರ, ಎಐಡಿವೈಒ ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾವಿಕನಿಲ್ಲದ ದೋಣಿಯಲ್ಲಿ……: ಮಲ್ಲೇಶ ಮುಕ್ಕಣ್ಣವರ

ಕೆಲವೊಂದು ಸಂಧರ್ಭದಲ್ಲಿ ಅಪ್ಪ ಅಂದರೆ ನಮಗೆಲ್ಲಾ ಯಾವುದೋ ಮಿಲಟರಿ ದಂಡಿನ ಮಹಾದಂಡನಾಯಕನಂತೆಯೂ ಮತ್ತೊಮ್ಮೆ  ಜಮದಗ್ನಿ ಮುನಿಯಂತೆ ಭಾಸವಾಗಿ ಬಿಡುತ್ತಾನೆ.ಅಷ್ಟೇ ಏಕೆ ನಮ್ಮಪ್ಪ ಕೋಪಿಷ್ಟ, ಗರ್ವಿಷ್ಟ ಅವನ ಮೂಗಿನ ತುದಿಯಲ್ಲೇ ಕೋಪ ಎಂದೆಲ್ಲಾ ಗೊಣಗುತ್ತೇವೆ. ಆದರೆ ಅಪ್ಪನ ಮನಸ್ಥಿತಿಯೇ ಬೇರೆ ಮನದಲ್ಲಿ ಬೆಟ್ಟದಷ್ಟು ಪ್ರೀತಿಯನ್ನು ತುಂಬಿಕೊಂಡಿದ್ದರು ವ್ಯಕ್ತಪಡಿಸುವಲ್ಲಿ ಹಿಂದೆಟು ಹಾಕುತ್ತಾನೆ. ತನ್ನವರನ್ನು ಸಂರಕ್ಷಿಸಲು ಹಗಲಿರುಳು ಶ್ರಮಿಸುತ್ತಾನೆ. ಅಂತಹ ಅಪ್ಪನಿಗೆ ಅಪ್ಪನೇ ಸಾಟಿ. ಅವನ ಶ್ರಮದ ಬೆವರಹನಿಯ ಹಿಂದೆ ತನ್ನವರನ್ನು ಸಂರಕ್ಷಿಸುವ ಸ್ವಾರ್ಥತೆಯಿದೆ. ಕ್ಷಣಕ್ಷಣಕ್ಕೂ ಕೋಪಸಿಕೊಳ್ಳುವ ಕೋಪದ ಹಿಂದೆ ಮಕ್ಕಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನೊಲವಿನ ಗೆಳತಿಗೆ…: ರಮೇಶ್ ನೆಲ್ಲಿಸರ

ನನ್ನೊಲವಿನ ಗೆಳತಿಗೆ… ಹೌದು ನಿನಗೆ ಬರಿತಿರೋದು ಮಾರಾಯ್ತಿ ಇನ್ನು ಎಷ್ಟು ದಿನ ಅಂತಾ ಈ ಮೋಬೈಲ್ನಲ್ಲಿ ಮೆಸೇಜ್ ಟೈಪ್ ಮಾಡದು, ಅದ್ ನೋಡಿದ್ರೆ 135 ಕ್ಕಿಂತ ಜಾಸ್ತಿ ಲೆಟರ್ಸ್ ತಗೊಳಲ್ಲ 2-3 ಮೆಸೇಜ್ ಒಟ್ಟಿಗೆ ಕಳ್ಸಣ ಅಂದ್ರೆ ನಿಮ್ ಡಬ್ಬ ಊರಲ್ ನೆಟ್ವರ್ಕಾದ್ರೂ ಸಿಗ್ತದಾ? ಅದೂ ಇಲ್ಲ,ಹೋಗ್ಲಿ ಸಿಗೇ ಮಾರಾಯ್ತಿ ಸ್ವಲ್ಪ ಮಾತಾಡನಾ ಅಂದ್ರೆ ನೀನು ಅದ್ಕೂ ನಮ್ಮನೇಲ್ ಸ್ಟ್ರಿಕ್ಟು ಹಾಗೇ ಹೀಗೆ ಅಂತೀಯಾ,ಮೂರ್ -ನಾಲ್ಕ್ ಸತಿ ಸಿಕ್ಕಿದ್ರು ಅರ್ಧ ಗಂಟೆ ಮಾತಾಡ್ಸ್ ಓಡ್ತಿಯಾ,ವರ್ಷ ಆತಲೆ ಅದ್ರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 91): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:- 1.    ಭಾರತೀಯ ಸ್ಟೇಟ್‍ಬ್ಯಾಂಕ್ ಯಾವ ವಿದೇಶದಲ್ಲಿ ತನ್ನ ಪ್ರಥಮ ಶಾಖೆ ಪ್ರಾರಂಭಿಸಿತು? 2.    ಗೇಲ್ (GAIL) ನ ವಿಸ್ತೃತ ರೂಪವೇನು? 3.    ವಿಲಿಯಂ ಹಾರ್ವೆ ಕಂಡುಹಿಡಿದ ಗ್ರಹ ಯಾವುದು? 4.    ಮಿಲಿಟರಿ ಕಾಲೇಜ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಮೆಕಾನಿಕಲ್ ಇಂಜಿನಿಯರಿಂಗ್ ಎಲ್ಲಿದೆ? 5.    ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ? 6.    ದ್ರುಪದ್ ಸಂಗೀತ ಶೈಲಿಯಲ್ಲಿ ನುಡಿಸುವ ಲಯವಾದ್ಯ ಯಾವುದು? 7.    ಲೇಸರ್ ರೂಪತಾಳಿದ ವರ್ಷ ಯಾವುದು? 8.    ಈಜಿಪ್ಟ್ ನೈಲ್ ನದಿಯ ವರದಾನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೈತ್ರಿ ಪ್ರಕಾಶನದ ಕಥಾಸಂಕಲನಕ್ಕಾಗಿ ಕತೆಗಳ ಆಹ್ವಾನ

ಹೊಸದಾಗಿ ಪ್ರಾರಂಭವಾಗಿರುವ 'ಮೈತ್ರಿ ಪ್ರಕಾಶನ' ಕನ್ನಡ ಕಥಾಪ್ರಪಂಚಕ್ಕೆ "ಧ್ವನಿಗಳು" ಎಂಬ ಕಥಾಸಂಕಲನವನ್ನು ಅರ್ಪಿಸಲು ಉದ್ದೇಶಿಸಿದೆ.  ಈ ಹಿಂದೆ ಪ್ರಕಟಿಸಿದಂತೆ "ಮಹಿಳೆಯರು  ಬರೆದ ಕಥೆಗಳು" ಎಂಬ ನಿರ್ಭಂದ ತೆಗೆದುಹಾಕಲಾಗಿದ್ದು , ಈಗ ಈ ಸಂಕಲನದಲ್ಲಿ ಕೆಳಗಿನ  ನಿಯಮಗಳಿಗೆ ಒಳಪಟ್ಟು ಯಾರು ಬೇಕಾದವರೂ ಕತೆ ಕಳಿಸಬಹುದಾಗಿದೆ. ಮೇಲಾಗಿ ಮೊದಲ ಮೂರು ಕತೆಗಳಿಗೆ ಬಹುಮಾನ ಘೋಶಿಸಲಾಗಿದ್ದು ಮೊದಲ ಬಹುಮಾನ ೫೦೦೦, ಎರಡನೇ ಬಹುಮಾನ ೩೦೦೦ ಮತ್ತು ಮೂರನೆಯ ಬಹುಮಾನವಾಗಿ ೨೦೦೦ ನಗದು ರೂಪದಲ್ಲಿ ಕೊಡಲು ನಿರ್ಧಾರಮಾಡಿರುವುದನ್ನು ತಿಳಿಸಲು ಅತ್ಯಂತ ಖುಶಿಯಾಗುತ್ತದೆ. ಒಟ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎಲ್ಲಾನು ಮಾಡುವುದು ಹೊಟ್ಟೆಗಾಗಿ .. : ಅನಿತಾ ನರೇಶ್ ಮಂಚಿ

ಕೆಲವು ಪುಸ್ತಕಗಳ ತಲೆಬರಹವೇ ಎತ್ತಿಕೋ ಎಂದು ಕೈ ಚಾಚಿ ಕರೆಯುವ ಮಗುವಿನಂತೆ ಭಾಸವಾಗುತ್ತದೆ. ಬೆಳಗಿನ ಸಮಯದಲ್ಲೇನಾದರೂ ಸುಮ್ಮನೆ ಕಗೆತ್ತಿಕೊಂಡು ಕಣ್ಣಾಡಿಸ ಹೊರಟಿರಾದರೆ ಸಿಕ್ಕಿಬಿದ್ದಿರೆಂದೇ ಅರ್ಥ. ಪುಸ್ತಕ ಎತ್ತಿಕೊಂಡವರು ನನ್ನಂತಹ ಗೃಹಿಣಿಯರಾದರೆ  ಅರ್ಧ ತೊಳೆದ ಪಾತ್ರೆಪಗಡಿಗಳು, ವಾಷಿಂಗ್ ಮೆಶೀನಿನಲ್ಲಿ ನೆನೆದು ಒದ್ದೆಯಾಗಿರುವ ಬಣ್ಣ ಬಿಡುವ ಬಟ್ಟೆ,  ಸ್ಟವ್ವಲ್ಲಿಟ್ಟ ಹಾಲು, ಮಧ್ಯಾಹ್ನದ ಅಡುಗೆ ಎಲ್ಲದಕ್ಕೂ ಎಳ್ಳು ನೀರು ಬಿತ್ತೆಂದೇ ತಿಳಿಯಿರಿ. ಅಕ್ಷರಗಳ ಗುರುತ್ವಾಕರ್ಷಣೆಯೇ ಹೆಚ್ಚಿ ಕೊನೆಯ ಪುಟ ಬರುವಲ್ಲಿಯವರೆಗೆ ನಿಮ್ಮ ಕೈಯಿಂದ ಕೆಳಗಿಳಿಲಾರವು.  ಹಾಗಾಗಬಾರದೆಂಬ ಎಚ್ಚರಿಕೆಯಲ್ಲೇ ಪುಸ್ತಕಗಳನ್ನು ಓದುವ ವೇಳೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಕೊನೆಯ ಭಾಗ): ಪ್ರಸಾದ್ ಕೆ.

ಇಲ್ಲಿಯವರೆಗೆ…. 1991 ರಲ್ಲಿ ನ್ಯೂಯಾರ್ಕ್ ಗೆ ತೆರಳಿದ ವಾರಿಸ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಾರೆ. ರೆವಲಾನ್, ಲೆವಿಸ್, ಲಾರಿಯಲ್, ಬೆನೆಟನ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳ ರಾಯಭಾರಿಯಾಗಿ ವಾರಿಸ್ ಮಿಂಚುತ್ತಾರೆ. ಮೂರು ತಿಂಗಳಲ್ಲೇ ವಾರಿಸ್ ರ ಚಿತ್ರವನ್ನು ಹೊತ್ತ ದೈತ್ಯ ಜಾಹೀರಾತು ಫಲಕಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಎಲ್ಲೆಲ್ಲೂ ರಾರಾಜಿಸತೊಡಗುತ್ತವೆ. ಸುಗಂಧ ದ್ರವ್ಯಗಳು, ಆಭರಣಗಳು, ಮದ್ಯತಯಾರಿಕೆ, ಬಟ್ಟೆಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿಸಿಕೊಳ್ಳಲು ವಾರಿಸ್ ರ ಬೆನ್ನು ಬೀಳುತ್ತವೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮಖೈದಿ-೧: ಅಭಿ ಸಾರಿಕೆ

ವಿಶ್ವನಿಗೆ ಪ್ರಜ್ಞೆ ಬಂದಾಗ ತಾನೊಂದು ಆಸ್ಪತ್ರೆಯಲ್ಲಿರುವುದು ತಿಳಿಯಿತು,  ಎದ್ದು ಕುಳಿತುಕೊಳ್ಳಲು ಹೋದವನಿಗೆ, ತಲೆ ಭಾರವಾದಂತ ಅನುಭವ, ಬಲಗೈ, ಎರಡು ಕಾಲು, ತಲೆ ಪೂರ್ತಿ ಬ್ಯಾಂಡೇಜ್ ಮಾಡಿದ್ದರು, ತಕ್ಷಣಕ್ಕೆ ಅವನಿಗೆ ಯಾವುದು ಗುರುತಿಗೆ ಬರಲಿಲ್ಲ, ಎಷ್ಟು ದಿನವಾಗಿದೆಯೋ ನಾನಿಲ್ಲಿ ಬಂದು ಎಂದುಕೊಂಡ,  ನಿಧಾನವಾಗಿ ನಡೆದ ಘಟನೆ ನೆನೆಸಿಕೊಂಡ, ಅಂದು ಪಾರ್ಸಲ್ ಡೆಲಿವರಿ ಕೊಡಲು ಇಂದಿರಾನಗರದ ಕಡೆಗೆ ಹೊರಟಿದ್ದ, ಸಮಯ ಆಗಲೇ ಐದೂವರೆ ಇದೇ ಕೊನೆಯ ಡೆಲಿವರಿ, ಬೇಗ ಹಿಂದಿರುಗದಿದ್ದರೆ ಕೊರಿಯರ್ ಆಫೀಸು ಬಾಗಿಲು ಮುಚ್ಚುತ್ತಾರೆ, ಮತ್ತೆ ನಾಳೆ ಮ್ಯಾನೆಜರ್ನಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ