ಗಂಟೆಯ ನೆಂಟನೆ ಓ ಗಡಿಯಾರ: ಸ್ಮಿತಾ ಅಮೃತರಾಜ್. ಸಂಪಾಜೆ
ಬೆಳಗು, ಮಧ್ಯಾಹ್ನ, ಸಂಜೆ ಇವೆಲ್ಲಾ ಕಾಲದ ಅಣತಿಯಂತೆ ನಿಯಮಾನುಸಾರ ನಡೆಯುವ ಸಂಗತಿಗಳು, ಇದು ಯಾವೊತ್ತೂ ಏರು ಪೇರಾಗುವುದಿಲ್ಲ, ಒಂದು ದಿನವೂ ಶೀತ, ನೆಗಡಿ, ಜ್ವರ ಅಂತ ರಗಳೆಗಳನ್ನು ನೀಡಿ ನುಣುಚಿಕೊಂಡು ಗೈರು ಹಾಜಾರಾಗುವುದಿಲ್ಲ, ಅತೀ ಹೊಂದಾಣಿಕೆಯಿಂದ ಹಗಲು ಪಾಳಿ ರಾತ್ರೆ ಪಾಳಿಯನ್ನು ಯಾವೊತ್ತೂ ಅದಲು ಬದಲು ಮಾಡಿಕೊಳ್ಳುವುದಿಲ್ಲ, ಅಸಲಿಗೆ ಅವರಿಬ್ಬರೂ ಯಾವೊತ್ತೂ ಮುಖಾ ಮುಖಿ ಸಂಧಿಸಿಕೊಳ್ಳುವುದಿಲ್ಲವೆಂಬ ಸತ್ಯ ಎಳೆ ಮಕ್ಕಳಿಗೂ ಗೊತ್ತಿರಬಹುದಾದ ವಿಚಾರ. ಕಾಲ ನಮಗೆ ಏನೆಲ್ಲಾ ಸಾವಕಾಶಗಳನ್ನು, ಅವಕಾಶಗಳನ್ನು, ಮಾನ ಮರ್ಯಾದೆಯನ್ನು, ಸೋಲು ಗೆಲುವುಗಳನ್ನು ತಂದು … Read more