ಬೆಳಕು ಕಂಡ ಕಣ್ಣು: ಅನಂತ ರಮೇಶ್

ಉಪಗ್ರಹದಿಂದ ಬರುವ ಛಾಯಾ ಚಿತ್ರಗಳು ವಿನೀತನ ಮನಸ್ಸನ್ನು ತುಂಬಾ ಸೆಳೆಯುತ್ತವೆ. ಆಗಾಗ ಅಂತರ್ಜಾಲದಲ್ಲಿ ಭೂಮಿಯ ವೈವಿಧ್ಯದ ಚಿತ್ರಗಳನ್ನು ಅವನು ಅಪ್ಪನ ಜೊತೆ ಕುಳಿತು ನೊಡುತ್ತಿರುತ್ತಾನೆ. ಬಣ್ಣದ ಓಕುಳಿಯಲ್ಲಿ ಈಜುವಂತೆ ಕಾಣುವ ಭೂಮಿಯನ್ನು ನೋಡಲು ಅವನಿಗೆ ತುಂಬಾ ಇಷ್ಟ.  "ಅಪ್ಪಾ.. ನಮ್ಮ ದೇಶದ ಕಡೆ ಜೂಮ್ ಮಾಡು. ಎಷ್ಟೊಂದು ಹಸಿರು ಕಾಣುತ್ತೆ ಅಲ್ವ !   ಈ ಥರ ಹಸಿರು ನಾನು ನೋಡೆ ಇಲ್ಲ " "ನಾಗರಹೊಳೆ ಅಥವ ಅಗುಂಬೆ ಕಡೆಗೆ ಈ ರಜಾದಲ್ಲಿ ಹೋಗೋಣ…. ಹಸಿರು ಕಾಡಿಗೆ" … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆ ದೀಪಾವಳಿ: ದಿವ್ಯಾಧರ ಶೆಟ್ಟಿ ಕೆರಾಡಿ

ದೀಪಾವಳಿ ಮತ್ತೆ ಬಂದಿದೆ ಇಡೀ ಜಗತ್ತೇ ಸಂಭ್ರಮ ದಿಂದ ಆಚರಿಸುವ ಬೆಳಕಿನ ಹಬ್ಬದ ಗಮ್ಮತ್ತೆ ಬೇರೆ ತರಹದ್ದು. ಇಂದಿನ ಅಬ್ಬರದ ದೀಪಾವಳಿಯ ಜೋರು ಶಬ್ದಗಳ ನಡುವೆ ಚೈನಾಪಟಾಕಿಗಳ ಸದ್ದಿನ ಎದುರು ನಾವು ಬಾಲ್ಯದಲ್ಲಿ ಹೊಡೆಯುತ್ತಿದ್ದ ಲಕ್ಷ್ಮೀ ಪಟಾಕಿಯ ಸದ್ದೇ ಕೇಳಿಸುತ್ತಿಲ್ಲ ಈಗ.. ಏಲ್ಲೋ ಮರೆಯಾಗಿ ಹೋದ ಹಳೆಯ ನೆನಪುಗಳ ಹಣತೆಯನ್ನು ಒಂದಿಷ್ಟು ಸಾಲಾಗಿ ಜೋಡಿಸುವ ಆಸೆಯಾಗಿದೆ. ಒಮ್ಮೆ ನಮ್ಮ ಹಳ್ಳಿ ಬಾಲ್ಯದ ಕಡೆಗೆ, ಕಳೆದು ಹೋದ ಆ ಕಾಲದ ದೀಪಾವಳಿ ಯ ನೆನಪುಗಳ ಮನೆಯೊಳಗೊಮ್ಮೆ ಮೆಲ್ಲಗೆ  ಹೋಗಿ ಹಣತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೊನಾರ್ಕ್ ಚಿಟ್ಟೆ ಹಾಗೂ ಮಿಂಚುಳ: ಅಖಿಲೇಶ್ ಚಿಪ್ಪಳಿ

ಮಲೆನಾಡಿನಲ್ಲಿ ಸತತ ಮೂರನೇ ವರ್ಷದ ಬರಗಾಲ ಧಾಂಗುಡಿಯಿಡುತ್ತಿದೆ. ನಿಜಕ್ಕೂ ಇದಕ್ಕೆ ಮರಗಾಲವೆಂದೇ ಕರೆಯಬೇಕು. ಪಶ್ಚಿಮಘಟ್ಟದ ಕಾಲಬುಡದಲ್ಲಿರುವ ನಮಗೆ ವಾಸ್ತವಿಕವಾಗಿ ಬರವೆಂಬ ಶಬ್ಧದ ಅರಿವೇ ಇರಬಾರದು. ಆದರೂ ಅದರ ಅರಿವಾಗುತ್ತಿದೆ, ನಿಧಾನಕ್ಕೆ ಇಲ್ಲಿಯ ಜನರ ಬದುಕನ್ನು ನುಂಗಲು ಹೊರಟಿರುವ ಈ ಮರದ ಅಭಾವದಿಂದಾಗುತ್ತಿರುವ ಈ ಪರಿಸ್ಥಿತಿಗೆ ಮರಗಾಲವೆಂದೇ ಹೇಳಬಹುದು. ಪಕ್ಕದ ಹೊಸನಗರದಲ್ಲಿ, ತೀರ್ಥಹಳ್ಳಿಯಲ್ಲಿ ಮಳೆಯಾದರೆ, ರಾಜ್ಯಕ್ಕೆ ವಿದ್ಯುತ್ ನೀಡುವ ಲಿಂಗನಮಕ್ಕಿ ಜಲಾಶಯ ತುಂಬುತ್ತದೆ. ಜೋಗದ ಸಿರಿ ಹೆಚ್ಚುತ್ತದೆ. ಆ ಎರಡೂ ತಾಲ್ಲೂಕುಗಳಲ್ಲೂ ಮಳೆಯಿಲ್ಲ. ಜೋಗದಲ್ಲಿ ನೀರಿಲ್ಲದ ಹೊತ್ತಿನಲ್ಲೇ ಜೋಗದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೋಗದ ಜಾಲ: ಪ್ರಶಸ್ತಿ

ಮಳೆಗಾಲದಲ್ಲಿನ ಮಲೆನಾಡು ಅಂದ್ರೆ ಎಲ್ಲೆಡೆ ಹಚ್ಚ ಹಸಿರು. ಬಿಟ್ಟೂ ಬಿಡದೇ ಸುರಿಯೋ ಮಳೆಗೆ ಕಗ್ಗಲ್ಲುಗಳ ನಡುವೆ ಬೈತಲೆ ತೆಗೆದಂತಹ ಜಲಪಾತಗಳು, ಹಸಿರು ಹೊದ್ದ ಕಾನನಗಳು. ಇವುಗಳನ್ನು ಕಣ್ತುಂಬಿಕೊಳ್ಳೋಕೆ ಎಲ್ಲೆಡೆಯಿಂದ ಬರ್ತಿರೋ ಪ್ರವಾಸಿಗರಿಗೆ ರೆಕ್ಕೆಬಿಚ್ಚಿದ ನವಿಲುಗಳ, ಇಂಪು ಕಂಠದ ಕೋಗಿಲೆಗಳ ಸ್ವಾಗತ. ಮಳೆ ಹೆಚ್ಚಾದಂತೆಲ್ಲಾ ಹೆಚ್ಚಾಗೋ ಜಲಪಾತಗಳ ಭೋರ್ಗರೆತಕ್ಕೆ ಸುತ್ತಲಿನ ಜಾಗದಲ್ಲೆಲ್ಲಾ ಮಂಜು ಮುಸುಕಿ ಜಲಪಾತದ ನೋಟವೇ ಮುಚ್ಚಿಹೋಗೋದೂ ಉಂಟು. ಅಂತಹ ಸಂದರ್ಭದಲ್ಲೆಲ್ಲಾ ಬೀಸೋ ಗಾಳಿಯ ಜೊತೆ ತೆರೆತೆರೆಯಾಗಿ ಸರಿವ ಮಂಜ ಪರದೆಯ ಹಿಂದಿನ ಜಲಪಾತವನ್ನು ಕಣ್ತುಂಬಿಕೊಳ್ಳೋ ಅನುಭವವೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೀಪಾವಳಿ: ಸುನೀತಾ ಮಂಜುನಾಥ್

ದೀಪಾವಳಿ ಎಂದರೆ ಮನೆಯನ್ನ ಸಾವರಿಸಿ, ಹಂಡೆಗೆ ಪೂಜೆ ಮಾಡಿ ಇದ್ದ ಬದ್ದ ಹಂಡೆ, ಬಿಂದಿಗೆ, ಬಕೇಟುಗಳಿಗೆಲ್ಲ ನೀರು ತುಂಬಿಟ್ಟು , ನೀರು ತುಂಬುವ "ಹಬ್ಬ' ಮುಗಿವಷ್ಟರಲ್ಲಿ ಬೆಳಗಾಗಿ ಮನೆಯ ಬಾಗಿಲಿಗೆ ಸಗಣಿಯ ಸಾರಿಸಿ, ರಂಗೋಲಿ ಹಾಕಿ, ರಂಗೋಲಿಯ ನಡುವೆ ಸಗಣಿಯ ಉಂಡೆಯನ್ನಿಟ್ಟು ಮೇಲೊಂದು ಹುಚ್ಚೆಳ್ಳಿನ ಹಳದಿ ಹೂವಿನ್ನ ಸಿಕ್ಕಿಸಿದರೆ ಹಬ್ಬದ ಕಳೆ ಬಂತೆಂದೇ.. .ನೆತ್ತಿಗೆ ಎಣ್ಣೆಯಿಟ್ಟು ಹಂಡೆಯಿಂದ ಬಿಸಿ ನೀರು ಹಾಕಿಸಿಕೊಂಡು ಒಂದು ಸರ ಪಟಾಕಿ ಹೊಡೆದರೆ ನಮ್ಮ ಹಬ್ಬ ಶುರು ಎಂದೇ ಅರ್ಥ..  ಮತ್ತೆ ಮೂರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 8): ಪ್ರಸಾದ್ ಕೆ.

ಇಲ್ಲಿಯವರೆಗೆ 1993 ರಲ್ಲಿ ತನಿಖಾ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಟ್ಯಾಮಿ ಹೊಮೋಲ್ಕಾಳ ಶವಪೆಟ್ಟಿಗೆಯನ್ನು ಸ್ಮಶಾನದಿಂದ ಹೊರತೆಗೆಯಲಾಯಿತು. ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವೀಡಿಯೋ ಟೇಪ್ ಗಳನ್ನು ಅಕ್ರಮವಾಗಿ, ಹದಿನೇಳು ತಿಂಗಳುಗಳ ಕಾಲ ತನ್ನ ಸುಪರ್ದಿಯಲ್ಲಿ ಬಚ್ಚಿಟ್ಟುಕೊಂಡ ತಪ್ಪಿಗಾಗಿ, ಪೌಲ್ ಬರ್ನಾರ್ಡೊನ ವಕೀಲನಾಗಿದ್ದ ಕೆನ್ ನ ತಲೆದಂಡವಾಯಿತು. ಪೌಲ್ ಬರ್ನಾರ್ಡೊನನ್ನು ಪ್ರತಿನಿಧಿಸುತ್ತಿದ್ದ ಕೆನ್ ಮುರ್ರೇ, ಕಾರೊಲಿನ್ ಮೆಕ್-ಡೊನಾಲ್ಡ್ ಮತ್ತು ಕಿಮ್ ಡಾಯ್ಲ್ ರ ತಂಡ ಅಷ್ಟೇನೂ ಅನುಭವಿ ತಂಡವಾಗಿರಲಿಲ್ಲ. ಅದರಲ್ಲೂ ಈ ಪ್ರಕರಣದಲ್ಲಿ ಪೌಲ್ ಬರ್ನಾರ್ಡೊ ಜೊತೆ ಸೇರಿ ಮಾಡಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಪ್ಪ ಅಂದ್ರೆ ಆಕಾಶ…: ನಾ’ನಲ್ಲ’

ಏಷ್ಟೋ ದಿನಗಳ ಹಿಂದೆ ಓದಬೇಕು ಅಂತ ತಂದಿದ್ದ ಪುಸ್ತಕವನ್ನು ಓದೋಕೆ ಇವತ್ತು ಸಮಯ ಕೂಡಿ ಬಂದಿತ್ತು. ಓದುತ್ತ ಹೋದಂತೆ ಒಂದಕ್ಕಿಂತ ಒಂದು ಲೇಖನಗಳು ಮನಸ್ಸಿನ ಆಳಕ್ಕೆ ಇಳಿಯತೊಡಗಿದವು. ಒಂದು ಲೇಖನದಲ್ಲಿ ಲೇಖಕರು ಹೇಳಿದಂತೆ "ಅಪ್ಪ ಅಂದ್ರೆ ಆಕಾಶ" ಎನ್ನುವುದು ಮನದಟ್ಟಾಗಲು ಬಹಳ ಸಮಯ ಬೇಕಾಗಲಿಲ್ಲ. ಹೌದು, ನಿಜವಾಗಲೂ ಅಪ್ಪ ಅಂದ್ರೆ ಆಕಾಶ. ನಾವು ಚಿಕ್ಕವರಿದ್ದಾಗ ಒಗಟುಗಳಿಗೆ ಉತ್ತರಿಸುವ ಪಂದ್ಯವಾಡುವಾಗ ಅನೇಕ ಬಾರಿ ಕೇಳಲ್ಪಟ್ಟ ಒಗಟೆಂದರೆ "ಅವ್ವನ ಸೀರೆ ಮಡಿಚೋಕಾಗಲ್ಲ, ಅಪ್ಪನ ರೊಕ್ಕ ಎನಿಸೊಕಾಗಲ್ಲ" ಅನ್ನೋದು. ಅದಕ್ಕೆ ಉತ್ತರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರು ಲೇಖನಗಳು

ಗೆಳೆತನ ಅಂದು ಡಿಗ್ರಿ ಮೊದಲ ವರ್ಷದ ಪ್ರಾರಂಭ ದಿನ, ನನ್ನವರೂ ಯಾರೂ ಇಲ್ಲವೆಂಬ ಕೊರಗು ಆಕಾಶದಲ್ಲಿನ ಒಂಟಿ ಹಕ್ಕಿಯ ತಳಮಳದಂತೆ ನನ್ನ ಮನಸ್ಸನ್ನು ಭಾರವಾಗಿಸುತ್ತಿತ್ತು. ಅಪರಿಚಿತ ಮುಖಗಳ ದರ್ಶನ.. ಗೆಳೆಯರಿಲ್ಲದ ನೋವು… ಆಗ ಕಾಲೇಜಿನ ಮೊದಲ ಮಹಡಿಯಲ್ಲಿ ನನ್ನದೇ ಭಾವಗಳ ಭಾರ ಹೊತ್ತು ಆರಡಿ ಎತ್ತರದ ತೆಳ್ಳಗೆ ಮೈಕಟ್ಟಿನ ಕೋರಳಲ್ಲಿ ಸೈಡ ಬ್ಯಾಗ ಹಾಕಿಕೊಂಡ ನಿಂತಿದ್ದ ಹೊಸ ಮುಖದವನ್ನು ಮಾತನಾಡಿಸಿದೆ, ಪರಸ್ಪರ ಪರಿಚಯ ಮಾಡಿಕೊಂಡೆ.  ಮಾತುಗಳು ಸಾಗಿ ಆತ ಬೆಳಗಾವಿಯನೆಂದು ಹೇಳಿದ, ಅವರ ತಂದೆಯ ವರ್ಗವಾಗಿ ಆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳಕು: ರೋಹಿತ್ ಶೆಟ್ಟಿ ಮೇಲಾರಿಕಲ್ಲ್

'ಬೆಳಕು' ಅನಂತ. ಅನಿಯಮಿತ. ಅದಕ್ಕೆ ಗಡಿ-ಗೆರೆಗಳಿಲ್ಲಾ. ನಮ್ಮ ಬೇಕುಗಳ ಸರತಿಸಾಲಿನ ಮೊದಲಿನ ಶಬ್ದವೆ ಬೆಳಕು ಎನ್ನಬಹುದು ಅಲ್ವ. ಬೆಳಕು ಏ೦ಧಾಕ್ಷಣ ಯಾರ ಮುಖಾರವಿ೦ದ ಅರಳದು ಹೇಳಿ? ಬೆಳಕ ವರ್ಣಿಸದ ಕವಿಯಿಲ್ಲ, ಬಣ್ಣಸದ ಮಾತುಗಾರನಿಲ್ಲಾ, ಬೆಳಗದ ಮನುಷ್ಯನಿಲ್ಲಾ, ಮನುಕುಲವಿಲ್ಲಾ, ಅದು ಜಗತ್ತಿನ ಚೈತನ್ಯದ ಸ೦ಕೇತ. ಪ್ರಾಣಿಪಕ್ಷಿ, ಸಸ್ಯಸ೦ಕುಲದ ಜೀವಾದಾರ, ಜೀವವು ಹೌದು! ಬೆಳಕು ಗೋಚರ ರೂಪದಲ್ಲಿದ್ದರೂ ಅಗೋಚರ ಸ್ಥಿತಿಯ ಪ್ರತಿಪಾದಕ. ಜಗತ್ತಿನ ಎಲ್ಲಾ ಆಗು ಹೊಗುಗಳಿಗು ಕಾರಣೀಕರ್ತ. ಸುಡುವುದು, ಬೆಳಗುವುದು ಎಲ್ಲವು ಅದೇ. ಕಣ್ಮುಚ್ಚಿದರೂ ಕಣ್ತೆರೆದರೂ ಕಾಣುವುದು ಬೆಳಕೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಶೇಷತೆಗಳ ಆಗರ;  ಗೂಳೂರು ಗಣೇಶ: ದಂಡಿನಶಿವರ ಮಂಜು

                                ಗೂಳೂರು ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ಗಣಪತಿ ಆಕಾರ ಮತ್ತು ಗಾತ್ರಗಳಲ್ಲಿ ತನ್ನದೇ ಆದ ವಿಶೇಷ ಶೈಲಿಯನ್ನು ಹೊಂದಿದೆ. ಎಲ್ಲಾ ಕಡೆಗಳಲ್ಲಿ ಗಣೇಶ ಚತುರ್ಥಿಯ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ಗೂಳೂರಿನಲ್ಲಿ ಅಂದು ಮಣ್ಣಿನಿಂದ ಗಣಪತಿ ಮೈಳೆದಯಲು ಆರಂಭಿಸುತ್ತಾನೆ. ದೀಪಾವಳಿ ಹಬ್ಬದ ದಿನ ಈ ಗಣೇಶ ಪ್ರಥಮ ಪೂಜೆಗೆ ಸಿದ್ಧಗೊಳ್ಳುತ್ತಾನೆ. ಅಂದಿನಿಂದ ನಲವತ್ತೈದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರಾಗಿ’ಮುದ್ದೆ’ ತಿಂದವ ನಿರೋಗಿ. .: ಪ. ನಾ. ಹಳ್ಳಿ. ಹರೀಶ್ ಕುಮಾರ್

ಕನಕದಾಸರು ರಚಿಸಿದ ‘ರಾಮಧಾನ್ಯಚರಿತೆ’ ಯನ್ನು ನೀವು ಓದಿರಬೇಕು. ಅದರಲ್ಲಿ ಬರುವ ಅಕ್ಕಿ ಹಾಗೂ ರಾಗಿ ಧಾನ್ಯಗಳ ನಡುವಿನ ವಾದವಿವಾದ ಹಾಗೂ ಅದು ರಾಮನ ಆಸ್ಥಾನದಲ್ಲಿ ಬಗೆಹರಿದ ವಿಚಾರ,ಅಲ್ಲದೇ ಅಕ್ಕಿಗಿಂತಲೂ ರಾಗಿಯೇ ಶ್ರೇಷ್ಠ ಧಾನ್ಯ ಎಂದು ರಾಮನು ತೀರ್ಪಿತ್ತಿದ್ದನ್ನು ಓದಿ ಅಥವಾ ಕೇಳಿ ತಿಳಿದಿರಬೇಕಲ್ಲವೇ?. ಈಗ ಅದೆಲ್ಲಾ ಏಕೆ ಎಂದಿರಾ? ಕಾರಣ ಇದೆ. ನಾವೀಗ ಧಾನ್ಯಗಳಲ್ಲೇ ಶ್ರೇಷ್ಠವಾದ ರಾಗಿ ಹಾಗೂ ಅದರ ಉತ್ಪಾದಿತ ಆಹಾರ ಪದಾರ್ಥವಾದ ರಾಗಿಮುದ್ದೆಯ ಬಹುಪಯೋಗಿ ಗುಣಗಳ ಬಗ್ಗೆ ಚರ್ಚಿಸೋಣ. . ತನ್ನಲ್ಲಿ ಅಡಗಿಸಿಕೊಂಡಿರುವ ಪೋಷಕಾಂಶಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಸುಡುಗಾಡಿನ ಹಾಡು                                          ಹಾಸಿದ ಹಾಸಿಗೆಯಲಿ ಮುಳ್ಳಿನ ಸಸಿಗಳ ಉದ್ಭವ ಹಾಕಿಕೊಂಡು ತಿರುಗಾಡುವ ಚಪ್ಪಲಿಯಲಿ ಏನೋ ಚುಚ್ಚುತಿರುವ ಅನುಭವ ಮಣ್ಣಲ್ಲಿ ಸಸಿಗಳು ಹುಟ್ಟುವುದೇಕೊ… ಯಾರ್ಯಾರ ಕಾಲಲ್ಲೊ ತುಳಿತಕ್ಕೊಳಗಾಗುವುದೇಕೋ… ಏನೂ ತಿಳಿಯದ ಗೊಂದಲ. ಹುಟ್ಟು ತಿಳಯುತ್ತಿದ್ದಂತೇ ವಿಷಗೊಬ್ಬರದ ಮಜ್ಜನವೇಕಿಲ್ಲೋ… ಬದುಕು ತಿಳಿಯುತ್ತಿದ್ದಂತೇ ತಕ್ಷಣ ಕಿತ್ತುಹಾಕಿಬಿಡುವ ಸಾಹಸವೇಕಿಲ್ಲೋ… ಏನೂ ತಿಳಿಯದ ಗೊಂದಲ. ಎಲ್ಲವೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನುರಣಿಸಿದ ಅಲೆಗಳು: ಸಾತ್ವಿಕ್ ಹ೦ದೆ

ಭರವಸೆಗಳೆಲ್ಲಾ ಬತ್ತಿ ಹೋಗಿದ್ದವು. ಇರುವಿಕೆಗೆ ಹೊಸ ಅರ್ಥಗಳನ್ನು ಹುಡುಕಿಕೊ೦ಡು ಬದುಕಬೇಕಾಗಿದೆಯೋ ಏನೋ ಎನಿಸುವಷ್ಟು ಖಿನ್ನತೆ. ರೌರವ ಮೌನದ ನಡುವೆ ಅಲೆಗಳ ಆರ್ಭಟ. ತನ್ನದೇ ಪ್ರಶ್ನೋತ್ತರಗಳಲ್ಲಿ ಸಮುದ್ರದ ಅಲೆಗಳು ಮಗ್ನವಾಗಿದ್ದವು. ಸಮುದ್ರ ತೀರದಲ್ಲಿ ಸಾಕಷ್ಟು ಮೀನುಗಳು ಸತ್ತುಬಿದ್ದಿದ್ದವು.  ಕಾಗೆಗಳು ನಾ ಮು೦ದು ತಾ ಮು೦ದು ಎ೦ಬ೦ತೆ ಹಿ೦ಡು ಹಿ೦ಡಾಗಿ ಬ೦ದು ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೇರೆ ಪಕ್ಷಿಗಳ೦ತೆ ತನ್ನ ಆಹಾರವನ್ನು  ಬೇರೆಡೆಗೆ  ಕೊ೦ಡೊಯ್ದು ತಿನ್ನದ ಕಾಗೆಗಳು ಸ್ವಲ್ಪ ರುಚಿನೋಡಿ ಹಾರಿ ಹೋಗುತ್ತಿದ್ದವು. ಇಡೀ ಸಮುದ್ರತೀರ ಸ್ಮಶಾಣವಾಗಿ ಮಾರ್ಪಾಡಾಗಿತ್ತು. ಸ೦ಸ್ಕಾರವೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡ ರಂಗಭೂಮಿಯ ಇಳಯರಾಜ: ಪ್ರದೀಪ್ ಮಾಲ್ಗುಡಿ

ಇಸ್ಮಾಯಿಲ್ ಗೋನಾಳ್ ಕಾಲದ ಕರೆಗೆ ಓಗೊಟ್ಟಿದ್ದಾರೆ. ಆದ್ರೆ, ಅವರು ನಮ್ಮಂತವರೊಡನೆ ಬಿಟ್ಟು ಹೋಗಿರುವ ನೆನಪುಗಳು ಚಿರಂತನವಾಗಿರುತ್ತವೆ. ಅಲ್ದೇ, ಅವರು ನೀಡಿರುವ ರಂಗಸಂಗೀತ ಮತ್ತು ಕ್ಯಾಸೆಟ್ ಸಂಗೀತ ನಮ್ಮೊಡನೆ ಯಾವಾಗಲೂ ಇರುತ್ತವೆ. ಬಹುತೇಕ ಎಲ್ಲ ಸಂಗೀತ ಪರಿಕರಗಳನ್ನೂ ನುಡಿಸಬಲ್ಲವರಾಗಿದ್ದ ಇಸ್ಮಾಯಿಲ್, ಎಂದೂ ನನಗೆ ಇಷ್ಟು ಸಾಮಥ್ರ್ಯವಿದೆ ಅಂತ ಹೇಳಿಕೊಳ್ತಿರಲಿಲ್ಲ. ಕ್ಯಾಸೆಟ್ ಸಂಗೀತದ ಉತ್ತುಂಗದ ಶಿಖರದಲ್ಲಿದ್ದ ಅವಧಿಯಲ್ಲೇ ಅಲ್ಲಿಂದ ದಿಡೀರ್ ಅಂತ ಮಾಯವಾಗಿಬಿಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದ್ರು. ಉತ್ತರ ಕರ್ನಾಟಕದ ಜಾನಪದ ಶೈಲಿಯ ಹಾಡುಗಳಿಂದ ಇವ್ರು ಸಂಗೀತ ಕ್ಷೇತ್ರದಲ್ಲಿ ಬಹಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 7): ಪ್ರಸಾದ್ ಕೆ.

ಇಲ್ಲಿಯವರೆಗೆ ಪೌಲ್ ಬರ್ನಾರ್ಡೊನಂತೆಯೇ ಕಾರ್ಲಾಳ ಬಾಲ್ಯದ ದಿನಗಳೂ ವಿಕ್ಷಿಪ್ತವಾಗಿದ್ದಿದು ಸತ್ಯ. ಕಾರ್ಲಾಳ ತಂದೆ, ತಾಯಿ ಇಬ್ಬರೂ ಉದ್ಯೋಗದಲ್ಲಿದ್ದು ಕುಟುಂಬವು ಆರ್ಥಿಕವಾಗಿ ಸದೃಢವಾಗಿದ್ದರೂ, ತನ್ನದೇ ಆದ ಚಿಕ್ಕಪುಟ್ಟ ಸಮಸ್ಯೆಗಳಲ್ಲಿ ತೊಳಲಾಡುತ್ತಿದ್ದವು. ಸ್ವಾಭಾವಿಕವಾಗಿಯೇ ಮಕ್ಕಳಾದ ಕಾರ್ಲಾ, ಲೋರಿ ಮತ್ತು ಟ್ಯಾಮಿ ಗೆ ಉತ್ತಮವಾದ ಜೀವನಶೈಲಿಯ ಪರಿಚಯವಿತ್ತು. ಕಾರ್ಲಾಳ ತಂದೆ ಕರೇಲ್ ಕುಡುಕನಾಗಿದ್ದು, ಲಿಂಡಾ ವೋಲಿಸ್ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ಕಾರ್ಲಾಳ ತಾಯಿ ಡೊರೋಥಿಗೂ ಈ ವಿಷಯ ತಿಳಿದಿತ್ತು. ಕರೇಲ್ ಹೊಮೋಲ್ಕಾ ಮಿತಿಮೀರಿ ಕುಡಿಯುತ್ತಿದ್ದ ಸಮಯಗಳಲ್ಲಿ ಕೆಟ್ಟ ಬೈಗುಳಗಳು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಗು ಮನಸ್ಸಿನ ಮಹಾಕಾವ್ಯ : ಮತ್ತೊಂದು ಮಹಾಭಾರತ: ಡಾ.ವಿ.ಚಂದ್ರಶೇಖರ ನಂಗಲಿ

ನಮ್ಮ ಮುಖದ ಮೇಲಿನ ಎರಡು ಕಣ್ಣುಗಳು ಇಡೀ ಜಗತ್ತನ್ನು ನೋಡುವಂತೆಯೇ, ನಮ್ಮ ನೆಲದ ಎರಡು ಕಣ್ಣುಗಳಂತಿರುವ ರಾಮಾಯಣ ಮತ್ತು ಮಹಾಭಾರತಗಳಿಂದ ಇಡೀ ಜೀವನವನ್ನು ಅರ್ಥಮಾಡಿಕೊಳ್ಳಬಹುದು. ನವಭಾರತದೇಶದ ಸಂವಿಧಾನದಂತೆಯೇ ಇವೆರಡು ಮಹಾಕಾವ್ಯಗಳು ನಮ್ಮ ದೇಶದ ನಿತ್ಯನೂತನ ಸಂವಿಧಾನವೆನ್ನಬಹುದು. ರಚ್ಚೆಯಲ್ಲಿ, ಕಟ್ಟೆಯ ಮೇಲೆ, ಸಂತೆಬೀದಿಯಲ್ಲಿ, ಮಾರುಕಟ್ಟೆಯಲ್ಲಿ ಜನರು ಕುಳಿತು ಮಾತನಾಡುವಾಗ ಈ ಮಹಾಕಾವ್ಯಗಳ ಪ್ರಸ್ತಾಪ ಮತ್ತು ದರ್ಶನವಿದ್ದೇ ಇರುತ್ತದೆ. ಇವನ್ನು ಕುರಿತು ಓದಿದವರ ಕಾವ್ಯಪ್ರಯೋಗವೆನ್ನುವುದಕ್ಕಿಂತಲೂ ಕುರಿತೋದದ ಜನಪದರ ಎದೆಯ ಹಾಡುಗಳೆಂದು ಹೇಳಬಹುದು. ಮಣ್ಣು, ನೀರು, ಗಾಳಿ, ಬೆಳಕುಗಳಂತೆ ಪ್ರಕೃತಿಯ ಜೀವಸತ್ವಗಳಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ನೇಹಲೋಕದಲ್ಲಿ ಹೊಸದಾದ ಭಾಷ್ಯ ಬರೆಯಬೇಕು…: ಸಿಂಧುಭಾರ್ಗವ್ ಬೆಂಗಳೂರು

ನಗುತಿರು ಪುಟ್ಟ ಮನವೇ ಬೆಳಂದಿಗಳಿನಂತೆ..! ನಾನಿರುವೆನು ಜೊತೆಗೆ ಎಂದಿನಂತೆ..!! ಈಗೀಗ ಎಲ್ಲವನೂ ಸ್ವೀಕರಿಸುವ ಧೈರ್ಯ ಬಂದಿದೆ..! ಮನದಲಿ ನೋವುನಲಿವು ಮಾಮೂಲಿಯಾಗಿದೆ..!! ~ ನಿಜವಾಗಿ ಹೇಳುವುದಾದರೆ ಈ ಜೀವನದ ಸಂತೆಯಲಿ ಸಿಕ್ಕಿದವನಾತ. ನನ್ನ ಮೊಗದಲ್ಲಿ ನಗುವ ಬಯಸಿದವನಾತ. "ಬಿಕ್ಕಿದ್ದು ಸಾಕು ನಿನ್ನ ನಗುಮೊಗವ ನಾ ನೋಡಬೇಕು" ಎಂದಾಗ ಮತ್ತಷ್ಟು ಬಿಕ್ಕಿಬಿಕ್ಕಿ ಅತ್ತಿದ್ದೆ. ಆ ಖುಷಿಯ ಯಾರಲ್ಲಿ ಹೇಳಲಿ.?! ಬೇಕಿತ್ತೇನೋ ಅವನೊಬ್ಬ ನನ್ನ ಕಣ್ಣೀರು ಒರೆಸಲೆಂದು. ಅದಕ್ಕೇ ಬಹಳ ಹತ್ತಿರಕ್ಕೆ ಸೇರಿಸಿಕೊಂಡೆ. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡೆ. ಪರವಾಗಿಲ್ಲ. "ನಾ ನಿನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾವಿರದ ಸರದಾರ ರವಿ ಭಜಂತ್ರಿಯವರ “ನಗೆ ರತ್ನಮಂಜರಿ” ವಿಡಿಯೋ ಸಿ.ಡಿ.: ಗುಂಡೇನಟ್ಟಿ ಮಧುಕರ

ಅಂದು ಹುಕ್ಕೇರಿ ಬಾಳಪ್ಪನವರನ್ನು ಸಾವಿರ ಪದಗಳನ್ನು ಹಾಡಿದವರೆಂಬ ಹಿನ್ನೆಲೆಯಲ್ಲಿ ಬೇಂದ್ರೆಯವರು ‘ಸಾವಿರದ ಸರದಾರ’ ಅಂದರೆ ‘ಸಾವು’ ಇರದ ಸರದಾರ ಎಂಬ ಅರ್ಥದಲ್ಲಿ ಹೊಗಳಿದ್ದರಂತೆ. ಹುಕ್ಕೇರಿ ಬಾಳಪ್ಪನವರು ತಮ್ಮ ಹಾಡುಗಳಿಂದ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅಂದು ಬೇಂದ್ರೆಯವರು ಹೇಳಿದ ಮಾತು ಇಂದು ಮಾತಿನ ಮೋಡಿಗಾರ ರವಿ ಭಜಂತ್ರಿಯವರಿಗೆ ಅನ್ವಯಿಸುತ್ತದೆ. ಸಾವಿರ ಹಾಸ್ಯಭಾಷಣಗಳ ಧಾಖಲೆ ಮಾಡುವ ಮೂಲಕ ಭಜಂತ್ರಿಯವರು ಸಾವಿರದ ಸರದಾರರಾಗಿದ್ದಾರೆ. ಇವರ ಭಾಷಣಗಳೂ ‘ಸಾವು’ ಇರದ ಭಾಷಣಗಳೆಂಬುದರಲ್ಲಿ ಎರಡು ಮಾತಿಲ್ಲ.        ರವಿ ಭಜಂತ್ರಿ ಹಾಸ್ಯಲೋಕದಲ್ಲಿ ಚಿರಪರಿಚಿತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ