ಸುಸಂಸ್ಕೃತ ಪರಂಪರೆ ನೆನಪಿಸಿದ ’ಹೇಮರೆಡ್ಡಿ ಮಲ್ಲಮ್ಮ’ : ಹಿಪ್ಪರಗಿ ಸಿದ್ಧರಾಮ
ಇತ್ತೀಚೆಗೆ (೧೭-೦೯-೨೦೧೪) ಧಾರವಾಡದಲ್ಲಿ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ ನಾಲ್ಕನೇಯ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ನಲವಡಿ ಶ್ರೀಕಂಠಶಾಸ್ತ್ರಿಗಳ ’ಹೇಮರೆಡ್ಡಿ ಮಲ್ಲಮ್ಮ’ ನಾಟಕವನ್ನು ಪ್ರದರ್ಶನ ನಡೆಯಿತು. ಕಳೆದ ಶತಮಾನದಲ್ಲಿ (೧೯೩೭) ಆರಂಭಗೊಂಡ ಪುರುಷ ಕಲಾವಿದರು (ಮಹಿಳಾ ಕಲಾವಿದರಿಲ್ಲದ) ಮಾತ್ರ ಇರುವ ವಿಶ್ವದ ಏಕೈಕ ವೃತ್ತಿ ನಾಟಕ ಕಂಪನಿಯೆಂದು ಹೆಸರಾಗಿರುವ ಗದುಗಿನ ಶ್ರೀಕುಮಾರೇಶ್ವರ ಕೃಪಾಪೋಷಿತ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ಗತಕಾಲದ ರಂಗವೈಭವ ನೆನಪಿಸುವಂತೆ ಅಭಿನಯಿಸಿದರು. ಆಧುನಿಕ ಕಾಲದ ಹಲವಾರು ಮಾಧ್ಯಮಗಳ ಎದುರು ನಾಟಕ ಕಂಪೆನಿಗಳು ನೇಪಥ್ಯಕ್ಕೆ ಸರಿದು … Read more