ಕಲ್ಲಂಗಡಿ ಹಣ್ಣು!: ಎಸ್.ಜಿ.ಶಿವಶಂಕರ್
ಅನಂತಯ್ಯ ಬಾಗಿಲು ತೆಗೆದು ಮನೆಯೊಳಗೆ ಕಾಲಿಟ್ಟಾಗ ಮೌನ ಸ್ವಾಗತಿಸಿತು. ಅನಂತಯ್ಯನವರಿಗೆ ಹಿತವೆನಿಸಲಿಲ್ಲ. ಒಂದು ತಿಂಗಳು ಜನರಿಂದ ಗಿಜಿಗುಟ್ಟುತ್ತಿದ್ದ ಮನೆ ಖಾಲಿಖಾಲಿಯಾಗಿ ಕಂಡಿತು. ಇಪ್ಪತ್ತೈದು ವರ್ಷಗಳಿಂದ ವಾಸಿಸುತ್ತಿದ್ದ ಮನೆಯನ್ನು ಮೊದಲ ಬಾರಿಗೆ ನೋಡುತ್ತಿರುವವರಂತೆ ಅನಂತಯ್ಯ ಮನೆಯನ್ನು ನೋಡಿದರು. ಮನೆಯಲ್ಲಿನ ವಸ್ತುಗಳನ್ನು ನೋಡುವಾಗ ಅದನ್ನು ಉಪಯೋಗಿಸಿದವರ ಚಿತ್ರ ಮನಸ್ಸಿಗೆ ಬರುತ್ತಿತ್ತು. ಅನಂತಯ್ಯ ಡ್ರಾಯಿಂಗ್ ರೂಮಿಗೆ ಬಂದರು. ಅಸ್ಥವ್ಯಸ್ಥವಾಗಿದ್ದ ದಿವಾನದ ಹಾಸುಗಳು ಕಂಡವು. ಮೊಮ್ಮಕ್ಕಳು ಅದರ ಮೇಲೆ ಹತ್ತಿ, ಇಳಿದು, ಕುಣಿದಾಡಿದ್ದು ಕಣ್ಮುಂದೆ ಬಂತು. ವರಾಂಡಕ್ಕೆ ಬಂದರೆ, ಅದರ ತುಂಬ ತುಂಬಿದ್ದ … Read more