ಯುರೇಕಾ..! ಯುರೇಕಾ..!! : ಎಸ್.ಜಿ.ಶಿವಶಂಕರ್
’ರೀ…’ ಅಲೆಅಲೆಯಾಗಿ ತೇಲಿಬಂದು ವಿಶ್ವನ ಕರ್ಣಪಟಲದ ಮೇಲೆ ಪ್ರಹರಿಸಿದುವು-ಶಬ್ದ ತರಂಗಗಳು! ತೂಕಡಿಸುತ್ತಿದ್ದ ವಿಶ್ವ ಮೆಟ್ಟಿ ಬಿದ್ದ!! ನಿದ್ರೆ ಹಾರಿತು! ಬಿ.ಪಿ ಏರಿತು! ಅದು ತನ್ನ ಜೀವನ ಸಂಗಾತಿ ವಿಶಾಲೂ ದನಿಯೆಂದು ತಿಳಿದು. ಆ ಕ್ಷಣ ಏನು ಮಾಡಬೇಕೆಂದು ತೋಚದೆ ಅವಾಕ್ಕಾದ. ಆ ದನಿಯಲ್ಲಿನ ಭಾವ ಅರ್ಥ ಮಾಡಿಕ್ಕೊಳ್ಳಲು ಪ್ರಯತ್ನಿಸಿದ. ಮೊದಲಿಗೆ ದನಿ ಬಂದ ದಿಕ್ಕು ಗುರುತಿಸಲು ಪ್ರಯತ್ನಿಸಿದ. ಅದು ಮನೆಯ ಹಿಂಭಾಗದಿಂದ ಬಂತು ಎಂಬುದನ್ನು ಯಶಸ್ವಿಯಾಗಿ ಗುರುತಿಸಿದ. ನಂತರ ಆ ದನಿಯಲ್ಲಿ ಆತಂಕವಿದೆಯೆ..? ಗಾಬರಿಯಿದೆಯೆ..? ಇಲ್ಲಾ ಸಹಜವಾದ … Read more