ಪ್ರೇಮಖೈದಿ-೨: ಅಭಿ ಸಾರಿಕೆ
ಸ್ಪಂದನ ಅವನೊಂದಿಗೆ ಮಾತಾನಾಡಲು ನಿಲ್ಲಿಸಿದ ಬಳಿಕ ವಿಶ್ವನಿಗೆ ಹುಚ್ಚು ಹಿಡಿದಂತೆನಿಸಿತು, ಹೇಗಾದರೂ ಅವಳ ಸ್ನೇಹ ಮತ್ತೆ ಬೇಕೆನಿಸಿತು. ಅವತ್ತಿಗೆ ಸ್ಪಂದನಳ ಪರೀಕ್ಷೆ ಮುಗಿದಿತ್ತು. ಇಷ್ಟು ದಿವಸಗಳ ಪರೀಕ್ಷೆಯ ಗುಂಗಲ್ಲಿ ವಿಶ್ವನನ್ನು ಸ್ವಲ್ಪಮಟ್ಟಿಗೆ ಮರೆಯಲು ಸಾಧ್ಯವಾಗಿದ್ದರೂ ಪೂರ್ತಿ ಮರೆತಿರಲಿಲ್ಲ, ಹೇಗಿರುವನೋ ಏನೋ ಎಂದುಕೊಳ್ಳುತ್ತ ಊರಿಗೆ ಹೊರಡುವ ತಯಾರಿಯಲ್ಲಿದ್ದಳು, ಇನ್ನೇನು ಬಸ್ ನಿಲ್ದಾಣ ತಲುಪುವ ವೇಳೆಗೆ ಧುತ್ತನೆ ಪ್ರತ್ಯಕ್ಷನಾದ ವಿಶ್ವ, ಕೈಯಲ್ಲಿ ಪುಟ್ಟ ಕವರ್ ಇತ್ತು, ಸ್ಪಂದನಳನ್ನು ನೋಡಿ ಮುಗುಳ್ನಕ್ಕು ಆದರೆ ಇವಳು ನಗಲಿಲ್ಲ, ಅವನೇ ಮಾತಿಗಿಳಿದ, "ದಯವಿಟ್ಟು ನನ್ನನ್ನು … Read more