ಮ್ಯಾಗ್ನೋಲಿಯಾ: ವಾಸುಕಿ ರಾಘವನ್ ಅಂಕಣ

“ಮ್ಯಾಗ್ನೋಲಿಯಾ” ನನ್ನ ಅಚ್ಚುಮೆಚ್ಚಿನ ಚಿತ್ರ. ಇದು ಕೇವಲ ಒಂದು ಚಿತ್ರವಲ್ಲ, ಇದೊಂದು ವಿಶೇಷ ಕಲಾಕೃತಿ. ತುಂಬಾ ದಿನದಿಂದ ಇದರ ಬಗ್ಗೆ ಬರೆಯಬೇಕು ಅನ್ನೋ ಆಸೆಯೇನೋ ಇತ್ತು, ಆದರೆ ಈ ಅದ್ಭುತ ಚಿತ್ರದ ಅನುಭವವನ್ನು ಪದಗಳಲ್ಲಿ ಹಿಡಿದಿಡಲು ಧೈರ್ಯ ಬಂದಿರಲಿಲ್ಲ. ಆದರೆ ಯಾಕೋ ಕೆಲವು ದಿನಗಳಿಂದ ಈ ಚಿತ್ರ ಬಹಳ ಕೈ ಹಿಡಿದು ಜಗ್ಗುತ್ತಿದೆ, ಕಾಡುವಿಕೆಯ ಮುಂದೆ ಹಿಂಜರಿಕೆ ಸೋಲ್ತಾ ಇದೆ. ಹೀಗಾಗಿ ಅದರ ಬಗ್ಗೆ ಬರೆಯುವ ಹುಚ್ಚುಸಾಹಸಕ್ಕೆ ಕೈ ಹಾಕಿದೀನಿ. ಇದನ್ನು ಓದುವುದರಿಂದ ನೀವು ಆ ಚಿತ್ರವನ್ನು … Read more

ವ್ಯಕ್ತಿತ್ವಗಳ ಸಂಘರ್ಷದ “ಕ್ರಿಮ್ಸನ್ ಟೈಡ್”:ವಾಸುಕಿ ರಾಘವನ್ ಅಂಕಣ

ಆಕ್ಷನ್ ಚಿತ್ರ ಅಂದ ಮಾತ್ರಕ್ಕೆ ‘ಪಾತ್ರ’ಗಳ ಕಡೆ ನಿರ್ಲಕ್ಷ್ಯ ಹರಿಸುವಂತಿಲ್ಲ. ಹೊಡೆದಾಟದ ಥ್ರಿಲ್ ಕೊಡುತ್ತಲೇ ಕಥೆಯಲ್ಲಿನ ಹಲವು ಪದರಗಳನ್ನು ತೋರಿಸುತ್ತಾ, ಪಾತ್ರಗಳಿಗೆ ತಮ್ಮದೇ ಆದ ಮೆರಗುಗಳನ್ನು ಕೊಡುತ್ತಾ ಹೋದರೆ ಚಿತ್ರಕ್ಕೆ ಹಲವು ಆಯಾಮಗಳು ಸಿಗುತ್ತವೆ. ಆಗ ಮಾತ್ರ ಒಂದು ಆಕ್ಷನ್ ಚಿತ್ರ ‘ಡಿಶೂಂ ಡಿಶೂಂ’ ಚಿತ್ರವನ್ನು ಮೀರಿ ಬೆಳೆಯುತ್ತದೆ. 1995ರ ಟೋನಿ ಸ್ಕಾಟ್ ನಿರ್ದೇಶನದ “ಕ್ರಿಮ್ಸನ್ ಟೈಡ್” ನಮ್ಮನ್ನು ಚಿಂತನೆಗೆ ಹಚ್ಚುವ ಅಂತಹ ಒಂದು ಆಕ್ಷನ್ ಚಿತ್ರ. ಇಡೀ ಚಿತ್ರ ನಡೆಯುವುದು ಒಂದು ಸಬ್ ಮರೀನ್ ಒಳಗೆ. … Read more

ಉಯ್ಯಾಲೆ:ವಾಸುಕಿ ರಾಘವನ್ ಅಂಕಣ

ತುಂಬಾ ದಿನಗಳಿಂದ ಈ ಚಿತ್ರ ನೋಡಬೇಕು ಅನ್ಕೊಂಡಿದ್ದೆ. ಆದರೆ ಅದಕ್ಕೆ ಸಮಯ ಸಿಕ್ಕಿದ್ದು ಹೋದ ವಾರ. ಸಿನಿಮಾದ ಹೆಸರು “ಉಯ್ಯಾಲೆ”. 1964ರಲ್ಲಿ ಬಿಡುಗಡೆಯಾದ ರಾಜಕುಮಾರ್, ಕಲ್ಪನಾ, ಅಶ್ವಥ್ ಅಭಿನಯದ ಈ ಚಿತ್ರದ ನಿರ್ದೇಶಕರು ಎನ್.ಲಕ್ಷ್ಮೀನಾರಾಯಣ. ಆಗಿನ ಕಾಲಕ್ಕಂತೂ ಬಹಳ ವಿಭಿನ್ನವಾದ, ಬೋಲ್ಡ್ ಆದ ಕಥೆಯನ್ನು ಹೊಂದಿದ್ದರಿಂದ ಇದು ಕುತೂಹಲ ಹೆಚ್ಚಿಸಿತ್ತು.   ಅಶ್ವಥ್, ಕಲ್ಪನಾ ತಮ್ಮ ಮುದ್ದು ಮಗಳಿನೊಂದಿಗೆ ವಾಸಿಸುತ್ತಿರುವ ದಂಪತಿಗಳು. ಅಶ್ವಥ್ ಕಾಲೇಜ್ ಪ್ರೊಫೆಸರ್, ಸದಾ ಓದುವುದರಲ್ಲೇ ಮುಳುಗಿಹೋಗಿರುವ ಪುಸ್ತಕದ ಹುಳು. ಅವನಿಗೆ ಬೇರೆ ಇನ್ಯಾವ … Read more

ಆಕ್ಸಿಡೆಂಟ್:ವಾಸುಕಿ ರಾಘವನ್ ಅಂಕಣ

ಶಂಕರ್ ನಾಗ್ ನಿಜಕ್ಕೂ ಸಿನಿಮಾ ವ್ಯಾಕರಣ ಕಲಿತಿದ್ದು ಎಲ್ಲಿ? ಅದು ರಂಗಭೂಮಿಯ ಅನುಭವದಿಂದ ಬಂದ ಸೆನ್ಸಿಬಿಲಿಟಿಯಾ? ಅಥವಾ ಬೇರೆ ದೇಶದ ಚಿತ್ರಗಳನ್ನ ಹೆಚ್ಚಾಗಿ ನೋಡಿ ಆ ಶೈಲಿಯಿಂದ ಪ್ರಭಾವಿತರಾಗಿದ್ರಾ? ನನಗೆ ಗೊತ್ತಿಲ್ಲ! ಆದರೆ ಅವರ ನಿರ್ದೇಶನದ ಚಿತ್ರಗಳಲ್ಲಿ ಒಂದು ವಿಭಿನ್ನವಾದ ಛಾಪು ಇರುತ್ತದೆ. ಅವರ ನಿರ್ದೇಶನದ “ಆಕ್ಸಿಡೆಂಟ್” ನನ್ನ ಮೆಚ್ಚಿನ ಚಿತ್ರಗಳಲ್ಲೊಂದು. ಚಿತ್ರದ ಕಥೆ ಬಹಳ ಸರಳ, ಆದರೆ ಅದನ್ನು ಹ್ಯಾಂಡಲ್ ಮಾಡಿರುವ ಶೈಲಿ ಅದ್ಭುತ. ಮಂತ್ರಿ ಧರ್ಮಾಧಿಕಾರಿಯ ಮಗ ದೀಪಕ್ ತನ್ನ ಗೆಳೆಯ ರಾಹುಲ್ ಜೊತೆ … Read more

ಕುಲೆಶೋವ್ ಪ್ರಯೋಗ:ವಾಸುಕಿ ರಾಘವನ್ ಅಂಕಣ

ನನ್ನ ಪ್ರಕಾರ “ಛಾಯಾಗ್ರಹಣ” ಮತ್ತು “ಸಂಕಲನ” ಸಿನಿಮಾವನ್ನು ಬೇರೆಲ್ಲ ಕಲಾಪ್ರಕಾರಗಳಿಗಿಂತ ವಿಭಿನ್ನವಾಗಿಸುತ್ತವೆ. ತೆರೆಯ ಮೇಲೆ ಇಡೀ ಮರುಭೂಮಿಯನ್ನು ಒಮ್ಮೆಲೇ ಸೆರೆಹಿಡಿಯಬಹುದು, ಅಥವಾ ಕಣ್ಣಂಚಿನ ಒಂದೇ ಒಂದು ಹನಿಯನ್ನು ತೋರಿಸಬಹುದು. ಇದು ಸಿನಿಮಾ ಛಾಯಾಗ್ರಹಣದ ಶಕ್ತಿ! ಸಿನಿಮಾ ಸಂಕಲನ ಕೂಡ ಅಷ್ಟೇ, ಹಲವಾರು ಶಾಟ್ ಗಳನ್ನು ಒಟ್ಟುಗೂಡಿಸಿದಾಗ, ಸೀನಿಗೆ ಒಂದು ಅರ್ಥ, ಸಿನಿಮಾಗೆ ಒಂದು ದಿಕ್ಕು ಸಿಗುತ್ತದೆ. ನನಗೆ ಸಿನಿಮಾ ಸಂಕಲನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ನಿಜಕ್ಕೂ ಸಂಕಲನ ಹೇಗೆ ಮಾಡುತ್ತಾರೆ ಅಂತ ಒಂದು ಸಲವೂ ನೋಡಿಲ್ಲ. ಗೊತ್ತಿಲ್ಲದಿರುವಾಗ … Read more

ಗೌರಿ ಗಣೇಶ:ವಾಸುಕಿ ರಾಘವನ್

ನಿಜಕ್ಕೂ ಒಳ್ಳೆಯ ಸಿನಿಮಾ ಅಂದರೆ ಯಾವುದು? ಅದನ್ನು ಅಳೆಯಲು ಬೇಕಿರುವ ಮಾನದಂಡಗಳು ಯಾವುವು? ಈ ಪ್ರಶ್ನೆಗೆ ನಿಖರವಾದ ಉತ್ತರ ನನ್ನಲ್ಲಿಲ್ಲ.  ಆದರೆ ಒಂದು ಮಾತ್ರ ಹೇಳಬಲ್ಲೆ. ನೀವು ನೋಡಿದ ಒಂದು ಚಿತ್ರ ಎಷ್ಟೋ ವರ್ಷಗಳಾದ ಮೇಲೂ ನಿಮ್ಮ ನೆನಪಿನಲ್ಲಿ ಉಳಿದಿದದ್ದರೆ, ಅದು ಒಳ್ಳೆಯ ಚಿತ್ರ! ನಾನು ಗೆಳೆಯ ಬೆಳ್ಳೂರ್ ಮನೆಗೆ ಮೊದಲ ಸಲ ಹೋಗ್ತಿದ್ದೆ. ಮನೆಯ ವಿಳಾಸ, ಡೈರೆಕ್ಷನ್ ಎಲ್ಲಾ ಕೇಳಿಕೊಂಡು ಸರಿಯಾಗಿ ಬಂದು ತಲುಪಿದೆ. ಅಪಾರ್ಟ್ ಮೆಂಟ್ ನಂಬರ್ ಏನು ಅಂತ ಕೇಳಿದಾಗ “ನೂರಾ ಎರಡು” … Read more

ಮೋಟಾರ್ ಸೈಕಲ್ ಡೈರೀಸ್: ವಾಸುಕಿ ರಾಘವನ್

ಚೆ ಗೆವಾರ ನಿಮಗೆಲ್ಲರಿಗೂ ಗೊತ್ತಿರಬಹುದು. ಚರಿತ್ರೆಯನ್ನು ಅಷ್ಟಾಗಿ ಓದಿಲ್ಲದವರಿಗೂ ಟಿ-ಶರ್ಟ್ ಮೇಲಿನ “ಆ ಮುಖ” ಅಂತಾದ್ರೂ  ಪರಿಚಯ ಇದ್ದೇ ಇರುತ್ತೆ. ನನಗೆ ಅವನ ಸಿದ್ಧಾಂತಗಳು, ನಿಲುವುಗಳು, ಆದರ್ಶಗಳ ಬಗ್ಗೆ ಆಳವಾದ ಅರಿವು ಇಲ್ಲ, ಆದರೂ ಅವನ ಜೀವನವನ್ನು ಬದಲಿಸಿದ ಕಥೆ ಇರುವ ಈ ಚಿತ್ರ ಬಹಳ ಇಷ್ಟವಾಯಿತು. ಆ ಚಿತ್ರವೇ 2004ರಲ್ಲಿ ಬಂದ ಅದೇ ಹೆಸರಿನ ಆತ್ಮಕಥನದ ಪುಸ್ತಕವನ್ನು ಆಧರಿಸಿದ “ಮೋಟಾರ್ ಸೈಕಲ್ ಡೈರೀಸ್”.   ಎರ್ನೆಸ್ಟೋ ‘ಚೆ’ ಗೆವಾರ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನಮ್ಮಂಥ ಒಬ್ಬ … Read more

ಪ್ರೇಮ ವೈಫಲ್ಯ: ವಾಸುಕಿ ರಾಘವನ್

ಎರಡು ಕನಸು, ಬಂಧನ, ಪಲ್ಲವಿ ಅನುಪಲ್ಲವಿ, ಅಮೆರಿಕಾ ಅಮೆರಿಕಾ, ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿ, ಮಾನಸ ಸರೋವರ…ಹಾಗೂ “ಏ” ಚಿತ್ರಗಳಲ್ಲಿ ಮುಖ್ಯವಾಗಿ ಏನು ಕಾಮನ್ ಆಗಿದೆ? ಹೌದು, “ಪ್ರೇಮ ವೈಫಲ್ಯ”, ಅದರಲ್ಲೂ ಹೀರೋ ವೈಫಲ್ಯವನ್ನು ಅನುಭವಿಸೋದು! ಆದರೆ “ಏ” ಚಿತ್ರಕ್ಕೂ ಬೇರೆ ಚಿತ್ರಗಳಿಗೂ ಒಂದು ಪ್ರಮುಖ ವ್ಯತ್ಯಾಸ ಏನು ಗೊತ್ತಾ? ಈ ಸನ್ನಿವೇಶವನ್ನು ಹೀರೋ ಹ್ಯಾಂಡಲ್ ಮಾಡಿದ ರೀತಿ. “ಎರಡು ಕನಸು” ಚಿತ್ರದಲ್ಲಿ ತನ್ನ ಹಳೆಯ ಪ್ರೇಯಸಿಯನ್ನು ಮರೆಯಲಾಗದ ನಾಯಕ, ಹೆಂಡತಿಯನ್ನು ಕಡೆಗಣಿಸುತ್ತಾನೆ. “ಬಂಧನ” ಚಿತ್ರದಲ್ಲಿ ತಾನು … Read more

ಆಸೆಗಳು ನನ್ನವು ಸಾವಿರಾರು: ವಾಸುಕಿ ರಾಘವನ್

ಜವಹರಲಾಲ್ ನೆಹರು ಅವರ “ಟ್ರಿಸ್ಟ್ ವಿತ್ ಡೆಸ್ಟಿನಿ” ನಮ್ಮ ದೇಶದ ಅತ್ಯಂತ ಪ್ರಸಿದ್ಧ ಭಾಷಣ ಅನ್ಸುತ್ತೆ. ಸುಧೀರ್ ಮಿಶ್ರಾ ಅವರ “ಹಜಾರೋ ಖ್ವಾಹಿಷೇ ಏಸೀ” ಚಿತ್ರ ಶುರುವಾಗುವುದೇ ಈ ಭಾಷಣದ ಧ್ವನಿ ಮುದ್ರಿಕೆಯೊಂದಿಗೆ. “ವಿಧಿಯೊಂದಿಗೆ ನಮ್ಮ ಒಪ್ಪಂದ ಯಾವಾಗಲೋ ಆಗಿದೆ, ಅದರೆಡೆಗೆ ಮುನ್ನುಗ್ಗುವ ಪಣವನ್ನು ಇಂದು ತೊಡೋಣ. ಮಧ್ಯರಾತ್ರಿಯ ಈ ಹೊತ್ತಿನಲ್ಲಿ, ಇಡೀ ಪ್ರಪಂಚವೇ ಮಲಗಿರುವಾಗ, ಭಾರತ ಸ್ವಾತ್ರಂತ್ರ್ಯದೆಡೆಗೆ, ಬೆಳಕಿನೆಡೆಗೆ ಸಾಗುತ್ತದೆ”. ದಾಸ್ಯದಲ್ಲಿ ಸಿಕ್ಕಿ ನರಳುತ್ತಿದ್ದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಇಂಥ ಒಂದು ಭಾಷಣ ಕೇಳಿ … Read more

ಸಿನಿಮಾ ಪ್ಯಾರಡಿಸೋ: ವಾಸುಕಿ ರಾಘವನ್

ಬಾಲ್ಯದಲ್ಲಿ ಸಿನಿಮಾ ನೋಡುವಾಗಿನ ಅನುಭವವೇ ಬೇರೆ ಇತ್ತು. ನನ್ನ ಬೆರಗುಗಣ್ಣಿಗೆ ಸಾಧಾರಣ ಚಿತ್ರಗಳೂ ಅದೆಷ್ಟು ಅಚ್ಚರಿ ಮಾಡಿಸುತ್ತಿದ್ದವು. ಈಗ ಬಹಳ ಸಿನಿಮಾ ನೋಡಿರುವುದರಿಂದಲೋ ಏನೋ, ಸಿನಿಮಾಪ್ರೇಮಿಯೊಡನೆ ಒಬ್ಬ ಸಿನಿಕನೂ ನನ್ನಲ್ಲಿ ಹುಟ್ಟಿದ್ದಾನೆ. ಈಗ ಬೇಕೆಂದರೂ ಆ ಮುಗ್ಧ ಮನಸ್ಥಿತಿ ಸಿಗುವುದಿಲ್ಲ. ಹಾಗಾಗಿ ಹತ್ತರಲ್ಲಿ ಒಂಭತ್ತು ಚಿತ್ರಗಳು ನಿರಾಶೆ ಮೂಡಿಸುತ್ತವೆ. ಆದರೆ ಆ ಒಂದು ಚಿತ್ರ ಇಷ್ಟ ಆಗುತ್ತೆ ನೋಡಿ, ಆ ಖುಷಿಯ ತೀವ್ರತೆ ಬೇರೆಯವರಿಗಿಂತ ಹೆಚ್ಚಾಗಿ ಅನುಭವಿಸುತ್ತೇನೆ! ಈಗಿನ ವಿಮರ್ಶಾತ್ಮಕ ಮನಸ್ಥಿಯಲ್ಲೂ ಮೆಚ್ಚಿಸುವ ಚಿತ್ರಗಳು ಸಾಕಷ್ಟಿವೆ, ಆದರೇ … Read more

ಒಂದಾನೊಂದು ಕಾಲದಲ್ಲಿ:ವಾಸುಕಿ ರಾಘವನ್ ಅಂಕಣ

ಸಾಕಷ್ಟು ಸಿನೆಮಾ ಶುರುವಿನಲ್ಲಿ  ಶೀರ್ಷಿಕೆ ತೋರಿಸುವಾಗ ಯಾವುದಾದರೊಂದು ಹಾಡನ್ನು ಹಾಕುತ್ತಾರೆ. ಬಹಳಷ್ಟು ಸಲ ಸಿನಿಮಾದ ಪಾಪ್ಯುಲರ್ ಹಾಡಿರುತ್ತೆ, ಅಥವಾ ಸಿನಿಮಾದಲ್ಲಿ ಎಲ್ಲೂ ಬಳಸಲು ಸಾಧ್ಯವಾಗಿಲ್ಲದ ಹಾಡಿರುತ್ತೆ. ಇದಕ್ಕೆ ಅಪವಾದ ಗಿರೀಶ್ ಕಾರ್ನಾಡ್ ನಿರ್ದೇಶನದ “ಒಂದಾನೊಂದು ಕಾಲದಲ್ಲಿ”. ಚಿತ್ರದ ಆರಂಭದಲ್ಲಿ ಕವಿತಾ ಕೃಷ್ಣಮೂರ್ತಿ ಹಾಡಿರುವ “ಬಿಚ್ಚುಗತ್ತಿಯ ಬಂಟನ ಕಥೆಯ” ಅನ್ನೋ ಹಾಡು ಬರುತ್ತೆ. ಕೇಳಿದ ತಕ್ಷಣ ಹಿಡಿಸಿದ ಹಾಡು ಇದು, ಯಾಕೆ ಇಷ್ಟ ಆಯ್ತು ಗೊತ್ತಾಗಿದ್ದು ಸಿನಿಮಾ ಮುಗಿದ ಮೇಲೆ. ಆ ಹಾಡು ಈ ಚಿತ್ರ ನೋಡಲು ಬೇಕಾದ … Read more

ಬದುಕೆಂಬ ಬಂದೀಖಾನೆಯಲ್ಲಿ…: ವಾಸುಕಿ ರಾಘವನ್

ಆಗಿನ್ನೂ ನನಗೆ ಈ ಪರಿ ಸಿನಿಮಾ ಹುಚ್ಚು ಹತ್ತಿರಲಿಲ್ಲ. ಆಫೀಸ್ ಗೆ ಕ್ಯಾಬ್ ಅಲ್ಲಿ ಹೋಗೋವಾಗ “ಡಂಬ್ ಶರಾಡ್ಸ್” ಆಡ್ತಾ ಇದ್ವಿ. ಸ್ವಲ್ಪ ದಿನದಲ್ಲೇ ಎಕ್ಸ್‌ಪರ್ಟ್ಸ್ ಆಗೋದ್ವಿ ತುಂಬಾ ಜನ, ಸಿನಿಮಾ ಹೆಸರನ್ನ ಸುಲಭವಾಗಿ ಊಹಿಸಿಬಿಡ್ತಿದ್ವಿ. ಆಗ ಕಷ್ಟಕಷ್ಟದ ಹೆಸರುಗಳನ್ನು ಹುಡುಕಿ ಕೊಡೋ ಪರಿಪಾಠ ಶುರು ಆಗಿತ್ತು. ಒಂದು ದಿನ ಗೆಳೆಯ ಪ್ರದೀಪ್ “ಶಾಶ್ಯಾಂಕ್ ರಿಡೆಂಪ್ಶನ್” ಅಂತ ನನ್ನ ಕಿವಿಯಲ್ಲಿ ಉಸುರಿದರು. “ಏನು? ಶಶಾಂಕ್ ರಿಡೆಂಪ್ಶನ್ ಅಂತಾನಾ? ಆ ಥರ ಯಾವ ಫಿಲ್ಮ್ ಇದೆ? ತಮಾಷೆ ಮಾಡ್ತಿಲ್ಲ … Read more

ಯಾರೂ ನೋಡಿರದ ಎವರ್-ಗ್ರೀನ್ ಕ್ಲಾಸಿಕ್:ವಾಸುಕಿ ರಾಘವನ್

ನಿಮಗೆ ಈ ಚಿತ್ರದ ಎಲ್ಲಾ ಹಾಡುಗಳು ಗೊತ್ತಿರಬಹುದು. ಕೇಳಿದ್ದರೆ ಮರೆತಿರಲಿಕ್ಕೆ ಸಾಧ್ಯಾನೇ ಇಲ್ಲ ಬಿಡಿ. ಆದರೂ ನೀವು ಈ ಸಿನಿಮಾ ನೋಡಿರೋ ಸಾಧ್ಯತೆಗಳು ಕಡಿಮೆ. ನಿಮಗೆ ಪರಿಚಯ ಇರೋರಲ್ಲಿ ಕೂಡ ಈ ಚಿತ್ರವನ್ನ ಯಾರೂ ನೋಡಿರಲಾರರು. ಚಾನ್ಸ್ ಸಿಕ್ಕರೆ ಈ ಚಿತ್ರವನ್ನ ನೋಡ್ತೀರಾ ಅಂದ್ರೆ ಇಲ್ಲಪ್ಪಾ ಅಂತೀರ! ಇದ್ಯಾವ ಚಿತ್ರನಪ್ಪಾ ಅಂತ ತಲೆ ಕೆರ್ಕೊತಾ ಇದೀರಾ? ತಡೀರಿ ಆ ಚಿತ್ರದ ಒಂದು ಹಾಡು ಇಲ್ಲಿದೆ: ಕಣ್ಣು ಕಡಲ ಹೊನ್ನು ನಸು ನಾಚಿದಾಗ ನೀನು ಸೌಂದರ್ಯ ನಿನ್ನ ನೋಡಿ … Read more

ಈ ತು ಮಾಮ ತಂಬ್ಯೆನ್:ವಾಸುಕಿ ರಾಘವನ್

ನೀವು ತುಂಬಾ ಮಡಿವಂತರಾ? ನಿಮ್ಮ ಭಾವನೆಗಳು ಸುಲಭವಾಗಿ ಹರ್ಟ್ ಆಗ್ತವಾ? ನಿಮಗೆ "ನೈತಿಕತೆ" ಕನ್ನಡಕ ಬಿಚ್ಚಿಟ್ಟು ಪ್ರಪಂಚವನ್ನ ನೋಡೋ ಅಭ್ಯಾಸಾನೇ ಇಲ್ವಾ? ಹಂಗಿದ್ರೆ ಈ ಚಿತ್ರ ನಿಮಗಲ್ಲ ಬಿಡಿ. ಈ ಆರ್ಟಿಕಲ್ ಕೂಡ ನಿಮಗೆ ಸರಿಹೋಗಲ್ಲ! ನೀವು ಈ ಗುಂಪಿಗೆ ಸೇರಿಲ್ವಾ? ಹಾಗಾದ್ರೆ ಇನ್ನೇನ್ ಯೋಚ್ನೆ ಇಲ್ಲ, ಬನ್ನಿ ಈ ಫಿಲ್ಮ್ ಬಗ್ಗೆ ಮಾತಾಡೋಣ! ಆಲ್ಫೊನ್ಸೋ ಕ್ವಾರೋನ್ ನಿರ್ದೇಶನದ "ಈ ತು ಮಾಮ ತಂಬ್ಯೆನ್" ("ನಿನ್ನ ಅಮ್ಮ ಕೂಡ") 2001ರಲ್ಲಿ ಬಿಡುಗಡೆಯಾದ ಮೆಕ್ಸಿಕನ್ ಚಿತ್ರ. "ಕಮಿಂಗ್ ಆಫ್ … Read more

ಮುಂಬೈಗೆ ಕಿರಣ್ ಳ ಪ್ರೇಮಪತ್ರ: ವಾಸುಕಿ ರಾಘವನ್

  ಜಾಗಗಳೂ ಕೂಡ ಪಾತ್ರಗಳಾದಾಗ ಚಿತ್ರಗಳಿಗೆ ಇನ್ನೊಂದು ಆಯಾಮ ಸೇರಿಕೊಳ್ಳುತ್ತದೆ. “ನಾಗರಹಾವು” ಚಿತ್ರದ ಚಿತ್ರದುರ್ಗ, “ಕಹಾನಿ” ಚಿತ್ರದ ಕೋಲ್ಕೊತ, “ಸತ್ಯ”ದ ಮುಂಬೈ, “ಗಾಡ್ ಫಾದರ” ನ ಸಿಸಿಲಿ – ಈ ಎಲ್ಲಾ ಚಿತ್ರಗಳಲ್ಲೂ ಆ ಜಾಗಗಳೇ ಒಂದು ಪಾತ್ರವಾಗಿವೆ.  ಇದಕ್ಕೆ ಹೋಲಿಸಿದರೆ, ಜಾಗವನ್ನೇ ಪ್ರಮುಖ ಪಾತ್ರವಾಗಿ ಇಟ್ಟುಕೊಂಡು ತೆಗೆದಿರುವ ಚಿತ್ರಗಳು ಕಡಿಮೆ. ಕಿರಣ್ ರಾವ್ ನಿರ್ದೇಶನದ “ಧೋಬಿ ಘಾಟ್” ಅಂತಹ ಒಂದು ಅಪರೂಪದ ಚಿತ್ರ. ಇದು ಮುಂಬೈಗೆ ಆಕೆ ಬರೆದಿರುವ ಪ್ರೇಮಪತ್ರ! ಚಿತ್ರದಲ್ಲಿ ನಾಲ್ಕು ಎಳೆಗಳಿವೆ.  ಅರುಣ್ … Read more

ಮರೆಯಲಾಗದ ಚಿಕ್ಕಾತಿಚಿಕ್ಕ ಪಾತ್ರಗಳು:ವಾಸುಕಿ ರಾಘವನ್

  “ಪೂರೇ ಪಚಾಸ್ ಹಜಾರ್” ಮೂರೇ ಪದಗಳು! ಹೇಳಿದವನು ಮಕಿಜಾನಿ ಮೋಹನ್ ಅಲಿಯಾಸ್ ಮ್ಯಾಕ್ ಮೋಹನ್. ಸಾಮಾನ್ಯವಾಗಿ ಖಳನಾಯಕನ ಚೇಲಾ ಪಾತ್ರಗಳಿಂದ ನಮಗೆ ಪರಿಚಿತನಾಗಿರುವ ಆತ ನಟಿಸಿರುವ ಇನ್ನೂರಕ್ಕೂ ಹೆಚ್ಚು ಚಿತ್ರಗಳ ತೂಕ ಒಂದಾದರೆ, ಈ ಪಾತ್ರದ್ದೇ ಒಂದು. ಇದು ಪೋಷಕ ಪಾತ್ರ ಅಂತಲೂ ಹೇಳಲಾಗದಷ್ಟು ಚಿಕ್ಕಾತಿಚಿಕ್ಕ ಪಾತ್ರ. ಆದರೆ ಇವತ್ತಿಗೂ ಗಬ್ಬರ್ ಸಿಂಗ್ ಎಷ್ಟು ಫೇಮಸ್ ಆಗಿದ್ದಾನೋ ಮೂರೇ ಪದ ಹೇಳಿರುವ ಸಾಂಭಾ ಕೂಡ ಅಷ್ಟೇ ಫೇಮಸ್! “ಮೇರೆ ಸಪ್ಪನೋ ಕೀ ರಾಣಿ ಕಬು ಆಯೇಗಿ … Read more

ಕತ್ತರಿ ಕೈಗಳ ಕಲಾವಿದ:ವಾಸುಕಿ ರಾಘವನ್

  ಈ ವಾರ ಬೇರೇನೋ ಬರೆಯೋಣ ಅಂತ ಯೋಚನೆ ಮಾಡ್ತಾ ಇದ್ದೆ. ಆದರೆ ಈ ಸಿನಿಮಾ ನೋಡಿದೆ ನೋಡಿ, ಇದರ ಬಗ್ಗೆ ಬರೀದೇ ಇರಕ್ಕೆ ಆಗೋದೇ ಇಲ್ಲ ಅನ್ನಿಸಿಬಿಡ್ತು. ಆ ಚಿತ್ರ ಟಿಮ್ ಬರ್ಟನ್ ನಿರ್ದೇಶನದ ಜಾನಿ ಡೆಪ್ ಅಭಿನಯದ “ಎಡ್ವರ್ಡ್ ಸಿಜರ್ ಹ್ಯಾಂಡ್ಸ್”. “ಏವಾನ್” ಸೌಂದರ್ಯವರ್ಧಕ ಕಂಪನಿಯ ಸೇಲ್ಸ್ ವುಮನ್ ಪೆಗ್, ಗ್ರಾಹಕರನ್ನು ಹುಡುಕುತ್ತಾ ಹೊರಟಿರುವಾಗ ಪಾಳು ಬಿದ್ದ ಒಂದು ಮಹಲಿಗೆ ಬರುತ್ತಾಳೆ.  ಅಲ್ಲಿ ಅವಳಿಗೆ ಎಡ್ವರ್ಡ್ ಭೇಟಿ ಆಗುತ್ತೆ. ಮನುಷ್ಯರ ಒಡನಾಟವೇ ಇಲ್ಲದ ಎಡ್ವರ್ಡ್ … Read more

ಕ್ರೂರ ಪ್ರಪಂಚದಲ್ಲಿ ನಾವೂ, ಮಕ್ಕಳೂ:ವಾಸುಕಿ ರಾಘವನ್

ಕಳೆದ ಡಿಸೆಂಬರ್ ಅಲ್ಲಿ ನಡೆದ “ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ”ಕ್ಕೆ ಹೋಗಿದ್ದು ಒಂದು ಅದ್ಭುತ ಅನುಭವ. ಒಂದು ಚಿತ್ರ ನೋಡಿ ಬಂದು, ಇನ್ನೊಂದು ಚಿತ್ರಕ್ಕೆ ಕ್ಯೂನಲ್ಲಿ ನಿಂತುಕೊಳ್ಳೋದು, ನಿಂತಲ್ಲೇ ಒಂದು ಸ್ಯಾಂಡ್ವಿಚ್ಚೋ ವ್ರಾಪೋ ಗಬಗಬ ತಿನ್ನೋದು. ಬೇರೆಯವರಿಗೆ ಹುಚ್ಚಾಟ ಅನ್ನಿಸಬಹುದಾದ ಈ ವರ್ತನೆ ಚಿತ್ರಪ್ರೇಮಿಗಳಿಗೆ ಸರ್ವೇಸಾಮಾನ್ಯ ಆಗಿತ್ತು. ಗೆಳೆಯ ಪವನ್ ಕುಂಚ್ ಜೊತೆ ಎರಡು ದಿನದಲ್ಲಿ ಎಂಟು ಚಿತ್ರ ನೋಡಿದ್ದು ಮರೆಯಲಾಗದ ನೆನಪು!    ಶನಿವಾರ ಸಂಜೆ ಸಿನಿಮಾ ಹಾಲಲ್ಲಿ ಕೂರುವ ಹೊತ್ತಿಗೆ ಏನೋ ಒಂಥರಾ ಸುಸ್ತು. “ಫಿಲಂ … Read more

ಆಸ್ಥಾ: ನನ್ನ ಮೆಚ್ಚಿನ ರೇಖಾಳ ‘ಗೃಹಿಣಿ’ ಪಾತ್ರ:ವಾಸುಕಿ ರಾಘವನ್

  ನಿಮ್ಮ ಡ್ರೀಮ್ ಪಾತ್ರ ಯಾವುದು ಅಂತ ನಟಿಯರನ್ನ ಕೇಳಿ ನೋಡಿ. ಶರಪಂಜರದಲ್ಲಿ ಕಲ್ಪನಾ ಮಾಡಿದ ಪಾತ್ರ ಅಂತಾರೆ. ಇಲ್ಲ ಅಂದ್ರೆ ಜೀವನದಲ್ಲಿ ತುಂಬಾ ಕಷ್ಟ, ನೋವುಗಳನ್ನು ಅನುಭವಿಸೋ ದುರಂತ ಪಾತ್ರ ಅಥವಾ ಯಾವುದಾದರೂ ಪೌರಾಣಿಕ, ಐತಿಹಾಸಿಕ ಪಾತ್ರ ಅಂತಾರೆ. “ಥಿಯೇಟ್ರಿಕ್ಯಾಲಿಟಿ” ಗೆ ತುಂಬಾ ಅವಕಾಶ ಇರೋ ಪಾತ್ರಗಳೇ ಉತ್ತಮ ಪಾತ್ರಗಳು ಮತ್ತು ಆ ಪಾತ್ರಗಳಲ್ಲಿ ಅಭಿನಯಿಸಿದರೆ ಅದು ಆಟೋಮ್ಯಾಟಿಕ್ ಆಗಿ ಒಳ್ಳೆಯ ನಟನೆ ಅನ್ನೋ ತಪ್ಪು ಅಭಿಪ್ರಾಯ ಇದೆ. ನಿಜವಾಗಿ ತುಂಬಾ ಸವಾಲೊಡ್ಡುವ ಪಾತ್ರ ಅಂದರೆ … Read more

ಬೆಳ್ಳಿಮೋಡ: ವಾಸುಕಿ ರಾಘವನ್

  ನಾನು ಪುಟ್ಟಣ್ಣ ಕಣಗಾಲ್ ಅವರ ಸಾಕಷ್ಟು ಚಿತ್ರಗಳನ್ನ ನೋಡಿಲ್ಲ. ನೋಡಿರುವ ಬಹಳಷ್ಟು ಚಿತ್ರಗಳು ಚಿಕ್ಕವನಾಗಿದ್ದಾಗ, ದೂರದರ್ಶನದಲ್ಲಿ ಪ್ರಸಾರ ಆಗ್ತಿದ್ದ ಕಾಲದಲ್ಲಿ, ಜಾಹೀರಾತುಗಳ ನಡುವೆ. ಚಲನಚಿತ್ರ ಒಂದು ಕಲೆ ಎಂಬ ಗ್ರಹಿಕೆ ಶುರು ಆದಮೇಲೆ ನೋಡಿರೋ ಚಿತ್ರಗಳಲ್ಲಿ ಕಾರಣಾಂತರಗಳಿಂದ ಕನ್ನಡ ಚಿತ್ರಗಳ ಸಂಖ್ಯೆ ಕಮ್ಮಿ ಅಂತಾನೆ ಹೇಳ್ಬೇಕು. ಈ ವಿಷಯದ ಬಗ್ಗೆ ನನಗೆ ಬೇಸರ ಇದೆ ಕೂಡ.   ಇದನ್ನು ಬದಲಿಸೋ ಪ್ರಯತ್ನ ಮಾಡ್ತಿದೀನಿ ಇತ್ತೀಚಿಗೆ. ಈ ಪಯಣದಲ್ಲಿ ನನಗೆ ಸಿಕ್ಕ ಪುಟ್ಟಣ್ಣರ ಚಿತ್ರ “ಬೆಳ್ಳಿಮೋಡ”. 1966ರಲ್ಲಿ ಬಿಡುಗಡೆಯಾದ … Read more