ನನ್ನ ಮನವ ತಿಳಿಯಾಗಿಸಿದ ಆ ನವಿಲು: ಹರೀಶ್ ಆರ್ ಅಡವಿ
ನಮ್ಮ ಚಳ್ಳಕೆರೆ(ಚಿತ್ರದುರ್ಗ ಜಿಲ್ಲೆ) ಅರಣ್ಯ ಪ್ರದೇಶವು ಅಂದಾಜು ಒಂದು ಸಾವಿರ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ ಹಾಗೂ ಅನೇಕ ಪ್ರಾಣಿ ಪಕ್ಷಿಗಳಿಗೆ, ಬಯಲುಸೀಮೆಯ ವನ್ಯಜೀವಿಗಳಿಗೆ ಆವಾಸ ಸ್ಥಾನವಾಗಿದೆ. ಇಲ್ಲಿನ ಅಪರೂಪದ ಅರಣ್ಯ ಪ್ರದೇಶದಲ್ಲಿ ಓಡಾಡುವುದೆಂದರೆ ನನಗೆ ಒಂದು ಖುಷಿಯ ವಿಷಯವಾಗಿದೆ. ಕೆಲವೊಮ್ಮೆ ಕಾನನದ ಒಳಗೆ ಹೋಗಿ ಹೆದರಿದ್ದೂ ಉಂಟು, ಜೋರು ಗಾಳಿ ಬೀಸುವಾಗ ನೀಲಗಿರಿಮರದ ಎಲೆಯ ಶಭ್ಧಕ್ಕೆ ಹೆದರಿ ಓಡಿದ್ದೂ ಉಂಟು, ಅದೆಷ್ಟೋ ಬಾರಿ ನನ್ನ ಹೆಜ್ಜೆಯ ಸಪ್ಪಳಕ್ಕೆ ನಾನೇ ಭಯದಿಂದ ನಡುಗಿದ್ದೇನೆ, ದೂರದಲ್ಲೆಲ್ಲೋ ಕೇಳುವ ಕೋಗಿಲೆ … Read more