ಮಾತಿಗೊಂದು ಎಲ್ಲೆ ಎಲ್ಲಿದೆ. .: ಸ್ಮಿತಾ ಅಮೃತರಾಜ್. ಸಂಪಾಜೆ.
ಮಾನವ ಜನ್ಮ ದೊಡ್ಡದು ಅಂತ ದಾಸರು ಇದಕ್ಕೇ ಹೇಳಿರಬೇಕು. ಯಾಕೆಂದರೆ ನಾವು ಪ್ರಾಣಿ ಪಕ್ಷಿಗಳಿಂದ, ಕ್ರಿಮಿಕೀಟಾದಿಗಳಿಂದ, ಹೆಚ್ಚೇಕೆ ಸಕಲ ಜೀವ ಸಂಕುಲಗಳಿಗಿಂತ ಅದೆಷ್ಟೋ ಭಿನ್ನವಾದರೂ, ಅವರಿಗಿಂತ ರೂಪು ಲಾವಣ್ಯದಲ್ಲಿ ಮಿಗಿಲಾದರೂ, ಅದೆಲ್ಲಕ್ಕಿಂತ ಹೆಚ್ಚಾಗಿ ನಮಗೆ ಆಲೋಚಿಸುವ, ಯೋಚಿಸಿದ್ದನ್ನು ಹಿಂದು ಮುಂದು ನೋಡದೆ ಒದರುವ , ಅಂದರೆ ಮಾತನಾಡುವ ವಿಶೇಷ ಶಕ್ತಿ ಇರುವುದರಿಂದಲೋ ಏನೋ ನಾವುಗಳು ಎಲ್ಲರ ದೃಷ್ಟಿಯಲ್ಲಿ ಕೃತಾರ್ಥರಾಗಿರುವುದು. ಇನ್ನು ಮನುಷ್ಯನಿಗೆ ಬಾಯಿ ತಿನ್ನಲು ಮಾತ್ರ ಅಲ್ಲ, ಅದು ಮಾತನಾಡುವ ಕೆಲಸ ಕೂಡ ಮಾಡುತ್ತದೆ ಅಂದರೆ ಇದಕ್ಕಿಂತ … Read more