ಸಹಜ ಕೃಷಿ-ಬದುಕು ಖುಷಿ: ಮಂಗಳ ಎನ್ ಅಗ್ರಹಾರ


ಕೃಷಿಯು ಆದಿಮ ಕಾಲದಿಂದಲೂ ಮನುಶ್ಯನ ಬದುಕಿನ ಭಾಗವಾಗಿ ಬಂದಿರುವ ವೃತ್ತಿ. ಇಂದಿಗೂ ಕೂಡ ದೇಶದ ಬಹುಪಾಲು ಜನರ ಮೂಲಕಸುಬು ಕೃಷಿಯಾಗಿದೆ. ಸರಳವಾದ ಜೀವನಕ್ರಮವನ್ನು ಪ್ರತಿಪಾದಿಸುತ್ತಾ ರೈತರು ತಾವು ಆಥ್ರ್ರಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಿ ಬದುಕಲು ಪ್ರೇರೇಪಿಸುತ್ತದೆ. ಇದರೊಟ್ಟಿಗೆ ಜನರ ಆಲೋಚನೆ, ನೆಲದ ಜೊತೆಗಿನ ಸಂಬಂದ, ಸಂಸ್ಕøತಿ ಮತ್ತು ಪರಿಸರದೊಟ್ಟಿಗಿನ ಭಾವನಾತ್ಮಕ ಒಡನಾಟವನ್ನು ಗಟ್ಟಿಗೊಳಿಸುತ್ತದೆ. ಪರಸ್ಪರ ಆಳು-ಕಾಳುಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಹಣದ ಅವಶ್ಯಕತೆಯೇ ಇಲ್ಲದೆ ಬದುಕುತ್ತಿದ್ದ ‘ಆ ದಿನಗಳು’ ಬರಲಾರವು ಎಂಬ ನೋವು ಇಂದಿನ ಪ್ರಗತಿಪರ ರೈತರಲ್ಲಿದೆ.

ಸ್ಥಳೀಯವಾಗಿ ದೊರೆಯುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತಾ ಪರಿಸರಸ್ನೇಹಿ ವಿಧಾನಗಳಿಂದ ಉಳುಮೆಮಾಡಿ, ದೇಸಿ ಬೀಜಗಳನ್ನು ಬಿತ್ತಿ, ಜೈವಿಕವಾಗಿ ತಯಾರಿಸಿದ ಗೊಬ್ಬರಗಳಿಂದ ಕೀಟ ಮತ್ತು ರೋಗಗಳ ನಿರ್ವಹಣೆ ಕೈಗೊಂಡು ಗುಣಮಟ್ಟದ ಆಹಾರ ಉತ್ಪಾದನೆ ಮಾಡುವುದೆ ಸಾವಯವ ಕೃಷಿ.

ಈಚಿನ ದಿನಗಳಲ್ಲಿ ರೈತರು ರಸಾಯನಿಕ ಗೊಬ್ಬರಗಳನ್ನು ಅಧಿಕಬೆಲೆಗೆ ಖರೀದಿಸಿ ಬೆಳಗಳಿಗೆ ಸಿಂಪಡಿಸುತ್ತಿದ್ದಾರೆ. ಇವು ಅತ್ಯಂತ ಅಪಾಯಕಾರಿಯಾಗಿದ್ದು ರೈತರ ಕೃಷಿ ವೆಚ್ಚವು ಉತ್ಪಾದನೆ ವೆಚ್ಚಕ್ಕಿಂತ ಅಧಿಕವಾಗಿದ್ದು ಕೃಷಿಯು ಒಂದು ನಷ್ಟದ ಉದ್ಯಮವಾಗಿ ಬೆಳೆಯುತ್ತಿದೆ. ವಾಣಿಜ್ಯ ಬೆಳೆಗಳು ಮತ್ತು ರಫ್ತು ಉತ್ತೇಜಕ ಬೆಳೆಗಳಿಗೆ ಪ್ರೋತ್ಸಾಹ ಕೊಡುತ್ತಿರುವ ಸರ್ಕಾರ ಸಾಲವನ್ನು ಕೊಟ್ಟು ರೈತನಿಗೆ ಸಾವನ್ನು ಕೊಡುತ್ತಿದೆ. ಎಂಎನ್‍ಸಿ ಕಂಪನಿಗಳ ಗುಲಾಮರಾಗಿ ಅವರ ಹಿತಾಸಕ್ತಿಗಾಗಿ ಬೆಳೆಯುತ್ತಿರುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ಇಂದು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಹ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಬೇಕೆಂದು ಸಾವಯವ ಕೃಷಿಯನ್ನು ಸವಾಲಾಗಿ ತೆಗೆದುಕೊಂಡಿರುವ ಹಲವಾರು ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಭೂಮಿಯನ್ನು ಸಾವಯವ ಗೊಬ್ಬರದ ಮೂಲಕ ಹದಗೊಳಿಸುವ ಹಂತಗಳಲ್ಲಿ ಸ್ಥಳೀಯ ಬೀಜಗಳು ಆ ಭೂಮಿಗೆ ಹೊಂದುಕೊಳ್ಳದೆ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಇಲ್ಲಿ ಬಳಸಲಾಗುವ ಎರೆಹುಳು ಗೊಬ್ಬರದ ತಯಾರಿಕೆಯ ಮಾಹಿತಿ ತಿಳಿಯದೇ ಇರುವುದು, ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನದ ಕೊರತೆ, ಕೊಟ್ಟಿಗೆ ಗೊಬ್ಬರದ ಅಭಾವ, ಕೀಟನಾಶಕಗಳು ಸರಿಯಾದ ಸಮಯಕ್ಕೆ ಲಭ್ಯವಾಗದಿರುವುದು, ಕೃಷಿಗೆ ಸಂಬಂಧಿಸಿದ ಮೂಲ ಮಾಹಿತಿಗಳ ಲಭ್ಯತೆ ಕೊರತೆ, ಸರ್ಕಾರದ ನಿರ್ಲಕ್ಷ್ಯತೆ ಇವೆಲ್ಲವೂಗಳು ಕೂಡ ಸಾವಯವ ಕೃಷಿಕರಿಗೆ ಎದುರಾಗುವ ಸಮಸ್ಯೆಗಳಾಗಿವೆ. ರೈತರ ಜಮೀನುಗಳನ್ನು ಭೂಸ್ವಾಧೀನ ಕಾಯ್ದೆಯಡಿ ವಿದೇಶಿ ಕಂಪನಿಗಳಿಗೆ ಬಿಟ್ಟುಕೊಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಲ್ಪವಾದರೂ ರೈತರ ಪರ ಚಿಂತಿಸಬೇಕಿದೆ. 2000-01ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿರುವ ‘ರೈತ ಮಿತ್ರ ಯೋಜನೆ’ಯು ಹೊಂದಿರುವ ಉದ್ದೇಶ ಸಮರ್ಪಕವಾಗಿ ಈಡೇರುವಂತೆ ಎಲ್ಲಾ ರೈತಸಂಪರ್ಕ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 2004-05ರಲ್ಲಿ ‘ಸಾವಯವ ಕೃಷಿ ನೀತಿ’ಯನ್ನು ಜಾರಿ ಗೊಳಿಸಿದೆ. ಇದರ ಮುಖಾಂತರ ಕೃಷಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿರುವ ಸರ್ಕಾರ ರೈತರನ್ನು ತಲುಪುವಲ್ಲಿ ಸೋಲುತ್ತಿದೆ. ಹೀಗಾಗಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸೋಲುತ್ತಿರುವ ಸರ್ಕಾರಗಳು ರೈತ ಸಮುದಾಯದ ಮೇಲೆ ಇರಬೇಕಿದ್ದ ಕಾಳಜಿಯನ್ನು ಮರೆತು ಅಧಿಕಾರದ ಅಂಧಕಾರದಲ್ಲಿ ಸಿಕ್ಕಿ ಸಾಯುತ್ತಿವೆ.  

ಸಾವಯವ ಕೃಷಿ ಮತ್ತು ರಸಾಯನಿಕ ಕೃಷಿಯ ಮದ್ಯೆ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಇವುಗಳ ವೆಚ್ಚ, ಆದಾಯ, ಉತ್ಪನ್ನಗಳ ಗುಣಮಟ್ಟ, ಮಾರಾಟ, ಇತ್ಯಾದಿಗಳು ವೈರುದ್ಯದಿಂದ ಕೂಡಿದ ಕೃಷಿವಿದಾನವಾಗಿದೆ. ರಾಸಾಯನಿಕ ಕೃಷಿ ಉತ್ಪನ್ನಗಳನ್ನು ಸೇವಿಸುವುದರಿಂದ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತಿವೆ ಎಂದು ಜನರಲ್ಲಿ ತಿಳುವಳಿಕೆ ಮೂಡುತ್ತಿದೆ. ಅಲ್ಲದೆ ಇದನ್ನು ಅನೇಕ ಅದ್ಯಯನಗಳು ಒಪ್ಪಿಕೊಳ್ಳುತ್ತವೆ. ರಾಸಾಯನಿಕ ಉತ್ಪನ್ನಗಳನ್ನು ತಿನ್ನುವುದರಿಂದ ರಕ್ತದ ಒತ್ತಡ, ಹೃದಯ ಮತ್ತು ಮೂತ್ರಪಿಂಡ ತೊಂದರೆಗಳು, ಮಾನಸಿಕ ಅಸ್ಥಿರತೆ ವ್ಯಾಕುಲತೆ ಇತ್ಯಾದಿ ರೋಗಗಳು ಹೆಚ್ಚಾಗುತ್ತಿವೆ ಎಂದು ಥಾಕೂರ್ ಮತ್ತು ಭಾರತದ ಆಹಾರತಜ್ಞ ಶವರ್i 2005ರ ತಮ್ಮ ಅದ್ಯಯನ ವರದಿಯಲ್ಲಿ ತಿಳಿಸಿದ್ದಾರೆ.

ಯಶಸ್ವೀ ರೈತರುಗಳ ಅನುಭವ/ಅಬಿಪ್ರಾಯಗಳು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ 2008ರ ‘ಅತ್ಯುತ್ತಮ ರೈತಮಹಿಳೆ’ ಪ್ರಶಸ್ತಿಗೆ ಬಾಜನರಾಗಿರುವ ಕಾಂತಲಕ್ಶ್ಮಿಯವರು ಬಿಎಸ್ಸಿ ಪದವೀಧರೆ. ನಾನು ಫುಕುವೋಕರ ‘ಒಂದು ಹುಲ್ಲಿನ ಕ್ರಾಂತಿ’ ಪುಸ್ತಕದಿಂದ ಪ್ರೇರೇಪಿತರಾಗಿ ಶಿಕ್ಶಕಿ ವೃತ್ತಿಯನ್ನು ತ್ಯಜಿಸಿ ಸಾವಯವ ಕೃಷಿಯಲ್ಲಿ ನನ್ನ ಬದುಕು ಕಟ್ಟಿಕೊಂಡಿದ್ದೇನೆ ಎನ್ನುತ್ತಾರೆ. 5 ಎಕರೆ ಜಮೀನಿನಲ್ಲಿ 2005 ರಿಂದ ಕೃಷಿ ಮಾಡುತ್ತಿದ್ದು, ಪ್ರಾರಂಭದಲ್ಲಿ ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸಿದ್ದೇನೆ, ವಿವಿದ ಸಂಘ ಸಂಸ್ಥೆಗಳಿಂದ ತರಬೇತಿ ಪಡೆದು, ಎರೆಹುಳು ಗೊಬ್ಬರ, ಜೀವಾಮೃತ, ಎಲೆಗೊಬ್ಬರ ತಯಾರಿಸಿ ಬಳಸುತ್ತಿದ್ದೇನೆ ಎಂದರು. ಕಡಿಮೆ ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆದಿರುವ ಅವರ ಪ್ರಕಾರ ಜನಸಂಖ್ಯೆಗೆ ಬೇಕಾದ ಆಹಾರದ ಉತ್ಪಾದನೆ ಅನಿವಾಂiÀರ್iವಾಗಿರುವುದರಿಂದ ಸರ್ಕಾರವು ಯುವಜನರನ್ನು ಕೃಷಿಯತ್ತ ತೊಡಗಿಸಿಕೊಳ್ಳುವಲ್ಲಿ ಪ್ರೋತ್ಸಾಹಿಸಬೇಕಿದೆ. ಮುಖ್ಯವಾಗಿ ಶಾಲಾ ಕಾಲೇಜು ಪಠ್ಯಗಳಲ್ಲಿ ಕೃಷಿಯ ಮಹತ್ವವನ್ನು ತಿಳಿಸುವ ಜವಾಬ್ದಾರಿ ಸರ್ಕಾರಕ್ಕಿದೆ ಎನ್ನುತ್ತಾರೆ.      

ಮಂಡ್ಯ ಜಿಲ್ಲೆಯ ರೈತ ಘನಿಖಾನ್ ಅವರನ್ನು ಭೇಟಿಯಾಗಿದ್ದಾಗ ಅವರ ಜನಪರ ಜೀವಪರ ಆಸಕ್ತಿಗಳು ತಿಳಿದು ಬಂದವು. ಅಮೇರಿಕಾ-ಅಮೇರಿಕಾ ಸಿನಿಮಾದಿಂದ ಪ್ರೇರೇಪಿತರಾಗಿರುವ ಇವರು 16ನೇ ವಯಸ್ಸಿನಿಂದಲೂ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ 20ಎಕರೆ ಜಮೀನಿನಲ್ಲಿ ಭತ್ತ, ಮಾವು ಮತ್ತು ಮನೆಯ ಅವಶ್ಯಕತೆಗೆ ಬೇಕಾದ ತರಕಾರಿಗಳನ್ನು ಬೆಳೆಯುತ್ತಾರೆ. 800 ತಳಿಯ ಭತ್ತ ಮತ್ತು 120 ಮಾವಿನ ತಳಿಗಳನ್ನು ಸಂರಕ್ಷಣೆ ಮಾಡಿರುವ ಇವರು ಮಂಡ್ಯ ಜಿಲ್ಲೆಯ ಮಾದರಿ ರೈತರಾಗಿದ್ದಾರೆ. ಇವರ ಸಮಗ್ರ ಬೇಸಾಯಕ್ಕೆ ‘ರಾಜ್ಯ ಪ್ರಶಸ್ತಿ’ ಭತ್ತದ ಸಂರಕ್ಷಣೆಗೆ ‘ರಾಷ್ಟ್ರ ಪ್ರಶಸ್ತಿ’ ಮತ್ತು ಮಂಡ್ಯ ಜಿಲ್ಲೆಯ ಮೊದಲ ‘ಕೃಷಿಪಂಡಿತ’ ಪ್ರಶಸ್ತಿಗೆ ಬಾಜನರಾಗಿದ್ದಾರೆ. ರೈತರ ಆತ್ಮಹತ್ಯೆಗಳಿಗೆ ಸರ್ಕಾರದ ‘ಕೃಷಿನೀತಿ’ಗಳು ಕಾರಣ ಎಂದು ಹೇಳುತ್ತಾ, ರೈತರು ಪರಾವಲಂಬಿಗಳಾಗದೆ ಪರಸ್ಪರ ಸಹಕಾರ, ಸಹಬಾಳ್ವೆಯಿಂದ ಬದುಕಬೇಕು, ಏಕಬೆಳೆಪದ್ದತಿಯನ್ನು ತ್ಯಜಿಸಿ ಸಮತೋಲನ ಕಾಯ್ದುಕೊಳ್ಳಬೇಕು ಎಂಬ ಸಂದೇಶವನ್ನು ಹೇಳುತ್ತಾ ಜಗತ್ತಿಗೇ ಮಾದರಿಯಾಗುತ್ತಾರೆ. 

ವೃತ್ತಿಯಲ್ಲಿ ಮೂಲತ: ವಕೀಲರಾಗಿರುವ ಮಂಜುನಾಥರವರು ಚಿಂತಾಮಣಿಯಲ್ಲಿ ತಮ್ಮ 2 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಕೃಷಿಯನ್ನು ಉಪವೃತ್ತಿಯಾಗಿಯೇ ಸ್ವೀಕರಿಸಿದ್ದಾರೆ. “2008ರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇನೆ, ಮನೆಯ ಜಾನುವಾರುಗಳ ಗೊಬ್ಬರವನ್ನು ಮಾತ್ರ ಬಳಸುತ್ತೇನೆ, ಮನೆಯ ಸಣ್ಣ ಮಕ್ಕಳಿಗೆ ಜೀವಾಮೃತ, ಮತ್ತು ಜೈವಿಕ ಗೊಬ್ಬರಗಳನ್ನು ತಯಾರಿಸಲು ತರಬೇತಿ ನೀಡುತ್ತಿದ್ದು ಈ ಮೂಲಕ ಉಳಿದ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶ ನನ್ನದಾಗಿದೆ. ಸಾವಯವ ಉತ್ಪನ್ನಗಳು ಕೇವಲ ರೈತರ ಮನೆ ಮತ್ತು ಕೃಷಿಮೇಳಗಳಿಗೆ ಸೀಮಿತವಾಗಿದ್ದು ಮಾರುಕಟ್ಟೆ ಸೌಲಭ್ಯವಿಲ್ಲದೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ರೈತರು ನಿರಾಶರಾಗುತ್ತಿದ್ದಾರೆ. ವಾಣಿಜ್ಯ ಬೆಳೆಗಳನ್ನು ಪ್ರೋತ್ಸಾಹಿಸುವ ಸರ್ಕಾರಗಳು ಸಣ್ಣಹಿಡುವಳಿದಾರರು ಮತ್ತು ಒಣಭೂಮಿ ಬೇಸಾಯಗಾರರನ್ನು ನಿರ್ಲಕ್ಷಿಸುತ್ತಿವೆ, ಕೆಲವೇ ವರ್ಗಕ್ಕೆ ಅನುಗುಣವಾಗುವಂತೆ ಯೋಜನೆಗಳನ್ನು ರೂಪಿಸುತ್ತಾ ವರ್ಗಸಂಘರ್ಷ ಹುಟ್ಟುಹಾಕುತ್ತಿವೆ ಎಂದು ವಿಶಾದ ವ್ಯಕ್ತಪಡಿಸುತ್ತಾರೆ”.       

ಅತಿಯಾದ ಬೇಡಿಕೆಯಿರುವ ಮೀನುಗಾರಿಕೆ, ಹೈನುಗಾರಿಕೆ, ಹಂದಿ ಸಾಕಾಣಿಕೆ, ಆಡು-ಕುರಿ ಸಾಕಾಣಿಕೆ, ನಾಟಿಕೋಳಿ ಸಾಕಾಣಿಕೆ ಇವುಗಳಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ನವೀಕರಿಸಿ ರೈತರಿಗೆ ತರಬೇತಿಗಳನ್ನು ನೀಡುವ ಮೂಲಕ ಆಹಾರ ರಾಜಕಾರಣ ಮಾಡದೆ  ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿಯು ಸರ್ಕಾರಕ್ಕಿದೆ. ಸಾವಯವ ಕೃಷಿಗೆ ಸೂಕ್ತವಾದ ಮಾರುಕಟ್ಟೆ, ಯಂತ್ರಗಳು, ಮಾಹಿತಿ ಕೇಂದ್ರಗಳು, ಜನರಲ್ಲಿ ಅರಿವು ಮೂಡಿಸುವ ಸಾಮಾಜಿಕ ಕಾರ್ಯಕ್ರಮಗಳನ್ನು ನೇರವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಮನಹರಿಸಬೇಕಾಗಿದೆ. ಕೃಷಿಯನ್ನು ಗೌರವಾನ್ವಿತ ವೃತ್ತಿಯಾಗಿ ಸ್ವೀಕರಿಸಿರುವ ಅನೇಕ ಯುವಜನರು ಈ ನಾಡಿಗೆ ಸ್ಪೂರ್ತಿಯಾಗಲಿ. ‘ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು’ ಎಂಬುದು ಕೃತಿಗೆ ಸೀಮಿತವಾಗದೆ, ಕಾರ್ಯಕ್ಕೆ ಬರಲಿ ಎಂಬುದೇ ನಮ್ಮೆಲ್ಲರ ಆಶಯ…
-ಮಂಗಳ ಎನ್ ಅಗ್ರಹಾರ



 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಅಕ್ಕಿಮಂಗಲ ಮಂಜುನಾಥ
ಅಕ್ಕಿಮಂಗಲ ಮಂಜುನಾಥ
8 years ago

ಲೇಖನ ಕೃಷಿಕರಿಗೆ ದಾರಿ ದೀಪದಂತಿದೆ.

ಸಾವಿತ್ರಿ.ವೆಂ.ಹಟ್ಟಿ
ಸಾವಿತ್ರಿ.ವೆಂ.ಹಟ್ಟಿ
8 years ago

ಸಹಜ ಕೃಷಿ ಕುರಿತಾದ ಉತ್ತಮ ಲೇಖನ….

2
0
Would love your thoughts, please comment.x
()
x