ಸಹಜ ಕೃಷಿ-ಬದುಕು ಖುಷಿ: ಮಂಗಳ ಎನ್ ಅಗ್ರಹಾರ
ಕೃಷಿಯು ಆದಿಮ ಕಾಲದಿಂದಲೂ ಮನುಶ್ಯನ ಬದುಕಿನ ಭಾಗವಾಗಿ ಬಂದಿರುವ ವೃತ್ತಿ. ಇಂದಿಗೂ ಕೂಡ ದೇಶದ ಬಹುಪಾಲು ಜನರ ಮೂಲಕಸುಬು ಕೃಷಿಯಾಗಿದೆ. ಸರಳವಾದ ಜೀವನಕ್ರಮವನ್ನು ಪ್ರತಿಪಾದಿಸುತ್ತಾ ರೈತರು ತಾವು ಆಥ್ರ್ರಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಿ ಬದುಕಲು ಪ್ರೇರೇಪಿಸುತ್ತದೆ. ಇದರೊಟ್ಟಿಗೆ ಜನರ ಆಲೋಚನೆ, ನೆಲದ ಜೊತೆಗಿನ ಸಂಬಂದ, ಸಂಸ್ಕøತಿ ಮತ್ತು ಪರಿಸರದೊಟ್ಟಿಗಿನ ಭಾವನಾತ್ಮಕ ಒಡನಾಟವನ್ನು ಗಟ್ಟಿಗೊಳಿಸುತ್ತದೆ. ಪರಸ್ಪರ ಆಳು-ಕಾಳುಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಹಣದ ಅವಶ್ಯಕತೆಯೇ ಇಲ್ಲದೆ ಬದುಕುತ್ತಿದ್ದ ‘ಆ ದಿನಗಳು’ ಬರಲಾರವು ಎಂಬ ನೋವು ಇಂದಿನ ಪ್ರಗತಿಪರ ರೈತರಲ್ಲಿದೆ. ಸ್ಥಳೀಯವಾಗಿ … Read more