ಸ್ನೇಹ ಭಾಂದವ್ಯ (ಭಾಗ 2): ನಾಗರತ್ನಾ ಗೋವಿಂದನ್ನವರ
(ಇಲ್ಲಿಯವರೆಗೆ…) ಮರುದಿನ ಎಂದಿನಂತೆಯೆ ಗೆಳತಿಯರಿಬ್ಬರು ಅಂದುಕೊಂಡಂತೆಯೇ ಅದೇ ಮಾವಿನ ಮರದ ಕೆಳಗೆ ಭೇಟಿಯಾದರು. ಆಗ ರೇಖಾಳೆ ಮಾತಿಗಾರಂಭಿಸಿದಳು. ಏ ಸುಧಾ ಈಗಾಗಲೇ ಕಾಲೇಜ್ ಅಡ್ಮೀಷನ್ ಶುರು ಆಗಿ ನಾಲ್ಕೈದು ದಿನಗಳಾಗಿವೆ. ಇನ್ನು ಹತ್ತು ದಿನದೊಳಗಾಗಿ ನಾವು ಪಟ್ಟಣಕ್ಕೆ ಹೋಗಿ ಅಡ್ಮೀಷನ್ ಮಾಡಿಸಿ ಬರಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹೌದು ಕಣೆ ರೇಖಾ ಆದಷ್ಟು ಬೇಗ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಕಾಲೇಜನ್ನ ಮರೆತು ಮನೆಯಲ್ಲಿದ್ದ ಬಿಡಬೇಕಾಗುತ್ತದೆ ಎಂದಳು. ಈಗೇನು ಮಾಡೋದು ಅಂತ ಮೊದಲು ಹೇಳು ಸುಧಾ … Read more