ನಿಲುವಂಗಿಯ ಕನಸು (ಅಧ್ಯಾಯ ೧೬-೧೭): ಹಾಡ್ಲಹಳ್ಳಿ ನಾಗರಾಜ್
ಅಧ್ಯಾಯ ೧೬: ಹೊನ್ನೇಗೌಡನ ಟೊಮೆಟೋ ತೋಟ ತೀವ್ರಗತಿಯಲ್ಲಿ ಜರುಗಿದ ಘಟನಾವಳಿಗಳ ಹೊಡೆತದಿಂದ ಚೆನ್ನಪ್ಪನ ಮನ್ನಸ್ಸು ವಿಚಲಿತವಾಗಿತ್ತು. ಮಂಕು ಬಡಿದವರಂತೆ ಕುಳಿತ ಗಂಡನನ್ನು ಕುರಿತು ‘ಅದೇನೇನು ಬರುತ್ತೋ ಬರಲಿ ಎದುರಿಸೋಕೆ ತಯಾರಾಗಿರಣ. ನೀವು ಹಿಂಗೆ ತಲೆ ಕೆಳಗೆ ಹಾಕಿ ಕೂತ್ರೆ ನಮ್ಮ ಕೈಕಾಲು ಆಡದಾದ್ರೂ ಹೆಂಗೆ? ಈಗ ಹೊರಡಿ, ದೊಡ್ಡೂರಿನಲ್ಲಿ ಏನೇನು ಕೆಲ್ಸ ಇದೆಯೋ ಮುಗಿಸಿಕಂಡು ಬನ್ನಿ. ನಾನೂ ಅಷ್ಟೊತ್ತಿಗೆ ಮನೆ ಕೆಲಸ ಎಲ್ಲಾ ಮುಗ್ಸಿ ಬುತ್ತಿ ತಗಂಡ್ ಹೋಗಿರ್ತೀನಿ’. ಸೀತೆ ಗಂಡನಿಗೆ ದೈರ್ಯ ತುಂಬುವ ಮಾತಾಡಿದಳು. ನಂತರ ಸುಬ್ಬಪ್ಪನ … Read more