ಪ್ರೀತಿಯ ಪರಿಧಿ: ಪ್ರವೀಣ ನಾಯಕ, ದಾಂಡೇಲಿ
ಪ್ರೀತಿ ಇದ್ದಲ್ಲಿ ಭೀತಿ ಇರದು. ಅದು ಭೀತಿಯನ್ನು ದೂರಕ್ಕೆಸೆಯುತ್ತದೆ. ಇದು ಏಸುಕ್ರೀಸ್ತನ ವಾಣಿ. ಮಾನವಕುಲವನ್ನು ಮೇಲಕ್ಕೆತ್ತುವ ಸ್ಪೂರ್ತಿಯನ್ನು ನೀಡುವುದೇ ಪ್ರೀತಿ. ಆಯುರಾಗೋಗ್ಯ, ಶಾಂತಿಯನ್ನು ನೀಡಬಲ್ಲದ್ದು ಪ್ರೀತಿ. ಕಷ್ಟದ ಆಳದಿಂದಲೂ ವ್ಯಕ್ತಿಯ ನೋವನ್ನು ನಿವಾರಿಸಬಲ್ಲದ್ದು ಪ್ರೀತಿ. ಆದರೆ ಇಂದಿನ ಕಾಲದಲ್ಲಿ ಈ ಪ್ರೀತಿಯ ಅಭಾವ ಕಂಡುಬರುತ್ತಿದೆ. ಬಾಲ್ಯವಸ್ಥೆಯಲ್ಲಿ ತಂದೆತಾಯಿಯರ ಪ್ರೀತಿ ಕಂಡರಿಯದ ಮಕ್ಕಳು ದುಷ್ಟರು ಭ್ರಷ್ಟರು ಕ್ರೂರಿಗಳು ಆಗುತ್ತಾರೆಂದು ಪ್ರಾಜ್ಞರು ಹೇಳಿರುವುದನ್ನು ನಾವು ಕೇಳಿದ್ದೇವೆ. ಮಕ್ಕಳನ್ನು ತಂದೆ ತಾಯಿಯರು ಯಾವಾಗಲೂ ಭಯದಲ್ಲಿರಿಸಬಾರದು. ಅಲ್ಲಿ ಸೇಡಿನ ಮನೋಭಾವ ಹಿಂಸಾಪ್ರವೃತ್ತಿ, ಹೃದಯಹೀನತೆಯು … Read more