ಪಂಜು ಕಾವ್ಯಧಾರೆ

ದಯಾಮಯಿ ಎಂದು ಬರೆಯಲೆ,  ಸುಂದರಿ ಎಂದು ಬರೆಯಲೆ, ಪ್ರಿಯತಮೆ ಎಂದು ಬರೆಯಲೆ, ನಾನು ಕಂಗೆಟ್ಟಿ ಬಿಟ್ಟಿದ್ದೇನೆ  ನಿಮಗೆ ಈ ಪತ್ರದಲ್ಲಿ ಏನು ಬರೆಯಲು ಎಂದು ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು; ನೀನೆ ನನ್ನ ಜೀವನ , ನೀನೆ ನನ್ನ ಉಸಿರು, ನೀನೆ ನನ್ನ ಆರಾಧನೆ; ನಾನು ನಿನಗೆ ಸೂರ್ಯನಿಗೆ ಹೋಲಿಸುತ್ತಿದ್ದೆ ,  ಆದರೆ ಇದರಲ್ಲಿ ಉರಿಯುವ ಬೆಂಕಿ ಇದೆ; ನಾನು ನಿನಗೆ ಹುಣ್ಣಿಮೆಯ ಚಂದ್ರ ನಿಗೆ ಹೋಲಿಸುತ್ತಿದ್ದೆ,  ಆದರೆ ಇದರಲ್ಲಿ ಕಪ್ಪು ಛಾಯೆ … Read more

ಪಂಜು ಕಾವ್ಯಧಾರೆ

 ಆಡು ನವಿಲೇ    ಕನಸುಗಳ ಬಚ್ಚಿಟ್ಟು ಕಾಡದಿರು ಹೀಗೆ ಬೆಚ್ಚುತ್ತ ನೋಡದಿರು ಎದೆಹೂವು ನಲುಗೆ ।।   ನೆನಪು ಬುತ್ತಿಯು ಚೆಲ್ಲಿ ಈಗ ಚೆಲ್ಲಾಪಿಲ್ಲಿ ಕಿರಿಬೊಗಸೆಯಲ್ಲದನು ಮೊಗೆಯುವುದು ಹೇಗೆ ।।   ಜೊತೆ ಜೊತೆಗೆ ನಡೆವಲ್ಲಿ ಬೀಸಿ ಸುಂಟರಗಾಳಿ ಮರೆಯಾದ ಹೆಜ್ಜೆಗಳು ಹೆಚ್ಚಿಸಿವೆ ಬೇಗೆ।।   ಎದೆಯಲ್ಲಿ ಎದೆ ಬೆರೆತು ಹಾಡು ಹೊಮ್ಮಿರುವಂದು ಯಾವ ಗಂಟಲ ಗಾಣ ಒತ್ತಿದ್ದು ಹಾಗೆ ।।   ನುಡಿಸು ನೀ 'ಗೋವಿಂದ' ಕೊಳಲಿಗುಸಿರನ್ನೂಡಿ ಕರಗಿ ಎದೆ ನವಿಲಾಡಿ ಬಿಚ್ಚುತ್ತ ಸೋಗೆ।।   … Read more

ಪಂಜು ಕಾವ್ಯಧಾರೆ

ದಾನಾ ಮಾಂಝಿ ಮೂಲ : ವಿಶ್ವನಾಥ ಪ್ರಸಾದ ತಿವಾರಿ (ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿ, ದಿಲ್ಲಿ)  ಬರೀ ದಾನಾ ಮಾಂಝಿಯದಲ್ಲ ಈ ದೈನ್ಯತೆಯ ಕಥೆ..! ಭ್ರಮೆಯಿರಲಿಲ್ಲ ‘ದಾನಾ’ನಿಗೆ ಇರಲಿಲ್ಲ ಯಾರಿಂದಲೂ ಆಸೆ ಇರಲಿಲ್ಲ ಯಾರ ಮೇಲೂ ಸಿಟ್ಟು ಭಾವನೆಗಳಿದ್ದವು, ವೇದನೆಗಳಿದ್ದವು ಸೋಲು ಇತ್ತು ಹಾಗೂ ಮೌನವೂ ದಾನಾ ತನ್ನ ಹೆಂಡತಿ ‘ಅಮಂಗ’ಳ  ಹೆಣವನ್ನು ಚಾಪೆಯಲ್ಲಿ ಸುತ್ತುವಾಗ ಭೂಮಿಯೂ ನಾಚಿ ನೀರು ನೀರಾಗಿ ಭೂಮಿಗಿಳಿದಿತ್ತು ತಲೆತಗ್ಗಿಸಿತ್ತು ಕಲ್ಲೂ ತನ್ನ ಕಲ್ಲೆದೆಯ ಮೇಲೆ ಕಲ್ಲು ಹೊತ್ತುಕೊಂಡಿತ್ತು ಅವಳ ನಿರ್ಜೀವ ದೇಹವನ್ನೆತ್ತಲು … Read more

ಪಂಜು ಕಾವ್ಯಧಾರೆ

ಮೌಲ್ಯ    ನೀ ಉಸಿರಾಡುವ ಗಾಳಿ ನಾ , ತಂಗಾಳಿಗೆ ನೀ ಕೊಡುವ ಮೌಲ್ಯ ನನಗಿಲ್ಲ….  ನಡೆದಾಡುವ ಹಾದಿ ನಾ, ಮೆಟ್ಟಿಗೆ ನೀ ನೀಡುವ ಮೌಲ್ಯ ನನಗಿಲ್ಲ …..  ಬಾಯಾರಿದಾಗ ಕುಡಿವ ಜಲ ನಾ, ಅದರ ನಡುವೆ ತೇಲಾಡುವ ಮಂಜುಗಡ್ಡೆಗಿರುವ ಮೌಲ್ಯ ನನಗಿಲ್ಲ…  ದಣಿದಾಗ ಸುಡುಬಿಸಿಲಲ್ಲಿ ಆಶ್ರಯಿಸುವ ಮರ ನಾ, ನೆರಳಿಗಿರುವ ಮೌಲ್ಯ ನನಗಿಲ್ಲ…..  ಭಾವನೆಗಳನ್ನು ಬೆಸೆದು ಹರವಿ  ಕೊನೆಗೂ  ಒಂದು ಕವನವಾಗುವೆ ನಾ, ಅದ ಬರೆಯುವ ಹಾಳೆಗಿರುವ ಮೌಲ್ಯ ನನಗಿಲ್ಲ….  ಗೀಚುವ ಲೇಖನಿಗಿದೆ ಬೆಲೆ, ಪಾಪ!!ಕೈಗಳಿಗೇ … Read more

ಪಂಜು ಕಾವ್ಯಧಾರೆ

ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ ನನ್ನ ಚಿನ್ನ   ಕಣ್ಣಂಚಿನ ನೋಟದಲಿ ಸೆರೆ ಹಿಡಿರುವೆ ನನ್ನ ಮನ ಮೋಹಿಸುವ ನಿನ್ನ ಪಿಸು ಮಾತುಗಳೆ  ಚೆನ್ನ ನೀ ತಿರುಗೆ ನೋಡುವ ಆ ನೋಟ ಬಹು ರೋಮಾಂಚನ ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಸದಾ ನಿನ್ನ ನೋಡುವ ಆಸೆ ಮುಚ್ಚದೆ ಕಣ್ಣ ರೆಪ್ಪೆಯನ್ನ ಸವಿಯಲು ಕಾತುರ ನಿನ್ನ ತುಟಿ ಅಂಚಿನ ಸಿಹಿ ಜೇನನ್ನ ಸೆರೆ ಹಿಡಿದು ಬಂಧಿಸು ನಿನ್ನ ಮನಸಲಿ ನನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ … Read more

ಪಂಜು ಕಾವ್ಯಧಾರೆ

ಮುಂಜಾನೆ ಮುಂಬಾಗಿಲು ಗುಡಿಸಿ  ಸಾರಿಸಿ ರಂಗೋಲಿ ಬರೆದು ತುಟಿಮೇಲೆ ನಗು ಹೊದ್ದುಕೊಳ್ಳಬೇಕು ಬೈಯ್ಯುವವರ ಮುಂದೆ ಬಿಲ್ಲಾಗಬೇಕು ಮೊಗ್ಗುಮೈಯ್ಯಲ್ಲಿ ಮನೆತುಂಬ ತಿರುಗಬೇಕು ಹೊಗಳಿದರೆ ಹೂವಾಗಬೇಕು ಹಕ್ಕಲ್ಲ ಎಸೆದ ರೊಟ್ಟಿಯ ಚೂರು        ಕತ್ತಲ ಕೊನೆದೀಪ        ಆರುವತನಕ        ತಾನಾಗಿದ್ದುಕೊಂಡು        ನಾನೆಂಬುವರಿಗೆಲ್ಲ ಹೂಂಗುಟ್ಟು        ಅಳಬೇಕೆಂದುಕೊಳ್ಳುತ್ತಲೇ ನಕ್ಕು        ನಗುವಲ್ಲೂ ಕಣ್ಕೊನೆಯುಕ್ಕಿ        ಕತ್ತಲ ಕೊನೆಯಾಟಕ್ಕೂ ಹಾಸಿಕೊಂಡು … Read more

ಪಂಜು ಕಾವ್ಯಧಾರೆ

"ಬಡತನ ಬಂದಿದೆ" ಬೆಳೆದು ನಿಂತಿರುವ ಪೈರು ಸೊರಗುತ್ತಿದೆ, ನೀರಿಲ್ಲದೇ ಇಲ್ಲಿ ಮಳೆಗೆ ಬಡತನ ಬಂದಿದೆ ! ಎರಡು ಹೃದಯಗಳಲ್ಲಿ  ಅರಳಿದ ಪ್ರೀತಿಯು ವೈಮನಸ್ಸಿನ ತಾಪಕ್ಕೆ  ಬೇರೆ-ಬೇರೆ ಆಗಿವೆ ಇಲ್ಲಿ ಪ್ರೀತಿಗೆ ಬಡತನ ಬಂದಿದೆ ! ದಣಿವರಿಯದ ದೇಹಕ್ಕೆ ದಣಿವಾಗಿ ಹಾಸಿಗೆ ಹಿಡಿದು ಮಲಗಿದೆ  ಇಲ್ಲಿ ಆರೋಗ್ಯಕ್ಕೆ ಬಡತನ ಬಂದಿದೆ ! ವೈದ್ಯನಲ್ಲಿ ಕಾಯಿಲೆಗೆ ಅಸ್ತ್ರವಿದೆ ಆ ಅಸ್ತ್ರ ಪಡೆಯಲು ಇಲ್ಲಿ ಬಡವನ ಜೇಬಿಗೆ ಬಡತನ ಬಂದಿದೆ ! ನನ್ನೊಳಗೂ ಕೆಚ್ಚದೆಯ ಕಿಚ್ಚಿದೆ ಹೊತ್ತಿಸಿಬೇಕೆಂದರೇ.. ಮನಸ್ಸು ಕಣ್ಣೀರಲ್ಲಿ ಮುಳುಗಿ … Read more

ಪಂಜು ಕಾವ್ಯಧಾರೆ

ಶಾಂತಿಗೀತೆ ಮುಗಿಲು.. ಕೆಂಡಕಾರುವ ಅಗ್ನಿಪಾತ್ರೆ ನೆಲ.. ಕಿಚ್ಚು ಎಬ್ಬಿಸುವ ಒತ್ತಲು ಗಾಳಿ.. ಕೊಳ್ಳಿಹೊತ್ತಿಸುವ ಕಟುಕ ಮಳೆ.. ಬಾರದೆ ಕಾಡುವ ಇನಿಯ ನಾನು..  ನೆಲವಾಗಬೇಕು ಮಲೆನಾಡ ಕಾಡಂತೆ ಮುಗಿಲಾಗಬೇಕು ಹುಣ್ಣಿಮೆ ಇರುಳಂತೆ ನಾನು.. ಗಾಳಿಯಾಗಬೇಕು.. ಬೆಂದೊಡಲ ತಣಿಸಬೇಕು ಮಳೆಯಾಗಬೇಕು.. ನದಿಯಾಗಿ ಹರಿಯಬೇಕು ನಾನು.. ಹಕ್ಕಿಯಾಗಬೇಕು.. ಗಡಿಗಳಾಚೆ ಹಾರಬೇಕು ಮದ್ದುಗುಂಡು ಬರುವ ದಾರಿಹಾಯ್ದು ಆಚೆ  ಹೋಗಿ ಶಾಂತಿ ಸಾರಿ ಬರಬೇಕು ಸರಹದ್ದಿನಗುಂಟ ಮುಳ್ಳಿನ ಬೇಲಿ ನಿಬಿಡ ಸರಳುಗಳ ಪಂಜರ ಹೇಗೆ ಹಾರಲಿ? ಬೇಡ.. ಬೇಡ.. ಈ ಜೀವಾವಧಿ ಶಿಕ್ಷೆ.. ನೀಡಬೇಡ.. … Read more

ಪಂಜು ಕಾವ್ಯಧಾರೆ

ಪಾಣೀಗ್ರಹಣ ಎಲ್ಲೂ ಅವಳಿಗೊಂದು ಹೊಚ್ಚ ಹೊಸ ಸವಿಯಿರುವ ವರ ಸಿಗುತ್ತಿಲ್ಲ ದೇವಾನುದೇವತೆಗಳ ವರಗಳ ಸ್ಟಾಕ್ ಖಾಲಿಯಾಗಿದೆ…… ಹಣ್ಣು ರುಚಿಕಟ್ಟನ್ನು ಕಳೆದುಕೊಳ್ಳುತ್ತಾ ರಾಶಿ ಬಿದ್ದಿರುವ ವಸಂತಗಳ ಎಣಿಸುತ್ತಿದೆ ಮತ್ತೊಂದು ವಸಂತಕ್ಕೆ ಕಾದಿರುವ ಬೂರಗ ಸತ್ತಂತೆ ನಿಂತಿದೆ ತಪೋನಿರತತೆಯಲ್ಲಿ ವಸಂತ ಕಟ್ಟಲು ಬೇಕಿರುವ ಮತ್ತೆರೆಡು ಜತೆ ಕೈಗಳು ಇಲ್ಲೆ ಎಲ್ಲೋ ಅಡಗಿರಬಹುದೆಂದು ಉಳಿ ಸುತ್ತಿಗೆ ತೆಗೆದು ಕಟೆಕಟೆದು ನೋಡುತ್ತಿದ್ದಾಳೆ  ನಿರರ್ಥಕವಾಗಿ ಮನದ ಮಾದರಿ ಮಸಕಾಗುತ್ತಿರುವ ಹೊತ್ತಲ್ಲಿ ಅದು ತನ್ನದೇ ಚಿತ್ರ ! ನಿರಾಶೆಯ ಮಡುವು ಸಂತೋಷದ ಚಿಲುಮೆ ಒಟ್ಟೊಟ್ಟಿಗೆ ಕಣ್ಣಿ … Read more

ಪಂಜು ಕಾವ್ಯಧಾರೆ

"ಶಬ್ದಾರ್ಥ ಶಿಲ್ಪ" ಕಾವ್ಯವೆನುವುದು ಒಂದು ಶಬ್ದಾರ್ಥ ಶಿಲ್ಪ ಕವಿಯ ಕೈಯಲಿ ನುಡಿಗೆ ಕಾಯಕಲ್ಪ      ಸಾಹಿತ್ಯ ಸಂಸ್ಕೃತಿಯ ಶೃತಿನಾದ  ಹಿಮ್ಮೇಳ      ಲಯಬದ್ದ ಪ್ರಾಸವಿಹ ರಸ ಭಾವಗಳ ಮೇಳ ಸಕಲ ಕಲೆಗಳ ಮೂಲ ವೈವಿಧ್ಯತೆಯ ವರ್ಣಜಾಲ    ನವರಸಗಳು ಕೂಡಿ ಆದ ಪದ ವಾಕ್ಯಗಳ ಮೋಡಿ      ಜಗದ ಜನ ಜೀವನದ ನಲಿವು ನೋವಿನ ಕಥನ      ನಾಕ ನರಕದ ಸೃಷ್ಟಿ ವ್ಯಕ್ತಿ-ಸಮಷ್ಠಿಗೆ ಪುಷ್ಟಿ ರವಿ ಕಾಣದೆಡೆಯಲ್ಲು ಕಂಡ ಕವಿಗಳ ಕಾಣ್ಕೆ … Read more

ಪಂಜು ಕಾವ್ಯಧಾರೆ

ಚುಟುಕಗಳು ಚಿಕ್ಕ ಚುಕ್ಕೆಗಳಿಟ್ಟು ಎಳೆಗಳೆಳೆದು  ಬರೆದಿದ್ದಾಳೆ ರಂಗೋಲಿ ಚಡಪಡಿಸುತ್ತಾಳೆ                                 ಮರಳು ಮಾಡುವ ಬಣ್ಣಗಳೊಳಗೆ   ಬಿಡಿಸಿಕೊಳ್ಳಲಾಗದ ಬಂಧಿ **** ಹೊಸದರೆಡೆಗೆ ಪಯಣವೆಂದರೆ ಹಳೆಯದು ಸಲ್ಲದೆಂದಲ್ಲ ಹಳೆಯದ ಒಟ್ಟಿಗಿಟ್ಟುಕೊಂಡೇ  ಹೊಸತರೆಡೆ ಸಾಗುವದು **** ನಡೆದಿದ್ದಾಳೆ ಅವಳು ಎಲ್ಲಿಗೋ  ಅವಳಿಗೇ ಗೊತ್ತಿಲ್ಲ ಮಾತಲ್ಲೇ  ಎದೆಬಗೆವವರ ಹೊತ್ತು ಹೊತ್ತಿಗೆ ನೆತ್ತಿಕುಟ್ಟಿ  ಕರ್ತವ್ಯ ನೆನಪಿಸುವವರನ್ನೆಲ್ಲ ಹಿಂದಕ್ಕೆ ಬಿಟ್ಟು  **** ನಿತ್ಯ … Read more

ಪಂಜು ಕಾವ್ಯಧಾರೆ

ಹಾಯ್ಕುಗಳು.. * ಸೀತೆಯ ಅಶ್ರು ಲಂಕೆಯ ತೊಳೆಯಿತು ಪಾವನಗಂಗೆ                   * ರಾತ್ರಿ ಚಂದಿರ ಶರಧಿಗೆ ಧುಮುಕಿ ಈಜು ಕಲಿತ          * ಲಾಸ್ಯವಾಡಿದೆ ನಂಜು ನುಂಗಿದವನ ವದನ; ತೃಪ್ತಿ          * ಮೂರು ಮೊಳದ ಸೀರೆಯುಟ್ಟವಳೀಗ ಹಾಯ್ಕು ಕನ್ನಿಕೆ!           * ಮೆತ್ತೆ ಸಿಕ್ಕಿದ ಜಗಳಕ್ಕೆ ನಿಂತಿಹ ಸಿಟ್ಟಿಗೋ ಹಬ್ಬ!   … Read more

ಪಂಜು ಕಾವ್ಯಧಾರೆ

ಕರೆದೊಡನೆ ಬಂದುದ ಕಂಡು ಯಾಮಾರಿದೆಯಾ.. ನಾ ಕಂದಮ್ಮನಲ್ಲ ಕಣ್ಣ ದಿಟ್ಟಿಸಿ ನೋಡು ಕ್ರೂರ ದೈತ್ಯನು ನಾನು ಎಷ್ಟೋ ತ್ವಚೆಯ ಸೀಳಿ ಹಸಿ ರಕುತವ ಕುಡಿದ ಹಲ್ಲಿನ ಮಸಿ ಕಂಡು ಕರಳು ನಡುಗುತಿದೆಯಾ… ಕಂದನೆಂದ್ ಯಾಮಾರಿದೆಯಾ..! ಅಂದೊಮ್ಮೆ ನೆನಪಿದೆಯಾ ಕತ್ತನು ಮುತ್ತಿಡಲು ಬಂದದು ಸರಸವಲ್ಲವದು ನೆತ್ತರಾಸೆ ತುಟಿಯ ತಾಕಲು ಉಸಿರ ಸೋಕುತ ಪಕ್ಕ ಸುಳಿದದು ರಕುತದಾಸೆ ನಂಬಿ ಕೆಟ್ಟೆ ನೀ ಪಾಪದ್ಹೆಣ್ಣೆ ಓಡಿ ಹೋದರೂ ಬಿಡೆನು ನಾನು ಶರಣು ಎಂದರೆ ಬಿಡುವೆನೇನು..? ಚೂಪು ಕಂಗಳ ನೋಟಗಾತಿ ಹಾಗೆ ನೋಡದಿರು … Read more

ಪಂಜು ಕಾವ್ಯಧಾರೆ

★ಸುತ್ತೋಣ ಬನ್ನಿ ಕರ್ನಾಟಕ★ ಬನ್ನಿರಿ ಗೆಳೆಯರೆ ನಾಡನು ಸುತ್ತಿ ದಸರ ರಜೆಯನು ಕಳೆಯೋಣ|| ಸ್ವಚ್ಛ ನಗರ ಮೈಸೂರಿಗೆ ಹೋಗಿ ದಸರೆಯ ವೈಭವ ನೋಡೋಣ|| ರಾಜಧಾನಿ ಬೆಂಗ್ಳೂರಿಗೆ ಹೋಗಿ ಪ್ರೇಕ್ಷಣೀಯ ಸ್ಥಳ ಸುತ್ತೋಣ|| ಬಡವರ ಊಟಿ ಹಾಸನ ಜಿಲ್ಲೆಯ ಬೇಲೂರು ಹಳೇಬೀಡು ನೋಡೋಣ|| ಬಿಸಿಲು ನಗರಿ ಬಳ್ಳಾರಿಗೆ ಹೋಗಿ ಹಂಪಿಯ ಶಿಲ್ಪಗಳ ಸುತ್ತೋಣ|| ಬೆಳಕ ನೀಡುವ ರಾಯಚೂರಿನಲಿ ಶಕ್ತಿನಗರವನು ನೋಡೋಣ|| ಬಾದಾಮಿ ಐಹೊಳೆ ಪಟ್ಟದ ಕಲ್ಲಿನ ಕಲಾವೈಭವವ ಸವಿಯೋಣ|| ಬಂದರು ನಗರ ಮಂಗಳೂರಿನಲಿ ಕಡಲಿನ ಆರ್ಭಟ ಅರಿಯೋಣ|| ಕರುನಾಡ … Read more

ಪಂಜು ಕಾವ್ಯಧಾರೆ

ತುಂಡು ಬಟ್ಟೆಯ ಮಾನ…..  ನಡೆದು ಹೋಗಲು ಅವಳು ಹಾದಿಯಲಿ  ಹಸಿದ ಮೊಸಳೆಗಳಂತೆ ನಿಂತು  ಕಾಯುವರು ಚುಡಾಯಿಸಲು ……  ಸೂಜಿಯ ಕಣ್ಣೋಟಗಳಿಂದ ಕೊಲ್ಲುವರು  ಅವಳ ಉಡುಗೆಯ ಅಂಚು ಪಾಪ!! ಗಾಳಿಗೆ ಹಾರಲು….  ಸಣ್ಣ ಬಟ್ಟೆ ತೊಡಲೇ ಬೇಕಿಲ್ಲವಳು  ಕ್ಷಣ ಕ್ಷಣ ಒಳಒಳಗೆ ಸಾಯಲು , ಕಾಲು ಭೂಮಿಗೆ ಸೋಕಿದರೆ ಸಾಕು, ಸಿದ್ಧವಾಗಿವೆ ಸಮಾಜ, ಕಟ್ಟುನಿಟ್ಟು, ಲಿಂಗ ತಾರತಮ್ಯ ಗಳು  ಅವಳ ಇರಿಯಲು….  ತುಂಡು ಬಟ್ಟೆ ತೊಟ್ಟ ಮಾತ್ರಕ್ಕೆ ಹೆಣ್ಣು  ಪರವಾನಗಿ ನೀಡಿದಂತೆಯೇ ಮುಟ್ಟಲು?????? ಹೌದೆನ್ನುವವರೇ ಹೇಳಿ ಹಾಯುವಿರಾ ನೀವು  … Read more

ಪಂಜು ಕಾವ್ಯಧಾರೆ

ನಿನ್ನ ಮಾತುಗಳು ಬೇಡುತ್ತಿರುವಾಗ ಬಲಿ ನನ್ನೆದೆಯ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ? ಮಾತಿಗೂ ಮೊದಲು ಕೋಪವೇ ಹೆಡೆ ಬಿಚ್ಚಿ ನಿಲ್ಲುತ್ತಿರುವಾಗ ಪಾತಾಳ ಗರುಡದ ಮಂತ್ರ ಕೋಲನ್ನು ಹುಡುಕುತ್ತ ಎಲ್ಲಿ ಹೋಗಲಿ? ಪ್ರೀತಿಯ ಹೂದೋಟದಲ್ಲಿ ಝಳಪಿಸುವ ಕತ್ತಿ ನರ್ತಿಸುವಾಗ ಸಾಣೆ ಹಿಡಿಯುವವರನ್ನು ಎಷ್ಟೆಂದು ಹುಡುಕಿ ಗಡಿಪಾರು ಮಾಡಲಿ? ಮನದ ಗರ್ಭಗುಡಿಯಲ್ಲಿ ನಂದಾದೀಪವೇ ಹೊತ್ತಿ ಪ್ರಜ್ವಲಿಸುವಾಗ ತಣ್ಣಿರು ಸುರಿದು ಬೆಂಕಿ ನಂದಿಸುವವರನ್ನು ಹುಡುಕುತ್ತ ಎಲ್ಲಿ ಹೋಗಲಿ? ಹೃದಯದಲ್ಲಿ ಪ್ರತಿಷ್ಟಾಪಿಸಿ ಮೂರ್ತಿ ತನ್ನನ್ನೇ ಭಗ್ನಗೊಳಿಸಿಕೊಳ್ಳುವಾಗ ಮುಕ್ಕಾಗದಂತೆ ಗರ್ಭಗುಡಿಯನ್ನು ಕಾವಲು ಕಾಯುವ ಕೆಲಸವನ್ನು ಯಾರಿಗೆ … Read more

ಪಂಜು ಕಾವ್ಯಧಾರೆ

ಮೌನಿ, ಗಿಜಿಗಿಡುವಂತೆ ಜನ ಸುತ್ತಲೆಲ್ಲರಿದ್ದರೂ ನಾ ನನ್ನೊಳು ಮಾತ್ರ ಮೌನಿ, ನನಗೆ ನಾನೇ ಮಿತ್ರ ನಾನೇ ಶತ್ರು ಏರಿಳಿತಗಳಲ್ಲೆಲ್ಲಾ ನನ್ನದು ಒಂದೇ ವೇಗ ಏರಿಗೆ ಕುಗ್ಗೇನು ಇಳಿವಿಗೆ ಹಿಗ್ಗೇನು ಜಾರಿದರೂ ಅಷ್ಟೇ ನೇಪಥ್ಯಕ್ಕೆ ಸರಿದರೂ ಅಷ್ಟೇ,, ಒಂಟಿ ದಾರಿಯಲಿ ನನಗೆ ನಾನೇ ಜಂಟಿ  ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತೇನೆ ಅಳುತ್ತೇನೆ, ನಗುತ್ತೇನೆ ಒಮ್ಮಮ್ಮೆ  ದು:ಖದಲಿ ಬಿಕ್ಕಿ ಬಿಕ್ಕಿ ಅಳುತ್ತೇನೆ, ಗೊತ್ತು ! ಈ ಜನರೆಲ್ಲ ನನ್ನ ಹಿಂದೆ ಆಡಿಕೊಳ್ಳುವರೆಂದು, ಹುಚ್ಚುಡುಗನೆಂದು ಲೊಚಗುಟ್ಟುವರೆಂದು, ಹರಿದ ಪ್ಯಾಂಟಿಗೆ ದಾರ ಕಟ್ಟಿ ಗೇಲಿ ಮಾಡುವರೆಂದು, … Read more

ಎತ್ತರಕ್ಕೆ ಬೆಳೆಯಲು ಜಾಣನೆಂಬ ಅಹಂಗೆ ಪೆಟ್ಟಾಗಲೇ ಬೇಕು..: ನಾಗರಾಜ್. ಮುಕಾರಿ (ಚಿರಾಭಿ)

        ನಾಲ್ಕನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿ ಇದ್ದಿದ್ದು ಒಬ್ಬರೇ ಮಾಸ್ತರು. ಅವರು ನನ್ನ ಜೀವನದಲ್ಲಿ ನೆನಪಿಟ್ಟು ಕೊಳ್ಳುವಂತಹ ವ್ಯಕ್ತಿತ್ವದವರು. ಅದು ನನ್ನ ನೆಚ್ಚಿನ ಕೊಟ್ರಪ್ಪ ಮಾಸ್ತರು. ಅವರೊಬ್ಬರೇ ಕನ್ನಡ, ವಿಜ್ಞಾನ, ಸಮಾಜ ಮತ್ತು ಗಣಿತ ಪಾಠವನ್ನು ಅತೀ ಸಂತೋಷವಾಗಿ ಹೇಳಿಕೊಡುತ್ತಿದ್ದುದು. ತಿಂಗಳಿಗೊಮ್ಮೆ ಪರೀಕ್ಷೆ, ಗರಿಷ್ಟ ಅಂಕ ಇಪ್ಪತೈದು. ಸರಿಸುಮಾರು ಎಲ್ಲಾ ವಿಷಯಗಳಲ್ಲೂ ಇಪ್ಪತ್ತರ ಮೇಲೆಯೇ ಗಳಿಸಿದ ನೆನಪು ನನಗೆ, ಅದಕ್ಕೆಂದೇ ಒಮ್ಮೆ ತರಗತಿಯ ಮಾನಿಟರ್ ಅದದ್ದೂ ಉಂಟು.  ಹಾಗೆಯೇ ಇರಲು ಒಂದು ದಿನ … Read more

ಪಂಜು ಕಾವ್ಯಧಾರೆ

ಮುಖವಾಡ!  ನಮಗೆ,  ಹುಟ್ಟುತ್ತಲೆ ತೊಡಿಸುತ್ತಾರೆ ಜಾತಿ ಧರ್ಮದ ಮುಖವಾಡ ದೊಡ್ಡವರಾಗುತ್ತಲೆ ಮತ್ತೆ ನಾವೆ ತೊಡುತ್ತೇವೆ ಬಣ್ಣ ಬಣ್ಣದ ಮುಖವಾಡ ನಂಬಿದ ಹೆಂಡತಿಯ ಎದರು ನಂಬದ ಗೆಳತಿಯೆದರೂ ಪ್ರೀತಿಸುವ ಮಿತ್ರನ ಎದರು ದ್ವೇಷಿಸುವ ಶತ್ರುಗಳೆದರೂ ನಮ್ಮ ವೃತ್ತಿಗೊಂದರಂತೆ ಇದೆ ಮುಖವಾಡ ಪ್ರವೃತ್ತಿಯಾಗಿ ಮತ್ತೆ ಬೇರೆ ಮುಖವಾಡ ಸಾರ್ವಜನಿಕ ಬದುಕಿನಲ್ಲಿ ಮುಖವಾಡಗಳದೆ ಮೇಲುಗೈ ಮುಖವಾಡವಿಲ್ಲದೆ ಕ್ಷಣಹೊತ್ತು ಬದುಕಲಾರೆವು ನಾವು ನಾವು ಮುಖವಾಡ ಕಳಚುತ್ತಲೆ ಇಲ್ಲ ಕನ್ನಡಿ ತೋರುವ ಮುಖ ನಮ್ಮದೆಂದು ನಂಬಿರುವೆವು ಎಲ್ಲ ನಿಜವಾಗಿ ನಾವು ನಾವೇ ಅಲ್ಲ ಯಾರು … Read more

ಪಂಜು ಕಾವ್ಯಧಾರೆ

ಬೆಳಗಲಿ ದೀಪ *** ಹೊತ್ತಲಿ ದೀಪ ಹೊತ್ತಿ ಉರಿಯುತ್ತಿರುವ ಭ್ರಷ್ಟರ ನಡುವೆ ಹೊತ್ತೇರುವದರಲ್ಲಿ ಹೊಸತನವ ಹೊಮ್ಮಿಸಲಿ ಬೆಳಗಲಿ ದೀಪ ಬಡವರ ಬಾಗಿಲಲಿ ಗುಡಿಸಲುಗಳಲಿ ಬೆಳಕಾಗುವದರೊಳಗೆ ಬದುಕು ಕತ್ತಲಿಂದ ದೂರವಾಗಲಿ ವಿಜೃಂಭಿಸಲಿ ದೀಪ ಸೋಲನ್ನುಂಡು ಹತಾಸೆಗೊಳಗಾದ ಮನಸುಗಳಲಿ ಗೆದ್ದು ಬೀಗುವವರ ಸೊಕ್ಕುಮುರಿದು ಬಿದ್ದಲ್ಲೇ ಬಿದ್ದಿರುವ ವೃದ್ಧರ ಬಾಳಲಿ ಝೇಂಕರಿಸಲಿ ದೀಪ ಹಣದ ಆಸೆಗೆ ಹೆಣವ ಕೆಡವಿದವರ ಚಿತೆಯೆದುರು ಹೆಣ್ಣಿನ ದೇಹಕೆ ಕಣ್ಣ ಹಾಕುವ ಕಾಮುಕರ ಶವದೆದುರು ಸುಡುಗಾಡಲಿ ಶೃಂಗಾರಗೊಳ್ಳಲಿ ದೀಪ ಸಿಂಧೂರವಿಲ್ಲದ ಹಣೆಗಳಮೇಲೆ ಕಣ್ಣುಗಳಿಲ್ಲದ ಕುರುಡರೆದೆಯಲಿ ಬಣ್ಣವಿರದ ಬದುಕಿನ … Read more