ಮಳೆ, ಕೆರೆ ಮತ್ತು ಕ್ಯಾಬು: ಚೀಮನಹಳ್ಳಿ ರಮೇಶಬಾಬು
ಅದೊಂದು ಜಲಪ್ರಳಯ. ಸಂಜೆ ನಾಲ್ಕು ಗಂಟೆಗೆಲ್ಲಾ ಅಕ್ಷರಶಃ ಕತ್ತಲಾಗಿಬಿಟ್ಟಿತ್ತು. ಸುತ್ತಲೂ ಒತ್ತರಿಸಿ ನಿಂತಿದ್ದ ಕಪ್ಪು ಮೋಡಗಳು ಒಂದು ಗುಹೆಯನ್ನೆ ಸೃಷ್ಟಿಸಿಬಿಟ್ಟಿದ್ದವು. ಬೋರೆಂದು ಸುರಿಯ ಹತ್ತಿದ ಮಳೆಯ ಹನಿಗಳು ಒಂದೇ ಸಮ ರಾತ್ರಿಯೆಲ್ಲಾ ಮುಂದುವರೆಯತೊಡಗಿದವು. ಮಳೆಯ ರಭಸಕ್ಕೆ ವಿದ್ಯುತ್ ಕಡಿತವಾಗಿ ಮಳೆಯ ರೌದ್ರ ನರ್ತನದ ಭೀಕರತೆಯು ಮತ್ತಷ್ಟು ಹೆಚ್ಚಾಗಿ ಇಡೀ ಹಳ್ಳಿ ರಾತ್ರಿ ಏಳು ಗಂಟೆಗೆಲ್ಲಾ ಇದ್ದದ್ದನ್ನು ಉಂಡು ಮುಸುಕೆಳೆದು ಮಲಗಿಬಿಟ್ಟಿತ್ತು. ಅಪ್ಪ “ಈ ಪಾಟಿ ಉಯ್ಯಾಕತ್ತಿದೆ… ಬೆಳಿಗ್ಗೆ ರೋಡಿಗಾಕಿದ ತೆನೇನ ಶಿವನೇ ಕಾಪಾಡ್ಬೇಕು” ಎನ್ನುತ್ತಾ ಮಗ್ಗುಲು ಬದಲಿಸಿದ. … Read more