ಮರದ ಆಸರೆ ಬಯಸಿದ ಬಳ್ಳಿ: ನಾಗಭೂಷಣ ಬಿ ಕೆ, ಚಂದ್ರಶೇಖರಪುರ
ನಯನಮನೋಹರಿಯಾದ ಅವಳ ಅಂದ ಚಂದ ನೋಡಿದರೆ ನೋಡುತಲೇ ಇರಬೇಕು ಎನ್ನುವಷ್ಟು ಆಕರ್ಷಕ ಮೊಗದವಳು. ತಲೆಯ ಮದ್ಯಕ್ಕೆ ಬೈತಲೆ ತೆಗೆದ ಮಾರುದ್ದ ಜಡೆಯವಳು.ಕತ್ತು ಆಡಿಸುತ್ತ ಮುತ್ತಿನಂತ ಮಾತುಗಳ ಹಾಡುತಿದ್ದರೆ ಕಿವಿಯ ಓಲೆಗಳು ನರ್ತಿಸುತಲಿರುತ್ತವೆ. ಆ ನರ್ತನ ಕಾಣಲು ನಿಜಕ್ಕೂ ಕಣ್ಗಳ ಪುಣ್ಯವೆ ಸರಿ. ಕಪ್ಪು ಕಾಡಿಗೆ ಬಳಿದ ಆ ಕಣ್ಣುಗಳ ನೋಟದಲ್ಲೂ ಒಂದು ಆಕರ್ಷಣೆ. ನಕ್ಕರೆ ನಾಜೂಕು ಕೆನ್ನೆಯ ಮೇಲೆ ಗುಳಿಯೊಂದು ಮೂಡಿ ಅವಳ ಅಂದವನು ಹೆಚ್ಚಿಸಿ ಎತ್ತಿ ತೋರಿತಲಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಹೊಳೆವ ಹುಣ್ಣಿಮೆಯ ಪೂರ್ಣಚಂದಿರನಂತೆ ಇರುತಿತ್ತು … Read more