ಹಮ್ಮಿಂಗ್ ಎಂಬ ನ್ಯಾನೋ ಹಕ್ಕಿ!!!: ಅಖಿಲೇಶ್ ಚಿಪ್ಪಳಿ

ಹೃದಯದ ಬಡಿತ ನಿಮಿಷಕ್ಕೆ ಸರಾಸರಿ 1200 ಇರುವ ಜೀವಿ ಯಾವುದು? ಸೆಕೆಂಡಿಗೆ 80 ರಿಂದ 250 ಬಾರಿ ರೆಕ್ಕೆ ಬಡಿಯುವ ಪಕ್ಷಿ ಯಾವುದು? ತನ್ನ ತೂಕಕ್ಕಿಂತ ಒಂದುವರೆ ಪಟ್ಟು ಆಹಾರ ಸೇವಿಸುವ ಜೀವಿ ಯಾವುದು? ಬರೀ 300 ಮಿಲಿಗ್ರಾಂ ತೂಕದ ಮೊಟ್ಟೆಯಿಡುವ ಹಕ್ಕಿ ಬಗ್ಗೆ ಗೊತ್ತ? ಹೀಗೆ ಮುಗಿಯದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಒಂದೇ. ಅದು ಹಮ್ಮಿಂಗ್ ಬರ್ಡ್ ಆಲಿಯಾಸ್ ಝೇಂಕಾರದ ಹಕ್ಕಿ!! ನಮಗೆ ಇದನ್ನು ನೋಡುವ ಭಾಗ್ಯ ಇಲ್ಲ. ಏಕೆಂದರೆ ಭಾರತದಲ್ಲಿ ಇವು ಇಲ್ಲ. ಸಂತೋಷದ … Read more

ಅವ್ವನ ಸೀರೆ ಮತ್ತು ಬಾಳೀಗ೦ಟು…: ಜಯಶ್ರೀ ದೇಶಪಾಂಡೆ

     'ಎರಡು ..ಮೂರು ..ನಾಲ್ಕು , ಐದು. ಮತ್ತ ಇದು ಹತ್ತು . ಸಾಕೇನು?" " ಸಾಕು ಅ೦ದುಬಿಡ್ಲಿ ಇ೦ವಾ"  ಅ೦ತ ಇರ್ಬೇಕು ಅವ್ವನ ಮನಸಿನ್ಯಾಗ. ಯಾಕ೦ದ್ರ ಅವನ ಹಿ೦ದ ನಾನೂ          ನಿ೦ತಿದ್ದೆ.  ನನ್ನ ಕೈಗೂ ಹಿ೦ಗೇ ರೊಕ್ಕಾ  ಎಣಿಸಿ ಹಾಕಬೇಕಿತ್ತು..ಆದರ ಇ೦ವಾ ,ಅ೦ದ್ರ ನನ್ನ ತಮ್ಮ ,ಹೇಳಿ ಕೇಳಿ ಅಚ್ಚ್ಹಾದ  ಮಗಾ..  ಅ೦ವಾ ನಮ್ಮವ್ವನ 'ಶೇ೦ಡೆಫಳ' ಅರ್ಥಾತ್  (ಮುದ್ದಿನ ಮಗ !) ..ಅ೦ವಗ ಕೇಳಿದಷ್ಟು ಕೊಡೂದು ಎ೦ದಿಗಿದ್ರೂ ಇದ್ದದ್ದನ … Read more

ಮೌನಿ:ಪ್ರಶಸ್ತಿ ಪಿ.

ಬೆರೆವ ಭಾವಗಳ ಸರಳ ಸುಂದರಿಯು ಮೌನ ತಾಳಿದ್ದಾಳೆ. ಧುಮುಕಲನುವಾಗಿ ನಲ್ಲಿಯಂಚಲ್ಲಿ ನಿಂತ ಹನಿಯೊಂದು ಗುರುತ್ವವನ್ನೂ ಲೆಕ್ಕಿಸದೆ ನಲ್ಲಿಯನ್ನೇ ಅಂಟಿಕೊಂಡಂತೆ ತನ್ನ ಕಾದಿರುವವರ ನಿರೀಕ್ಷೆಗಳಿಗೆ ಸ್ಪಂದಿಸದಂತೆ ಮೌನವಾಗಿದ್ದಾಳೆ. ಉಕ್ಕಿ ಹರಿಯುತ್ತಿದ್ದ ಹುಚ್ಚುಹೊಳೆ, ಜೀವ ಸೆಲೆ, ತಾಯಿ ಮೌನಿಯಾಗಿದ್ದಾಳೆ. ಮಳೆಯೆಂದರೆ ಹುಚ್ಚೆದ್ದು ಹೊಡೆವ ದಿನಗಳವು. ಬೇಸಿಗೆಯೆಂದರೆ ಕಲ್ಲಂಗಡಿ ಹೋಳೋ,ಇಬ್ಬಟ್ಟಲ, ಮುರುಗನುಳಿ(ಕೋಕಂ) ಪಾನಕಗಳು ಮನೆಮನೆಯಲ್ಲೂ ಖಾಯಂ ಆಗಿರುತ್ತಿದ್ದ ದಿನಗಳವು. ಚಳಿಗಾಲವೆಂದ್ರೆ ಏಳರ ಮೇಲೆ ಮನೆಯಿಂದ ಹೊರಗೆ ಕಾಲಿಡಲು ಬೇಸರಿಸುತ್ತಿದ್ದ ಕಾಲವದು. ಒಂದೇ ದಿನದಲ್ಲಿ ಮೂರೂ ಋತುಗಳ ದರ್ಶನವಾಗುತ್ತಿದ್ದ ಚೌಚೌ ಬಾತ್ ದಿನಗಳಲ್ಲ. … Read more

ಪ್ರೀತಿಸುವವರು ಪುಣ್ಯವಂತರು: ಅಕ್ಷಯ ಕಾಂತಬೈಲು

         ಫಟಫಟನೆ ಚಿಟಿಕೆ ಹೊಡೆದಷ್ಟು ವೇಗದಲ್ಲಿ ನಮ್ಮ ಜೀವನದಲ್ಲೊಂದು ಒಳ್ಳೆಯ ಬದಲಾವಣೆಯು ಕಂಡುಬಿಟ್ಟರೆ, ಅದು ಅವನ ಅಥವಾ ಅವಳ ಪುಣ್ಯ ಮಾರಾಯ ಅಂತ ಹೇಳಿಸಿಕೊಳ್ಳುತ್ತೇವೆ. ಈ ಬದಲಾವಣೆಯ ಹಿಂದೆ ನಾವೆಷ್ಟು ಶ್ರಮವಹಿಸಿದ್ದೇವೆಂದು ಮತ್ತು ನಿಗಾವಹಿಸಿದ್ದೇವೆಂದು ನಮಗೆ ಮಾತ್ರವೆ ಗೊತ್ತು. ಬದಲಾವಣೆಗೊಂದು ಪ್ರೀತಿಯು ಕಾರಣವಾದರೆ ಅದರ ಸೊಗಸೇ ಬೇರೆ ಅನ್ನಿಸುವುದುಂಟು. ಗಟ್ಟಿಯಾಗಿ ನಮ್ಮ ಮನಸ್ಸು ಒಳಗೊಳಗೇ ಜಪಿಸುತ್ತಿರುತ್ತದೆ. ಅವಳಿಂದಾಗಿ ಮತ್ತೆ ನನಗೆ ಜೀವಿಸಬೇಕೆಂದೆನಿಸಿತು, ಅವನಿಂದಾಗಿ ನಾನು ಮತ್ತೆ ಉತ್ಸುಕಳಾದೆ, ಅವಳೆಂದರೆ ಪ್ರಾಣ, ಅವನೆಂದರೆ ಉಸಿರು … Read more

ಮೂವರ ಕವನಗಳು: ಸಂತೋಷಕುಮಾರ ಸೋನಾರ, ನಗರ ಸುಧಾಕರ ಶೆಟ್ಟಿ, ಕಿರಣ್ ಕುಮಾರ್ ಕೆ. ಆರ್.

ವಾಸ್ತವ ಬುದ್ಧ ಜನಿಸಿದಾ ನಾಡಿನಲ್ಲಿ  ಬೃಂದಾವನವ ಕಟ್ಟದೆ  ಬಾಂಬನ್ನು ಸುಟ್ಟರಲ್ಲ! ಬಸವ ಜನಿಸಿದಾ ಭುವಿಯಲ್ಲಿ  ಭಕುತಿಯಿಂದ ಬಾಳದೇ   ಬರ್ಭರ ಹಿಂಸೆಯಾಗುತ್ತಿದೆಯಲ್ಲ! ಗಾಂಧಿ ಜನಿಸಿದ ದೇಶದಲ್ಲಿ  ಗಂಧದ ಪರಿಮಳವ ಸೂಸದೇ  ಗನ್ನನ್ನು ಹಿಡಿದೆವಲ್ಲ! ಬುದ್ಧ, ಬಸವ, ಗಾಂಧಿ ಈಗ ಇದ್ದಿದ್ದರೆ??? ಬುದ್ಧ ಕಲ್ಲಾಗುತ್ತಿದ್ದ! ಗಾಂಧಿ ಮೌನವಾಗುತ್ತಿದ್ದ! ಬಸವ ಮತ್ತೊಮ್ಮೆ ಐಕ್ಯವಾಗುತ್ತಿದ್ದ! **** ಈ ಜಗತ್ತಿನೊಳಗೆ  ಪ್ರತಿಯೊಬ್ಬರಿಗೂ  ಒಂದೂಂದು ದಾರ!  ನನ್ನದೊಂದು ದಾರ  ನಿನ್ನದೊಂದು ದಾರ!  ಅವರದೊಂದು ದಾರ   ಆಗಬೇಕಿದೆ ನಾವು  ಇದರಿಂದ ಉದ್ಧಾರ!  ಬೇಡವೇ ಬೇಡವಂತೆ  … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಇನ್ನೇನೂ ಪ್ರಶ್ನೆಗಳಿಲ್ಲ. ಸಾಮಾಜಿಕ ಸಮಾರಂಭವೊಂದರಲ್ಲಿ ಝೆನ್‌ ಗುರುವನ್ನು ಸಂಧಿಸಿದ ಮನೋವೈದ್ಯನೊಬ್ಬ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯೊಂದನ್ನು ಕೇಳಲು ತೀರ್ಮಾನಿಸಿದ. “ನಿಜವಾಗಿ ನೀವು ಜನರಿಗೆ ಹೇಗೆ ಸಹಾಯ ಮಾಡುತ್ತೀರಿ?” ವಿಚಾರಿಸಿದ ಮನೋವೈದ್ಯ. “ಇನ್ನೇನೂ ಪ್ರಶ್ನೆಗಳನ್ನು ಕೇಳಲಾಗದ ಸ್ಥಿತಿಗೆ ಅವರನ್ನು ಕೊಂಡೊಯ್ಯುತ್ತೇನೆ,” ಉತ್ತರಿಸಿದರು ಝೆನ್‌ ಗುರುಗಳು. ***** ೨. ಸ್ವರ್ಗ. ಮರುಭೂಮಿಯಲ್ಲಿ ಇಬ್ಬರು ದಾರಿ ತಪ್ಪಿ ಅಸಹಾಯಕರಗಿದ್ದಾರೆ. ಹಸಿವು ಮತ್ತು ಬಾಯಾರಿಕೆಯಿಂದ ಶಯುವಂತಾಗಿದ್ದಾರೆ. ಕೊನೆಗೆ ಅವರು ಅತೀ ಎತ್ತರವಾಗಿದ್ದ ಗೋಡೆಯೊಂದರ ಸಮೀಪಕ್ಕೆ ಬರುತ್ತಾರೆ. ಗೋಡೆಯ ಆಚೆ ಬದಿಯಲ್ಲಿ ಜಲಪಾತದ ಸದ್ದು … Read more

ಪಿತೃ ಪೂಜೆಯ ಊಟ: ಸಾವಿತ್ರಿ ವಿ. ಹಟ್ಟಿ

ನಾನು, ಅಕ್ಕ ಮತ್ತು ಅವ್ವ ಆಬಾಲಿ ಹೂವು ಹೆಣ್ಕೊಂತ ಕುಂತಿದ್ವಿ. ಅಕ್ಕ ಮತ್ತು ಅವ್ವ ಮನೆತನಕ್ಕ ಸಂಬಂಧ್ಸೀದ ವಿಷಯ ಮಾತಾಡ್ಕೊಂತ ಇದ್ರು. ಮಧ್ಯೆ ಮಧ್ಯೆ ನಾನು ಅವರ ಮಾಲೀಗೂ ನನ್ನ ಮಾಲೀಗೂ ಹೋಲಿಸಿ ನೋಡಿ ಜಾಸ್ತಿ ನಾನೇ ಕಟ್ಟಿದ್ದು ಅಂತ ಧಿಮಾಕಿನಿಂದ ಹೂವು ಹೆಣೆಯಾಕ್ಹ್ಹತ್ತಿದ್ದೆ.  ಆ ಹೊತ್ಗೆ ಹೊರಬಾಗಿಲ ಹತ್ರ ಯಾರದಾ ನೆಳ್ಳು ಬಿದ್ದಂಗಾತು. ಬಾಗಿಲ ತೋಳು ಹಿಡಿದು ಹಣಕಿ ಹಾಕಿದಂಗಾತು. ಎದ್ದು ಹೋಗಿ ನೋಡಿದೆ. ಯಾರೂ ಇರಲಿಲ್ಲ. ಯಾವಾ ಸಣ್ಣ ಹುಡುಗ್ರು ಆಟ ಆಡ್ಕೊಂತ ಬಂದು … Read more

ಸಂಸಾರ ಸಾಗರದಿ ಅನುಮಾನದ ಅಲೆಗಳು: ಹೊರಾ.ಪರಮೇಶ್ ಹೊಡೇನೂರು

 "ಸಂಸಾರ" ಎಂಬುದು ಅನಾದಿ ಕಾಲದಿಂದಲೂ ಗಂಡು ಮತ್ತು ಹೆಣ್ಣುಗಳ ನಡುವೆ ಸೃಷ್ಟಿಸಿಕೊಳ್ಳುವ ಅಪೂರ್ವ ಅನುಬಂಧವಾಗಿದ್ದು ಅವರ ನಡುವಿನ ದೈಹಿಕ ಮತ್ತು ಮಾನಸಿಕ ಸಮ್ಮಿಲನದ ಫಲವಾಗಿ ಪಡೆಯುವ ಮಕ್ಕಳಿಂದಾಗಿ ಪೀಳಿಗೆಗಾಗಿ ಸರಣಿ ಹರಿದುಕೊಂಡು ಬಂದಿವೆ. "ಮದುವೆ" ಎಂಬ ಸಾಮಾಜಿಕ ಒಪ್ಪಂದದ ಪರವಾನಗಿ ಪಡೆದು ಜೀವನ ಸಂಗಾತಿಗಳಾಗಿ, ಪರಸ್ಪರ ನಿಷ್ಠರಾಗಿ ಬಾಳುವ ದಂಪತಿಗಳ ಬೇಕು ಬೇಡಗಳು, ಕಷ್ಟ-ಸುಖಗಳು, ಇಷ್ಟ-ಅನಿಷ್ಟಗಳು, ನೀತಿ-ನಿರ್ಧಾರಗಳು ಬಹುತೇಕ ಇಬ್ಬರೂ ಕೂಡಿ ಚರ್ಚಿಸುವ ಮೂಲಕ ಕೈಗೊಂಡರೂ, ಹೆಚ್ಚಾಗಿ ಜೀವನೋಪಾಯಕ್ಕಾಗಿ ದುಡಿಯುವ ಪುರುಷನೇ(ಪತಿ) ಮನೆಯ ಯಜಮಾನಿಕೆ ವಹಿಸಿದರೆ, ಮಹಿಳೆಯು(ಸತಿ) … Read more

ಹನಿ ಮಳೆಗೊಂದು ಬೆಚ್ಚನೆ ಪ್ರೇಮ ಕಥನ: ಅನಿತಾ ನರೇಶ್ ಮಂಚಿ

“ಆಗ್ಲಿಲ್ವಾ ತಾಯೀ ನಿನ್ನ ಅಲಂಕಾರ? ಅದೇನು ಕಾಲೇಜಿಗೆ ಹೋಗ್ತಿಯೋ ಇಲ್ಲಾ ಫ್ಯಾಷನ್ ಪೆರೇಡಿಗೋ.. ಯಾವ ಹುಡುಗನನ್ನು ಕೊಲ್ಲಲು ಇಷ್ಟೊಂದು ಭಿನ್ನಾಣ? ಇದೇ ಹೊತ್ತಲ್ಲಿ ಪುಸ್ತಕ ಬಿಡ್ಸಿದ್ರೆ ನೀನು  ರ್ಯಾಂಕ್ ಬರ್ತಿದ್ದೆ ಬಿಡು” ಎಂದ ಅತ್ರಿ. “ಹೋಗೋ..   ನೀನು ಮೇಕಪ್ಪು  ಮಾಡದವನು ಬಾರೀ ಓದಿ  ಕಡಿದು ಕಟ್ಟೆ ಹಾಕಿದ್ದೀಯಲ್ಲಾ.. ಸಾಕು..” ಎಂದು ಕಿಚಾಯಿಸಿದಳು ಗಾನ.  “ಯಾಕೇ? ನಂಗೇನಾಗಿದೆ ..? ಓದ್ಲಿಲ್ಲ ಅನ್ನೋದು ಬಿಟ್ರೆ ಏನು ಕಮ್ಮಿ ಇದೆ ಹೇಳು.. ಹೊಲದಲ್ಲಿ  ಚೆನ್ನಾಗಿ ದುಡೀತೀನಿ ..  ಚೆನ್ನಾಗಿ ತಿಂತೀನಿ.. … Read more

ಸಿಡಿದೆದ್ದ ಗಾಂಧೀಶಕ್ತಿಸ್ಥಳ ಬದನವಾಳು: ಎಸ್.ಜಿ. ಸೀತಾರಾಮ್

  “ಬದನವಾಳು” ಎಂದೊಡನೆ ಹಳೆಯ ಮೈಸೂರಿಗರ ಮನಸ್ಸಿಗೆ ಬರುವುದು, ಗಾಂಧೀ ರಚನಾತ್ಮಕ ಕಾರ್ಯಕ್ರಮದಡಿಯಲ್ಲಿ 88 ವರ್ಷಗಳ ಕೆಳಗೆ, ಅಂದರೆ 1927ರಲ್ಲಿ, ಅಲ್ಲಿ ಸ್ಥಾಪಿಸಲ್ಪಟ್ಟ, “ನೂಲುವ ಪ್ರಾಂತ್ಯ” ಮತ್ತು “ಖಾದಿ ಗ್ರಾಮೋದ್ಯೋಗ ಕ್ಷೇತ್ರ.”  ಮೈಸೂರು-ಚಾಮರಾಜನಗರ ರೈಲು ಮಾರ್ಗದಲ್ಲಿರುವ ಈ ಗಾಂಧೀಕ್ಷೇತ್ರವು, ನಂಜನಗೂಡಿನಿಂದ 9 ಕಿ.ಮೀ. ಮತ್ತು ಮೈಸೂರಿನಿಂದ 34 ಕಿ.ಮೀ. ದೂರದಲ್ಲಿದೆ; “ತಗಡೂರು” ಎಂಬ ಇದರ “ಅವಳಿ” ಗಾಂಧೀಕ್ಷೇತ್ರದಿಂದ 9 ಕಿ.ಮೀ. ದೂರದಲ್ಲಿದೆ. “ಮೈಸೂರು ಗಾಂಧೀ” ಎಂದೇ ಪ್ರಸಿದ್ಧರಾಗಿದ್ದ ತಗಡೂರು ರಾಮಚಂದ್ರ ರಾವ್ ಮತ್ತು ಅಗರಂ ರಂಗಯ್ಯ (ಸಾಧ್ವೀ … Read more

ಕಾರ್-ಬಾರ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ವೆಂಕಟ್ ಗೆ ಬಾಡಿಗೆ ಕಾರು ತೆಗೆದುಕೊಳ್ಳೋದು ಹೆಚ್ಚು ಕಡಿಮೆ ಅನಿವಾರ್ಯವಾಗಿತ್ತು. ಇವನು ಇನ್ನೂ ಮೂರು ವಾರಗಳಾದರೂ ಅಮೆರಿಕಾದಲ್ಲಿ ಇರುವುದು ಬಾಕಿ ಇತ್ತು. ದಿನಾಲೂ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಇವನ ಸಹೋದ್ಯೋಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದನಾದ್ದರಿಂದ ಇವನಿಗೆ ದಿನಾಲೂ ಆಫಿಸಿಗೆ ಹೋಗುವುದೇ ಕಷ್ಟವಾಗಿತ್ತು. ಅದೂ ಅಲ್ಲದೆ, ಅಲ್ಲಿ ಕಾರಿಲ್ಲವೆಂದರೆ ಕಾಲೇ ಕಳೆದುಕೊಂಡಂತೆ. ತನ್ನ ಅಪ್ಪ ಕಾರು ತರಲು ಹೋಗುತ್ತಿದ್ದಾನೆ ಎನ್ನುವುದೇ ಖುಷಿ ಗೆ ಕೌತುಕದ ಸಂಗತಿಯಾಗಿತ್ತು. ಜಾನುನೂ  ಅಲ್ಲಿ ಇಲ್ಲಿ ಅಡ್ಡಾಡಲು ಅನುಕೂಲವಾಗುತ್ತದೆಂದು ಖುಷಿಯಲ್ಲಿದ್ದಳು.  … … Read more

ಸಾಮಾನ್ಯ ಜ್ಞಾನ (ವಾರ 74): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಕೇಂದ್ರ ಸಂಗೀತ – ನಾಟಕಅಕಾಡೆಮಿಯಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗಯಾರು? 2.    ಸಿಸ್ಮೋಗ್ರಫಿ ಇದುಯಾವುದರಕುರಿತುಅಧ್ಯಯನವಾಗಿದೆ? 3.    ಉಕಾಯ್ ನೀರಾವರಿಯೋಜನೆಯಾವ ನದಿಗೆ ಸಂಬಂಧಿಸಿದೆ? 4.    ಭಾರತದಲ್ಲಿಅತಿದೊಡ್ಡರೇಡಿಯೋಟೆಲಿಸ್ಕೋಪ್‍ಎಲ್ಲಿದೆ? 5.    ಯು.ಪಿ.ಎಸ್(UPS) ನ ವಿಸ್ತøತರೂಪವೇನು? 6.    ಅಂಬಿಕಾತನಯದತ್ತಇದುಯಾರಕಾವ್ಯನಾಮ? 7.    1954ರಲ್ಲಿ ಪಾಟೀಲ ಪುಟ್ಟಪ್ಪನವರು ಹೊರಡಿಸಿದ ಪತ್ರಿಕೆಯಾವುದು? 8.    ನಳಂದ ವಿಶ್ವವಿದ್ಯಾಲಯಯಾವಧರ್ಮದ ತತ್ವಗಳನ್ನು ತಳಹದಿಯಾಗಿ ಹೊಂದಿತ್ತು? 9.    ಭಾರತದಲ್ಲಿಮೊದಲ ಬಾರಿಗೆರೈಲ್ವೆ ಮಾರ್ಗಆರಂಭವಾದಾಗಗವರ್ನರ್‍ಜನರಲ್‍ಯಾರಾಗಿದ್ದರು? 10.    ಚಂಪಾರಣ್ಯರೈತ ಚಳುವಳಿ ಇದುಯಾರ ಮುಂದಾಳತ್ವದಲ್ಲಿ ನಡೆಯಿತು? 11.    ರಾಷ್ಟ್ರಧ್ವಜದಲ್ಲಿರುವ ಬಿಳಿ ವರ್ಣಯಾವುದರದೋತ್ಯಕವಾಗಿದೆ? 12.    ರಾಷ್ಟ್ರಕೂಟರರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿದದೊರೆಯಾರು? … Read more

ಕಾಣದ ಕಣ್ಣಿಗೊಂದು: ಪ್ರಶಸ್ತಿ ಪಿ.

ಬೆಳಗ್ಗೆ ಹೊಂಬಿಸಿಲಿನೊಂದಿಗೆ ಮಗುವ ನಗುವಿನಂತೆ ಸೌಮ್ಯವಾಗಿದ್ದ ವರುಣದೇವ ಸಂಜೆಯಾಗುತ್ತಿದ್ದಂತೆ ಕಾಳಿಯಂತೆ ಆರ್ಭಟಿಸತೊಡಗಿದ್ದ. ಒಂದಾನೊಂದು ಕಾಲದ ಕೆರೆಗಳನ್ನೇ ಆಪೋಷನ ತೆಗೆದುಕೊಂಡು ಎದ್ದು ನಿಂತ ಅಪಾರ್ಟುಮೆಂಟುಗಳನ್ನೆಲ್ಲಾ ಮತ್ತೆ ಕೆರೆಗಳನ್ನಾಗಿಸಿಯೇ ಬಿಡೋ ಸಂಕಲ್ಪದಲ್ಲಿದ್ದಾನಾ ಇವನಿಂದು ಎಂಬ ಭಯ ರಸ್ತೆಗಳಲ್ಲಿ ಹರಿಯುತ್ತಿದ್ದ ಮೊಣಕಾಲುದ್ದದ ನೀರ ನೋಡಿ ಕಾಡುತ್ತಿತ್ತು. ಹಿಂದಿನ ದಿನವಷ್ಟೇ ಹೊಸದಾಗಿ ಮಾಡಿದ ಟಾರ್ ರೋಡನ್ನೆಲ್ಲಾ ಅಗೆದು, ಮುಚ್ಚದೇ ಹಾಗೇ ಬಿಟ್ಟ ಗ್ಯಾಸ್ ಕೇಬಲ್ಲಿನವರಿಗೆ ಬಸ್ಸಿನ ಚಕ್ರ ಹೂತು ಕುಂತ ಡ್ರೈವರ್ರು ಶಾಪ ಹಾಕುತ್ತಿದ್ದ. ಹೊಂಡಗಳ ತಪ್ಪಿಸಿ ಸರಿ ರಸ್ತೆಯಲ್ಲಿ ನಡೆಸಲೋಸುಗ ನಿಧಾನವಾದ … Read more

ಮೌಢ್ಯತೆಯ ಕೊಡಲಿಗೆ ಕಾಂತತೆಯ ಕಾವು: ರೋಹಿತ್ ವಿ. ಸಾಗರ್

  ಕಬ್ಬಿಣದಂತಹ ಕೆಲವು ವಸ್ತುಗಳನ್ನು ಪ್ರೀತಿಯಿಂದ ಸೆಳೆದು ಕೊಳ್ಳುವ ವಿಶೇಷ ರೀತ್ಯ ವಸ್ತುಗಳನ್ನು ಆಯಸ್ಕಾಂತಗಳು ಎಂದು ಕರೆಯುತ್ತೇವೆ. ಅವುಗಳಿಗೆ ಈ ಆಯಸ್ಕಾಂತ ಎಂಬ ಹೆಸರು ಬಂದಿದ್ದು ಒಲವು ಎಂಬ ಅರ್ಥ ನೀಡುವ ಐಮಂತ್ ಎಂಬ ಫ್ರೆಂಚ್  ಭಾಷೆಯ ಪದದಿಂದ. ಇಲ್ಲಿ ಒಲವು ಎಂದರೆ ಕಬ್ಬಿಣದಂತಹ ವಸ್ತುಗಳ ಬಗೆಗಿರುವ ಪ್ರೀತಿ ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ. ಪ್ರಾನ್ಸಿನವರು ಮಾತ್ರ ವಲ್ಲ ನೈಸರ್ಗಿಕವಾಗಿ ದೊರೆಯುತ್ತಿದ್ದ ಆಯಸ್ಕಾಂತಗಳನ್ನು ಮೊದಲ ಬಾರಿ ಹಡಗು ದೋಣಿಗಳಲ್ಲಿ ದಿಕ್ಕು ತೋರಿಸುವ  ಸೂಜಿಗಲ್ಲುಗಳಾಗಿ ಬಳಸಿದ್ದ ಚೀನಿಯರು … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೀನಿನ ಕುರಿತು ತಿಳಿಯುವುದು. ಚುಆಂಗ್‌ ಝು ಒಂದು ದಿನ ತನ್ನ ಮಿತ್ರನೊಂದಿಗೆ ನದೀ ತಟದಲ್ಲಿ ನಡೆದುಕೊಂಡು ಹೋಗುತ್ತಿದ್ದರು.  ಚುಆಂಗ್‌ ಝು ತನ್ನ ಮಿತ್ರನಿಗೆ ಹೇಳಿದ, “ಮೀನುಗಳು ಈಜಾಡುತ್ತಿರುವುದನ್ನು ನೋಡು. ಅವು ಅದರಿಂದ ನಿಜವಾಗಿಯೂ ಸುಖಿಸುತ್ತಿವೆ.” “ನೀನು ಮೀನಲ್ಲವಲ್ಲ, ಆದ್ದರಿಂದ ಅವು ಸುಖಿಸುತ್ತಿವೆಯೋ ಇಲ್ಲವೋ ಎಂಬುದನ್ನು ನೀನು ನಿಜವಾಗಿಯೂ ತಿಳಿಯಲು ಸಾಧ್ಯವಿಲ್ಲ,” ಪ್ರತಿಕ್ರಿಯಿಸಿದ ಆ ಮಿತ್ರ. ಚುಆಂಗ್‌ ಝು ಹೇಳಿದ, “ನೀನು ನಾನಲ್ಲ. ಅಂದ ಮೇಲೆ ಮೀನುಗಳು ಸುಖಿಸುತ್ತಿವೆ ಎಂಬುದು ನನಗೆ ತಿಳಿದಿಲ್ಲ  ಎಂಬುದು ನಿನಗೆ ಹೇಗೆ … Read more

ಏನಿದು ಮೇಕೆದಾಟು???: ಅಖಿಲೇಶ್ ಚಿಪ್ಪಳಿ

ಕೊಡಗಿನಲ್ಲಿ ಹುಟ್ಟಿದ ಜೀವನಾಡಿ ನದಿ ಕಾವೇರಿಗೆ ಸಂಗಮ ಎಂಬಲ್ಲಿ ಅರ್ಕಾವತಿ ಎಂಬ ಮತ್ತೊಂದು ನದಿ ಸೇರುತ್ತವೆ. ಇಲ್ಲಿಂದ ಜಲಪಾತದೋಪಾದಿಯಲ್ಲಿ ಕಾವೇರಿ ದುಮ್ಮಿಕ್ಕುತ್ತಾಳೆ. ಕಡಿದಾದ ಕಣಿವೆಯಲ್ಲಿ ಸಾಗುವ ಕಾವೇರಿ ಸಂಗಮದಿಂದ ಮೂರುವರೆ ಕಿ.ಮಿ. ಸಾಗುವಷ್ಟರಲ್ಲಿ ಮೇಕೆದಾಟು ಸಿಗುತ್ತದೆ. ಹಿಂದೊಮ್ಮೆ ಹುಲಿಯೊಂದು ಮೇಕೆಯನ್ನು ಹಿಡಿಯಲು ಅಟ್ಟಿಸಿಕೊಂಡು ಬಂತಂತೆ. ಬೆದರಿದ ಮೇಕೆ ಜೋರಾಗಿ ಓಡಿ ಬಂದು ಜೀವವುಳಿಸಿಕೊಳ್ಳಲು ನದಿಯ ಈ ದಡದಿಂದ ಆ ದಡಕ್ಕೆ ಜಿಗಿಯಿತಂತೆ, ಹುಲಿಗೆ ಹಾರಲು ಸಾಧ್ಯವಾಗಲಿಲ್ಲ. ಇಲ್ಲಿ ಮೇಕೆಯ ಶೌರ್ಯವನ್ನು ಹೊಗಳಲು ಈ ಪ್ರದೇಶಕ್ಕೆ ಮೇಕೆದಾಟು ಎಂದು … Read more

’ಪಾನ ಮಹಿಮೆ’: ಗುಂಡುರಾವ್ ದೇಸಾಯಿ ಮಸ್ಕಿ

                                             ನನಗೆ ಇದುವರೆಗೂ ಅರ್ಥವಾಗದ ವಿಷಯವೆಂದ್ರೆ ಪಾರ್ಟಿ ಅಂದ್ರ ಜನ ಕುಡಿತ, ಕಡಿತಾ ಇರಬೇಕು ಅಂತ ಭಾವಸ್ತಾರಲ್ಲ ಯಾಕೆ ಅಂತ! ಅದು ಬಿಟ್ಟು ಸ್ವಾದಿಷ್ಟ ಭೋಜನ ಸವದ್ರ ಪಾರ್ಟಿ ಆಗಲ್ವಾ. ಇಂತಹ ವಿರೋಧ ಕಾರಣಕ್ಕಾಗಿಯೇ ನಾನು ಹಲವಾರು ಸಂಬಂಧಗಳನ್ನು ಕಳೆದುಕೊಂಡಿದ್ದೇನೆ. ಏನು ಚಟ ಮಾಡದ ಹುಂಬ ಎಂದು … Read more

ಕಾಡ ಹಾಡು: ಅಖಿಲೇಶ್ ಚಿಪ್ಪಳಿ

ಎ ಫಾರ್ ಆಪಲ್ ಯಾಕೆ ಅನಿಮಲ್ ಯಾಕಲ್ಲ? ಲಕ್ಷಗಟ್ಟಲೇ ಡೊನೇಷನ್ ತೆತ್ತು, ಅಸಾಧಾರಣವಾದ ಇಂಟರ್‍ಯೂನ ಎದುರಿಸಿ ಪುಟ್ಟಿಗೊಂದು ಸೀಟುಕೊಡಿಸಿ ನಿರಾಳವಾಗುವಂತಿಲ್ಲ. ಕ್ಲಾಸಿಗೆ ಮೊದಲಾಗಿ ಬರಬೇಕು, ಇದು ಎಲ್ಲಾ ತಂದೆ-ತಾಯಿಗಳ ಇಚ್ಛೆ. ಎಲ್.ಕೆ.ಜಿ.ಯಿಂದಲೇ ಟ್ಯೂಷನ್ ಶುರು. ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ  ಮುಂದಿರಬೇಕು. ಬಹುತೇಕ ಖಾಸಗಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಇದೇ ನಿಯಮವಿದೆ. ಖಾಸಗಿ ಶಾಲೆಗಳು ಈ ಅಲಿಖಿತ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಶಸ್ಸುಗಳಿಸುತ್ತಾರೆ. ಪಾಪ ಸರ್ಕಾರಿ ಶಾಲೆಗಳ ಶಿಕ್ಷಕರನ್ನೂ ಸರ್ಕಾರ ಎಲ್ಲಾ ಕೆಲಸಗಳಿಗೂ ಬಳಸಿಕೊಳ್ಳುತ್ತದೆಯಾದ್ದರಿಂದ ಈ ನಿಯಮವನ್ನು … Read more

ಭವ: ಪ್ರಶಸ್ತಿ ಪಿ.

ಮಧ್ಯಾಹ್ನದಿಂದಲೂ ಮಳೆಯ ಕಣ್ಣಾಮುಚ್ಚಾಲೆಯಾಟದಲ್ಲಿ ಕಾಮನಬಿಲ್ಲಿನ ಚಿತ್ತಾರಗಳ ಬಿಡಿಸಿ ಸುಸ್ತಾದ ಸೂರ್ಯ ಮೋಡಗಳ ಮರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೋ ಎಂಬಂತೆ ಕವಿದಿದ್ದ  ಮಬ್ಬುಗತ್ತಲು. ಇಲ್ಲಾಡಿ ಬೇಸರಗೊಂಡ ಮೋಡಗಳು ಇನ್ನೆಲ್ಲೋ ಹಾರಿದಂತೆ ಸೂರ್ಯ ಆಗಸವನ್ನೇ ಪಟವನ್ನಾಗಿಸಿ ಬಿಡುವು ಕಳೆಯುತ್ತಿದ್ದ . ಹಳದಿ ಕೇಸರಿಗಳ ಚಿತ್ತಾರ ಬಿಡಿಸುತ್ತಿದ್ದ ರವಿ, ಹೊಗೆಯುಗುಳುತ್ತಿದ್ದ ಬಸ್ಸುಗಳು, ದಿನವಿಡೀ ಸುರಿದ ಮಳೆಯಿಂದ ತಂಪಾದ ದಾರಿಪಕ್ಕದ ಮರಗಳು, ಕೊಚ್ಚೆಯಿಂದ ಕಾಲಿಡಲೂ ಆಗದಂತಹ ರಸ್ತೆಯ ಇಕ್ಕೆಲಗಳು..ಬದುಕೂ ಹೀಗೆ ಅಲ್ಲವೇ ? ಚಂದವೆಂದುಕೊಂಡ್ರೆ ಚಂದ ಚಂದ. ಗೋಳೆಂದುಕೊಂಡ್ರೆ ಗೋಳೇ ಗೋಳು ! ಪ್ರಕೃತಿಗೆ … Read more

ಮೂವರ ಕವನಗಳು: ಮಲ್ಲಿಕಾರ್ಜುನ ಗೌಡ್ರು, ರಾಘವೇಂದ್ರ ಇ. ಆಶಾದೀಪ

೧) ಸಾಕ್ಷಿ: ನಾನು ಕೊಟ್ಟ ಕಾಣಿಕೆಗಳಿಗೆ ನಿನ್ನ ನೆನಪುಗಳೇ.. ನನಗೆ ಸಾಕ್ಷಿ.! ನೀನು ಕೊಟ್ಟ ನೆನಪುಗಳಿಗೆ ನನ್ನ ಕಣ್ಣೀರ ಹನಿಗಳೇ.. ನಿನಗೆ ಸಾಕ್ಷಿ..!! ೨) ಶ್ರೀಮಂತ: ನಾನು ನೋವುಗಳ  ಆಗರ್ಭ ಶ್ರೀಮಂತ ನಾ ಬಚ್ಚಿಟ್ಟ ಆಸ್ತಿ.. ಯಾರೂ ಕೇಳದ, ಯಾರೂ ಬೇಡದ, ಯಾರೂ ಕದಿಯದ, 'ಕರಗದ ಕಣ್ಣೀರ ಹನಿಗಳು' ನಾನು ನೋವುಗಳ ಆಗರ್ಭ ಶ್ರೀಮಂತ -ಮಲ್ಲಿಕಾರ್ಜುನ ಗೌಡ್ರು           ಕಾಯುವಿಕೆ ಜಗದ ನಿಯಮ ಕಾಡಿಸದಿರು ಓ ಸಖೀ ನೀ ನನ್ನಿಂದ ದೂರಾಗಿ … Read more

’ಪ್ರೇಮಕಾವ್ಯ’ ಕಾದಂಬರಿ ಕುರಿತು: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಕಾವ್ಯಶ್ರೀ ಮಹಾಗಾಂವಕರ್ ಅವರ ಸಾಮಾಜಿಕ ಕಾದಂಬರಿ ’ಪ್ರೇಮಕಾವ್ಯ’ ಜಾತಿಯೆಂಬ ಕಂದಾಚಾರದ ನಡುವೆ ಪ್ರೇಮಿಗಳಿಬ್ಬರೂ ಸಿಕ್ಕಿ ಬೀಳುವ ಕಥಾ ವಸ್ತು ಹೊಂದಿದೆ. ಸರಳ ನಿರೂಪಣೆ, ಸರಾಗವಾಗಿ ಓದಿಸಿಕೊಂಡು ಹೋಗುವ ಸಂಭಾಷಣೆ, ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ನಡೆಸುವ ಹೋರಾಟ ಮನ ಮುಟ್ಟುತ್ತದೆ. ಬಸ್ ಪ್ರಯಾಣದ ಮೂಲಕ ಎರಡು ಹೃದಯಗಳ ಮಧ್ಯೆ ಆಗುವ ತಲ್ಲಣಗಳು, ಅಲ್ಲಿಂದಲೇ ಶುರುವಾಗುವ ಪರಿಚಯ ಅರಿಯದೇ ಹುಟ್ಟಿಕೊಳ್ಳುವ ಪ್ರೀತಿ.  ಬ್ರಾಹ್ಮಣ ಜಾತಿಯ ಕಟ್ಟುಪಾಡುಗಳಿಗೆ ಕಟಿಬಿದ್ದು ಹೆತ್ತವರು ನಡೆಸುವ ದರ್ಪ, ತಾಯಿ ಭಾಗ್ಯಳ ಸಹಜ ಉಪದೇಶ, ಹಲವು ಕಷ್ಟ, … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾತ್ಮ ಪರ್ವತದ ತುದಿಯಲ್ಲಿ ಇರುವ ಪುಟ್ಟ ಮನೆಯಲ್ಲಿ ವಿವೇಕಿಯಾದ ಮಹಾತ್ಮನೊಬ್ಬ ವಾಸಿಸುತ್ತಿದ್ದಾನೆ ಎಂಬ ಸುದ್ದಿ ಗ್ರಾಮಾಂತರ ಪ್ರದೇಶದಲ್ಲಿ ಹರಡಿತು.  ಹಳ್ಳಿಯ ನಿವಾಸಿಯೊಬ್ಬ ಸುದೀರ್ಘವೂ ಕಠಿಣವೂ ಆದ ಪ್ರಯಾಣ ಮಾಡಿ ಅವನನ್ನು ಭೇಟಿಯಾಗಲು ನಿರ್ಧರಿಸಿದ. ಆ ಮನೆಯನ್ನು ಅವನು ತಲುಪಿದಾಗ ಒಳಗಿದ್ದ ವೃದ್ಧ ಸೇವಕನೊಬ್ಬ ಬಾಗಿಲಿನಲ್ಲಿ ತನ್ನನ್ನು ಸ್ವಾಗತಿಸಿದ್ದನ್ನು ಗಮನಿಸಿದ. ಅವನು ಸೇವಕನಿಗೆ ಹೇಳಿದ, “ವಿವೇಕಿಯಾದ ಮಹಾತ್ಮನನ್ನು ನಾನು ನೋಡಬಯಸುತ್ತೇನೆ.” ಸೇವಕ ನಸುನಕ್ಕು ಅವನನ್ನು ಮನೆಯೊಳಕ್ಕೆ ಕರೆದೊಯ್ದ. ಮನೆಯಲ್ಲಿ ಕೋಣೆಯಿಂದ ಕೋಣೆಗೆ ಹೋಗುತ್ತಿರುವಾಗ ಮಹಾತ್ಮನನ್ನು ಸಂಧಿಸುವ ನಿರೀಕ್ಷೆಯಿಂದ … Read more

ಅಣ್ಣಾವ್ರ ನೆನಪುಗಳು: ಹೊ.ರಾ.ಪರಮೇಶ್ ಹೊಡೇನೂರು

       ಇದೇ ಏಪ್ರಿಲ್ 12ಕ್ಕೆ ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ವರನಟ ಡಾ.ರಾಜಕುಮಾರ್ ಅವರು ವಿಧಿವಶರಾಗಿ ಒಂಭತ್ತು ವರ್ಷಗಳು ಪೂರೈಸಿವೆ.ಭೌತಿಕವಾಗಿ ಇಲ್ಲವಾದರೂ ಜನ ಮಾನಸದಲ್ಲಿ ಅವರು ಸ್ಥಾಪಿಸಿರುವ ಛಾಪು ಚಿರ ಕಾಲ ಉಳಿಯವಂತಾದ್ದು. ಅಣ್ಣಾವ್ರ ಒಂಭತ್ತನೇ ಪುಣ್ಯತಿಥಿ  ಹಾಗೂ ಅವರ ಜನ್ಮ ದಿನ(ಏಪ್ರಿಲ್-24)) ಸಂದರ್ಭದಲ್ಲಿ  ಈ ಲೇಖನ.              ಕನ್ನಡ ಚಿತ್ರರಂಗದ ಅನಭಿಶಕ್ತ ದೊರೆ, ಕಲಾಕೌಸ್ತುಭ, ಕರ್ನಾಟಕ ರತ್ನ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು … Read more

ಹರಕೆ ತೀರಿತ್ತು…! (ಕೊನೆ ಭಾಗ) : ಸಾವಿತ್ರಿ ವಿ. ಹಟ್ಟಿ

ನಾಗರಾಜ ಗದಗ್‍ಗೆ ಸ್ಥಳಾಂತರವಾದ ಮೇಲೆ ಮೊದಲ ದಿನಗಳಲ್ಲಿ ಮಂಕು ಬಡಿದವನಂತೆ ಕುಳಿತಿರುತ್ತಿದ್ದ. ಕ್ರಮೇಣ ಅವನು ಗೆಲುವಾಗತೊಡಗಿದ. ಮಕ್ಕಳೊಂದಿಗೆ ಬ್ಯಾಂಕ್ ರೋಡ್‍ನಲ್ಲಿರುವ ವಾಸು ಸ್ಟೋರ್‍ನಿಂದ ದೀಪಿಕಾಳಿಗೆ ಬೇಕಾಗುವ ಹೊಲಿಗೆ ಪರಿಕರಗಳನ್ನು ತರುವುದು, ಮಾರ್ಕೆಟ್‍ನಿಂದ ತರಕಾರಿ ತರುವುದು, ಸಾಯಂಕಾಲ ಹೆಂಡತಿ-ಮಕ್ಕಳೊಂದಿಗೆ ಪಂಚಾಕ್ಷರಿ ಗವಾಯಿಗಳ ಮಠಕ್ಕೆ ಹೋಗಿ ಅಜ್ಜನವರ ದರ್ಶನ ಪಡೆಯುವುದು… ಹೀಗೆ ಹೊಸ ದಿನಚರಿಯೊಂದಿಗೆ ಅವನು ಹೊಂದಾಣಿಕೆಯನ್ನು ಸಾಧಿಸತೊಡಗಿದ್ದ. ದೀಪಿಕಾಳ ಹೊಲಿಗೆ ವಿದ್ಯೆ ತನ್ನ ನಿಜವಾದ ವಿಸ್ತಾರವನ್ನು ವ್ಯಕ್ತಪಡಿಸುವ ಕಾಲ ಅದಾಗಿತ್ತು. ಆಕೆ ಮನೆಯ ಹತ್ತಿರದಲ್ಲೇ ಇರುವ ಪಠೇಲ್ ರೋಡ್‍ನಲ್ಲಿ, … Read more

ಸಾಮಾನ್ಯ ಜ್ಞಾನ (ವಾರ 73): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ೨೦೧೫ ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು? ೨.    ಫೀಫಾ (FIFA) ನ ವಿಸ್ತೃತ ರೂಪ? ೩.    ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು? ೪.    ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ? ೫.    ಕೇಂದ್ರ ಆರ್ಯುವೇದ ಸಂಶೋಧನಾ ಸಂಸ್ಥೆ ಎಲ್ಲಿದೆ? ೬.    ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು? ೭.    ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ ರಾಜ್ಯದಲ್ಲಿದೆ? ೮.    ದಕ್ಷಿಣ ಭಾರತದಿಂದ ಮೊದಲ … Read more