”ಸಲೂನೆಂಬ ಶೋಕಿಯ ಸುಖಗಳು”: ಪ್ರಸಾದ್‌ ಕೆ.

”ಮುನ್ನೂರು ರೂಪಾಯಿ ಸಾರ್…”, ಅಂದಿದ್ದೆ ನಾನು. ಪರಿಚಿತ ಹಿರಿಯರೊಬ್ಬರು ನನ್ನ ಈ ಮಾತನ್ನು ಕೇಳಿ ನಿಜಕ್ಕೂ ಹೌಹಾರಿಬಿಟ್ಟಿದ್ದರು. ಅಂದು ನಾವು ಮಾತನಾಡುತ್ತಿದ್ದಿದ್ದು ಕ್ಷೌರದ ಬಗ್ಗೆ. ಊರಿನಲ್ಲಿ ನಲವತ್ತು-ಐವತ್ತು ರೂಪಾಯಿಗಳಿಗೆ ಮುಗಿದುಹೋಗುತ್ತಿದ್ದ ಹೇರ್ ಕಟ್ಟಿಂಗಿಗೆ ಅಷ್ಟೊಂದು ಹಣ ಸುರಿಯುವಂಥದ್ದೇನಿದೆ ಎನ್ನುವ ಅಚ್ಚರಿ ಅವರದ್ದು. ‘ಇವೆಲ್ಲ ಬೇಕಾ ನಿಂಗೆ’ ಎಂದು ಕಣ್ಣಲ್ಲೇ ನುಂಗುವಂತೆ ನನ್ನನ್ನು ನೋಡಿದರು. ಎಲ್ಲರಿಗೂ ಈಗ ಶೋಕಿಯೇ ಬದುಕಾಗಿಬಿಟ್ಟಿದೆ ಎಂದು ಬೈದೂಬಿಟ್ಟರು. ಬೈದಿದ್ದು ನನಗೋ ಅಥವಾ ಕ್ಷೌರ ಮಾಡಿಸಿದವನಿಗೋ ಗೊತ್ತಾಗಲಿಲ್ಲ. ಆದರೆ ಭೌತಿಕವಾಗಿ ನಾನೇ ಅಲ್ಲಿ ಇದ್ದಿದ್ದರ … Read more

ಧರ್ಮಸಂಕಟ: ಗಿರೀಶ ಜಕಾಪುರೆ

ಹಿಂದಿ ಮೂಲ – ಪ್ರೇಮಚಂದ ಕನ್ನಡಕ್ಕೆ – ಗಿರೀಶ ಜಕಾಪುರೆ 1. ‘ಪುರುಷರಲ್ಲಿ ಸ್ತ್ರೀಯರಲ್ಲಿ ಬಹಳ ವ್ಯತ್ಯಾಸವಿರುತ್ತದೆ. ನಿಮ್ಮ ಮನಸ್ಸು ಕನ್ನಡಿಯಂತೆ ಕಠಿಣವಾಗಿರುತ್ತದೆ, ಮತ್ತೆ ನಮ್ಮದು ಹೂವಿನಂತೆ ಮೃದು. ಹೂಗಳು ವಿರಹದ ಶಾಖ ತಾಳಲಾರವು’ ‘ಹರಳು ತಾಗಿದರೂ ಸಾಕು ಕನ್ನಡಿ ಚೂರಾಗುತ್ತದೆ. ಮೃದು ವಸ್ತುಗಳಲ್ಲಿ ಲೌಚಿಕತೆ ಇರುತ್ತದೆ’ ‘ಬಿಡು, ಮಾತಲ್ಲಿ ಮರಳು ಮಾಡಬೇಡ. ದಿನವಿಡೀ ನೀ ಬರುವ ದಾರಿ ನೋಡುತ್ತೇನೆ, ರಾತ್ರಿಯಿಡಿ ಗಡಿಯಾರದ ಮುಳ್ಳುಗಳನ್ನು. ಇಷ್ಟಾದ ಮೇಲೆ ಹೇಗೋ ಕಷ್ಟಪಟ್ಟು ನಿನ್ನ ದರ್ಶನವಾಗುತ್ತದೆ’ ‘ನಾನು ಸದಾಕಾಲ ನಿನ್ನನ್ನು … Read more

”ಸಂಬಂಧಗಳು ನಮಗೆಷ್ಟು ಮುಖ್ಯ?”: ಪೂಜ ಗುಜಾರನ್‌

ಸಂಬಂಧಗಳು ನಮಗೆಷ್ಟು ಮುಖ್ಯ? ಯಾವ ಸಂಬಂಧಗಳು ನಮ್ಮನ್ನು ತುಂಬಾ ಭಾವನಾತ್ಮಕವಾಗಿ ಕಾಡುತ್ತದೆ.? ಯಾವ ಸಂಬಂಧಗಳನ್ನು ನಾವು ಯಾವತ್ತು ಬಿಟ್ಟು ಹೋಗುವುದಿಲ್ಲ.?ಯಾರು ನಮ್ಮನ್ನು ಅತಿಯಾಗಿ ಕಾಡುತ್ತಾರೆ.? ಇಲ್ಲಿ ಸಂಬಂಧಗಳನ್ನು ಬೆಳೆಸಲು ಯಾವ ಮಾನದಂಡಗಳ ಅಗತ್ಯವಿದೆ.? ಪ್ರಶ್ನೆಗಳು ಮುಗಿಯಲಾರದಷ್ಟಿವೆ.. ಉತ್ತರಗಳನ್ನು ನಾವು ಹುಡುಕಬೇಕಷ್ಟೆ.. ನಮ್ಮ ಬದುಕಿನಲ್ಲಿ ಬರುವ ಸಂಬಂಧಗಳು ಅರಿತೋ ಅರಿಯದೆನೋ ನಮ್ಮನ್ನು ಗಾಢವಾಗಿ ತನ್ನ ಬಾಹುಗಳಲ್ಲಿ ಬಂಧಿಸಿರುತ್ತದೆ. ಮಾನವ ಸಂಬಂಧಗಳೆ ಹೀಗೆ ಹುಟ್ಟಿದ ಕೂಡಲೇ ಸಂಬಂಧಗಳ ಸಂಕೋಲೆಯೊಳಗೆ ಬಂಧಿಯಾಗಿರುತ್ತಾನೆ. ತನ್ನ ತಾಯಿ ಜೊತೆ ಶುರುವಾದ ಈ ಸಂಬಂಧ ಇನ್ನಷ್ಟು … Read more

ಬದಲಾಗುವ ಬಣ್ಣಗಳು (ಭಾಗ 3): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ – 5 – ಚೇತನ ವಿವಾಹದ ನಂತರ ಇನ್ನಷ್ಟು ವಿಚಲಿತನಾದ. ಇನ್ನಷ್ಟು ದ್ವಂದ್ವಕ್ಕೆ ಒಳಗಾದ ಮಾನಸಿಕವಾಗಿ ಕಾವೇರಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಪವಿತ್ರೆಯ ನೆನಪು ಅವನೆದೆಯಲ್ಲಿ ಬಿರುಗಾಳಿಯಾಗಿ ಬೀಸಿದಾಗ ಈತ ತರಗೆಲೆಯಂತಾಗಿ ಬಿಡುತ್ತಿದ್ದ. ತತ್ತರಿಸಿ ಹೋಗುತ್ತಿದ್ದ. ಮನದ ಯಾತನೆಯ ತೀವ್ರತೆ ಕಡಿಮೆಗೊಳಿಸಲು ಮತ್ತೇ ಮತ್ತೇ ಅವನು ಕುಡಿತಕ್ಕೆ ಶರಣಾಗುತ್ತಿದ್ದ. ಅದೇ ಅಮಲಿನಲ್ಲಿ ಎಲ್ಲ ಮನಸಿನ ಎಲ್ಲ ತಡೆಗೊಡೆಗಳು ದಾಟಿ ಮತ್ತೆ ಪವಿತ್ರೆಯ ಮನೆಯ ದಾರಿ ಹಿಡಿಯುತ್ತಿದ್ದ. ಪವಿತ್ರಳ ಮನೆ ಇವನಿಗೆ ಮಾನಸಿಕ ನೆಮ್ಮದಿಯ ಕೇಂದ್ರವಾಗಿತ್ತು. ಈತನ ಮದ್ವೆಯ … Read more

ಅಲಪಿಯ ಹೌಸ್ ಬೋಟ್ ಎಂಬ ಸ್ವರ್ಗದತುಣುಕು!: ಭಾರ್ಗವ ಎಚ್ ಕೆ

ಸಮುದ್ರದದಂಡೆಗೆ ಬೌಂಡರಿ ಗೆರೆಗಳಂತೆ ಕಾಣುವ ಕಬ್ಬಿಣದ ರೈಲು ಹಳಿಗಳು!. ಅದರ ಮೇಲೆ ಎಡೆಬಿಡದೆ ಅತ್ತಿಂದಿತ್ತ ಓಡಾಡುವ ಕೊಂಕಣ ರೈಲುಗಳು. ಆ ಹಳಿಯ ದಾರಿಯಲ್ಲೊಂದು ಅಲಪಿ ಎಂಬ ಕುಟ್ಟ ನಾಡು!. ರೈಲಿನಲ್ಲಿ ಪಯಣಿಸುವಾಗ ಒಂದು ದಿಕ್ಕಿನಲ್ಲಿ ಮೀನು ಹಿಡಿಯುವ ಬೋಟ್ ಗಳು ಕಣ್ಣಿಗೆ ಕಂಡರೆ, ಇನ್ನೊಂದು ದಿಕ್ಕಿನಲ್ಲಿ ವೈಭವದ ಹವಾನಿಯಂತ್ರಿತ ನಯನ ಮನೋಹರ ಹೌಸ್ ಬೋಟ್ ಗಳ ಇರುವೆ ಸಾಲು! ಹೆಂಡತಿ, ಮಗಳೊಂದಿಗೆ ಕುಟುಂಬ ಸಮೇತ ದೇವರ ನಾಡಿನ ಪ್ರಸಿದ್ಧ ಹೌಸ್ ಬೋಟ್ ಪ್ರವಾಸಿ ತಾಣವಾದ ಅಲಪಿ ಊರಿಗೆ … Read more

ನೆನಪುಗಳ ಮಾಲೀಕ………: ರಘು ಕ.ಲ.,

ಶಿಕ್ಷಣ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಪಡೆದರೆ ಬಹಳ ಉತ್ತಮ ಎಂಬುದು ಅನೇಕರ ಅಭಿಪ್ರಾಯ. ಏಕೆಂದರೆ ವಿಜ್ಞಾನ, ತಂತ್ರಜ್ಞಾನ, ಸೃಜನಶೀಲತೆ, ನೃತ್ಯ, ಸಂಗೀತ …… ಹೀಗೆ ಇನ್ನೂ ಹತ್ತಾರು ವಿಚಾರಗಳಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಬಹಳ ಹತ್ತಿರವಾದದ್ದು, ಅನುಕೂಲವಾದದ್ದು ನಗರ ಪ್ರದೇಶ ಎಂಬ ಹಂಬಲದಲ್ಲಿಯೋ, ಬೆಂಬಲದಲ್ಲಿಯೋ ಏನೋ ಗ್ರಾಮೀಣ ಪ್ರದೇಶದ ಕೆಲವರು ನಗರದೆಡೆಗೆ ಮೊರೆ ಹೋಗುತ್ತಿದ್ದಾರೆ. ಎಲ್ಲವೂ ಸಿಗುತ್ತದೆಂಬುದು ಅವರ ಕಲ್ಪನೆಯಷ್ಟೇ ಸರಿ. ಸರಿಯೋ? ತಪ್ಪೋ? ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ಅವರವರ ಮನಸ್ಸಿನಂತೆ ಅವರವರ … Read more

ಕೊಠಡಿ ಮೇಲ್ವಿಚಾರಣೆ ಎಂಬ ಗುಮ್ಮ…!: ಶೀಲಾ. ಗೌಡರ. ಬದಾಮಿ.

ಶೈಕ್ಷಣಿಕ ವರ್ಷ ಪ್ರಾರಂಭವಾದೊಡನೆ ಮೊದಲ ಸಭೆಯಲ್ಲೇ ಮುಖ್ಯಸ್ಥರು,”ಕಳೆದ ವರ್ಷ ಆದದ್ದಾಯ್ತು. ಈ ವರ್ಷ ಮಾತ್ರ ನಾವು 100/ ರಿಸಲ್ಟ ಮಾಡಬೇಕು.ಅದಕ್ಕಾಗಿ ಪರೀಕ್ಷೆ ಬಂದಾಗ ಗಡಿಬಿಡಿ ಮಾಡುವುದಕ್ಕಿಂತ ಈಗಿನಿಂದಲೇ ಗುರಿ ಸಾಧನೆಗೆ ಕಂಕಣಬದ್ದರಾಗಬೇಕು. “ ಎಂದು ಎಚ್ಚರಿಸುತ್ತಾರೆ. ಆಗಿನಿಂದಲೇ ಎಲ್ಲ ಶಿಕ್ಷಕರ, ಉಪನ್ಯಾಸಕರ ಎದೆ ಢವ….ಢವ…..ವಾರ್ಷಿಕ ಅಂದಾಜು,ಕ್ರಿಯಾಯೋಜನೆ ಸಿದ್ದಪಡಿಸಿ, ಡಿಸೆಂಬರ್ ಅಂತ್ಯಕ್ಕೆ ಸಿಲ್ಯಾಬಸ್ ಮುಗಿಸಿ, ಎರಡು ತಿಂಗಳು ರಿವಿಜನ್ ಮಾಡಬೇಕು ಎಂದು ಜೂನ್ ಒಂದರಿಂದಲೇ ಆನ್ ಯುವರ್ ಮಾರ್ಕ, ಗೆಟ್ ಸೆಟ್,ಗೋ……ಎಂದು ನಮ್ಮನ್ನು ರೇಸಿಗೆ ಬಿಟ್ಟು ಬಿಡುತ್ತಾರೆ. ಅದು … Read more

20ನೇ ಶತಮಾನ ಕಂಡ ಸಂತ ಶ್ರೇಷ್ಠ- ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್: ಶ್ರೀವಲ್ಲಭ ರಾ. ಕುಲಕರ್ಣಿ

ಭಾರತೀಯ ಸಮಾಜದ ರೂಢ ಮೂಲ ನಂಬಿಕೆಗಳ ಮೂಲ ಸ್ವರೂಪವನ್ನು ಪ್ರಶ್ನಿಸಿದ, ಅಲುಗಾಡಿಸಿದ ತೀಕ್ಷ್ಣ ವಿಚಾರವಾದಿ, 20ನೇ ಶತಮಾನದ ಭಾರತೀಯ ಮಹಾನ್ ಚಿಂತಕ ದ್ರಾವಿಡ ನಾಡಿನ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್ 1879 ಸೆಪ್ಟೆಂಬರ್ 17ರಂದು ಮದ್ರಾಸ್ ರಾಜ್ಯದ ಕೊಯಿಮತ್ತೂರ್ ಜಿಲ್ಲೆಯ ಈರೋಡು ಎಂಬಲ್ಲಿ ಹುಟ್ಟಿದರು, ತಮ್ಮ ವಿಚಾರಗಳಿಗೆ ಚಳುವಳಿಯ ಸ್ಪರ್ಶ ನೀಡಿದ ಅವರ ಬದುಕು ಮತ್ತು ಚಿಂತನೆಗಳು ದ್ರಾವಿಡ ಅಸ್ಮಿತೆಯೊಂದನ್ನು ಹುಟ್ಟು ಹಾಕಿ, ತಮಿಳು ನಾಡಿನಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಪಸರಿಸುವಂತೆ ಮಾಡಿದ್ದು ಇತಿಹಾಸ. ಪೆರಿಯಾರ್ ರಾಮಸ್ವಾಮಿಯವರ … Read more

ಯಾವುದೇ ಗುಣಾಕಾರ 5 ಸೆಕೆಂಡಿನಲ್ಲಿ ಮಾಡಿ: ಪ್ರವೀಣ್‌ ಕೆ.

https://www.youtube.com/watch?v=Y0frHVjYAEo  ಈ ವಿಡಿಯೋದಲ್ಲಿ ಮನಸ್ಸಿನಲ್ಲಿಯೇ ಹೇಗೆ ಗುಣಾಕಾರಗಳನ್ನು ಮಾಡಬಹುದು ಎಂಬುದನ್ನು ತಿಳಿಸಲಾಗಿದೆ. ಇದನ್ನು ಪ್ರತಿಯೊಂದೂ ಲೆಕ್ಕದಲ್ಲಿ ಉಪಯೋಗಿಸಿದರೆ ನಿಮ್ಮ ಗಣಿತದ ವೇಗ ಹೆಚ್ಚುತ್ತದೆ. ಪ್ರಾಕ್ಟೀಸ್ ಮಾಡಲು ಇಲ್ಲಿ ಒತ್ತಿ : Practice Question 1  

ಅಂತರ ರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಮಹೇಶ್: ಎಂ.ಎನ್.ಸುಂದರ ರಾಜ್

ಪ್ರಕೃತಿ ಛಾಯಾಚಿತ್ರಗಳು ಕೇವಲ ಬಣ್ಣಬಣ್ಣದ ಚಿತ್ರಗಳಲ್ಲ, ಪ್ರಕೃತಿಯಲ್ಲಿ ಮೂಡಿಬಂದ ಸುಂದರ ಕಲಾಕೃತಿಗಳು. ಅವುಗಳನ್ನು ಕೆಮರಾದಲ್ಲಿ ಸೆರೆಹಿಡಿದು ಕಣ್ಮನಗಳಿಗೆ ಮುದನೀಡುವಂತೆ ಸಮಾಜಕ್ಕೆ ನೀಡಿರುವುದರ ಹಿಂದೆ, ಅಪಾರ ಪರಿಶ್ರಮ ಮತ್ತು ತನ್ಮಯತೆಯಿದೆ. ಅದೊಂದು ತಪಸ್ಸು. ನಾವು ಆ ಚಿತ್ರಗಳನ್ನು ನೋಡಿ ಚೆನ್ನಾಗಿದೆ ಎಂದು ಒಂದೇ ಮಾತಿನಲ್ಲಿ ಹೇಳುತ್ತೇವೆ. ಆದರೆ ಅಂತಹ ಫೋಟೋ ತೆಗೆಯಲು ಪಟ್ಟ ಪಾಡು, ತಿರುಗಿದ ಕಾಡು ಮೇಡುಗಳು, ಜೀವದ ಹಂಗು ತೊರೆದು ವನ್ಯ ಜೀವಿಗಳ ಅಪಾಯವನ್ನೂ ಲೆಕ್ಕಿಸದೆ ಒಂದು ಉತ್ತಮ ಚಿತ್ರಕ್ಕೆ ದಿನಗಟ್ಟಲೆ ಆಹಾರ ನಿದ್ರೆಯಿಲ್ಲದೆ ಕಾದು … Read more

ಕೃಷ್ಣಂ ವಂದೇ ಜಗದ್ಗುರುಂ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ರಾಮಾಯಣ ಮಹಾಭಾರತಗಳು ಭಾರತ ದೇಶದ ಮಹಾಕಾವ್ಯಗಳು, ಹಾಗೇ ಅವು ಇತಿಹಾಸ ಅಂತನೂ ಸಾಕ್ಷಸಮೇತ ಇತಿಹಾಸಕಾರರು ಹೇಳುತ್ತಿದ್ದಾರೆ. ‘ಮಹಾಭಾರತ’ ಪ್ರಪಂಚದಲ್ಲೇ ಅತಿ ದೊಡ್ಡ ಮಹಾಕಾವ್ಯ. ಇದರ ಕತೃ ವ್ಯಾಸ. ಮಹಾಭಾರತದಲ್ಲಿ ಭೀಷ್ಮ ಪರ್ವ ಬಹಳ ಮುಖ್ಯವಾದುದು. ಏಕೆಂದರೆ ಭೀಷ್ಮಪರ್ವದಲ್ಲೇ ಕುರುಕ್ಷೇತ್ರ ಯುದ್ದ ಆರಂಭವಾಗುವ ಕಥನವಿರುವುದು, ಕೃಷ್ಣಾರ್ಜುನರ ಸಂವಾದ ರೂಪದಲ್ಲಿರುವ ಭಗವದ್ಗೀತೆ ಇರುವುದು. ಅರ್ಜುನನ ವಿಷಾದ ಭಾವದಿಂದ ಆರಂಭವಾಗುವ ಭಗವದ್ಗೀತೆ ಶ್ರೀಕೃಷ್ಣ ಅರ್ಜುನನಿಗೆ ಅನುಗ್ರಹಿಸುವ ಪ್ರಸಾದದೊಂದಿಗೆ ಮುಗಿಯುತ್ತದೆ. ವೇದಗಳ ಸಾರ ಉಪನಿಷತ್ತುಗಳು, ಉಪನಿಷತ್ತುಗಳ ಸಾರಸರ್ವಸ್ವ ಭಗವದ್ಗೀತೆ ಅಂತ ಹೇಳುವರು. ಮಹಾಭಾರತದಲ್ಲಿ … Read more

ಪಂಜು ಕಾವ್ಯಧಾರೆ

೧. *ಒಲವಿನ ಕನಸು * ಕಂಡಿರದ ಮೊಗದ ಮೂರ್ತಿಯನು ಕೆತ್ತಿ… ತನ್ನಿಷ್ಟದ ಭಾವಗಳ ಅದರೆದೆಗೆ ಮೆತ್ತಿ… ಕಣ್ಣಕಾಂತಿಯಲಿ ಸವಿದು ಒಲವ ಸೊಬಗನು… ನೆನಪು-ಕನಸುಗಳ ಜಂಟಿ ಓಲಗದಿ… ಸಾಕ್ಷ್ಯ ಬರೆದಿತ್ತು ಚಂದ್ರಮನ ಕಾಂತಿ… ೨. *ತೆರೆದ ಪುಸ್ತಕದಂತ ಬದುಕು* ತೆರೆದ ಪುಸ್ತಕದಂತ ಬದುಕು ಓದುಗರು ಹಲವರು ಹಲವು ತೆರನವರು ತೆಗಳುವವರು, ಹೊಗಳುವವರು ಓದಿಯು ಓದದಂತಿರುವವರು ಓದದೆಯು ಜರೆಯುವವರು ಓದದೆಯು ಹೊಗಳುವವರು ಎಲ್ಲರ ಬಾಯಿಗೆ ಆಹಾರವಾಗೋ ಬಾಳು ತೆರೆದ ಪುಸ್ತಕದಂತ ಬಾಳು ಎನ್ನ ನೋವುಗಳ ಜ್ವಾಲೆಯಲ್ಲಿ ಚಳಿ ಕಾಯಿಸಿಕೊಂಡವರೆಷ್ಟೋ ಎನ್ನ … Read more

ಯೂಟ್ಯೂಬ್‌ ನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿ

ಆತ್ಮೀಯರೆ, ನನಗೆ ಬಹಳ ಖುಷಿ ಎನಿಸುತ್ತಿದೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಬ್ಯಾಂಕ್ ಪರೀಕ್ಷೆ ತರಬೇತಿಯನ್ನು ಯೂಟ್ಯೂಬ್ ಮುಖಾಂತರ ಪ್ರಾರಂಭಿಸಿದ್ದೇನೆ. ನೀವೆಲ್ಲ ಕೈಜೋಡಿಸುವಿರಿ ಎಂದು ನಿರೀಕ್ಷಿಸುತ್ತೇನೆ. ನಾನು ಭಾರತೀಯ ಸ್ಟೇಟ್ ಬ್ಯಾಂಕಿನ ಸೇವೆಗೆ ರಾಜೀನಾಮೆ ನೀಡಿ ಸ್ಪರ್ಧಾಕಾಂಕ್ಷಿಗಳಿಗೆ ಬ್ಯಾಂಕ್ ಪರೀಕ್ಷೆಯ ತರಬೇತಿಯನ್ನು ಪ್ರಾರಂಭಿಸಿದೆ. ಬೆಳಗಾವಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಬಂದು ತರಬೇತಿ ಪಡೆದು ಕೆಲವರು ಯಶಸ್ಸನ್ನೂ ಗಳಿಸಿದರು. ಆದರೆ ನಾನು ಕ್ಲಾಸರೂಮಿನಲ್ಲಿ ಕಲಿಸಲು ಸಾಧ್ಯವಾಗುತ್ತಿರುವುದು ಕೇವಲ ನಲವತ್ತು ಐವತ್ತು ಜನರಿಗೆ ಮಾತ್ರ. ಅವಶ್ಯವಿದ್ದವರಿಗೆಲ್ಲ ನನ್ನಲ್ಲಿರುವ … Read more

ಕಡಿದೊಗೆದ ಬಳ್ಳಿಯು ಕುಡಿಯೊಡೆಯುವಂತೆ: ಎಸ್. ಜಿ. ಸೀತಾರಾಮ್, ಮೈಸೂರು

“ತ್ಯಾಜ್ಯ ವಸ್ತು” ವಿಲೇವಾರಿಯ ಬಗ್ಗೆಯೇನೋ ಇಂದು ಎಲ್ಲೆಡೆ ಬಿಸಿಬಿಸಿ ಚರ್ಚೆಗಳಾಗುತ್ತಿವೆ; ಆದರೆ, ತಮ್ಮ ಕುಟುಂಬ, ಬಂಧು-ಬಳಗ, ಸಮುದಾಯ, ಯಾವುದಕ್ಕೂ ಬೇಡವಾದ “ತ್ಯಾಜ್ಯ ವ್ಯಕ್ತಿ”ಗಳ ಸ್ಥಿತಿಗತಿಯ ಬಗ್ಗೆ ‘ಕ್ಯಾರೇ?’ ಎನ್ನುವ ಮಂದಿ ಎಷ್ಟಿದ್ದಾರು? ಹಾಗೆನ್ನುವವರಲ್ಲೂ, ಈ ಪರಿಸ್ಥಿತಿಗೆ ಏನಾದರೊಂದು ಪರಿಹಾರ ಹೊಂದಿಸಬೇಕೆಂದು ನಿಜವಾಗಿ ‘ಕೇರ್’ ಮಾಡುವವರು ಅದೆಷ್ಟು ಇದ್ದಾರು? ಇಂಥ ದಾರುಣ ಅವಸ್ಥೆಯ ನಡುವೆ, ಸಮಾಜದ ಕುಪ್ಪೆಯಲ್ಲಿ ಕಾಲ ತೇಯುತ್ತ, ಬದುಕಾಟದ ಕೊಟ್ಟಕೊನೆಗೆ ಹೇಗೋ ‘ಜೋತುಬಿದ್ದಿರುವ’ ಸ್ತ್ರೀಯರಿಗೆ ಅನ್ನ, ಆರೈಕೆ, ನೆರಳು, ನೆಮ್ಮದಿ ನೀಡುವ ಸಲುವಾಗಿ, ವಿದ್ಯಾವಂತ, ದಯಾಶೀಲ, … Read more

ಗುಲಾಮಿ: ಗಿರೀಶ ಜಕಾಪುರೆ

ಮೂಲ : ಖಲೀಲ ಜಿಬ್ರಾನ್ ಕನ್ನಡಕ್ಕೆ : ಗಿರೀಶ ಜಕಾಪುರೆ ಮಾನವರು ಬದುಕಿನ ಗುಲಾಮರು. ಜೀವನದ ಜೀತದಾಳುಗಳು. ಈ ಬದುಕು ಅವರ ಹಗಲುಗಳಲ್ಲಿ ದುಃಖ ಮತ್ತು ಕ್ಲೇಶದ ಬಿರುಗಾಳಿಯಾಗಿ ಬೀಸುತ್ತದೆ, ರಾತ್ರಿಗಳಲ್ಲಿ ಕಣ್ಣೀರು ಮತ್ತು ಸಂತಾಪದ ಮಹಾಪೂರವಾಗಿ ನುಗ್ಗುತ್ತದೆ. ಏಳು ಸಾವಿರ ವರ್ಷಗಳಾದವು ನಾನು ಜನಿಸಿ. ಅಂದಿನಿಂದಲೂ ನಾನು ತಮ್ಮ ಕೈಕಾಲುಗಳಿಗೆ ಸುತ್ತಿದ ಭಾರದ ಬೇಡಿಗಳನ್ನು ಎಳೆಯುತ್ತ ಹೆಜ್ಜೆ ಹಾಕುತ್ತಿರುವ ಬದುಕಿನ ಗುಲಾಮರನ್ನು ಕಾಣುತ್ತಿದ್ದೇನೆ. ನಾನು ಭೂಮಿಯ ಪೂರ್ವಪಶ್ಚಿಮಗಳಲ್ಲಿ ಸುತ್ತಾಡಿದ್ದೇನೆ, ಜೀವನದ ನೆರಳು ಬೆಳಕುಗಳಲ್ಲಿ ದಿಕ್ಕೇಡಿಯಾಗಿ ಅಲೆದಿದ್ದೇನೆ. … Read more

ಬದಲಾಗುವ ಬಣ್ಣಗಳು (ಭಾಗ 2): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ  – 3 – ತಿಂಗಳ ಬಳಿಕ ಪ್ರೇಮಾ ಮರಳಿ ಬಂದ ಸುದ್ದಿ ಕತ್ತಲೆ ಕವಿದ ಚೇತನನ ಮನಸ್ಸಿಗೆ ಸುರ್ಯೋದಯವಾಗಿತ್ತು. ತಿಂಗಳಿಂದ ಶೇವ್ ಕಾಣದ ಮುಖದ ತುಂಬ ಗಡ್ಡ ಮೀಸೆ… ಬಾಚನಿಗೆ ಕಾಣದ ತಲೆ… ಕೆದರಿದ ಕೂದಲು… ಮೈಮೇಲೆ ಕೊಳೆಯಾದ ಬಟ್ಟೆಗಳು… ಹಳ್ಳಿ ಹುಂಬನಂತೆ ಹುಚ್ಚನಂತೆ ತೋರುತ್ತಿದ್ದ. ಹಾಗೇ ಸೀದಾ ಪ್ರೇಮಾಳ ಮನೆಯತ್ತ ಹೆಜ್ಜೆ ಹಾಕಿದ್ದ. ಡೋರ ಮುಂದೆ ನಿಂತು ಬೆಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೇಮಾಳ ತಂದೆ ಬಾಗಿಲು ತೆರೆದು ಚೇತನನ ಸ್ಥಿತಿ ನೋಡಿ ಸ್ವಲ್ಪ ಗಾಬರಿಯಾದರು. ಏಕೆಂದರೆ ಮೊದಲಿನಿಂದಲೂ ಚೇತನ ಪ್ರೇಮಾಳ … Read more

ನಾನು ಮತ್ತೆ ನಾನಾದದ್ದು….!: ಶೀಲಾ. ಗೌಡರ

ಆಹಾ….! ನಾನೂ ಸಾಮಾನ್ಯ ಗೃಹಿಣಿಯರಂತೆ ಸುಮ್ನೆ ಮನೆ ನಿಭಾಯಿಸಿಕೊಂಡು, ಮನೇಲಿ ಹಾಯಾಗಿ ಇರಬಹುದಿತ್ತು, ಅಂತ ಎಷ್ಟೋಸಲ ಅನಿಸಿದ್ದುಂಟು. ಕೆಲಸ ಬೇಡ ಅಂತ ಬಿಡುವಂತಿಲ್ಲ…! ಸರಕಾರಿ ಕೆಲಸ…! ಮೇಲಾಗಿ ಶಿಕ್ಷಕ ವೃತ್ತಿ…. ಎಷ್ಟೊಂದು ಸುರಕ್ಷಿತ, ನೆಮ್ಮದಿ. ಆದರೆ ಕೆಲವೊಮ್ಮೆ ಮನೆ, ಶಾಲೆ ಎರಡನ್ನೂ ನಿಭಾಯಿಸುವಾಗ ಉಶ್ಯಪ್ಪ ಅಂತ ಬಸವಳಿದು, ಕಾಲಿಗೆ ಗಾಲಿ ಕಟ್ಟಿ ಇಪ್ಪತ್ತು ವರ್ಷಗಳಿಂದಲೂ ಬಸ್ಸಿನ ಹಿಂದೆ ಓಡುವಾಗ, ಏನೋ ಟೆನ್ ಶನ್ ನಲ್ಲಿ ಮನೆಯವರ ಹತ್ರ ಬಯ್ಸಿಕೊಡಾಗ, ಮಕ್ಕಳ ಓದಿನ ಬಗ್ಗೆ-ಊಟದ ಬಗ್ಗೆ-ಆರೋಗ್ಯದ ಬಗ್ಗೆ ಸಮಸ್ಯೆ … Read more

ಈ ಕ್ಷಣದಿಂದಲೇ ನೆಪಗಳಿಗೆಲ್ಲ ಗುಡ್ ಬೈ. . . . : ಆಶಾ ಹೆಗಡೆ

ಇನ್ನೂ ನೆನಪಿದೆ ನನ್ನ ಬಗ್ಗೆ ಗೆಳೆಯ ಗೆಳತಿಯರು ಆಡುತ್ತಿದ್ದ ಮಾತುಗಳು. . . ”ಹೇ, ಎಷ್ಟು ಚೆನ್ನಾಗಿ ಕತೆ, ಕವನ ಬರೀತಿಯಾ” “ಓ drawing ಕೂಡ ಮಾಡ್ತಿಯಾ?” “ಅರೆ ಎಷ್ಟು ಚೆನ್ನಾಗಿ ಹಾಡು ಹೇಳತೀಯಾ”, ”ಇವತ್ತಿನ speech ಎಷ್ಟು ಚೆನ್ನಾಗಿತ್ತು”, ”ನೀನ್ ಬಿಡು all rounder “,,, ಇವತ್ತಿಗೆ ಈ ಹೊಗಳಿಕೆ ಬರೀ ಹಿತವಾಗಿ ನೋಯಿಸುವ ನೆನಪುಗಳು ಮಾತ್ರ. ಹವ್ಯಾಸಕ್ಕೆ ಒರೆ ಹಚ್ಚಿ, ಅದ ಪ್ರತಿಭೆಯಾಗಿ ಪರಿವರ್ತಿಸಿ ಎಡಬಿಡದೆ ಅದೇ ದಾರಿಯಲಿ ಮುನ್ನಡೆದು ಏನಾದರೊಂದು ಸಾದಿಸಿದ್ದು ಮಾತ್ರ … Read more

ಒಂದು ಹಳ್ಳಿ ಜನರ ಉಳಿವಿನ ಹೋರಾಟ ಜಗದ್ವಿಖ್ಯಾತ ಪರಿಸರದ ಹೋರಾಟವಾಯಿತೆ ..!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಗಿಡ ಮರ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ತನ್ನಂತೆ ಪ್ರಕೃತಿಯ ಮಮತೆಯ ಮಕ್ಕಳು ಅವುಗಳಿಗೂ ಮಾನವನಂತೆ ಬದುಕುವ ಹಕ್ಕೂ, ಸ್ವಾತಂತ್ರ್ಯವೂ ಇದೆ ಎಂದು ಮಾನವ ಭಾವಿಸದೆ ಅವುಗಳನ್ನು ಮನಬಂದಂತೆ ತನಗೆ ಅನುಕೂಲವಾಗುವಂತೆ ದುಡಿಸಿಕೊಳ್ಳುತ್ತಲು ಹಿಂಸಿಸುತ್ತಲು ಕೊಲ್ಲುತ್ತಲೂ ಇದ್ದಾನೆ. ಇದು ಸರಿಯಲ್ಲ! ಇತ್ತೀಚೆಗೆ ಪ್ರಕೃತಿಯ ಉಳಿವಿನಲ್ಲಿ, ಬದುಕಿನಲ್ಲಿ, ನಲಿವಿನಲ್ಲಿ ಮಾನವನ ನಗು ಅಡಗಿದೆ! ಪ್ರಕೃತಿಯ ಗಿಡ ಮರ ಪ್ರಾಣಿ ಪಕ್ಷಿ ಜಲಚರಗಳನ್ನೂ ಮಾನವನ ಬದುಕು ಅವಲಂಬಿಸಿದೆ! ಅದರ ನಾಶ ಮಾನವನ ಸರ್ವನಾಶ! ಎಂದು ತಿಳಿದಾಗಿನಿಂದ ಪ್ರಕೃತಿಯನ್ನು ಅದನ್ನು ಆಶ್ರಯಿಸಿರುವ … Read more

ಪರಿವರ್ತನೆ ನನ್ನಿಂದಲೇ . . . . .: ಜಯಲಕ್ಷ್ಮಿ ಕೆ. , ಮಡಿಕೇರಿ

” ನಿನ್ನ ಮಗನಿಗೆ ಎಷ್ಟು ಪರ್ಸೆಂಟು ಬಂತೂ . . ? 89% ?? ಅಯ್ಯೋ . . . ಇನ್ನು ಸ್ವಲ್ಪ ಓದಿದ್ದಿದ್ದರೆ 9ಂ% ಬರುತ್ತಿತ್ತು , ಹೋಗ್ಲಿ ಬಿಡು . . . ಇನ್ನೇನ್ ಮಾಡೋಕಾಗುತ್ತೆ . ನನ್ ಮಗಳಿಗೆ ಓದಿಸಿ ಓದಿಸಿ 98% ತೆಗೆಸೋ ಹೊತ್ತಿಗೆ ನಂಗೆ ಸಾಕಾಗಿ ಹೋಗಿತ್ತು. ಅಂದ ಹಾಗೆ ನಿನ್ನ ತಂಗಿ ಮಗಳೂ ಪಿ ಯು ಸಿ . . ಅಲ್ವಾ ? ಅವಳೆಷ್ಟು ಮಾರ್ಕ್ಸ್ ತಕೊಂಡಳು ??” … Read more