editor
ಪಂಜು ಕಾವ್ಯಧಾರೆ
೧. ಕೂರೂಪಿ……. ದಾನ ಪಡೆದೆ ಜೀವವ, ನನ್ನ ಶಿಲ್ಪಿ ನಾನಲ್ಲ… ಕರಿ ಬೆಕ್ಕೆಂದು ತಳ್ಳದಿರಿ, ನಾ ನಡೆದ ಹಾದಿ ಅಪಶಕುನವಲ್ಲ… ವರ್ಣವಿರಬೊಹುದೇನೋ ಕಡುಗಪ್ಪು, ಕರಿ ಬಂಡೆಯಂತೆ ನನ್ನ ಮನಸಿಲ್ಲ…. ತೊಗಲ ಬಣ್ಣ ಕಪ್ಪಾದ ಮಾತ್ರಕ್ಕೆ , ನಾ ಬರೆದ ಪದಗಳು ಕವನಗಳಾಗಲಿಲ್ಲ… ನನ್ನ ಭಾವನೆಗಳಿಗೂ ಮಳೆಬಿಲ್ಲಿನ ರಂಗಿದೆ, ಹಾಲ್ಗೆನ್ನೆಯವಳ/ವನ ಪದ್ಯದ ಮರೆಯಲ್ಲಿ ನಿಮಗದು ಕಾಣಲಿಲ್ಲ… ಗೀಚಿದಷ್ಟೂ ಕುಳಿತಿದೆ ಮೂಲೆಯಲ್ಲಿ ಸಾಲುಗಳೆಲ್ಲವು, ರೂಪವಂತರ ಹಸಿ ಕಾಳುಗಳೂ ನಿಮಗೆ ಬೆಂದಂತೆ,ನಾ ಬರೆದುದಕ್ಕೆ ಮಾತ್ರ ಪಕ್ವತೆಯಿಲ್ಲ… ಸಹಿಸುವೆ ಇಂದೂ ಎಂದೂ ಕೊನೆವರೆಗೂ, … Read more
ಜಾಣಸುದ್ದಿ 2: ಕೊಳ್ಳೇಗಾಲ ಶರ್ಮ, ಮಂಜುನಾಥ ಕೊಳ್ಳೇಗಾಲ
ಈ ವಾರದ ಸಂಚಿಕೆಯಲ್ಲಿ ಮಂಜುನಾಥ ಕೊಳ್ಳೇಗಾಲರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more
ಹಸಿದವರು: ಪ್ರವೀಣಕುಮಾರ್. ಗೋಣಿ
ಒಲೆಯ ಮೇಲೆ ಇಟ್ಟ ಅನ್ನ ಉಕ್ಕಿ ಗಂಜಿ ಎಲ್ಲ ಪಾತೆಲಿಯ ಮೈತುಂಬ ಇಳಿದು ಉರಿಯುತ್ತಿದ್ದ ಬೆಂಕಿಯನ್ನ ಚರ ಚರನೇ ಆರಿಸುತ್ತಲಿತ್ತು. ಮಿಣುಕು ದೀಪದ ಮುಂದೆ ಓದುತ್ತ ಕುಳಿತಿದ್ದ ಮಗನನ್ನೇ ಬೆರಗು ಕಣ್ಣಿಂದ ನೋಡುತ್ತಾ ಕುಳಿತಿದ್ದ ಯಲ್ಲಿ ಎದ್ದು ಓಡಿ ಹೋಗಿ ಪಾತ್ರೆಯ ಮೇಲಿನ ಮುಚ್ಚಳಿಕೆಯನ್ನ ಆಚೆ ನೂಕಿದಳು. ಏಳು ಮಗಾ ವೇಳ್ಯಾ ಬಾಳ್ ಆಯ್ತು ಅನ್ನಾನು ಆಗೆದೆ ಉಂಡು ಒದ್ತಾ ಕೂಡುವೆಂತೆ ಅಂತಾ ರಾತ್ರಿ ಊಟಕ್ಕೆ ಗಂಗಾಳ ಇಟ್ಲು. ತೇಲಿ ಬರುತ್ತಿದ್ದ ನಿದ್ದೆಯನ್ನ ಸರಿಸಿ ಪರಮ ಚಕ್ಕಳುಮುಕ್ಕಳು … Read more
ಸಾಫ್ಟ್ ವೇರ್ ಹೆಂಡತಿಯ ನೋವು ನಲಿವು: ವೇದಾವತಿ ಹೆಚ್. ಎಸ್.
ಮದುವೆಯಾಗಿ ಇಪ್ಪತ್ತು ವರ್ಷಗಳು ಕಳೆದು ಹೋದವು. ಇಪ್ಪತ್ತು ವರ್ಷಗಳಲ್ಲಿ ಸಂತೋಷ ದುಃಖ ಎರಡೂ ಹೇಗೆ ಬಂದವು ಹಾಗೆ ಕಳೆದು ಹೋದವು. ಹಳೆಯ ದಿನ ಪುನಃ ಮರಳಿ ಬರುತ್ತಿದ್ದರೆ…ಜೀವನದಲ್ಲಿ ತಪ್ಪುಗಳನ್ನು ತಿದ್ದಿ ಇನ್ನೂ ಚನ್ನಾಗಿ ಬದುಕಿನ ಸಂತೋಷ ಅನುಭವಿಸಬಹುದಿತ್ತು. ದೇವರು ಎಲ್ಲಾರಿಗೂ ಸುಖ ಸಂತೋಷ ಕೊಟ್ಟ ಹಾಗೆ ತನಗೂ ಸಹ ಕೊಟ್ಟಿದ್ದಾನೆ. ತನ್ನ ಕಷ್ಟ ಬೇರೆಯವರ ಕಷ್ಟಕ್ಕಿಂತ ಬೇರೆ ರೀತಿಯಲ್ಲಿ ಇರಬಹುದು ಅಷ್ಟೆ. ದೇವಿಕಗೆ ಹಳೆಯ ದಿನಗಳ ನೆನಪುಗಳು ತುಂಬಾನೆ ಮನಸ್ಸಿಗೆ ಬರುತ್ತಿದ್ದವು. … Read more
ಸೀಕ್ರೆಟ್ ಡೈರಿ: ಪ್ರಸಾದ್ ಕೆ.
ಕೊಡಚಾದ್ರಿಯ ಎತ್ತರ. ತಣ್ಣನೆ ಗಾಳಿ. ಹಾಗೆ ಸುಮ್ಮನೆ ತಲೆಯ ಒಂದಿಷ್ಟು ಮೇಲಿನಿಂದ ಹಾದುಹೋಗುತ್ತಿರುವ ಮೋಡಗಳ ಚಪ್ಪರ. ಇನ್ನೇನು ಒಂದು ಲಾಗ ಹಾಕಿದರೆ ಹಿಡಿಯಷ್ಟು ಮೋಡವನ್ನು ಬಾಚಿ ಜೇಬಿನಲ್ಲಿಡಬಹುದು ಎಂಬಂತೆ. ಮುಳುಗುತ್ತಿದ್ದ ಸೂರ್ಯ ಕಿತ್ತಳೆಯಂತೆ, ಕೆಂಡದ ಪಾಕದಲ್ಲದ್ದಿದ ನಾಣ್ಯದಂತೆ ಕಾಣುತ್ತಿದ್ದ. ಆದರೆ ಅವನ ವೃತ್ತಾಕಾರದ ಅಂಚುಗಳೋ ಕೈವಾರದಿಂದ ವೃತ್ತ ಕೊರೆದಷ್ಟು ಹರಿತ, ಅಷ್ಟು ಪರಿಪೂರ್ಣತೆ. ಅಷ್ಟು ಎತ್ತರದಲ್ಲಿ ಅವರಿಬ್ಬರೂ ಅಂದು ಇದ್ದರು. ಅವನು ಮತ್ತು ಅವಳು. ಕಳೆದೆರಡು ದಿನಗಳಿಂದ ಪರ್ವತವನ್ನು ಹತ್ತಿ, ಅಲ್ಲಲ್ಲಿ ನಿಂತು, ಅಲ್ಲಿಲ್ಲಿ ನಿದ್ದೆ ಹೊಡೆದು … Read more
ಮಹಾವಲಸೆ: ಪ್ರಶಸ್ತಿ
ಚಳಿಗಾಲ ಬಂತಂದ್ರೆ ಮನೆಯಿಂದ ಹೊರಗೆ ಹೊರಡೋಕೆ ಮನಸ್ಸಾಗಲ್ಲ. ಹೊರಗಡೆ ಚುಮುಚುಮು ಚಳಿ ಕೊರಿತಾ ಇರುವಾಗ ಮನೆಯೊಳಗೆ ಬೆಚ್ಚಗೆ ಹೊದ್ದು ಕೂತು ಬಿಸಿ ಬಿಸಿ ಬಜ್ಜಿಯೋ, ಬೋಂಡಾವೋ ತಿನ್ನುತ್ತಾ ಚಹಾ ಹೀರೋ ಸವಿಯಿದ್ಯಲ್ಲಾ ? ಆಹಾ. ಬಾಳೇಕಾಯಿ ಚಿಪ್ಸೋ, ಹಲಸಿನ ಕಾಯಿ ಚಿಪ್ಸೋ ಸಿಕ್ಕಿಬಿಟ್ಟರೆ ಅದೇ ಸ್ವರ್ಗ. ನಮ್ಮಲ್ಲಿನ ಚಳಿಯೆಂದರೆ ಎಷ್ಟಿದ್ದೀತು ? ಅಬ್ಬಬ್ಬಾ ಅಂದರೆ ಹದಿನೈದು ಡಿಗ್ರಿಯವರೆಗೆ ಇಳಿಯಬಹುದೇನೋ ? ಆದರೆ ಆ ಚಳಿ ಹಾಗೇ ಹತ್ತಕ್ಕಿಂತಲೂ ಕಡಿಮೆಯಾಗುತ್ತಾ ಹೋದರೆ ? ರಾತ್ರಿ ಹೋಗಲಿ, ಹಗಲಲ್ಲೂ … Read more
ದೇವರಂಥವರಿವರು: ಪ್ರೇಮಾ ಟಿ ಎಮ್ ಆರ್
"ನೀನು ದೇವರನ್ನು ನೋಡಿದ್ದೀಯಾ?" ಮುಸ್ಸಂಜೆ ಜಗುಲಿ ಕಟ್ಟೆಮೇಲೆ ಕೂತು ಹರಟುವಾಗೆಲ್ಲ ಈ ಥರ ತರ್ಲೆ ಪ್ರಶ್ನೆಗಳನ್ನು ಎಸೆದು ನನ್ನೊಳಗಿನ ಗಡಿಬಿಡಿಯನ್ನ ನೋಡುತ್ತ ಕೂಡ್ರುವದು ಗೆಳತಿ ವೀಣಾಳ ಅಭ್ಯಾಸ. ನಾನು ತಡಮಾಡದೇ ಹೂಂ ಎಂದೆ. ನನ್ನ ಹೂಂ ಎಂಬ ಉತ್ತರಕ್ಕೆ ನಾನೇ ಗಲಿಬಿಲಗೊಂಡಿದ್ದೆ. ನನ್ನ ಹೂಂ ಗೆ ಉತ್ತರ ಹುಡುಕುತ್ತ ನನ್ನೊಳಗೆ ನಾನೇ ಹಿಮ್ಮುಖವಾದೆ. ಈಗ ನಾನೋಡಿದ ದೇವರನ್ನು ಹುಡುಕಬೇಕಿತ್ತು ನನ್ನೊಳಗೆ. ಕೆಲ ತಿಂಗಳುಗಳ ಹಿಂದೆ ಒಂದು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಹೋಗಿದ್ದೆ. ಪ್ರತಿಷ್ಠಿತ ಶಿಕ್ಷಣಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ. … Read more
ಹಿಮಾಲಯವೆಂಬ ಸ್ವರ್ಗ (ಭಾಗ 9): ವೃಂದಾ ಸಂಗಮ್
ಇಲ್ಲಿಯವರೆಗೆ ಮಥುರ ಶ್ರೀಕೃಷ್ಣನ ಜನ್ಮಸ್ಥಾನ. ಈ ಪ್ರದೇಶವನ್ನು ಬ್ರಜ್‌ಭೂಮಿ ಎಂದು ಕರೆಯುತ್ತಾರೆ. ಶ್ರೀಕೃಷ್ಣನ ಕಥೆಗಳು ಹಾಗು ಸ್ಥಳ ಪುರಾಣಗಳ ಬಗ್ಗೆಯೂ ನಾನೇನೇ ಹೇಳಿದರು ಅದು ಸಂಪೂರ್ಣವಾಗಲು ಸಾಧ್ಯವಿಲ್ಲ. ಮನುವಿನ ಮೊಮ್ಮಗ ಧ್ರುವ ತನ್ನ ತಾಯಿಯ ಸವತಿ ಸುರುಚಿ ಕೊಡುತ್ತಿದ್ದ ಹಿಂಸೆ ಅನುಭವಿಸುತ್ತಿದ್ದಾಗ ನಾರದರ ಉಪದೇಶದಂತೆ ಮಧುವನದಲ್ಲಿ ತಪಸ್ಸನ್ನು ಆಚರಿಸುತ್ತಾನೆ. ಇಲ್ಲಿ ನಿತ್ಯ ಹರಿಸಾನ್ನಿಧ್ಯವಿದೆ ಎಂದು ನಾರದರು ಧ್ರುವನಿಗೆ ತಿಳಿಸುತ್ತಾರೆ. "ಪುಣ್ಯಂ ಮಧುವನಂ ಯತ್ರ ಸಾನ್ನಿಧ್ಯಂ ನಿತ್ಯದಾ ಹರಿಃ ". ಮುಂದೆ ಮಧು ಎಂಬ ರಾಕ್ಷಸ ಇಲ್ಲಿ ಮಧುರಾ … Read more
ಕಿರು ಲೇಖನಗಳು: ನಿರ್ಮಲಾ ಹಿರೇಮಠ, ಸಹನಾ ಪ್ರಸಾದ್
ಯುವ ಪೀಳಿಗೆಯಲ್ಲಿ ಕನ್ನಾಡಾಭಿಮಾನ ಇಂದಿನ ಯುವಕರೆ ನಾಳಿನ ಸತ್ಪ್ರಜೆಗಳು ಎಂಬಂತೆ ಸ್ವಾಮಿ ವಿವೇಕಾನಂದರು ಯುವಶಕ್ತಿಯ ಮೇಲೆ ಅಗಾಧ ನಂಬಿಕೆ ಇಟ್ಟಿದ್ದರು. ಉಕ್ಕಿನ ನರಮಂಡಲ ಕಬ್ಬಿಣದಂತಹ ಮಾಂಸಖಂಡಗಳನ್ನು ಹೊಂದಿದಂತಹ ಯುವಕರು ಹಾಗೆ ಮನಸ್ಸಿನಲ್ಲಿ ದೃಢವಾದ ಆತ್ಮವಿಶ್ವಾಸ ನಂಬಿಕೆ ಹಾಗೂ ದೇಶಾಭಿಮಾನ ಭಾಷಾಭಿಮಾನ ಹೊಂದಿದ ಸಮರ್ಥ ಯುವಕರು ದೇಶಕ್ಕೆ ಬೇಕಾಗಿದೆ. ಮೊದಲು ತಾಯಿ ಹಾಲು ಕುಡಿದು ಲಲ್ಲೆಯಿಂದ ತೊದಲು ನುಡಿದು ಕೆಳೆಯರೊಡನೆ ಬೆಳೆದು ಬಂದ ಮಾತದಾವುದು ನಲ್ಲೆಯೊಲವ ತೆರೆದು ತಂದ ಮಾತದಾವುದು ಎಂಬ ಬಿ ಎಂ ಶ್ರೀ ರವರ ಕಾಣಿಕೆ … Read more
ಮೌಲ್ಯಗಳ ಕುಸಿತ ಭ್ರಷ್ಟಾಚಾರಕ್ಕೆ ನಾಂದಿ: ಕೆ ಟಿ ಸೋಮಶೇಖರ ಹೊಳಲ್ಕೆರೆ.
ಹಿಂದೆ ಪ್ರತಿ ಗ್ರಾಮದಲ್ಲಿ ರಾಮಾಯಣ, ಮಹಾಭಾರತ, ಪುರಾಣ ಕತೆಗಳು ಯಕ್ಷಗಾನ ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ …. ಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು. ಓಲೆ ಬಸವ … ಗಳ ಮೂಲಕವೂ ರಾಮ ಸೀತೆಯರ ಕತೆ ಜಾತ್ರೆ, ಹಬ್ಬಹರಿದಿನಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದು ಹಳ್ಳಿ ಜನರಿಗೆ ಮನರಂಜನೆ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ, ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಪ್ರತಿ ಮನೆಗಳಲಿ ಗ್ರಾಮದ ದೇವಾಲಯಗಳಲಿ, ಪಂಚಾಯಿತಿ ಕಟ್ಟೆಗಳಲ್ಲಿ, ಕಛೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಹರಿಕಥೆ, ಪುರಾಣ, ಪುಣ್ಯಕಥೆ, ಶಿವಲೀಲಾಮೃತ, … Read more
ತಿಳುವಳಿಕೆ ವ್ಯರ್ಥ ಕಸರತ್ತಾಗದಿರಲಿ: ನರಸಿಂಹಮೂರ್ತಿ ಎಂ.ಎಲ್, ಮಾಡಪ್ಪಲ್ಲಿ
ನಾವೆಲ್ಲರೂ ಜಾಣರೇ ತಿಳುವಳಿಕೆಗಳಿಗೆ ಬರವಿಲ್ಲ . ಆದರೆ ಬದುಕುಗಳೇ ಬರದೆಡೆಗೆ ದಾಪುಗಾಲಿಡುತ್ತಿವೆ. ಅಂತರ್ಗ್ರಹ ಪರ್ಯಟನೆ ಮಾಡುತ್ತಿರುವ ನಾವುಗಳು ಜೀವಿಸುತ್ತಿರುವ ಗ್ರಹವನ್ನು ಪೀಡಿಸಿ ಪಿಪ್ಪೆ ಮಾಡುತ್ತಿದ್ದೇವೆ. ಪ್ರಪಂಚದ ನೋವು ನಲಿವುಗಳನ್ನು ದೊಡ್ಡ ಮಟ್ಟದಲ್ಲಿ ಚರ್ಚೆಗಳು ಮಾಡುತ್ತಾ ನಮ್ಮ ಅಕ್ಕಪಕ್ಕದ ಸಮಸ್ಯೆಗಳನ್ನೆ ಗಾಳಿಗೆ ತೂರುತ್ತೇವೆ. ಯಾವುದೇ ಕೆಲಸ ಮಾಡಲೀ ವೈಯಕ್ತಿಕ ಲಾಭವನ್ನೆ ನಿರೀಕ್ಷಿಸಿ ಮುನ್ಹ್ನೆಜ್ಜೆ ಹಾಕುತ್ತವೆ. ಇತ್ತೀಚೇಗೆ ತನುಮನಗಳನ್ನು ಮುಡಿಪಾಗಿಟ್ಟು ಸೇವೆಯ ಹೆಸರನ್ನು ವ್ಯಾಪಕವಾಗಿ ಬಳಸುತ್ತಾ ನ್ಯಾಯ, ಸತ್ಯಗಳ ಪರವಾದ ಕೆಲಸಕಾರ್ಯಗಳನ್ನು ಕೈಗೊಳ್ಳುತ್ತೇವೆ. ಅದರ ಹಿಂದೆ ಮಾತ್ರ ಸ್ವಹಿತವೂ ಕಡ್ಡಾಯವಾಗಿರುತ್ತದೆ. … Read more
ಇಲ್ಲಿಯವರೆಗೆ ಪಂಜುವಿಗಾಗಿ ಬರೆದವರ ಪಟ್ಟಿ
ಸಹೃದಯಿಗಳೇ, ಮುಂದಿನ ಜನವರಿ ತಿಂಗಳು 21ನೇ ತಾರೀಖು ಬಂದರೆ ಪಂಜು ಶುರುವಾಗಿ ಐದು ವರ್ಷವಾಗುತ್ತದೆ. ಈ ಐದು ವರ್ಷಗಳಲ್ಲಿ ಪಂಜು ತನ್ನದೇ ಆದ ದೊಡ್ಡ ಓದುಗ ಬಳಗವನ್ನೇ ಹೊಂದಿದೆ. ಹಾಗೆಯೇ ಇಲ್ಲಿಯವರೆಗೂ 680 ಲೇಖಕರು ವಿವಿಧ ಲೇಖನಗಳನ್ನು ಪಂಜುವಿಗಾಗಿ ಬರೆದಿದ್ದಾರೆ. ಆ ಅಷ್ಟು ಲೇಖಕರ ಲಿಸ್ಟ್ ಅನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮೆಲ್ಲರ ಪ್ರೀತಿಯಿಂದ ಪಂಜುವಿನ ಪುಟಗಳ ಹಿಟ್ಸ್ ಇಲ್ಲಿಯವರೆಗೆ 33 ಲಕ್ಷಕ್ಕೂ ಅಧಿಕವಾಗಿದೆ. ಪಂಜುವಿನ ಮೇಲಿನ ನಿಮ್ಮ ಪ್ರೀತಿ ಹೀಗೆಯೇ ಇರಲಿ. “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ … Read more
ಪಂಜು ಕಾವ್ಯಧಾರೆ
ಹಲ್ಕಾ ಸಾಲುಗಳು ತೆರೆದ ದಾರಿಯ "ಸ್ವಾತಿ" ಮಳೆಯಲ್ಲಿ ಮೊದಲು ಮುತ್ತಿಡುವಾಗ ನೀಲಾಕಾಶದಲಿ ಮಂಕಾಗಿರುವ ನಕ್ಷತ್ರ ನೋಡುವ ಕಣ್ಗಳು…! ಭುವಿಯ ನೋಡಿ ಹೆಣ್ತನದ ವಸಂತದ ಒಲುಮೆಯ ಮೇಲೆ ಒಂದಾದೆವು…! ಬಾನಂಗಳದಿ ಒಂಟಿಯಂತಿರುವ ಚಂದ್ರನು ನಗುತ್ತಿದ್ದಾನೆ ನಮ್ಮಯ ಒಲುಮೆಯ ಪರಿ ಕಂಡು…! ಬಾಡಿದ ಹಸಿರೆಲೆಗಳೂ ನಮಗಷ್ಟಲ್ಲದೆ ಅವಕ್ಕೆಲ್ಲ ಈಗ ವಸಂತ ಕಾಲ ಒಂದಕ್ಕಿಂಥ ಒಂದು ಚಿಗುರೊಡೆಯುವ ತವಕ…! ಮೋಡದ ಬಸಿರು ಹೆಚ್ಚಾಗಿ ಹನಿಗಳು ಹುಟ್ಟುತ್ತಿವೆ ನಾ ಮುಂದು ತಾ ಮುಂದೆಂದು ಜೋಡಿಯ ಸ್ಪರ್ಶಕ್ಕೆ…! ಆದಾವ ಹನಿ ಹಣೆಯ ಮೇಲೆ ಬಿತ್ತೊ … Read more
ಜಾಣಸುದ್ದಿ: ಕೊಳ್ಳೇಗಾಲ ಶರ್ಮ
ವಿ.ಸೂ.: ವಿಜ್ಞಾನ, ವಿಸ್ಮಯ, ವಿಚಾರಗಳನ್ನು ಜನರಿಗೆ ಅದರಲ್ಲೂ ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರೀ ಕೊಳ್ಳೇಗಾಲ ಶರ್ಮರವರು ಈ ಜಾಣಸುದ್ದಿ ಧ್ವನಿಮುದ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಕನ್ನಡದ ಕೆಲವೇ ಕೆಲವು ವಿಜ್ಞಾನ ಬರಹಗಾರರಲ್ಲಿ ಶರ್ಮರವರು ಒಬ್ಬರು. ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ … Read more
ಬಲ್ಲವನೇ ಬಲ್ಲ ರಂಗದ ರುಚಿ: ಮಲ್ಲಮ್ಮ ಯಾಟಗಲ್, ದೇವದುರ್ಗ
ರಂಗಭೂಮಿ ಎಂದರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿರುವ ಪಾಲಕರಿಗೆ ಮನವರಿಕೆ ಮಾಡುವವರು ಯಾರು ? ಶಾಲಾ ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ರಂಗಭೂಮಿಯ ರುಚಿಯನ್ನು ನೀಡಬೇಕೆಂದು ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಕುವೆಂಪುರವರ ಸ್ಮಶಾನ ಕುರುಕ್ಷೇತ್ರದ ನಾಟಕ ಮಾಡಿಸಿದಾಗ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ಧಾರವಾಡದಲ್ಲಿ ನಡೆದ ವಿಭಾಗೀಯ ಮಟ್ಟಕ್ಕೆ ಅಯ್ಕೆಯಾದ ಸಂದರ್ಭದಲ್ಲಿ ನನಗೇನು ರಂಗಭೂಮಿಯ ಬಗ್ಗೆ ಅಷ್ಟೊಂದು ಆಸಕ್ತಿ ಉಳಿದಿರಲಿಲ್ಲ. ಯಾಕೆಂದರೆ ಪಾಲಕರು ತಿಳಿದುಕೊಂಡ ನಾಟಕ ನಮ್ಮದಾಗಿರಲಿಲ್ಲ. ಅಂದು ಸಂಜೆ ಧಾರವಾಡದಲ್ಲಿ ಶೋ ಇತ್ತು. … Read more
ಬಲ್ಲಾಳರ ಬಂಡಾಯ: ಪ್ರೇಮಾ ಟಿ ಎಮ್ ಆರ್
ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ 'ನನ್ನ ಪುಟ'ದಲ್ಲಿ? ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ 'ಬಂಡಾಯ'. ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು ೩೦೦೮ರಲ್ಲಿ ನಿಧನರಾದ ಹಿರಿಯ ಸಾಹಿತಿ ವ್ಯಾಸರಾಯ … Read more
ಸಂಜೆ ಬಂದಾಗ ಹೊಳೆಯುತ್ತಿರಬೇಕು ಸಿಂಕು-ಹೊರ ದುಡಿಮೆಯ ಯುವ ಮಹಿಳೆಯ ಅಭಿಲಾಷೆ: ನಾಗರೇಖಾ ಗಾಂವಕರ
ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/ ಒಂದೂ ಪಾತ್ರೆಯಿಲ್ಲದೇ ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/ ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/ ಒಂದು ಹನಿ ಬಿದ್ದಿರದೇ ಕಾಮೋಡಿನ ಗೋಲದ ಮೇಲೆ/ ಬಾತ್ ರೂಮು ಕ್ಲೀನಾಗಿ ನಳನಳಿಸುತ್ತಿರಬೇಕು……….. ಆಗ ಮಾತ್ರ ನಾನು/ ಹೊಚ್ಚಗೆ ಮಿಂದು ಬಂದು/ ರುಚಿ ಅಡುಗೆಯ ಮಾಡಿ/ತಿನ್ನಿಸಬಲ್ಲೇ ನಿನಗೆ ಮುದ್ದು ಮಾಡುತ್ತ. ಎನ್ನುತ್ತಾರೆ ಯುವ ಕವಯತ್ರಿ ಕಾವ್ಯಾ ಕಡಮೆ ನಾಗರಕಟ್ಟೆ ತಮ್ಮ “ಜೀನ್ಸ್ ತೊಟ್ಟ ದೇವರು” ಎಂಬ ಕವನ ಸಂಕಲನದ ಒಂದು ಕವನ. ಆಧುನಿಕತೆಯಲ್ಲಿ … Read more
ನ್ಯಾನೋ ಕಥೆಗಳು: ಪ್ರೇಮ್ (ಪ್ರೇಮ ಉದಯಕುಮಾರ್)
ಹಣೆಬರಹ ಬೆಳಗೆದ್ದು ಮಾವನ ಮನೆಗೆ ಹೋಗಬೇಕಿತ್ತು. ಟಿ.ವಿ. ಹಾಕಿದ ರಾಕೇಶ್. ಸ್ವಾಮೀಜಿಯೊಬ್ಬರು ಭವಿಷ್ಯ ಹೇಳುತ್ತಿದ್ದರು. ಅವನ ಕುಂಭ ರಾಶಿ ಬರುವವರೆಗೆ ಕಾದ. ಈ ರಾಶಿಯವರು ಪ್ರಯಾಣವನ್ನು ಮುಂದೂಡಿ ಎಂದರು. ಸೌಖ್ಯವಿಲ್ಲದ ಮಾವನನ್ನು ನೋಡಲು ನಾಳೆ ಹೋಗೋಣ ಎಂದು ಸುಮ್ಮನಾದ. ಮರುದಿನ ಹೊರಟ ಬಸ್ಸು ಬ್ರೇಕ್ ಫೈಲ್ಯೂರ್ ಆಗಿ ನುಜ್ಜುಗುಜ್ಜಾಯಿತು. ಜಿಪುಣತನ ರಾಮಣ್ಣ ಹಲ್ಲು ನೋವಿನಿಂದ ಬಳಲುತ್ತಿದ್ದರು. ಯಾವತ್ತೂ ಡಾಕ್ಟರ್ ಬಳಿ ಹೋಗುತ್ತಿರಲಿಲ್ಲ.ಡಾಕ್ಟರ್ ಎಂದರೆ ಭಯ. ಅವರಿವರ ಪುಕ್ಕಟೆ ಸಲಹೆ ಪಡೆಯುತ್ತಿದ್ದರು. ಯಾರೋ ಮಾತ್ರೆ ಇಡಲು ಹೇಳಿದರೆ, ಮತ್ತೊಬ್ಬರು … Read more
ಹಿಮಾಲಯವೆಂಬ ಸ್ವರ್ಗ (ಭಾಗ 8): ವೃಂದಾ ಸಂಗಮ್
ಇಲ್ಲಿಯವರೆಗೆ ರಾತ್ರಿ ಹರಿದ್ವಾರದಲ್ಲಿ ನಮ್ಮ ಕೊಚ ಕೊಚ ಕೊಯಾಂ ಕೊಯಾಂ ನೆಂಟರು, ಬಡೇ ಹನುಮಾನ ಮಂದಿರದಲ್ಲಿ, ನಮಗಿಂತ ಮೊದಲೇ. ಅವರೆಲ್ಲ ಬದರಿಯ ವಿಷಯ ಮಾತಾಡುತ್ತಿದ್ದರು. ನನ್ನ ಪಕ್ಕದಲ್ಲಿ ಊಟಕ್ಕೆ ಕುಳಿತವಳು, ಎದುರಿಗೆ ಇದ್ದವಳಿಗೆ ಆ ದಿನ ನಡೆದ ಘಟನೆಯ ಬಗ್ಗೆ ತನ್ನ ಗಂಡನ ಪ್ರಶಂಸೆ ಮಾಡುತ್ತಿದ್ದಳು. ನನಗೆ ಬದರಿ ದೇವಸ್ಥಾನದ ಮುಂದೆ ಫೋಟೋ ತೆಗೆಸಿಕೊಳ್ಳಬೇಕೆಂದಿತ್ತು. ಆದರೆ ಆತ ಬೇಡ ಎಂದು ಬಿಟ್ಟ. ನನಗೆ ತುಂಬಾ ಬೇಜಾರಾಯಿತು. ಆಮೇಲೆ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದು ನೋಡಿ, ಬಾ ನಾವೂ ತೆಗೆಸಿಕೊಳ್ಳೋಣ … Read more
ಬದಲಾದ ಗಣೇಶೋತ್ಸವದ ಸ್ವರೂಪ!: ಹೊರಾ.ಪರಮೇಶ್ ಹೊಡೇನೂರು
ನಮ್ಮ ಭಾರತೀಯ ಪರಂಪರೆಯಲ್ಲಿ ಹಬ್ಬಗಳು ವಿಶೇಷ ಸ್ಥಾನ ಪಡೆದಿವೆ. ಅದರಲ್ಲೂ ಹಿಂದೂ ಪಂಚಾಂಗದ ಹೊಸ ವರ್ಷದ ದಿನವೆಂದೇ ಸಂಭ್ರಮಪಡುವ ಚಾಂದ್ರಮಾನ ಯುಗಾದಿಯಿಂದ ಹಿಡಿದು ನಾಗರ ಪಂಚಮಿ, ರಕ್ಷಾ ಬಂಧನ, ವರಲಕ್ಷ್ಮೀ ವ್ರತ, ಗೌರೀ ಗಣೇಶ ಚತುರ್ಥಿ, ನಾಡ ಹಬ್ಬ ದಸರಾ, ನರಕ ಚತುರ್ದಶಿ, ಬಲಿಪಾಡ್ಯಮಿ, ಸಂಕ್ರಾಂತಿ ಮುಂತಾದ ಹಬ್ಬಗಳ ಜೊತೆಗೆ ವಿವಿಧ ಹರಿದಿನಗಳನ್ನೂ ಆಚರಿಸುವ ಮೂಲಕ ಸಂಭ್ರಪಡುತ್ತೇವೆ. ಈ ಎಲ್ಲಾ ಹಬ್ಬಗಳು ಒಂದೊಂದು ಪೌರಾಣಿಕ ಹಿನ್ನೆಲೆಯಲ್ಲಿ, ಆಯಾ ಋತುಮಾನಗಳ ಹೊಂದಿಕೆಗೆ … Read more
ವ್ಯಕ್ತಿತ್ವದ ವಿಕಸನ: ಕೆ ಟಿ ಸೋಮಶೇಖರ ಹೊಳಲ್ಕೆರೆ.
ಹೂವು ಅರಳುವುದನ್ನು ' ವಿಕಸನ ' ಎನ್ನುತ್ತೇವೆ. ಹೂವು ಪೂರ್ಣವಾಗಿ ಅರಳಿದಾಗ ಅದರ ನಿಜವಾದ ಬಣ್ಣ, ಆಕಾರ ಪಡೆದು ಪೂರ್ಣ ಸೌಂದರ್ಯ ಹೊರಹೊಮ್ಮಿ ಸುಂದರವಾಗಿ ಕಾಣುತ್ತದೆ. ಪೂರ್ಣವಾಗಿ ವಿಕಸಿಸಿದಾಗ ಪರಿಮಳ ಹೊಮ್ಮುತ್ತದೆ. ಸುತ್ತಣ ಪರಿಸರವನ್ನು ಪರಿಮಳದಲ್ಲಿ ಮುಳುಗಿಸಿ ಸುವಾಸನೆ ಸೂಸಿ ಕ್ರಿಮಿ, ಕೀಟ, ಜೀವಿಗಳ ಆಕರ್ಷಿಸುತ್ತದೆ. ಮಧುಪಾತ್ರೆ ತೆರೆದು ದುಂಬಿಗೆ ಹಬ್ಬ ಉಂಟು ಮಾಡುತ್ತದೆ. ದುಂಬಿಯ ಝೇಂಕಾರ ಎಲ್ಲೆಡೆ ಮೊಳಗಲು ಕಾರಣವಾಗುತ್ತದೆ. ಮೊಗ್ಗು ಹಿಗ್ಗಿ ತಾನು ಸುಂದರವಾಗಿ ಕಾಣುವುದಲ್ಲದೆ ಗಿಡದ ಸೌಂದರ್ಯವನ್ನು … Read more
ಗುಡವಿ ಪಕ್ಷಿಧಾಮ: ವಸಂತ ಬಿ ಈಶ್ವರಗೆರೆ
ಹಸಿರ ಹಾದಿಯ ಪಯಣ, ಮನ ತಣಿಸುವ ಕಾನನ. ಸವಿಯುತ್ತಾ ಸವಿಯುತ್ತಾ ಮುಂದೆ ಸಾಗಿದರೇ ಮಲೆನಾಡ ಹಬ್ಬಾಗಿಲಿನಲ್ಲಿ ಕೈ ಬೀಡಿ ಕರೆಯುವುದೇ ಗುಡವಿ ಎಂಬ ಪಕ್ಷಿಗಳ ಲೋಕ. ಈ ಪ್ರವಾಸಿ ತಾಣಕ್ಕೆ ಕಾಡಿನ ಮಧ್ಯದ ಹಾದಿಯ ಮೂಲಕ ಸಾಗುತ್ತಾ ಹೋದ ಹಾಗೆ, ಪ್ರವಾಸಿಗರ ಮನ ಮಿಡಿಯುತ್ತದೆ. ತಂಪಾದ ಹಾದಿಯ ಪಯಣ ನಿಮಗೆ ಮುಗಗೊಳಿಸುತ್ತದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಸುಮಾರು 23 ಬಗೆಯ ಹಕ್ಕಿಗಳ ಕಲರವದ ತಾಣ ಗುಡವಿ ಪಕ್ಷಿಧಾಮ. 1986 ರಲ್ಲಿ ಜೆ.ಎಚ್.ಪಟೇಲ್ … Read more
ಪಂಜು ಕಾವ್ಯಧಾರೆ
ಪಯಣದಂತ್ಯದೊಳಗೆ !!! ಅಕಸ್ಮಾತ್ತಾಗಿ ನಾನೂ ಏರಿ ಬಿಟ್ಟೆ ಈ ಬಸ್ಸು ಅಯ್ಯೋ.. ಎಷ್ಟು ರಶ್ಶು! ಮೊದಲೆ ಇಷ್ಟೊಂದು ಜನ ತುಂಬಿ ತುಳುಕುತ್ತಾ ಇದ್ದಾರೆ ..!! ಇಳಿಯೋಣವೇ …?? ಇದೇನಿದು.? ಹೆದ್ದಾರಿಯಲಿ ಓಟ ಶುರುವಾಗಿ ಬಿಟ್ಟಿದೆ ಬರೀ ಕತ್ತಲು ಬೆಳಕುಗಳಷ್ಟೆ…. ಯಾವುದೇ ಪರಿಧಿ ಗೋಚರಿಸುತ್ತಿಲ್ಲ ಆದರೂ ನಡುವೆ ಗೋಡೆಯಿದೆಯಂತೆ.! ಮಿಸುಕಾಡಿ ,ತಡಕಾಡಿ ಸರಿಸಿ ,ತುಳಿದು ಮುಂದೆ ಬಂದೆ… ಹ ಹ್ಹ ಹ…ಇಲ್ಲಿಯೂ ಸೀಟುಗಳ ಮೀಸಲಾತಿ ..ಆದರೆ ಕುಳಿತುಕೊಂಡವರು ಯಾರ್ಯಾರೊ..!!!? ಆದರೂ ಈ ರಶ್ಶಲ್ಲಿ ಏನೋ ಸುಖವಿದೆ ,ಮನಕಾನಂದವಿದೆ ಉಪ್ಪಿನಕಾಯಂತೆ … Read more
ಆಯಾಮಗಳು: ಗಿರಿಜಾ ಜ್ಞಾನಸುಂದರ್
ಬೆಳಿಗ್ಗೆ ಸ್ನಾನ ಮುಗಿಸಿ ಬಂದ ಕುಮುದ ಪೂಜೆ ಮಾಡುತ್ತಿದ್ದಳು. ತನ್ನ ಮದುವೆಯ ಮೂರನೇ ವಾರ್ಷಿಕೋತ್ಸವವಾಗಿದ್ದರಿಂದ ಸ್ವಲ್ಪ ವಿಶೇಷವಾದ ಪೂಜೆ ನಡೆಯುತ್ತಿತ್ತು. ಆದ್ರರೇ ಮನಸ್ಸಿನಲ್ಲಿ ಇನ್ನು ಅಡಿಗೆಮನೆಯ ಕೆಲಸ ಮುಗಿಸಿಲ್ಲವಲ್ಲ ಅನ್ನೋ ಯೋಚನೆ ಇತ್ತು. ಚಪಾತಿ ಹಿಟ್ಟು ಕಲಸಿಟ್ಟಿದ್ದೇನೆ. ತರಕಾರಿ ಪಲ್ಯ ಹಾಗು ಚಟ್ನಿ ಮಾಡಿದ್ದಾಗಿದೆ. ಗಂಡನಿಗೆ ಡಬ್ಬಿಗೆ ಹಾಕಿಕೊಡುವ ಕೆಲಸ ತನ್ನದಾದ್ದರಿಂದ, ಮನಸ್ಸು ಪೂಜೆಯಲ್ಲಿ ಪೂರ್ತಿ ಇರಲಿಲ್ಲ. ಜೊತೆಯಲ್ಲಿ ಮಗು ಎದ್ದರೆ ಹೇಗೆ ಸಂಭಾಳಿಸುವುದು ಅನ್ನೋ ಯೋಚನೆ ಬೇರೆ. ಹಾಗಾಗಿ ಪೂಜೆ ಹೆಂಗೋ ಹಂಗೆ ಮಾಡಿ ಸಮಾಧಾನ … Read more
ಮುಟ್ಟು ಮುಟ್ಟಬೇಡಿ: ಪ್ರೇಮಾ ಟಿ ಎಮ್ ಆರ್
ಚಿನಕುರುಳಿಯಂತೆ ಕಚಗುಳಿಯಿಡುವ ಮುಗ್ಧ ಸ್ನೇಹದ ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ ಹೊಸ ಕವನ ಸಂಕಲನ 'ಕೋಳ್ಗಂಬ' ಕೈಯಲ್ಲಿ ಹಿಡಿದು ಕಿಟಕಿಯಲ್ಲಿ ತೂರಿಬರುವ ಮಳೆಹನಿಗಳಿಗೆ ಮುಖವೊಡ್ಡಿ ಕೂತಿದ್ದೆ. ಬಾಲ್ಯದ ಗೆಳತಿ ಸುಮಾ ಕರೆಮಾಡಿದಳು. ಕುಶಲೋಪರಿಯ ಸಾಂಪ್ರದಾಯಿಕತೆಯನ್ನೂ ಮರೆತು ನೇರವಾಗಿ ವಿಷಯಕ್ಕೆ ಬಂದಳು. ಮೀಡಿಯಾಗಳಲ್ಲೆಲ್ಲ ಮುಟ್ಟಿಗುಡುವ ಸೆನಿಟರಿ ಪ್ಯಾಡ್ ಗಳ ಮೇಲೆ ಹೇರಿದ ಜಿ ಎಸ್ ಟಿ ಯ ಕುರಿತು ಪರ ವೈರುಧ್ಯ ಅಭಿಪ್ರಾಯಗಳು ವ್ಯಕ್ತವಾಗ್ತಾ ಇದ್ಯಲ್ಲೇ ಅಂದ್ಲು. ಹೂಂ ಅಂದೆ. ಅವಳು ಮುಂದೇನೂ ಮಾತನಾಡದೇ ಮೌನ ಸಾಧಿಸಿದಳು. ಏನಿದೆ … Read more
ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ವೈವಿಧ್ಯತೆ: ವೈ.ಬಿ.ಕಡಕೋಳ
ಶ್ರೀ ಕನಕದಾಸರು (1509-1609) ಕರ್ನಾಟಕದಲ್ಲಿ ಜನಪ್ರೀಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕಾಣಿಕೆಯಿತ್ತವರು, ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ 1509 ರಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ಎಂಬ ಕುರುಬ ಜಾತಿಗೆ ಸೇರಿದ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸು ತಿಮ್ಮಪ್ಪ. ತಣದೆ-ತಾಯಿ ತಿರುಪತಿ ತಿಮ್ಮಪ್ಪನಿಗೆ … Read more