ನೆನಪಾಗುತ್ತಾರೆ ಇನ್ನೂ ನಮ್ಮ ಅಪ್ಪಾಜಿ ಮೇಷ್ಟ್ರು : ಜಹಾನ್ ಆರಾ. ಎಚ್. ಕೋಳೂರು
ಬೆಳಗ್ಗೆ ಶಾಲೆ ಗಂಟೆ ಹೊಡೆದ ನಿಮಿಷಾರ್ಧದಲ್ಲಿ ಎಲ್ಲರೂ ಪ್ರಾರ್ಥನೆ ಕಡೆಗೆ. ಆಯಸ್ಕಾಂತವು ಕಬ್ಬಿಣದ ವಸ್ತುಗಳನ್ನು ಆಕರ್ಷಿಸಿದಂತೆ ಮೇಷ್ಟ್ರ ವಿಷಲ್ ನಮ್ಮನ್ನು ಆಕರ್ಷಿಸುತ್ತಿತ್ತು. ಗಟ್ಟಿ ಧ್ವನಿಯಲ್ಲಿ “ಸಾವಧಾನ” ಎಂದರೆ ಹುಮ್ಮಸ್ಸಿನಿಂದ “ಏಕ್” ಎನ್ನುವ ಧ್ವನಿ ಒಂದು ಕಡೆಯಾದರೆ ನೂರಾರು ಮಕ್ಕಳ ಕಿವಿಗಳವರೆಗೆ ತರುವ ಮತ್ತೊಂದು ಧ್ವನಿ “ವಿಶ್ರಾಮ್” ಮತ್ತೊಂದು ಕಡೆ,ಇ ದು ನಮ್ಮ ಶಾಲೆಯ ಪಿ.ಟಿ.ಮೇಷ್ಟ್ರಾದ ಅಪ್ಪಾಜಿಗೌಡ್ರ ಶಿಸ್ತಿನ ಪಾಠ. ಶಿಸ್ತು, ಸಜ್ಜನಿಕೆಗೆ ಮತ್ತೊಂದು ಹೆಸರೇ ಇವರು. ನೀಳಕಾಯದ ಬಿಳಿಗೂದಲಿನ ಇವರು ಯಾವಾಗಲೂ ಸಫಾರಿ ಬಟ್ಟೆ ಮೈಮೇಲೆ, ಎಲ್ಲರ … Read more