ಬದಲಾವಣೆ ಜಗ(ನ)ದ ನಿಯಮ: ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ
ಕಾಲ ಎಂದೆಂದೂ ಕಾಲ ಕಾಲವೇ.. ಮನುಷ್ಯನ ಗುಣಸ್ವರೂಪ ಮಾತ್ರ ಬದಲಾಗುವುದಲ್ಲವೇ.. !!!! ಹಿಂದಿನ ಕಾಲದಲ್ಲಿ ಬಾಂಧವ್ಯಗಳ ಬೆಸುಗೆ ಜಾಸ್ತಿಯಾಗಿತ್ತು.ಒಗ್ಗಟ್ಟಿತ್ತು.ಪರಸ್ಪರ ಸಹಬಾಳ್ವೆ ಜಾಸ್ತಿಯಾಗಿತ್ತು.ಆದರೆ ಇಂದಿನ ಕಾಲದಲ್ಲಿ ಅದ್ಯಾವುದೂ ಇಲ್ಲ.ಕೊಲೆ,ಸುಲಿಗೆ,ಅತ್ಯಾಚಾರಗಳು ತಾಂಡವವಾಡುತ್ತಿವೆ.ಸಂಬಂಧಗಳ ಬೆಲೆಯೇ ತಿಳಿಯದೇ ಅಣ್ಣ-ತಂಗಿ,ಅಪ್ಪ – ಮಗಳು,ಪುಟ್ಟ ಮಕ್ಕಳು ಎನ್ನುವ ಭಾವನೆಗಳಿಲ್ಲದೇ ಅತ್ಯಾಚಾರ ಮಾಡುವ ಮನಸ್ಥಿತಿ ಇಂದಿನವರದು ಎನ್ನುವ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ.ಮೊದಲಿನ ಕಾಲದ ಭಾರತೀಯ ಸಂಸ್ಕೃತಿ ಉನ್ನತವಾಗಿತ್ತು.ಈಗಿನ ಜನರು ಮಾನವೀಯತೆ ಮರೆಯುತ್ತಿದ್ದಾರೆ ಎಂಬ ನುಡಿಗಳು ಕರ್ಣಗಳ ಕೊರೆದು ಸಾಗುತ್ತಲೇ ಇರುತ್ತದೆ. ಹಾಗಾದರೆ ಹಿಂದಿನ ಕಾಲದಲ್ಲಿ ದುಷ್ಟರು,ದುರ್ಜನರು ಇರಲೇ … Read more