ಬಂಡಿ ಯಲ್ಲವ್ವ: ಭೀಮಣ್ಣ ಮಾದೆ
ಅಪ್ಪನ ಕಾಲಕ್ಕೆ ಮೂರಡಿ ಜಾಗದಲ್ಲಿ ಹಾಕಿಕೊಟ್ಟ ಹರಕು ಜೋಪಡಿ, ವರ್ಷಕ್ಕೊಮ್ಮೆ ಬಂಡಿ ಯಲ್ಲವ್ವನ ಹರಕೆಗೆ ಪಡೆಯುತ್ತಿದ್ದ ಕೋಣಗರವು, ಮೂರೊತ್ತಿನ ಗಂಜಿ ಹನುಮಂತನನ್ನು ಗೌಡರ ಲೆಕ್ಕದ ಪುಸ್ತಕ ರೂಪದಲ್ಲಿ ಬಂಧಿಸಿ ಬಿಟ್ಟಿದ್ದವು. ಚಿಕ್ಕವರು ದೊಡ್ಡವರೆನ್ನದೆ ಕೈಯೆತ್ತಿ ಮುಗಿಯುತ ಏಕವಚನದಲಿ ನಾಮಧೇಯಾನಾಗುವುದು ಜೀತದ ಕೆಲಸದ ಜೊತೆಗೆ ಸೇರಿಹೋಗಿತ್ತು. ಮೊದಲ ಗಂಡನ ಕಳೆದುಕೊಂಡ ಹೊನ್ನವ್ವಳನ್ನು ತಂದೆ ಬ್ಯಾಡ ಅಂದರು ಎಲ್ಲವ್ವನ ಎದುರಿನಲ್ಲಿಯೇ ಕಟ್ಟಿಕೊಂಡು ಆರು ಜನರನ್ನು ಸಂಸಾರದ ಬಂಡಿಯಲಿ ಕೂರಿಸಿಕೊಂಡು ಒಂಟೆತ್ತಿನಂಗ ಎಳೆಯುತ್ತಿದ್ದ ಈತನ ಕುಟುಂಬಕ್ಕೆ ಬಂಡಿ ಯಲ್ಲವ್ವನೇ ಸರ್ವಸ್ವ. ಯಲ್ಲವ್ವಳಿಗೆ … Read more