‘ಎದೆ ತುಂಬಿ ಹಾಡಿದ ಕವಿ ಜಿ. ಎಸ್ ಶಿವರುದ್ರಪ್ಪ’: ಡಾ. ಸುಶ್ಮಿತಾ. ವೈ.
ನವೋದಯ ಕವಿ ದಿಗ್ಗಜರುಗಳ ಸಾಲಿನಲ್ಲಿ ‘ಬೆಳಕಿನ ಮನೆಯ ಕವಿ’ ಜಿ.ಎಸ್.ಎಸ್ ಅವರದ್ದೂ ಮಹತ್ವದ ಹೆಸರು. ಇವರು ತಮ್ಮ ಹೈಸ್ಕೂಲಿನ ದಿನಗಳಿಂದಲೇ ಚಿಕ್ಕ ಚಿಕ್ಕ ಕವಿತೆಗಳನ್ನು ಬರೆಯುತಿದ್ದರು. ಆನಂತರದಲ್ಲಿ ಗಳಗನಾಥ, ವೆಂಕಟಾಚಾರ್ಯ, ಕುವೆಂಪು, ಅನಕೃ, ಶಿವರಾಮ ಕಾರಂತರ ಬರಹಗಳು ಸಾಹಿತ್ಯದ ಬಗೆಗೆ ಅವರಲ್ಲಿ ಪ್ರೀತಿ, ಆಸಕ್ತಿಯನ್ನು ಹುಟ್ಟಿಸಲು ಕಾರಣವಾದವು. ಅವರು ಕಾಲೇಜಿನ ದಿನಗಳಲ್ಲಿ ಅನುವಾದಿಸಿದ ‘ಥಾಮಸ್ ಗ್ರೇ’ ಕವಿಯ ಕವಿತೆಗೆ ಅಧ್ಯಾಪಕರಾಗಿದ್ದ ಜಿ.ಪಿ ರಾಜರತ್ನಂ ಅವರಿಂದ ಪ್ರಶಂಸೆಯೂ ದೊರಕಿತ್ತು. ಅದು ಪ್ರಕಟವಾಗಿ ಕಾವ್ಯ ರಚನೆಗೆ ಹೊಸ ಹುಮ್ಮಸ್ಸು ದೊರೆಯಿತು. … Read more