ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 9): ಎಂ. ಜವರಾಜ್
೯- ಅಯ್ಯಯ್ಯೋ ಬನ್ರಪ್ಪ ಅಯ್ಯಯ್ಯೋ ಬನ್ರವ್ವ ಅಯ್ಯಯ್ಯೋ ಬನ್ರಣ್ಣ ಅಯ್ಯಯ್ಯೋ ಬನ್ರಕ್ಕ ಅಯ್ಯಯ್ಯೋ ಯಾರ್ಯಾರ ಬನ್ನಿ ಈ ಅಯ್ನೋರು ಆ ನೀಲವ್ವನ ನನ್ನ ಮೆಟ್ದ ಮೆಟ್ಲಿ ತುಳ್ದು ತುಳ್ದು ಜೀವ ತಗಿತಾವ್ನ ಬನ್ನಿ ಬನ್ಬಿ.. ಅಂತಂತ ನಾನ್ ಕೂಗದು ಕೇಳ್ನಿಲ್ವಲ್ಲೊ.. ಆಗ ಜನ ಜಗನ್ ಜಾತ್ರಾಗಿ ಆ ನೀಲವ್ವ ಅಯ್ಯೋ ಉಸ್ಸೋ ಅನ್ಕಂಡನ್ಕಂಡು ಸುದಾರುಸ್ಕಂಡು ಮೇಲೆದ್ದು ನಿಂತ ಜನ ನೋಡ್ತ ನೋಡ್ತ ಮೋರಿ ದಾಟಿ ಜಗುಲಿ ಅಂಚಿಗೆ ಕುಂತು ಗೋಳಾಡ್ತ ಗೋಳಾಡ್ತ ಜಗುಲಿ ಕಂಬ ಒರಗಿದಳಲ್ಲೋ… ‘ಅಯ್ನೋರಾ.. … Read more