ಹೋಲಿಕೆಗಳು ಮಕ್ಕಳನ್ನೇ ಆಗಲಿ ಮನಸ್ಸುಗಳನ್ನೇ ಆಗಲಿ ಸೋಲಿಸಿ ಬಿಡುತ್ತವೆ.: ನಿಮ್ಮೊಳಗೊಬ್ಬ ನಾರಾಯಣ

ನೋಡು ಅವರು ಹೇಗಿದ್ದಾರೆ ಈ ಮಾತು ಉದಾಹರಣೆಗೆ ಆದರೆ ಸ್ವಲ್ಪ ಮಟ್ಟಿಗೆ ಸರಿ ಆದರೆ ಪದೇಪದೇ ಇದೆ ಒಂದು ಆಯುಧವಾದರೆ. ನಾವು ನಮ್ಮಲ್ಲಿರುವ ಬಲವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಕಲ್ಲಿನಲ್ಲಿ ಒಂದು ವೈಶಿಷ್ಟ್ಯ ಇರುತ್ತದೆ. ಅದನ್ನು ಗುರುತಿಸುವ ಜಾಣ್ಮೆ ನಮಗಿರಬೇಕು. ಶಾಲೆಯಲ್ಲಿ ಓದಿ ಉತ್ತಮ ಅಂಕಗಳನ್ನು ಗಳಿಸುವುದು ಮಕ್ಕಳ ಕರ್ತವ್ಯ. ಹಾಗೆಯೇ ಕೆಲಸದಲ್ಲಿ ಉನ್ನತ ಮಟ್ಟ ತಲುಪಿ ಉತ್ತಮ ಸಂಪಾದನೆ ಮಾಡುವುದು ನಮ್ಮ ಕರ್ತವ್ಯ. ಆದರೆ ಆ ಕ್ಷೇತ್ರಗಳಲ್ಲಿ ಉತ್ತಮ ಮಟ್ಟ ತಲುಪಬೇಕೆಂಬ ನಿರೀಕ್ಷೆ ನಮ್ಮ ಒತ್ತಡಗಳಿಂದಾಗಿ ಕನಿಷ್ಠ ಏಳಿಗೆಯನ್ನು ಸಹ ಕಾಣದೆ ಇರಬಹುದು.

ಎಲ್ಲರ ತಿಳುವಳಿಕೆ ಜ್ಞಾನ ಬುದ್ಧಿಶಕ್ತಿ ವಿಭಿನ್ನ ಒಂದೇ ದಾರಿಯಲ್ಲಿ ಎಲ್ಲರಿಗೂ ಅರ್ಥವಾಗದೆ ಇರಬಹುದು ಹಾಗಂದ ಮಾತ್ರಕ್ಕೆ ಅರ್ಥ ಮಾಡಿಕೊಳ್ಳದಿರುವುದು ದಡ್ಡತನವೇನಲ್ಲ. ನಾವೆಂದಾದರೂ ಯೋಚಿಸಿದ್ದೇವೆಯೇ ಅವರಿಗೆ ಸಿಕ್ಕ ಪ್ರೋತ್ಸಾಹ ಶಿಕ್ಷಣ ಸುಗಮ ಹಾದಿ ನಾವು ದೂಷಿಸುವವರಿಗೂ ಒದಗಿಸಿ ಕೊಟ್ಟಿದ್ದೇವೆಯೇ ಎಂದು. ಎಷ್ಟೋ ಬಾರಿ ಪ್ರೋತ್ಸಾಹಿಸಬೇಕಾದ ನಾವೇ ಸೋತು ಬಿಟ್ಟಿರುತ್ತೇವೆ ನಾವು ನೀಡುವ ಉದಾಹರಣೆಗಳೇ ತಪ್ಪಾಗಿರುತ್ತದೆ ನಮಗೆ ಅದರ ಅರಿವಿದೆಯೇ. ನಮ್ಮ ಕನಸುಗಳು ಕಲ್ಪನೆಗಳು ಇನ್ನೊಬ್ಬರು ಸಾಕಾರ ಗಳಿಸಬೇಕೆಂಬ ನಿರೀಕ್ಷೆಗಳೇ ತಪ್ಪು ಎಂದು ನನಗೆ ಅನಿಸುವುದಿಲ್ಲ ಏಕೆ. ಎಲ್ಲಾ ಸೌಲಭ್ಯಗಳಿದ್ದರೂ ಗುರಿ ಸಾಧಿಸುತ್ತಿಲ್ಲ ಎಂದರೆ ಅಲ್ಲಿ ಒಲವಿನ ಕೊರತೆಯು ಇರಬಹುದಲ್ಲವೇ. ಒಲವಿಲ್ಲದೆ ಏನನ್ನು ಕಲಿಯಲೂ ಸಾಧ್ಯ ಏನನ್ನು ಸಾಧಿಸಲು ಸಾಧ್ಯ.

ಎಲ್ಲರಿಗೂ ಯಶಸ್ಸು ಬೇಕು ಖಂಡಿತ ಆದರೆ ಯಶಸ್ಸು ಇದೇ ಆಗಿರಬೇಕು ಎಂಬ ಜಿದ್ದಿದೆಯಲ್ಲ ಅದು ಎಲ್ಲಾ ಏಳಿಗೆಗೆ ತೊಡಕು. ಪ್ರತಿ ಕಲ್ಲು ವಜ್ರವಾದರೆ ಮೆಟ್ಟಿಲು ಯಾರಾಗುತ್ತಾರೆ. ವಜ್ರವನ್ನು ಅಲಂಕಾರಕ್ಕೆ ತೊಡಬಹುದು ಅಷ್ಟೇ ಆದರೆ ಯಾವುದಕ್ಕೂ ಅದು ಆಧಾರವಲ್ಲ. ಯಾರ ಭವಿಷ್ಯವನ್ನು ಯಾವುದೋ ವಿಚಾರ ಯಾವುದೋ ಸ್ಪರ್ಧೆ ಯಾವುದೋ ಪರೀಕ್ಷೆ ನಿರ್ಧರಿಸುವುದಿಲ್ಲ. ಗೆಲುವೊಂದೇ ಈ ಬದುಕಿಗೆ ಸಂತೋಷದಾಯಕವಲ್ಲ. ನಮ್ಮ ದೃಷ್ಟಿಯಲ್ಲಿ ಇರುವ ಗೆಲುವು ಇನ್ನೊಬ್ಬರ ದೃಷ್ಟಿಯಲ್ಲಿ ಏನೇನೋ ಇಲ್ಲದಿರಬಹುದು ಅಲ್ಲವೇ.

ಬದುಕು ನಿಂತ ನೀರಲ್ಲ ಇನ್ನೆಲ್ಲೋ ಇನ್ಯಾವುದೋ ಕವಲೊಡೆದು ಇನ್ನೆಲ್ಲಿಗೋ ಉಪಯೋಗಕ್ಕೆ ಬಂದೇ ಬರುತ್ತದೆ. ನೀರಿನ ಹನಿ ಯಾವುದೂ ವ್ಯರ್ಥವಲ್ಲ. ಹಾಗೆಯೇ ಯಾರ ಬದುಕು ಸಹ ವ್ಯರ್ಥವೇನಲ್ಲ.
ಯಾವ ಸಾಧನೆಗಳು ಸಹ ಪ್ರಶಸ್ತಿ ಅಂತಸ್ತು ಐಶ್ವರ್ಯ ಹೆಸರುಗಳಿಂದಲೇ ಗುರುತಿಸುವುದಕ್ಕೆ ಸಾಧ್ಯವಿಲ್ಲ. ಸಾಧ್ಯವಾದಷ್ಟು ಸ್ಪೂರ್ತಿಯನ್ನು ತುಂಬಿ ನಮ್ಮಲ್ಲಿರುವ ಪ್ರತಿಭೆಗಳನ್ನು ಹುಡುಕುವ ಪ್ರಯತ್ನಗಳನ್ನು ಮಾಡಿದರು ಪ್ರತಿ ಕಲ್ಲುಗಳು ಶಿಲೆಯೆ. ಯಾರ ಬದುಕು ಅನಾಧಾರವಲ್ಲ ಹುಟ್ಟಿಗೆ ಸಾರ್ಥಕವಾಗುವ ಯಾವ ಗುಣವಾದರೂ ಪ್ರತಿ ಮನುಷ್ಯನಲ್ಲೂ ಇದ್ದೇ ಇರುತ್ತವೆ.

ಪ್ರತಿಯೊಬ್ಬರಲ್ಲೂ ಇರುವ ವೈಶಿಷ್ಟ್ಯತೆಗಳನ್ನು ಗುರುತಿಸೋಣ ಗೌರವಿಸೋಣ ಅವರವರ ಬದುಕಿಗೆ ಸ್ವಾತಂತ್ರ್ಯವನ್ನು ನೀಡೋಣ. ಈ ಜಗತ್ತಿನಲ್ಲಿ ತಕ್ಕಡಿಯೊಂದೆ ಮಾಪನವಲ್ಲ. ಅಳತೆ ಮಾಡಲು 108 ವಿಧವಿರಬೇಕಾದರೆ. ನಿಮ್ಮದೇ ದೃಷ್ಟಿಕೋನದಲ್ಲಿ ಇನ್ನೊಬ್ಬರನ್ನು ಹೇಗೆ ಅಳೆಯಲು ಸಾಧ್ಯ. ಬುದುಕು ಬದುಕುವುದಕ್ಕಾಗಿ ಹೊರತು ಪೈಪೋಟಿಗಾಗಿ ಅಲ್ಲ.

ನಿಮ್ಮೊಳಗೊಬ್ಬ ನಾರಾಯಣ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x